#PriceHike | ಏರಿದ ಟೊಮೆಟೋ ಬೆಲೆ | ಕೇಳಿ ಈ ಟೊಮೆಟಾಯಣ ಕಥೆ…!

July 5, 2023
1:29 PM
ಟೊಮೊಟೋ ದರ ಏರಿಕೆಯಾಗಿದೆ. ಈ ಧಾರಣೆಯ ಕಾರಣದಿಂದ ಟೊಮೆಟೋ ಉಳಿಸಿಕೊಳ್ಳುವುದು ಕೃಷಿಕರ, ಮಾರಾಟಗಾರರ ತಲೆನೋವು.

ಟೊಮೆಟೋ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈ ಟೊಮೆಟೋ ರೇಟು ಏರಿಕೆ ಕಥೆಯಲ್ಲಿ ದಿನಕ್ಕೊಂದು ರಾಮಾಯಣ. ಟೊಮೆಟೋ ಕಾಪಾಡುವುದೇ ದೊಡ್ಡ ಸವಾಲಾಗಿದೆ, ಹಾಗೇ ಕೊಳ್ಳುವುದು ಭಾರಿ ತ್ರಾಸ ಆಗಿದೆ. ಟೊಮೆಟೋ ದರ ಏರಿಕೆ ಏಕೆ ಎನ್ನುವುದಕ್ಕಿಂತಲೂ ಟೊಮೊಟೋ ಉಳಿಸುವುದು  ಹೇಗೆ ಎನ್ನುವುದು ಈಗ ಪ್ರಶ್ನೆ.

ಸೇಬಿಗಿಂತ ಟೊಮೆಟೊ ರೇಟೇ ಜಾಸ್ತಿ..! : ಕೆಲವೊಮ್ಮೆ ಬೆಲೆ ಇಲ್ಲದೆ ಕೆಜಿಗೆ 1 ರೂ. ಬೆಲೆ ಕಾರಣಕ್ಕೆ ಟೊಮೆಟೊವನ್ನು ರಸ್ತೆಗೆ ಸುರಿದು ರೈತರು ಕಣ್ಣೀರು ಹಾಕಿದ್ದ ಸಂದರ್ಭವೂ ಇತ್ತು.  ಅಂತಹದ್ದರಲ್ಲಿ ಹಿಮಾಚಲ ಪ್ರದೇಶದ ಮಾರುಕಟ್ಟೆಯಲ್ಲಿ ಸೇಬಿಗಿಂತ ಟೊಮೆಟೊ ಬೆಲೆಯೇ ಜಾಸ್ತಿಯಾಗಿದೆ. ಸಾಮಾನ್ಯವಾಗಿ ಟೊಮೆಟೊಗಿಂತ ಸೇಬು ಹಣ್ಣು ಹೆಚ್ಚಿನ ಬೆಲೆ ಮಾರಾಟವಾಗುತ್ತದೆ. ಆದರೆ ಈಗ ಪರಿಸ್ಥಿತಿ ಉಲ್ಟಾ ಆಗಿದೆ. ಮಾರುಕಟ್ಟೆಯಲ್ಲಿ ಸೇಬಿಗಿಂತ  ಟೊಮೆಟೊ ದುಬಾರಿಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಟೊಮೆಟೊ ಕೆಜಿಗೆ 90 ರಿಂದ 95 ರೂ.ಗೆ ಮಾರಾಟವಾಗುತ್ತಿದ್ದು, ಸೇಬು ಕೆಜಿಗೆ 70 ರಿಂದ 80 ರೂ.ಗೆ ಮಾರಾಟವಾಗುತ್ತಿದೆ.

Advertisement

ದೆಹಲಿಯಲ್ಲಿ ಕೆ.ಜಿ ಟೊಮೆಟೋಗೆ 129 ರೂ., ಯುಪಿಯಲ್ಲಿ 150 ರೂ.! : ದೆಹಲಿಯ ಹಾಗೂ ಉತ್ತರಪ್ರದೇಶದಲ್ಲಿ ಟೊಮೆಟೋ ಬೆಲೆ ಗಗನಕ್ಕೇರಿದೆ. ಕಡಿಮೆ ದರದಲ್ಲಿ ಸಿಗುತ್ತಿದ್ದ ಟೊಮೆಟೋ ಕಳೆದ ಕೆಲ ದಿನಗಳಿಂದ 100ರ ಗಡಿ ದಾಟುತ್ತಿದೆ. ದೆಹಲಿಯಲ್ಲಿ ಕೆ.ಜಿ ಟೊಮೆಟೋ 129 ರೂ.ಗೆ ಮಾರಾಟವಾದರೆ, ಉತ್ತರಪ್ರದೇಶದಲ್ಲಿ 150 ರೂ.ಗೆ ಮಾರಾಟವಾಗುತ್ತಿದೆ. ಬೆಲೆ ಏರಿಕೆಯಿಂದ ಗ್ರಾಹಕರು ತಬ್ಬಿಬ್ಬಾಗಿದ್ದಾರೆ.

ಉತ್ತರ ಪ್ರದೇಶ ಮತ್ತು ಹರಿಯಾಣದಂತಹ ನೆರೆಯ ರಾಜ್ಯಗಳಿಂದ ಪೂರೈಕೆ ಕಡಿಮೆಯಾದ ಕಾರಣ ದೆಹಲಿಯಲ್ಲಿ ಕೆಲ ದಿನಗಳಿಂದ ಟೊಮೆಟೋ ಬೆಲೆ ದ್ವಿಗುಣಗೊಂಡಿದೆ ಎಂದು ಹೇಳಲಾಗುತ್ತಿದೆ. ಉತ್ತರಪ್ರದೇಶದಲ್ಲಿಯೂ  ಟೊಮೆಟೋ ದರದಲ್ಲಿ ಏರಿಕೆಯಾಗಿದ್ದು, ಕೆ.ಜಿಗೆ 150 ರೂ. ಆಗಿದೆ. ಇದರಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ.
ಹಾಸನಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ಟೊಮೆಟೋ ಕಳ್ಳತನ:  ದೇಶದೆಲ್ಲೆಡೆ ಟೊಮೆಟೋ ಬೆಲೆ ಗಗನಕ್ಕೇರಿದೆ. ಈ ನಡುವೆ ಹಾಸನದಲ್ಲಿ ಲಕ್ಷಾಂತರ ರೂ. ಮೌಲ್ಯದ ಟೊಮೆಟೋ ಕಳ್ಳತನ ಮಾಡಿರುವ ಪ್ರಸಂಗ ನಡೆದಿದೆ.
ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ಟೊಮೆಟೋವನ್ನು ಚೋರರು ಎಗರಿಸಿದ್ದಾರೆ. ಗ್ರಾಮದ ಧರಣಿ ಎಂಬವರು ತಮ್ಮ ಜಮೀನಿನಲ್ಲಿ ಟೊಮೆಟೋ ಬೆಳೆದಿದ್ದರು. ಟೊಮೆಟೋ ಬೆಳೆಯಿಂದ ಉತ್ತಮ ಇಳುವರಿ ಬಂದಿದ್ದ ಹಿನ್ನೆಲೆ ಕಳೆದ ಮೂರು ದಿನದಿಂದ ಟೊಮೆಟೊ ಕೊಯ್ದು ಮಾರಾಟ ಮಾಡುತ್ತಿದ್ದರು. ಕಳೆದ ರಾತ್ರಿ ಜಮೀನಿಗೆ ನುಗ್ಗಿರುವ ಕಳ್ಳರು 50ರಿಂದ 60 ಬ್ಯಾಗ್‌ನಷ್ಟು ಟೊಮೆಟೋ ಕೊಯ್ದಿದ್ದು, ಅಂದಾಜು ಒಂದೂವರೆ ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೆಟೋ ಕಳ್ಳತನ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಕಳ್ಳತನದ ಕುರಿತು ಧರಣಿ ಹಳೇಬೀಡು ಪೊಲೀಸರಿಗೆ ದೂರು ನೀಡಿದ್ದಾರೆ. ಲಕ್ಷಾಂತರ ಮೌಲ್ಯದ ಟೊಮೆಟೋ ಕಳೆದುಕೊಂಡ ಧರಣಿ ಕಂಗಾಲಾಗಿದ್ದಾರೆ.

ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಟೊಮೆಟೊ ಮಾರಾಟ : ಇತ್ತ ಹಾವೇರಿ ಜಿಲ್ಲೆಯಲ್ಲಿ ಟೊಮೆಟೊ ಬೆಲೆ ದುಬಾರಿಯಾದ ಹಿನ್ನೆಲೆ ಕಳ್ಳತನವಾಗದಂತೆ ವ್ಯಾಪಾರಿಯೊಬ್ಬರು ಸಿಸಿಟಿವಿ ಕಣ್ಗಾವಲಿನಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ.ಹಾನಗಲ್  ತಾಲೂಕಿನ ಅಕ್ಕಿಆಲೂರಿನಲ್ಲಿ ನಡೆದ ಸಂತೆಯಲ್ಲಿ, ಕೃಷ್ಣಪ್ಪ ಎಂಬವರು ಟೊಮೆಟೊ ಕಳ್ಳತನ ಆಗದಂತೆ ಎಚ್ಚರಿಕೆ ವಹಿಸಿ ಸಿಸಿಟಿವಿ ಕಾವಲಿನಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಖರೀದಿ ಮಾಡುವ ನೆಪದಲ್ಲಿ ಜನ ಟೊಮೆಟೊ ಕದಿಯಬಾರದು ಎಂಬ ಕಾರಣಕ್ಕೆ ಸಿಸಿ ಕ್ಯಾಮೆರಾ ಹಾಕಿ ವ್ಯಾಪಾರ ನಡೆಸುತ್ತಿದ್ದಾರೆ.

ಕಳೆದ ಒಂದು ವಾರದಿಂದ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ಎರಡು ಟೊಮೆಟೊ ಕದ್ದರೂ ನಮಗೇ ನಷ್ಟ. ಸಾವಿರಾರು ರೂಪಾಯಿ ಕೊಟ್ಟು ಟೊಮೆಟೊ ಖರೀದಿಸಿದ್ದೇನೆ. ಹೀಗಾಗಿ ಸಿಸಿ ಕ್ಯಾಮೆರಾ ಹಾಕಿ ಟೊಮೆಟೊ ವ್ಯಾಪಾರ ಮಾಡುವ ಪರಿಸ್ಥಿತಿ ಬಂದಿದೆ ಎಂದು ವ್ಯಾಪಾರಸ್ಥ ಕೃಷ್ಣಪ್ಪ ಅವರು ಹೇಳಿದ್ದಾರೆ. ಇವರ ಸಿಸಿಟಿವಿ ಟೊಮೆಟೊ ವ್ಯಾಪಾರದಿಂದಾಗಿ ಟೊಮೆಟೊ ಖರೀದಿಗೆಂದು ಬಂದ ಗ್ರಾಹಕರು ಸಹ ಸಿಸಿ ಕ್ಯಾಮೆರಾ ನೋಡಿ ಶಾಕ್ ಆಗಿದ್ದಾರೆ.
ಇಡೀ ದೇಶದಲ್ಲಿ ಟೊಮೊಟೋ ಬೆಲೆ ಏರಿಕೆಗೆ ಕಾರಣ ಏನು ಎಂದು ಈಗ ಕೇಳುವುದಕ್ಕಿಂತಲೂ ಟೊಮೆಟೋ ಉಳಿಸಿಕೊಳ್ಳುವುದು  ಹೇಗೆ ಎಂಬುದೇ ಈಗ ತಲೆನೋವಾಗಿದೆ. ಸಕಾಲಕ್ಕೆ ಬಾರದ ಮಳೆ ಹಾಗೂ ಟೊಮೊಟೋ ಇಳುವರಿ ಕಡಿಮೆಯಾಗಿದ್ದೇ ಇಡೀ ದೇಶದಲ್ಲಿ ಟೊಮೊಟೋ ದರ ಏರಿಕೆಗೆ ಕಾರಣವಾಗಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಣಿಪುರದಲ್ಲಿ 68 ಟನ್ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆ ವಶ
April 13, 2025
7:42 AM
by: The Rural Mirror ಸುದ್ದಿಜಾಲ
ಅಡುಗೆ ಮನೆ ‘ಬೇಯಿಸುವ ಕೋಣೆ’ಯಲ್ಲ!
April 13, 2025
7:03 AM
by: ನಾ.ಕಾರಂತ ಪೆರಾಜೆ
2025ರಲ್ಲಿ ಶನಿ ತಮ್ಮ ನಕ್ಷತ್ರ ಅಥವಾ ರಾಶಿಯಲ್ಲಿ ಅಧೋಗತಿಯ ಚಲನೆ
April 13, 2025
6:38 AM
by: ದ ರೂರಲ್ ಮಿರರ್.ಕಾಂ
ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |
April 12, 2025
9:16 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group