ಸಮುದ್ರ ಪರಿಸರದಲ್ಲಿ ಆಗುವ ಬದಲಾವಣೆ, ಮಾನವ ಅತಿಕ್ರಮಣ ಹಾಗೂ ಹವಾಮಾನ ಬದಲಾವಣೆಯ ಪರಿಣಾಮದಿಂದ ಆಮೆಗಳ ಗೂಡುಕಟ್ಟುವ ಸ್ಥಳಗಳು ನಾಶವಾಗುತ್ತಿದ್ದು, ಇದರಿಂದ ಆಮೆಗಳ ಸಂತಾನ ಅವನತಿಯತ್ತ ಸಾಗುತ್ತಿದೆ ಎಂದು ಕೇಂದ್ರ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯು ತಿಳಿಸಿದೆ. ಸಿಎಂಎಫ್ಆರ್ ಐ ಮಂಗಳೂರಿನ ವಿಜ್ಞಾನಿ ಡಾ. ಬಿಂದು ಸುಲೋಚನನ್ ಅವರ ನೇತೃತ್ವದಲ್ಲಿ ನಡೆದ ಸಂಶೋಧನೆಯಲ್ಲಿ ತಿಳಿದು ಬಂದಿದೆ.
ಅಧ್ಯಯನದ ಪ್ರಕಾರ ಆಮೆಗಳು ತನ್ನ ಗೂಡುಗಳನ್ನು ಕಟ್ಟಲು ವಿಶಾಲವಾದ ಮರಳಿನ ಕಡಲತೀರಗಳನ್ನು ಹೊಂದಲು ಬಯಸುತ್ತದೆ. ಆದರೆ ಮನುಷ್ಯ ಸೃಷ್ಟಿಸಿರುವ ಸಮುದ್ರ ಗೋಡೆಗಳು ಅವುಗಳ ಹಾದಿಗೆ ಅಡ್ಡಿಯಾಗುತ್ತಿದೆ. ಮಾತ್ರವಲ್ಲ ಹವಾಮಾನ ಬದಲಾವಣೆಯಿಂದ ಉಂಟಾದ ಸಮುದ್ರ ಮಟ್ಟ ಏರಿಕೆಯು ಅನೇಕ ಗೂಡುಕಟ್ಟುವ ಪ್ರದೇಶಗಳನ್ನು ಮುಳುಗಿಸಿದೆ ಎಂದು ತಿಳಿಸಿದ್ದಾರೆ.
ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…
26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…
ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್…
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…
ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…
ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…