ಮಣ್ಣಿನ ಪರೀಕ್ಷೆ ಮತ್ತು ಮಹತ್ವದ ಬಗ್ಗೆ ತರಬೇತಿ

October 7, 2025
10:49 AM

ಭಾ.ಕೃ ಸಂ. ಪ. ಗೇರು ಸಂಶೋಧನಾ ನಿರ್ದೇಶನಾಲಯದಿಂದ ಕೃಷಿಕರಿಗೆ ಆರ್ ಕೆ ವಿ ವೈ ಮಾದರಿ ಗ್ರಾಮ ಯೋಜನೆಯಡಿ ಗೇರು ಕೃಷಿ ಮಾಹಿತಿ ಹಾಗೂ 2000 ಗಿಡಗಳ ವಿತರಣೆ ಹಾಗೂ ಕೃಷಿ ಇಲಾಖೆ ಸುಳ್ಯ ವತಿಯಿಂದ ಮಣ್ಣಿನ ಪರೀಕ್ಷೆ ಮತ್ತು ಮಹತ್ವದ ಬಗ್ಗೆ ತರಬೇತಿ ಕಾರ್ಯಕ್ರಮ ಈಚೆಗೆ ನಡೆಯಿತು.

Advertisement
Advertisement

ಸಂಪಾಜೆ ಗ್ರಾಮ ಪಂಚಾಯತ್, ಭಾ.ಕೃ.ಸಂ.ಪ ಗೇರು ಸಂಶೋದನಾ ನಿರ್ದೇಶನಾಲಯ ಪುತ್ತೂರು , ಕೃಷಿ ಇಲಾಖೆ ಸುಳ್ಯ , ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ(ನಿ.) ವಿಟ್ಲ, ಮಂಗಳೂರು, ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ ಸುಳ್ಯ ಇವರ ಸಹಯೋಗದಿಂದ ಎನ್ ಆರ್ ಎಲ್ ಎಂ ಸುಳ್ಯ, ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ(ರಿ.)ಸಂಪಾಜೆ ಜಂಟಿ ಆಶ್ರಯದಲ್ಲಿ ಮಣ್ಣು ಪರೀಕ್ಷೆ ತರಬೇತಿ ಹಾಗೂ ಗೇರು ಗಿಡಗಳ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ವಹಿಸಿ, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ  ಗುರುಪ್ರಸಾದ್ ಕೃಷಿ ಇಲಾಖೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಮತ್ತು ಮಣ್ಣಿನ ಪರೀಕ್ಷೆ ಹಾಗೂ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಡಾ.ಈರದಾಸಪ್ಪ, ವಿಜ್ಞಾನಿ ತಳಿಶಾಸ್ತ್ರ ಮತ್ತು ಸಂತಾನೋತ್ಪತ್ತಿ ವಿಭಾಗ ಇವರು ಸಾಂಕೇತಿಕವಾಗಿ ಸಭೆಯಲ್ಲಿ ಗಿಡ ವಿತರಿಸಿ ಗೇರು ತಳಿಗಳ ಬಗ್ಗೆ ಬಗ್ಗೆ ಮಾಹಿತಿ ನೀಡಿದರು. ಡಾ. ಭಾಗ್ಯ ವಿಜ್ಞಾನಿ ತೋಟಗಾರಿಕಾ ವಿಭಾಗ ಗೇರು ನಾಟಿ ವಿಧಾನ ಮತ್ತು ನಾಟಿಯ ನಂತರದ ಆರೈಕೆ ಬಗ್ಗೆ ಮಾಹಿತಿ ನೀಡಿದರು. ಡಾ.ಅಶ್ವತಿ ಚಂದ್ರಕುಮಾರ್, ವಿಜ್ಞಾನಿ ಕೃಷಿ ವಿಸ್ತರಣಾ ವಿಭಾಗ ಆರ್ ಕೆ ವಿ ವೈ ಯೋಜನೆಯ ಬಗ್ಗೆ ಮಾಹಿತಿ ಮತ್ತು ಮುಂದಿನ ದಿನಗಳಲ್ಲಿ ಗಿಡಗಳ ಬೆಳವಣಿಗೆ, ಇಳುವರಿಯ ಬಗ್ಗೆ ಫಲಾನುಭವಿಗಳು ಪ್ರತಿಕ್ರಿಯೆ ನೀಡಬೇಕು ಎಂದು ತಿಳಿಸಿದರು. ಗೇರಿನ ಮೌಲ್ಯವರ್ಧನೆಯ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಕೆ ಹನೀಫ್, ಸಂಪಾಜೆ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಜಿ ಕೆ ಹಮೀದ್ ಗೂನಡ್ಕ, ನಿವೃತ್ತ ಸೈನಿಕರು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ ಪಿ ಜಗದೀಶ್, ಕೃಷಿ ಇಲಾಖೆಯ ಸಿಬ್ಬಂದಿ ನಂದಿತ ಬಿಟಿಎಂ, ಅಶ್ವಿನಿ ಪುತ್ತೂರು, ಸತೀಶ್ ಪುತ್ತೂರು, NRLM ಸಂಜೀವಿನಿ ಕೃಷಿ ಜೀವನೋಪಾಯ ವಲಯ ಮೇಲ್ವಿಚಾರಕರು ಹೃತಿಕ್, ಜಾಲ್ಸೂರು ಗ್ರಾಮದ ಕೃಷಿಸಖಿ ವಿಜಯ, ಪಶುಸಖಿ ರಶ್ಮಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಜಗದೀಶ್ ರೈ, ಸುಂದರಿ, ಅನುಪಮ, ರಜನಿ ಶರತ್, ವಿಮಲಾ ಪ್ರಸಾದ್, ಲಿಸ್ಡಿ ಮೊನಾಲಿಸಾ ಸೊಸೈಟಿ ಉಪಾಧ್ಯಕ್ಷರಾದ ಯಮುನಾ ಬಿ. ಎಸ್, ಸೊಸೈಟಿ ನಿರ್ದೇಶಕರಾದ ಗಣಪತಿ ಭಟ್, ಶಂಕರ ಪ್ರಸಾದ್ ರೈ, ಕೃಷಿಸಖಿ ಮೋಹಿನಿ ವಿಶ್ವನಾಥ್ (ನಿಶಾ), ಸಂಜೀವಿನಿ ಒಕ್ಕೂಟದ ಕಾಂತಿ ಬಿ.ಎಸ್, ಯಶೋಧ, ಸೌಮ್ಯ, ಲಲನ, ಗೇರು ಗಿಡಗಳ ಫಲಾನುಭವಿಗಳು ಹಾಗೂ ಗ್ರಾಮದ ಕೃಷಿಕರು ಉಪಸ್ಥಿತರಿದ್ದರು.

ಸಹಾಯಕ ಕೃಷಿ ನಿರ್ದೇಶಕರಾದ ಗುರುಪ್ರಸಾದ್ ಸ್ವಾಗತಿಸಿದರು, ಕೃಷಿಸಖಿ ಮೋಹಿನಿ ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿ, ಎಂಬಿಕೆ ಕಾಂತಿ ಬಿ ಎಸ್ ವಂದಿಸಿದರು. ಗೇರು ಗಿಡಗಳಿಗೆ ಅರ್ಜಿ ಸಲ್ಲಿಸಿರುವ ಕೃಷಿಕರಿಗೆ ಗೇರು ಸಂಶೋಧನಾ ನಿರ್ದೇಶನಾಲಯದ ವತಿಯಿಂದ 2000 ಗಿಡಗಳನ್ನು ಉಚಿತವಾಗಿ ವಿತರಿಸಲಾಯಿತು.

ಹೃತಿಕ್, ತಾಲೂಕು ವ್ಯವಸ್ಥಾಪಕರು ಕೃಷಿ ಜೀವನೋಪಾಯ , ಜಾಲ್ಸೂರು ಗ್ರಾಮದ ಕೃಷಿಸಖಿ  ವಿಜಯ, ಪಶುಸಖಿ ಶ್ರೀಮತಿ ರಶ್ಮಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಜಗದೀಶ್ ರೈ,  ಸುಂದರಿ,  ಅನುಪಮ,  ರಜನಿ, ಶರತ್,  ವಿಮಲಾ ಪ್ರಸಾದ್, ಶ್ರೀಮತಿ ಲಿಸ್ಡಿ ಮೊನಾಲಿಸಾ ಸೊಸೈಟಿ ಉಪಾಧ್ಯಕ್ಷರಾದ
ಯಮುನಾ ಬಿ. ಎಸ್, ಸೊಸೈಟಿ ನಿರ್ದೇಶಕರಾದ  ಗಣಪತಿ ಭಟ್,  ಶಂಕರ ಪ್ರಸಾದ್ ರೈ, ಕೃಷಿಸಖಿ ಮೋಹಿನಿ ವಿಶ್ವನಾಥ್ (ನಿಶಾ), ಸಂಜೀವಿನಿ ಒಕ್ಕೂಟದ ಕಾಂತಿ ಬಿ.ಎಸ್,  ಯಶೋಧ, ಸೌಮ್ಯ,  ಲಲನ, ಗೇರು ಗಿಡಗಳ ಫಲಾನುಭವಿಗಳು ಹಾಗೂ ಗ್ರಾಮದ ಕೃಷಿಕರು ಉಪಸ್ಥಿತರಿದ್ದರು.

ಸಹಾಯಕ ಕೃಷಿ ನಿರ್ದೇಶಕರಾದ  ಗುರುಪ್ರಸಾದ್ ಸ್ವಾಗತಿಸಿದರು, ಕೃಷಿಸಖಿ ಮೋಹಿನಿ ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿ, ಎಂಬಿಕೆ  ಕಾಂತಿ ಬಿ ಎಸ್ ವಂದಿಸಿದರು. ಮಧ್ಯಾಹ್ನ ಊಟದ ಬಳಿಕ ಗೇರು ಗಿಡಗಳಿಗೆ ಅರ್ಜಿ ಸಲ್ಲಿಸಿರುವ ಕೃಷಿಕರಿಗೆ ಗೇರು ಸಂಶೋಧನಾ ನಿರ್ದೇಶನಾಲಯದ ವತಿಯಿಂದ 2000 ಗಿಡಗಳನ್ನು ಉಚಿತವಾಗಿ ವಿತರಿಸಲಾಯಿತು.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ
January 29, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror