Advertisement
Opinion

ಚಾರಣಕ್ಕೆ ತೆರಳುವವರು ಮನುಷ್ಯರಂತೆ ವರ್ತಿಸಿ | ಮೋಜು ಮಸ್ತಿಯೊಂದಿಗೆ ಪರಿಸರದ ಬಗ್ಗೆ ಕಾಳಜಿಯಿರಲಿ | ದೇವರಮನೆ ಬೆಟ್ಟದಲ್ಲಿ ರಾಶಿ ರಾಶಿ ಕಸ ಸಂಗ್ರಹಿಸಿದ ಪರಿಸರ ಪ್ರಿಯರು..!

Share

ಪಶ್ಚಿಮ ಘಟ್ಟಗಳ(western Ghats) ಸುಂದರ ತಾಣಗಳಿಗೆ ಪ್ರವಾಸಿಗರು ಚಾರಣಕ್ಕೆ(Trucking) ತೆರಳುವುದು ಮಾಮೂಲು. ಆದರೆ ಅವರು ಅಲ್ಲಿ ಹೋಗಿ ಪರಿಸರಕ್ಕೆ(Nature) ಹಾನಿಯಾಗುವಂತ ಪ್ಲಾಸ್ಟಿಕ್‌(Plastic)ವಸ್ತುಗಳನ್ನು ಅಲ್ಲೆ ಎಸೆದು ಬರುತ್ತಿರುವುದು ದುರದೃಷ್ಟಕರ ಸಂಗತಿ. ಅದೂ ವಿದ್ಯಾವಂತರಾಗಿದ್ದುಕೊಂಡು(Educates) ಈ ರೀತಿ ಪರಿಸರವನ್ನು ಹಾಳುಗೆಡವುದು ಎಷ್ಟು ಸರಿ..?. ಚಾರಣಕ್ಕೆಂದು ತೆರಳುವ ಪ್ರವಾಸಿಗರು(Tourist) ಅಲ್ಲಿಗೆ ಕೊಂಡೊಯ್ಯುವ ಪ್ಲಾಸ್ಟಿಕ್‌ ಬಾಟಲಿ(Plastic Bottle), ಆಹಾರ ಪೊಟ್ಟಣವನ್ನು(Food package) ಅಲ್ಲಿಯೇ ಬಿಟ್ಟು ಬರುತ್ತಾರೆ. ಇದರಿಂದ ಪರಿಸರದ ಮೇಲೂ ಅಪಾರ ಪ್ರಮಾಣದ ಹಾನಿಯಾಗುತ್ತದೆ. ಆದರೆ, ಚಿಕ್ಕಮಗಳೂರಿನ (Chikkamagaluru) ಮೂಡಿಗೆರೆಯ ದೇವರಮನೆ (Devaramane Peak) ಬೆಟ್ಟವನ್ನೇರಿದ ಪ್ರವಾಸಿಗರ ತಂಡವೊಂದು ಕಸ ಹೆಕ್ಕುತ್ತಾ ತನ್ನ ಚಾರಣವನ್ನು ಯಶಸ್ವಿಯಾಗಿ ಕೊನೆಗೊಳಿಸಿದೆ.

ಬೆಂಗಳೂರು ಮೂಲದ ‘ಬೇರು ಭೂಮಿ ಕನ್ನಡ ಮನಸ್ಸುಗಳ ಒಕ್ಕೂಟ’ ಈ ಸ್ವಯಂ ಸೇವಾ ಸಂಸ್ಥೆಯ ಹತ್ತಾರು ಸದಸ್ಯರು ಇಂತಹ ಅಭಿಯಾನ ಕೈಗೆತ್ತಿಕೊಂಡಿದ್ದಾರೆ. ಸ್ವಇಚ್ಛೆಯಿಂದ ಇದರ ಸದಸ್ಯರು ದೇವಿರಮನೆ ಬೆಟ್ಟವನ್ನು ಸ್ವಚ್ಛಗೊಳಿಸಿದ್ದಾರೆ.

ರಾಶಿ ಕಸ ಸಂಗ್ರಹ :ಬೆಂಗಳೂರಿನಿಂದ ಆಗಮಿಸಿದ್ದ ‘ಬೇರು ಭೂಮಿ ಕನ್ನಡ ಮನಸ್ಸುಗಳ ಒಕ್ಕೂಟ’ ಸದಸ್ಯರು ಬೆಳಗ್ಗೆ ಬೇಗನೇ ಬೆಟ್ಟ ತಲುಪಿದ್ದರು. ಬಳಿಕ ಮಧ್ಯಾಹ್ನದವರೆಗೂ ಕಸ ಹೆಕ್ಕಿದ್ದಾರೆ. ಅದರಲ್ಲೂ ಪ್ಲಾಸ್ಟಿಕ್‌ ಬಾಟಲಿ, ಕವರ್‌ಗಳನ್ನು ಸಂಗ್ರಹಿಸಿದ್ದಾರೆ. ಚಾರಣಕ್ಕೆ ಹೋಗುವುದು ತಪ್ಪಲ್ಲ. ಆದರೆ, ಪರಿಸರಕ್ಕೆ ಹಾನಿ ಮಾಡುವುದು, ಸ್ವಚ್ಛತೆ ಕಾಪಾಡದಂತೆ ನೋಡಿಕೊಳ್ಳುವುದು ಪ್ರವಾಸಿಗರ ಜವಾಬ್ದಾರಿ. ಆದ್ದರಿಂದ ಪರಿಸರವನ್ನು ಸ್ವಚ್ಛವಾಗಿಡಿ ಎಂದು ಸಂಸ್ಥೆಯ ಸ್ವಯಂ ಸೇವಕರು ಮನವಿ ಮಾಡಿದ್ದಾರೆ.ಬಗ್ಗೆ ಹಲವು ಬಾರಿ, ಹಲವು ರೀತಿಯಲ್ಲಿ ಅರಿವು ಮೂಡಿಸಿದರೂ ನಮ್ಮ ವಿದ್ಯಾಂತ ನಾಗರೀಕರು ಈ ವಿಷಯದಲ್ಲಿ ಕಾಡು ಪ್ರಾಣಿಗಳಿಗಿಂತಲೂ ಕಡೆಯಾಗಿ ವರ್ತಿಸುತ್ತಿದ್ದಾರೆ.

  • ಅಂತರ್ಜಾಲ ಮಾಹಿತಿ

Tourists who go on a trek leave the plastic bottle and food package there. This causes a lot of damage to the environment. However, a group of tourists who climbed the hill of Devaramane Peak in Mudigere, Chikkamagaluru, successfully ended their trek by collecting garbage.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಭಾರೀ ಮಳೆಯ ಎಚ್ಚರಿಕೆ : 24 ಗಂಟೆ ಸನ್ನದ್ಧವಾಗಿರಲು ಡಿಸಿ ಸೂಚನೆ, ಭೂಕುಸಿತ ಪ್ರದೇಶಗಳ ಮೇಲೆ ಕಟ್ಟೆಚ್ಚರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…

9 hours ago

ಹುಬ್ಬಳ್ಳಿಯಲ್ಲಿ ಹಲಸು ಮೇಳಕ್ಕೆ ಚಾಲನೆ – 50ಕ್ಕೂ ಹೆಚ್ಚು ಮಳಿಗೆಗಳು, ಹಲಸಿನ ಬಿರಿಯಾನಿಯಿಂದ ಕಬಾಬ್‌ವರೆಗೆ ಸವಿಯುವ ಅವಕಾಶ

ಹುಬ್ಬಳ್ಳಿಯಲ್ಲಿ ಆರಂಭವಾದ ಮೂರು ದಿನಗಳ ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.…

10 hours ago

ರಾಜ್ಯಾದ್ಯಂತ ಆರ್ಭಟಿಸುತ್ತಿರುವ ವರುಣ – ಭದ್ರಾ-ನೇತ್ರಾವತಿ ಅಪಾಯದ ಮಟ್ಟ ಮೀರಿ ಪ್ರವಾಹ

ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಭದ್ರಾ ಹಾಗೂ ನೇತ್ರಾವತಿ, ಕುಮಾರಧಾರಾ…

10 hours ago

ಶಿರಾಡಿ ಘಾಟ್‌ನಲ್ಲಿ ಭೂಕುಸಿತ – ರೈಲು ಸಂಚಾರಕ್ಕೆ ತಾತ್ಕಾಲಿಕ ಅಡ್ಡಿ

ಶಿರಾಡಿ ಘಾಟ್‌ನ ಎಡಕುಮರಿ–ಶಿರಿಬಾಗಿಲು ನಡುವೆ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪರಿಹಾರ…

10 hours ago

ಮೊಬೈಲ್ ನೋಡುತ್ತಾ ಊಟ ಮಾಡಬೇಡಿ, ಶಿಸ್ತಿನ ಜೀವನವೇ ಆರೋಗ್ಯದ ರಹಸ್ಯ – ರಾಘವೇಶ್ವರ ಶ್ರೀ

ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಸಮತೋಲನದಲ್ಲಿದ್ದಾಗ ಮಾತ್ರ ಆರೋಗ್ಯ ಹಾಗೂ ಆಧ್ಯಾತ್ಮಿಕ ಪ್ರಗತಿ…

21 hours ago

ಭಾರೀ ಮಳೆಯ ಎಚ್ಚರಿಕೆ | ಕರಾವಳಿ ಕರ್ನಾಟಕದಲ್ಲಿ ಅತಿ ಭಾರೀ ಮಳೆ – ಪ್ರವಾಹ- ಭೂಕುಸಿತದ ಎಚ್ಚರಿಕೆ

ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಕರ್ನಾಟಕ ಹಾಗೂ ಕೇರಳದಲ್ಲಿ ಇಂದು ಭಾರೀ ಮಳೆಯ…

1 day ago