Advertisement
MIRROR FOCUS

#Agriculture | ಅಡಿಕೆ ಬೆಳೆ ವಿಸ್ತರಣೆ ತಡೆಗೆ ಪ್ಲಾನ್‌ ಮಾಡಿದ ತ್ರಿಪುರಾ | ತ್ರಿಪುರ ಈಗ ಮಾವಿನ ಹಬ್ ಆಗಿ ಹೊರಹೊಮ್ಮುತ್ತಿದೆ…! |

Share

ದೇಶದೆಲ್ಲೆಡೆ ಅಡಿಕೆ ಹವಾ ಎದ್ದಿತ್ತು. ಆಹಾರ ಬೆಳೆಗಳಿಂದ ವಾಣಿಜ್ಯ ಬೆಳೆಯತ್ತ ಕೃಷಿಕರು ಮನಸ್ಸು ಮಾಡಿದ್ದರು. ಅಡಿಕೆ ಧಾರಣೆ ಏರಿಕೆಯಾದ್ದೇ ತಡ , ಅನೇಕ ಕೃಷಿಕರು ಅಡಿಕೆ ಬೆಳೆಯತ್ತ ಮನಸ್ಸು ಮಾಡಿದರು. ಕರ್ನಾಟಕ, ಕೇರಳದಲ್ಲಿ ಹೆಚ್ಚಾಗಿದ್ದ ಅಡಿಕೆ ಬೆಳೆ ವಿವಿಧ ರಾಜ್ಯಗಳಲ್ಲಿ ವಿಸ್ತರಣೆಯಾಯಿತು. ಈ ನಡುವೆ ಅಡಿಕೆ ಬೆಳೆಯುವ ರಾಜ್ಯವಾಗಿದ್ದ ತ್ರಿಪುರಾದಲ್ಲಿ  ಅಡಿಕೆಯ ಬದಲಿಗೆ ಮಾವು ಬೆಳೆಯನ್ನು ವಾಣಿಜ್ಯ ಬೆಳೆಯಾಗಿಸಲು ಅಲ್ಲಿ ಪ್ರಯತ್ನ ನಡೆಯಿತು. ತ್ರಿಪುರ ಈಗ ಹೊಸ ಮಾವಿನ ಹಬ್ ಆಗಿ ಹೊರಹೊಮ್ಮುತ್ತಿದೆ.  ಲಾಭದಾಯಕ ಆದಾಯಕ್ಕಾಗಿ ವಾಣಿಜ್ಯ ಕೃಷಿಯನ್ನು ಇಲ್ಲಿ ಸರ್ಕಾರವೇ ಉತ್ತೇಜಿಸುತ್ತದೆ.

Advertisement
Advertisement
Advertisement
Advertisement

ಕೃಷಿ ಶ್ರೇಷ್ಠತೆಗೆ ಹೆಸರುವಾಸಿಯಾಗಿರುವ ತ್ರಿಪುರಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಮಾವು-ಉತ್ಪಾದನೆಯ ಪ್ರಮುಖ ರಾಜ್ಯಗಳ ಶ್ರೇಣಿಯನ್ನು ಈಗ ಸೇರಿಕೊಂಡಿದೆ. ತ್ರಿಪುರಾ ಈಗ ವಾಣಿಜ್ಯ ಬೆಳೆಯನ್ನು ಪ್ರೋತ್ಸಾಹ ಮಾಡುತ್ತಿದೆ. ಆದರೆ ಅಡಿಕೆಯ ಬದಲು ಮಾವು ಕೃಷಿಗೆ ಉತ್ತೇಜನ ನೀಡುತ್ತಿದೆ. ತ್ರಿಪುರಾ ರಾಜ್ಯಾದ್ಯಂತ ರೈತರು ವಾಣಿಜ್ಯ ಮಾವು ಕೃಷಿಯನ್ನು ಪ್ರಾರಂಭಿಸಿದ್ದಾರೆ, ಲಾಭದಾಯಕ ಲಾಭವನ್ನು ಪಡೆಯುತ್ತಿದ್ದಾರೆ. ಈಚೆಗೆ ನಡೆದ ಮಾವು ತಳಿ ಪ್ರದರ್ಶನದಲ್ಲಿ ಅಲ್ಲಿನ  ಸಚಿವರು  ಮಾವಿನ ಕೃಷಿಯ ಭವಿಷ್ಯದ ಬಗ್ಗೆ ತಮ್ಮ ಆಶಾವಾದವನ್ನು ವ್ಯಕ್ತಪಡಿಸಿದರು.

Advertisement

ಮಾವನ್ನು  ಭಾರತದ ರಾಷ್ಟ್ರೀಯ ಹಣ್ಣು ಮತ್ತು “ಹಣ್ಣುಗಳ ರಾಜ” ಎಂದು ಕರೆಯಲಾಗುತ್ತದೆ. ತ್ರಿಪುರಾದಲ್ಲಿ, ವಿವಿಧ ಮಾವಿನ ತಳಿಗಳ ವಾಣಿಜ್ಯ ಕೃಷಿ ಈಗಾಗಲೇ ನಡೆಯುತ್ತಿದೆ.  ವಿಶೇಷವಾಗಿ ತ್ರಿಪುರಾದ ನಾಗಿಚೆರಾದಲ್ಲಿ,  13 ಅಭಿವೃದ್ಧಿ ಹೊಂದಿದ ಭಾರತೀಯ ಮಾವಿನ ತಳಿಗಳು ಮತ್ತು 22 ವಿದೇಶಿ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

Advertisement

ಕೃಷಿ ಸಚಿವ ರತನ್ ಲಾಲ್ ನಾಥ್ ಈ ಬಗ್ಗೆ ವಿವರಿಸಿ, “ಭಾರತವು ತನ್ನ ವೈವಿಧ್ಯಮಯ ಮಾವಿನ ತಳಿಗಳಿಗೆ ಹೆಸರುವಾಸಿಯಾಗಿದೆ, ಉದಾಹರಣೆಗೆ ಮಹಾರಾಷ್ಟ್ರದ ರತ್ನಗಿರಿಯ ಅಲ್ಫೋನ್ಸೊ, ಗುಜರಾತ್‌ನ ಕೇಸರ್ ಮಾವು, ಲಕ್ನೋದ ದಶೇರಿ ಮಾವು ಮತ್ತು ಪಶ್ಚಿಮ ಬಂಗಾಳದ ಕಿಸಾನ್ ಭೋಗ್ ಹೆಚ್ಚು ಗಮನ ಸೆಳೆದಿದೆ. ಅದೇ ಮಾದರಿಯಲ್ಲಿ ತ್ರಿಪುರಾದ ವಿಶೇಷ ತಳಿ ಮಾವು ಗಮನ ಸೆಳೆಯಬೇಕು ಎಂದು ಕೃಷಿಕರನ್ನು ಪ್ರೋತ್ಸಾಹಿಸಿದ್ದರು.

2022-23 ರ ಆರ್ಥಿಕ ವರ್ಷದಲ್ಲಿ ಭಾರತದ ಮಾವು ಉತ್ಪಾದನೆಯು ಸರಿಸುಮಾರು 21 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ತಲುಪಿದೆ. ಉತ್ತರ ಪ್ರದೇಶವು ಒಟ್ಟು ಉತ್ಪಾದನೆಯ ಸುಮಾರು 23% ರಷ್ಟು ಹೆಚ್ಚಿನ ಕೊಡುಗೆ ನೀಡಿದೆ. ತ್ರಿಪುರಾದಲ್ಲಿ, ಆಮ್ರಪಾಲಿ, ಹಿಮ್ಸಾಗರ್ ಅಂಬಿಕಾ ಮತ್ತು ಅರುಣಿಕಾ ಮುಂತಾದ ತಳಿಗಳನ್ನು 10,357 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ, ಪ್ರತಿ ಹೆಕ್ಟೇರ್‌ಗೆ ಸರಾಸರಿ 5.09 ಮೆಟ್ರಿಕ್ ಟನ್ ಇಳುವರಿ ನೀಡುತ್ತದೆ. ತ್ರಿಪುರಾದ ಈ ಗಮನಾರ್ಹ ತಳಿಗಳನ್ನು ಪ್ರದರ್ಶಿಸಲು ನಾಗಿಚೆರಾದಲ್ಲಿರುವ ತೋಟಗಾರಿಕೆ ಮತ್ತು ಸಂಶೋಧನಾ ಕೇಂದ್ರದಲ್ಲಿ “ಮಾವಿನ ತಳಿಗಳ ಪ್ರದರ್ಶನ”ವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಚಿವ ರತನ್ ಲಾಲ್ ನಾಥ್ ಅವರು ಆತ್ಮನಿರ್ಭರ ಭಾರತ ಯೋಜನೆಯ ಗುರಿ ಇರಿಸಿ,   1,00,000 ಕುಟುಂಬಗಳಿಗೆ 1.5 ಮಿಲಿಯನ್ ನಿಂಬೆ, ಪಪ್ಪಾಯಿ, ವೀಳ್ಯದೆಲೆ, ಬಾಳೆ ಮತ್ತು ಮಾವಿನ ಸಸಿಗಳನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದೂ ಹೇಳಿದ್ದರು.

Advertisement

ತ್ರಿಪುರಾ ಸರ್ಕಾರವು 2,000 ಹೆಕ್ಟೇರ್ ಭೂಮಿಯನ್ನು ತಾಳೆ ಎಣ್ಣೆಗಾಗಿ ಬೆಳೆಸಲು ಯೋಜಿಸಿದೆ, ಹೆಚ್ಚುವರಿ 1,300 ಹೆಕ್ಟೇರ್ ಅನ್ನು ಮಾವು, ಹಲಸು, ಕಿತ್ತಳೆ, ಅನಾನಸ್ ಮತ್ತು ಬಾಳೆಗಳನ್ನು ಬೆಳೆಯಲು ಮೀಸಲಿಡಲಾಗಿದೆ. ಇದಲ್ಲದೆ, ತೆಂಗು ಕೃಷಿಯು 295 ಹೆಕ್ಟೇರ್‌ಗಳಷ್ಟು ವಿಸ್ತರಿಸಿದೆ. ತ್ರಿಪುರಾದ ಸಾಂಪ್ರದಾಯಿಕ ಹಣ್ಣುಗಳಾದ ಜಾಮ್, ಲಿಚಿ, ಪೇರಲ  ಕೃಷಿಯನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿದೆ.  ಇಲಾಖೆಯು 2,95,000 ತೆಂಗು, ಮಾವು, ಸಸಿಗಳನ್ನು ವಿತರಿಸಲು ಯೋಜಿಸಿದೆ.

ಭಾರತದ ಅಡಿಕೆ ಉತ್ಪಾದನೆಯ ರಾಜ್ಯಗಳಲ್ಲಿ ತ್ರಿಪುರಾ 12 ನೇ ಸ್ಥಾನದಲ್ಲಿದೆ. ಅಲ್ಲಿ 7.16 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಇಡೀ ದೇಶದಲ್ಲಿ ಅಡಿಕೆ ಬೆಳೆಯ ಕಡೆಗೆ ಆಸಕ್ತವಾಗುತ್ತಿದ್ದಂತೆಯೇ ತ್ರಿಪುರಾ ತಕ್ಷಣವೇ ವಾಣಿಜ್ಯ ಹಾಗೂ ಲಾಭದಾಯಕ ಬೆಳೆಯಾದ ಮಾವು ಹಾಗೂ ಇತರ ಹಣ್ಣು ಕೃಷಿಯ ಕಡೆಗೆ ಗಮನಹರಿಸಿತು. ಹೀಗಾಗಿ ಅಡಿಕೆ ಬೆಳೆ ವಿಸ್ತರಣೆ ಮಂದಗತಿಯಲ್ಲಿ ಸಾಗಿತು. ಅದೇ ಇತರ ರಾಜ್ಯಗಳಲ್ಲಿ ಅಡಿಕೆ ಬೆಳೆಯ ವಿಸ್ತರಣೆ ವೇಗ ಕಂಡಿತು. ಭವಿಷ್ಯದ ದೃಷ್ಟಿಯನ್ನು ಗಮನದಲ್ಲಿರಿಸಿ ಆಹಾರ ಬೆಳೆ, ಹಣ್ಣು ಬೆಳೆಯತ್ತ ತ್ರಿಪುರಾ ಹೆಜ್ಜೆ ಇರಿಸಿದೆ. ಇತರ ರಾಜ್ಯಗಳಿಗೂ ಈ ಯೋಚನೆ, ಯೋಜನೆ ವಿಸ್ತರಣೆಯಾದರೆ ಅಡಿಕೆಯ ಜೊತೆ ಇತರ ವಾಣಿಜ್ಯ ಬೆಳೆಯೂ ಸ್ಥಾನ ಪಡೆಯಬಹುದು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಮಾವಿನ ನಂತರ  ಬಾಳೆಯು ಪ್ರಮುಖ ಹಣ್ಣಿನ ಬೆಳೆ

ಬಾಳೆಯು ಮಾವಿನ ನಂತರ ನಮ್ಮ ದೇಶದ ಪ್ರಮುಖ ಹಣ್ಣಿನ ಬೆಳೆಯಾಗಿದ್ದು, ಭಾರತ ದೇಶವು…

19 hours ago

ಜಲಜೀವನ್ ಮಿಷನ್ ಯೋಜನೆ | ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಪೂರೈಕೆ

ಜಲಜೀವನ್  ಯೋಜನೆ, ಯಲಬುರ್ಗಾ ತಾಲೂಕಿನ ತಿಪ್ಪನಹಾಳದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಗ್ರಾಮದ ಜನರ ಸಂತಸಕ್ಕೆ…

19 hours ago

ಕೃಷಿ ಆದಾಯ ದ್ವಿಗುಣಗೊಳಿಸಲು ವೈಜ್ಞಾನಿಕ ಮಾರ್ಗಗಳ ಜೊತೆ ಕೃಷಿ ವಿಶ್ವವಿದ್ಯಾಲಯ ಶ್ರಮಿಸಬೇಕು

ರೈತರು ಸುಸ್ಥಿರ ಬದುಕು ಮತ್ತು ಆದಾಯ ದ್ವಿಗುಣಗೊಳಿಸಲು ವೈಜ್ಞಾನಿಕ ಮಾರ್ಗಗಳ ಜೊತೆ ಕೃಷಿ…

19 hours ago

ಫೆ.21 “ಭಾವತೀರ ಯಾನ” ಸಿನಿಮಾ ಬಿಡುಗಡೆ | ಇಬ್ಬರು ಗೆಳೆಯರ ಭಾವಯಾನ | ಮಲೆನಾಡಿನಲ್ಲಿ ನಡೆದಿದೆ ಚಿತ್ರೀಕರಣ |

ಪ್ರೀತಿ ಎಂದರೆ ಹುಡುಗ-ಹುಡುಗಿಯ ನಡುವಿನ ಪ್ರೇಮವೊಂದೇ ಅಲ್ಲ.ವ್ಯಕ್ತಿಯ ಒಳಗಿನ ಭಾವ ಅದು. ಹೀಗಾಗಿ…

2 days ago

ನನಗೆ ಹೇಗೆ ಕೂಡುತ್ತೋ, ಹಾಗೆ ಮಾತ್ರ ನಾನು ಕೃಷಿ ಮಾಡೋದು…

ಸಾಕಷ್ಟು ಜನ ಅಡಿಕೆ‌ ರೈತರು ಕೇವಲ ಹವ್ಯಾಸೀ ಕೃಷಿಕರು ಹೊರತು ವೃತ್ತಿಪರ ಅಲ್ಲವೇ…

3 days ago

ದೆಹಲಿ ಚುನಾವಣೆ “ರಾಜಕೀಯ ಅಹಂಕಾರ”ಕ್ಕೆ ಉತ್ತರ | ರಚನಾತ್ಮಕ ವಿಪಕ್ಷವಾಗಿ ಕೆಲಸ ಮಾಡಬಹುದೇ ಎಎಪಿ..?

ಒಂದು ಹೋರಾಟದಿಂದ ರಾಜಕೀಯ ಪಕ್ಷವಾಗಿ ವೇಗವಾಗಿ ಬೆಳೆದಿರುವ ಆಮ್‌ ಆದ್ಮಿಪಕ್ಷ ಕೇವಲ 13…

3 days ago