ಕೃಷಿಕ ಸಂಸ್ಥೆ ಟಿಎಸ್‌ಎಸ್ – TSS (ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ) ಈ ವರ್ಷ 1,733 ಕೋಟಿ ರೂ. ವಹಿವಾಟು ನಡೆಸಿದ್ದು, 2.24 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
Advertisement
ಕಳೆದ 99 ವರ್ಷಗಳಿಂದ ಕೃಷಿ ಪರವಾಗಿ ಕೆಲಸ ಮಾಡುತ್ತಿರುವ ಟಿಎಸ್‌ಎಸ್ TSS ಶಿರಸಿಯಲ್ಲಿ ಕೇಂದ್ರ ಕಚೇರಿ ಹೊಂದಿದ್ದು ಉತ್ತರಕನ್ನಡ ಭಾಗದಲ್ಲಿ ಹೆಸರುವಾಗಿಯಾದ ರೈತಪರವಾದ ಸಂಸ್ಥೆಯಾಗಿದೆ. ಈ ಬಾರಿ 1,733 ಕೋಟಿ ರೂ. ವಹಿವಾಟು ನಡೆಸಿದೆ. 2.24 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ. 20ರಷ್ಟು ಲಾಭಾಂಶ ಘೋಷಿಸಿದೆ. ಈ ಬಾರಿ ಸಿದ್ದಾಪುರ ಶಾಖೆಯಲ್ಲಿ 44,000 ಕ್ವಿಂಟಲ್ ಅಡಿಕೆ , ಯಲ್ಲಾಪುರದಲ್ಲಿ 43,000 ಕ್ವಿಂಟಲ್ ಅಡಿಕೆ , ಮುಂಡಗೋಡ ಶಾಖೆ ಹಾಗೂ ಶಿರಸಿಯಲ್ಲಿ 2,065 ಟನ್ ಜೋಳ ಖರೀದಿಸಲಾಗಿದೆ. ಶುಂಠಿ, ಅರಿಶಿನ, ಗೇರು ಬೀಜ, ತೆಂಗಿನ ಕಾಯಿ, ಬಾಳೆಕಾಯಿ ಟೆಂಡರ್ ಮತ್ತು ಖರೀದಿ ನಡೆಸುತ್ತಿದೆ. ಮಳೆಗಾಲದಲ್ಲಿ ಉದುರುವ ಅಡಿಕೆಗೆ ಸಹ ಟೆಂಡರ್ ವ್ಯವಸ್ಥೆ ಕಲ್ಪಿಸುವ ಮೂಲಕ ಟಿಎಸ್‌ಎಸ್ ಕೃಷಿಕರ ಪರವಾಗಿ ಕೆಲಸ ಮಾಡುತ್ತಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement