ತುಳು ಭಾಷೆಯ ಮತ್ತೊಂದು ಮೈಲಿಗಲ್ಲು | ತುಳು ವಿಕ್ಷನರಿ ಮತ್ತು ತುಳು ವಿಕಿಸೋರ್ಸ್ ಲೈವ್‌

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ತುಳು ಮಾತನಾಡುವ ಸಮುದಾಯದ ಬೆಳವಣಿಗೆಗೆ ಮತ್ತೊಂದು ಗರಿಯೆಂಬತೆ, ತುಳು ವಿಕ್ಷನರಿ ಮತ್ತು ತುಳು ವಿಕಿಸೋರ್ಸ್ ಅಧಿಕೃತವಾಗಿ ಲೈವ್ ಆಗಿವೆ. ತುಳು ವಿಕ್ಷನರಿ, ವಿಕಿಮೀಡಿಯಾ ಫೌಂಡೇಶನ್ ನಿರ್ವಹಿಸುವ ಅಂತರಜಾಲ ನಿಘಂಟಾಗಿದೆ. ಬಳಕೆದಾರರು ತುಳು ವಿಕ್ಷನರಿಯಲ್ಲಿ ಮಾಹಿತಿ ಹುಡುಕಬಹುದು, ಸಂಪಾದಿಸಬಹುದು ಮತ್ತು ಕೊಡುಗೆ ನೀಡಬಹುದು. ಈ ಸಾಧನೆಯು ಕರಾವಳಿ ವಿಕಿಮೀಡಿಯನ್ನರು ಮತ್ತು ತುಳು ವಿಕಿಮೀಡಿಯನ್ನರ ಆರು ವರ್ಷಗಳ ಸ್ವಯಂಪ್ರೇರಿತ ಸಂಪಾದನೆಯ ಪ್ರಯತ್ನದ ಫಲವಾಗಿದೆ.

Advertisement

ಈ ಯೋಜನೆಗೆ 2018ರಲ್ಲಿ ಮುನ್ನುಡಿ ಹಾಡಿದವರು ಡಾ. ಯು.ಬಿ. ಪವನಜ. ಅತ್ಯಂತ ಹೆಚ್ಚು ಪದಗಳನ್ನು ಸಂಪಾದಿಸಿ ಕೊಡುಗೆ ನೀಡಿರುವವರು ಕರಾವಳಿ ವಿಕಿಮೀಡಿಯನ್ ಯೂಸರ್ ಗ್ರೂಪಿನ ಸದಸ್ಯರಾದ ಡಾ. ವಿಶ್ವನಾಥ ಬದಿಕಾನ, ದಿವಂಗತ. ರವೀಂದ್ರ ಮುಡ್ಕೂರು, ಭರತೇಶ ಅಲಸಂಡೆಮಜಲು, ಡಾ. ಕಿಶೋರ್ ಕುಮಾರ್ ರೈ ಶೇಣಿ, ಮತ್ತು ಯಕ್ಷಿತ ಮೂಡುಕೋಣಾಜೆ. ತಾಂತ್ರಿಕ ಕೆಲಸಗಳನ್ನು ಆನೂಪ್‌ ರಾವ್‌ ಕಾರ್ಕಳ, ಚಿದಾನಂದ ಕಂಪ, ಭರತೇಶ ಅಲಸಂಡೆಮಜಲು ಸಹಕರಿಸಿದ್ದರು. 2018 ಆಗಸ್ಟ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ತುಳು ಸ್ನಾತಕೋತ್ತರ ಪದವಿ ಪ್ರಾರಂಭವಾದ ಸಂದರ್ಭದಲ್ಲಿ ತುಳು ವಿಕ್ಷನರಿಯ ಕೆಲಸವೂ ಪ್ರಾರಂಭವಾಯಿತು. ಇದು ಜಾಗತಿಕ ಮಟ್ಟದಲ್ಲಿ ತುಳುಭಾಷೆಯನ್ನು ಗುರುತಿಸಲು ಪ್ರಮುಖ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ತುಳು ಭಾಷಾಭಿಮಾನಿಗಳು ಮತ್ತು ವಿದ್ವಾಂಸರುಗಳ ಸಹಯೋಗದಿಂದ ಈ ತುಳು ಶಬ್ದಕೋಶವನ್ನು ವಿಸ್ತರಿಸಲು ಮತ್ತು ಪರಿಷ್ಕರಿಸಲು ಡಿಜಿಟಲ್ ಮಾಧ್ಯಮದಲ್ಲಿ ಸಾಧ್ಯವಿದೆ.

ವಿಕ್ಷನರಿ ಒಂದು ಉಚಿತ, ಬಹುಭಾಷಾ ಆನ್‌ಲೈನ್ ನಿಘಂಟಾಗಿದ್ದು, ವ್ಯಾಖ್ಯಾನಗಳು(Definition), ವ್ಯುತ್ಪತ್ತಿಗಳು(etymology), ಉಚ್ಚಾರಣೆಗಳು, ಚಿತ್ರ, ಅನುವಾದಗಳು, ಗಾದೆ, ಒಗಟು, ನುಡಿಗಟ್ಟು ಮತ್ತು ಇನ್ನಿತರ ವಿಚಾರಗಳನ್ನು ಸೇರಿಸಿಕೊಳ್ಳಬಹುದು. ಸಾಂಪ್ರದಾಯಿಕ ನಿಘಂಟುಗಳಿಗಿಂತ ಭಿನ್ನವಾಗಿ, ಇದು ಪ್ರಪಂಚದಾದ್ಯಂತದ ಸ್ವಯಂಸೇವಕರ ಸಹಯೋಗದೊಂದಿಗೆ ಸಂಪಾದಿಸಲ್ಪಡುತ್ತದೆ. ಇದು ನಿರಂತರವಾಗಿ ಮಾರ್ಪಾಡು ಮತ್ತು ವಿಕಸನದಿಂದ ನೈಜ ಸಮಯದಲ್ಲಿ ಬೆಳೆಯುವಂತಹ ನಿಘಂಟು ಅಗಿದೆ. ತುಳು ವಿಕ್ಷನರಿಯಲ್ಲಿ 3000ಕ್ಕೂ ಅಧಿಕ ಶಬ್ಧಗಳಿದ್ದು ವ್ಯವಸ್ಥಿತವಾಗಿ ವ್ಯಾಕರಣ ನೆಲೆಯಲ್ಲಿ ವರ್ಗಿಕರೀಸಲಾಗಿದೆ. ಇದು ತುಳು ಭಾಷೆಯಲ್ಲಿನ ಪದಗಳ ಬಗ್ಗೆ ಆಳವಾದ ಮಾಹಿತಿಯನ್ನು ಒದಗಿಸುತ್ತದೆ. ಪದ, ಸಮಾನಾರ್ಥಗಳು, ಸಾಹಿತ್ಯ, ಪಾಡ್ದನ ಇತ್ಯಾದಿ ಬಳಕೆಯ ಉದಾಹರಣೆಗಳು, ಪದದ ಮೂಲಗಳು, ಇತರ ಭಾಷೆಯ ಸಮಾನಾರ್ಥಗಳು ಮತ್ತು ಅವುಗಳಿಗೆ ಲಿಂಕ್ ಮತ್ತು ವ್ಯಾಕರಣ ವಿವರಗಳು ಇತ್ಯಾದಿ ಭಾಷಾ ಕಲಿಕೆಗೆ, ಭಾಷಾಶಾಸ್ತ್ರಜ್ಞರಿಗೆ ಮತ್ತು ಸಾಂಸ್ಕೃತಿಕ ಅಧ್ಯಯನಕ್ಕೆ ಸಹಾಯವಾಗುವುದು.

ತುಳು ವಿಕ್ಷನರಿಯ ಜೊತೆಗೆ ತುಳು ವಿಕಿಸೋರ್ಸ್ ಕೂಡ ಪ್ರಾರಂಭವಾಗಿದೆ. ವಿಕಿಸೋರ್ಸ್ ಉಚಿತ ಆನ್‌ಲೈನ್ ಡಿಜಿಟಲ್ ಲೈಬ್ರರಿ. ಸಾರ್ವಜನಿಕ ಡೊಮೇನ್‌ನಲ್ಲಿ ಅಥವಾ ಮುಕ್ತ ಹಕ್ಕುಸ್ವಾಮ್ಯದ ಅಡಿಯಲ್ಲಿ ಮೂಲ ಪಠ್ಯಗಳನ್ನು ಹೊಂದಿದ್ದು, ಓದುಗರು, ಪುಸ್ತಕ ಬಳಕೆದಾರರು ವಿಷಯದ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಪಠ್ಯಗಳನ್ನು ವಿಕಿಸೋರ್ಸ್‌ ಸಹಕಾರಿ. ಪುಸ್ತಕವನ್ನು ಲಿಪ್ಯಂತರ ಮತ್ತು ಪ್ರೂಫ್ ರೀಡಿಂಗ್ ಓದುವ ಅನುಕೂಲವನ್ನು ಸಂಪಾದಕರು ಮಾಡಿಕೊಡುವರು. ಹೀಗೆ ಸಂಪಾದನೆಯಾದ ಪುಸ್ತಕವನ್ನು ಓದಬಹುದು ಮತ್ತು ಸಂಗ್ರಹಿಸಿಟ್ಟುಕೊಳ್ಳಬಹುದು.. ತುಳು ವಿಕಿಸೋರ್ಸ್ ಪುಸ್ತಕಗಳು, ಪತ್ರಗಳು, ಐತಿಹಾಸಿಕ ಪಠ್ಯಗಳು ಮತ್ತು ಸಾಹಿತ್ಯ ಕೃತಿಗಳಂತಹ ಮೂಲ ತುಳು ದಾಖಲೆಗಳನ್ನು ಸಂರಕ್ಷಿಸಲು ಗಮನಹರಿಸುತ್ತದೆ. ಇದು ಸಂಶೋಧಕರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ತುಳು ಸಾಹಿತ್ಯ ಪರಂಪರೆಯ ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವವರಿಗೆ ವಿಶೇಷವಾಗಿ ಉಪಯುಕ್ತವಾಗಿದೆ.

ತುಳು ವಿಕ್ಷನರಿ ಮತ್ತು ತುಳು ವಿಕಿಸೋರ್ಸ್‌ ಇವುಗಳ ಪ್ರಾರಂಭವು ಜಾಗತಿಕ ವೇದಿಕೆಯಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಮತ್ತು ಸಂರಕ್ಷಿಸುವ ಪ್ರಮುಖ ಹೆಜ್ಜೆಯಾಗಿದೆ. ಭವಿಷ್ಯದ ಪೀಳಿಗೆಯು ಈ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಕಲಿಯಲು ಮತ್ತು ತೊಡಗಿಸಿಕೊಳ್ಳಲು ಒಂದು ಉತ್ತಮ ಬುನಾದಿಯಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ | 3570 ಟನ್ ಕಟ್ಟಡ ತ್ಯಾಜ್ಯ ತೆರವು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಎರಡು…

1 hour ago

ಇಂದು ಶೂನ್ಯ  ನೆರಳಿನ ದಿನ | ಪಿಲಿಕುಳದಲ್ಲಿ  ಪ್ರಾತ್ಯಕ್ಷಿಕೆ

ಎಪ್ರಿಲ್ 24 ರಂದು ಮಧ್ಯಾಹ್ನ ನಿಮ್ಮ ನೆರಳನ್ನು ಕಾಣಲಾಗುವುದಿಲ್ಲ.  ಏಕೆಂದರೆ ಈಗ ಕರ್ಕಾಟಕ…

1 hour ago

ಬದುಕು ಕಲಿಸುವ ಪಾಠಗಳು

ಹಂಚಿ ತಿನ್ನುವ ಅಭ್ಯಾಸ ರೂಡಿ ಇಲ್ಲವಾದರೂ ಸಂಸಾರಿಯಾದ ಕೂಡಲೇ ಎಲ್ಲವೂ ಬದಲಾಗುತ್ತದೆ. ಆ…

1 hour ago

82 ವರ್ಷಗಳ ಬಳಿಕ ಅಕ್ಷಯ ತೃತೀಯ ದಿನವೇ 3 ಅಪರೂಪದ ಯೋಗಗಳ ನಿರ್ಮಾಣ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

2 hours ago

ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ

ಸಕಲಜೀವಿಗಳ ಆಡುಂಬೊಲ ನಮ್ಮೀ  ಪ್ರಕೃತಿ. ಪ್ರಕೃತಿಯೊಡಲು ನಮ್ಮತಾಯ ಮಡಿಲು. ಪ್ರಕೃತಿಯು ಕೆಲವೆಡೆ ರುದ್ರರಮಣೀಯ;…

2 hours ago

ಕೂಡಿಟ್ಟ ಆಸ್ತಿ ಮನೆಯಲ್ಲೇ ನಡೀತು ಕುಸ್ತಿ

ಹಕ್ಕಿಗಳು ಮರಿಗಳಿಗೆ ಹಾರಲು ಕಲಿಸುತ್ತವೆ. ಒಮ್ಮೆ ಹಾರಲು ಬಂತೆಂದರೆ ಗೂಡು ಬಿಟ್ಟು ಹಾರುತ್ತವೆ…

10 hours ago