ತುಂಗಭದ್ರಾ ಆಣೆಕಟ್ಟಿನ(Tungabhadra Dam) ಗರಿಷ್ಠ ಸಾಮರ್ಥ್ಯ 1633 ಅಡಿಗಳು. ದಿನಾಂಕ 9 ಆಗಷ್ಟ್ 2024 ರ ನೀರಿನ ಮಟ್ಟ 1632. 45 ಅಡಿಗಳು. ಈಗ ತಾಂತ್ರಿಕ ದೋಷಕ್ಕೆ(Technical Issue) ಸುಮಾರು ಇಪ್ಪತ್ತು ಅಡಿ ಆಣೆಕಟ್ಟಿನೊಳಗೆ ಸಂಗ್ರಹವಾದ ನೀರು(Water) ಹೊರಬಿಟ್ಟರೆ ಮತ್ತೆ ಹೊರಬಿಟ್ಟಷ್ಟು ನೀರು ಆಣೆಕಟ್ಟನೊಳಗೆ ಈ ಬಾರಿ ಸಂಗ್ರಹ ವಾಗಲು ಸಾಧ್ಯವೇ…?
ಶರಾವತಿ ನದಿಯ ಆಣೆಕಟ್ಟು ಎರಡು ಸಾವಿರ ಚದುರ ಕಿಲೋಮೀಟರ್ ವಿಸ್ತೀರ್ಣ ದಲ್ಲಿ ನೀರು ಸಂಗ್ರಹವಾಗಿರುತ್ತದೆ. ಒಬ್ಬ ನಾಲ್ಕು ಸರ್ಕಾರಿ ಮತ್ತು ಒಂದು ಖಾಸಗಿ ವಿದ್ಯುತ್ ಸ್ಥಾವರ ಶರಾವತಿ ನದಿನೀರಿನಿಂದ ವಿದ್ಯುತ್ ಉತ್ಪಾದನೆ ಮಾಡುತ್ತದೆ. ಕಳೆದ ಸರ್ತಿ 1744 (ಗರಿಷ್ಠ 1819 ಅಡಿ) ಗೆ ಕುಸಿದಿತ್ತು. ಕೇವಲ ಒಂದು ತಿಂಗಳ ಮಳೆಗೆ ಸುಮಾರು ಅರವತ್ತೊಂದು ಅಡಿ ನೀರು ಆಣೆಕಟ್ಟಿಗೆ ಬಂದಿದೆ. ಇದೀಗ 1803 ಅಡಿ ನೀರಿದೆ. 1800 ರ ಮೇಲೆ ಒಂದೊಂದು ಅಡಿ ನೀರು ಸಂಗ್ರಹ ವಾಗುವುದು ಬಹಳ ಕಷ್ಟ. ಒಂದು ಅಡಿ ನೀರು ಏರಲು ಸಾವಿರಾರು ಕಿಲೋಮೀಟರ್ ವಿಸ್ತೀರ್ಣ ದಲ್ಲಿ ನೀರು ನಿಲ್ಲಬೇಕು. ಯಾವುದೇ ಆಣೆಕಟ್ಟು ಸಾಮಾನ್ಯ ಎತ್ತರದಲ್ಲಿ ನೀರು ಸಂಗ್ರಹ ಆಗುವುದು ಸುಲಭ. ಆದರೆ ಗರಿಷ್ಠ ಮಟ್ಟಕ್ಕೆ ನೀರು ಏರುವ ಸಮಯದಲ್ಲಿ ಬಹಳಷ್ಟು ಸವಾಲು ಎದುರಿಸಬೇಕಾಗುತ್ತದೆ.
ಮಳೆ ಕಡಿಮೆಯಾದರೆ ನೀರು ವಿಶಾಲವಾದ ವಿಸ್ತೀರ್ಣದಲ್ಲಿ ಆಣೆಕಟ್ಟಿನಲ್ಲಿ ಏರುವುದು ಬಹಳ ಕಷ್ಟ. ಪಶ್ಚಿಮ ಘಟ್ಟಗಳ ನದಿ ಉಗಮ ಸ್ಥಾನದ ಸಮೀಪದ ಮೊದಲ ಆಣೆಕಟ್ಟು ಏರುವುದು ಸುಲಭ. ಮೊನ್ನೆ ಜುಲೈನಲ್ಲಿ ಸಾಮಾನ್ಯ ಮಳೆಗೇ ಗಾಜನೂರಿನ ತುಂಗಾ ಆಣೆಕಟ್ಟು ತುಂಬಿ ನಮಗೆಲ್ಲಾ ಅಚ್ಚರಿ ಮೂಡಿಸಿತ್ತು. ಆದರೆ ಇದೇ ಮಾದರಿಯಲ್ಲಿ ಇನ್ಯಾವ ಆಣೆಕಟ್ಟೂ ತುಂಬುವುದಿಲ್ಲ. ನಮ್ಮ ಶಿವಮೊಗ್ಗ ಜಿಲ್ಲೆಯ ವಾರಾಹಿ ಅಣೆಕಟ್ಟು ಈ ನಲವತ್ತು ವರ್ಷದಲ್ಲಿ ಬೆರಳಿಕೆಯಷ್ಟು ಬಾರಿ ಭರ್ತಿಯಾಗಿದೆ…!! ವಾರಾಹಿ ನದಿ ಹುಟ್ಟಿ ಕೇವಲ ನಲವತ್ತು ಕಿಲೋಮೀಟರ್ ನೊಳಗಿನ ಆಣೆಕಟ್ಟು ಇದು. ಈ ಆಣೆಕಟ್ಟು ನಿರ್ಮಾಣವನ್ನು ಇಂಜಿನಿಯರ್ ಗಳು ಬಹಳ ನಿರೀಕ್ಷೆ ಇಟ್ಟುಕೊಂಡು ಕಟ್ಟಿದ್ದರು. ಆದರೆ ಈ ಆಣೆಕಟ್ಟು ನಿರ್ಮಾಣ ದ ಮೊದಲು ವಾರಾಹಿ ಜಲಾನಯನ ಪ್ರದೇಶದಲ್ಲಿ ಕೇಂದ್ರೀಕೃತ ವಾಗಿ ಭಾರೀ ಮಳೆ ಆಗುತ್ತಿತ್ತು. ಆದರೆ ಆಣೆಕಟ್ಟಿಗಾಗಿ ಭಾರೀ ಪ್ರಮಾಣದ ಬೃಹತ್ ನೈಸರ್ಗಿಕ ಅರಣ್ಯವನ್ನು ಕಡಿದು ನಾಶ ಮಾಡಿ ಮುಳುಗಡೆ ಮಾಡಿದ ದುಷ್ಪರಿಣಾಮವಾಗಿ ಆಗುಂಬೆಯ ಮಳೆ ಆಗುಂಬೆಯಿಂದ ಸುಮಾರು ಐವತ್ತು ಕಿಲೋಮೀಟರ್ ದೂರದ ಮಾಸ್ತಿಕಟ್ಟೆ (ಬಾಳೆಬರೆ ಘಾಟಿ) ಗೆ ವರ್ಗಾವಣೆ ಆಯಿತು.
ವಾರಾಹಿ ಆಣೆಕಟ್ಟು ನಾಲ್ಕು ಐದು ವರ್ಷಗಳಿಗೊಮ್ಮೆ ತುಂಬುತ್ತದೆ. ವಾರಾಹಿ ಗರಿಷ್ಠ ಮಟ್ಟ 595 ಇದೀಗ 584 ಅಡಿ ನೀರಿದೆ. ಇನ್ನ ಹತ್ತು ಅಡಿ ನೀರು ಸಂಗ್ರಹ ವಾಗುವುದು ಈ ವಾತಾವರಣದಲ್ಲಿ ಕಷ್ಟ ಸಾದ್ಯ. ಆದರೆ ಬಯಲು ಸೀಮೆಯ ಪ್ರದೇಶದಲ್ಲಿ ಆಣೆಕಟ್ಟಿನ ನೀರಿನ ಮಟ್ಟ ಪ್ರವಾಹ ಬಂದರೆ ತಕ್ಷಣ ಏರುತ್ತದೆ . ಆದರೆ ಸಾಮಾನ್ಯ ಮಳೆಗೆ ಏರುವುದು ಕಷ್ಟ. ಈ ತುಂಗಾ ಭದ್ರಾ ಆಣೆಕಟ್ಟಿನ ನೀರಿನ ಪ್ರಮಾಣ ಏರಲು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗಿ ತುಂಗಾ (ಗಾಜನೂರು) ಭದ್ರಾ (ಬಿ ಆರ್ ಪ್ರಾಜೆಕ್ಟ್) ಆಣೆಕಟ್ಟಿನ ನೀರು ಏರಿ ಆ ಆಣೆಕಟ್ಟಿನಿಂದ ನೀರು ಹೊರ ಬಿಟ್ಟರೆ ಆ ಮೂಲಕ ಆಲಮಟ್ಟಿ ಕಳೆದುಕೊಂಡ ಬೃಹತ್ ಪ್ರಮಾಣದ ಇಪ್ಪತ್ತು ಅಡಿ ನೀರು ಸಂಗ್ರಹ ಆಗಲು ಸಾಧ್ಯ. ಆಗಷ್ಟ್ ಹದಿನೈದು ಬಂದಿದೆ. ಇನ್ನ ಸಾಮಾನ್ಯ ಮಳೆ ಬರಬಹುದು. ಒಂದು ತಿಂಗಳ ಕಾಲ ಮಳೆ ಬರಬಹುದು. ಆದರೆ ಅಲ್ಲಲ್ಲಿ… ಆದರೆ ಈ ಸಾರಿ ಇದುವರೆಗೂ ಬಂದಂತಹ ಭಾರೀ ಮಳೆ ಮತ್ತೆ ಬರದು ಎನಿಸುತ್ತಿದೆ. ಮಳೆ ತಜ್ಞರು ಈ ಬಗ್ಗೆ ಮಾಹಿತಿ ನೀಡಬೇಕು…
ಕೇಂದ್ರ ಸರ್ಕಾರ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿ…
ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಕರ್ನಾಟಕದ 210 ಐತಿಹಾಸಿಕ ಸ್ಮಾರಕಗಳು ರಾಜ್ಯ ಸರ್ಕಾರದ…
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಸೇರಿದಂತೆ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ…
ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು, ತುಡುಕೂರು ಗ್ರಾಮಗಳ ಕಾಫಿ ತೋಟಗಳಲ್ಲಿ ಸುಮಾರು 20 ಕಾಡಾನೆಗಳ…
ನಿರ್ಮಲ ತುಂಗಾಭದ್ರಾ ಅಭಿಯಾನ- ಬೃಹತ್ ಜಲಜಾಗೃತಿ ಪಾದಯಾತ್ರೆಯ ಭಾಗವಾಗಿ ಶಿವಮೊಗ್ಗ ನಗರದಲ್ಲಿ ತುಂಗಾ…