ಟರ್ನಿಂಗ್ ಪಾಯಿಂಟ್‌ | ಸವಾಲುಗಳ ಜೊತೆಗೊಂದು ಪಯಣ | ಪುಸ್ತಕದೊಳಗೊಂದು ಇಣುಕು ನೋಟ |

September 26, 2021
10:44 AM

ಎ.ಪಿ.ಜೆ ಅಬ್ದುಲ್ ಕಲಾಂ, ಮಕ್ಕಳ ನೆಚ್ಚಿನ ಮೇಷ್ಟ್ರು ಆಗಿ, ಜನರ ಮೆಚ್ಚಿನ ರಾಷ್ಟ್ರಪತಿ ಯಾಗಿ,ಭಾರತದ ಪ್ರಮುಖ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿದ ವಿಜ್ಞಾನಿಯಾಗಿ ದಿವಂಗತ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು ಹಲವು ಸ್ತರಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ದೇಶದ ಬೆಳವಣಿಗೆಗೆ ಕೊಡುಗೆ ನೀಡಿದವರು. ಸ್ವದೇಶಿ ನಿರ್ಮಿತ ಕ್ಷಿಪಣಿ ಅಗ್ನಿ ಹಾಗೂ ಪೃಥ್ವಿ ಗಳ ಅಭಿವೃದ್ಧಿ ಮತ್ತು ಕಾರ್ಯನಿರ್ವಹಣೆಯಿಂದ ಭಾರತದ ಕ್ಷಿಪಣಿ ಮನುಷ್ಯ ಎಂಬ ಬಿರುದನ್ನು ಪಡೆದವರು‌ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇವರ ಕೊಡುಗೆ ಅಪಾರ. ಇವಿಷ್ಟೇ ಅಲ್ಲದೆ ‘ಭಾರತ ರತ್ನ’ ವನ್ನು ಒಳಗೊಂಡಂತೆ ಹಲವು ಅತ್ಯುನ್ನತ ನಾಗರಿಕ ಪ್ರಶಸ್ತಿಗಳಿಗೆ ಭಾಜನರಾಗಿರುವ ಇವರು ಬಹುಬೇಡಿಕೆಯಿದ್ದ ಅನೇಕ ಗ್ರಂಥಗಳ ಲೇಖಕರು ಎಂಬುದು ಅಕ್ಷರಶಃ ಸತ್ಯ.

Advertisement
Advertisement

ಕಲಾಮ್ ಅವರ ತಮ್ಮ ಜೀವನದಲ್ಲಿ ಎದುರಾದ ತಿರುವು ” ಟರ್ನಿಂಗ್ ಪಾಯಿಂಟ್ “ ಒಂದು ಅವರನ್ನು ಭಾರತದ ರಾಷ್ಟ್ರಪತಿಯನ್ನಾಗಿಸಿತು. ಅವರು ತಮ್ಮ ಜೀವನದಲ್ಲಿ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ ಕ್ಷಣಗಳಿಂದ ಹಿಡಿದು ಆ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿ 2007 ರಲ್ಲಿ ತಾವು ಆ ಹುದ್ದೆಯಿಂದ ನಿರ್ಗಮಿಸುವ ಕೊನೆಯ ದಿನದವರೆಗಿನ ಚಿತ್ರಣವನ್ನು ” ಟರ್ನಿಂಗ್ ಪಾಯಿಂಟ್ ಎಂಬ ಕೃತಿಯಲ್ಲಿ ಅತ್ಯದ್ಭುತ ವಾಗಿ ಚಿತ್ರಿಸಿದ್ದಾರೆ.

ಕಲಾಂ ರನ್ನು ಸಂಪರ್ಕಿಸುವ ಪ್ರಧಾನಿ ವಾಜಪೇಯಿ ಅವರು ರಾಷ್ಟ್ರಪತಿಗಳ ಹುದ್ದೆಗೆ ಅವರನ್ನು ಸೂಚಿಸುವುದಾಗಿ ಹೇಳಿದಾಗ, ಆ ಕ್ಷಣದಲ್ಲೂ ಆಲೋಚಿಸಿ ತಮ್ಮ ನಿರೀಕ್ಷೆಯೇನೆಂದು ಸ್ಪಷ್ಟಪಡಿಸುವುದರಲ್ಲಿಯೇ ಕಲಾಂ ರವರ ಹಿರಿಮೆ ಎದ್ದು ಕಾಣುತ್ತದೆ. ನಂತರದ ದಿನಗಳಲ್ಲಿ ಆ ಹುದ್ದೆಗೆ ಬಹುಮತದಿಂದ ಆಯ್ಕೆಯಾಗುವುದು , ರಾಷ್ಟ್ರಪತಿ ಭವನವನ್ನು ಪ್ರವೇಶಿಸುವುದು,ರಾಷ್ಟ್ರದ ಭವಿಷ್ಯವನ್ನು ನಿರೂಪಿಸುವ ಸದಾವಕಾಶವನ್ನು ಕೈಗೆತ್ತಿಕೊಂಡಾಗ ತಮ್ಮನ್ನು ಭೇಟಿಯಾಗುವ ಪ್ರತಿಯೋರ್ವರ ಜೊತೆ,ಪ್ರಧಾನಿಗಳ ಜೊತೆ ತಮ್ಮ ಯೋಜನೆಗಳನ್ನು ತಿಳಿಸಿ ಹೇಗೆ ಕಾರ್ಯರೂಪಕ್ಕೆ ತಂದರೆಂಬ ವಿವರಣೆ ಯನ್ನು ಸವಿಸ್ತಾರವಾಗಿ ತಿಳಿಸಿದ್ದಾರೆ. ಇದರ ಜೊತೆಗೆ ರಾಷ್ಟ್ರಪತಿ ಭವನದ ವ್ಯವಸ್ಥೆಗಳನ್ನು ಗಣಕೀಕೃತಗೊಳಿಸುದುದರ ಕುರಿತಾಗಿಯೂ ಮಾಹಿತಿ ನೀಡುತ್ತಾರೆ.

ಭಾರತದ ಸಶಸ್ತ್ರ ಪಡೆಗಳ ಸರ್ವೋಚ್ಚ ದಂಡನಾಯಕರಾಗಿ ತಮ್ಮ ಯೋಧರ ಹಿರಿಮೆಯನ್ನು ಸಾರಲು ತಾವೇ ಜಗತ್ತಿನ ಎತ್ತರದ ಯುದ್ಧ ಭೂಮಿಯೆಂದು ಕರೆಯಲ್ಪಡುವ ಸಿಯಾಚಿನ್ ನೀರ್ಗಲ್ಲ ಪ್ರದೇಶಕ್ಕೆ ಬೇಟಿ ನೀಡುವುದು ಜಲಾಂತರ್ಗಾಮಿಯೊಳಗೆ ,ನೌಕಾಪಡೆಯೊಂದಿಗೆ ಕಳೆದ ಸ್ಪೂರ್ತಿಯುತ ಕ್ಷಣಗಳನ್ನು ,ಜೊತೆಗೆ ಸುಖೋಯ್ ಯುದ್ಧ ವಿಮಾನದಲ್ಲಿ ನಡೆಸಿದ ಹಾರಾಟಗಳ ಕುರಿತಾಗಿಯೂ ವಿವರಣೆ ನೀಡಿದ್ದಾರೆ. ಆ ಮೂಲಕ ಒಬ್ಬ ನಿಜವಾದ ನಾಯಕ ಹೇಗಿರಬೇಕೆಂಬ ಉದಾಹರಣೆಗಯಾಗಿ ನಿಲ್ಲುತ್ತಾರೆ.

ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಪೈಪೋಟಿಯೇ ಇಂಧನ .ಪೈಪೋಟಿಯು ಜ್ಞಾನದಿಂದ ಶಕ್ತಿಯನ್ನು ಹೊಂದುವುದು, ಜ್ಞಾನದ ಮುನ್ನಡೆ ತಂತ್ರಜ್ಞಾನಗಳಿಂದ ಹಾಗೂ ಆವಿಷ್ಕಾರಗಳಿಂದ ಎಂದು ಬಲವಾಗಿ ನಂಬಿದವರು ಇವರು. ಆ ಕಾರಣಕ್ಕಾಗಿಯೇ ನ್ಯಾನೋ ತಂತ್ರಜ್ಞಾನ ,ಇ-ಆಡಳಿತ ಹಾಗೂ ಜೈವಿಕ ಡೀಸೆಲ್‌ ಆವಿಷ್ಕಾರಕ್ಕೆ ಪೂರಕ ಪರಿಸರವನ್ನು ಒದಗಿಸುವುದಕ್ಕೆ ರಾಷ್ಟ್ರಪತಿ ಭವನದಿಂದಲೇ ಕಾರ್ಯ ರೂಪಿಸಿದರು. ಇವರು “ಪೈಪೋಟಿಗೆ ಸಜ್ಜಾಗುತ್ತಿರುವ ದೇಶ” ಎಂಬ ಶೀರ್ಷಿಕೆ ಯಡಿಯಲ್ಲಿ ಬಾಹ್ಯಾಕಾಶ ಸಂಶೋಧನಾ ವ್ಯಾಪ್ತಿ ಏನು ಎಂಬುದರ ಕುರಿತಾಗಿ ಸವಿಸ್ತಾರದ ಮಾಹಿತಿಯನ್ನು ನೀಡುತ್ತಾರೆ.

Advertisement

ತಾವು ಬೇರೆಯವರಿಂದ ಕಲಿತ ಪ್ರತಿಯೊಂದು ಪಾಠವನ್ನು ಹೃದಯದಿಂದ ನೆನೆಯುವುದು ಅವರ ಶ್ರೇಷ್ಠ ಗುಣ ಎಂದರೆ ತಪ್ಪಾಗಲಾರದು. ಪ್ರಥಮ ಪ್ರಜೆಯಾಗಿದ್ದರೂ ಕೂಡ ತಮ್ಮವರ ಸ್ವಹಿತಕ್ಕಾಗಿ ತಮ್ಮ ಆಡಳಿತ ಅಧಿಕಾರವನ್ನು ಬಳಸಿಕೊಳ್ಳದ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿ ನಿಲ್ಲುತ್ತದೆ. ಇನ್ನು “ರಾಷ್ಟ್ರಕ್ಕೆ ನಾನೇನು ಕೊಡಬಹುದು” ಎಂಬ ಲೇಖನ ಅವರಿಗಿರುವ ರಾಷ್ಟ್ರದ ಮೇಲಿನ ಅಧಮ್ಯ ಪ್ರೇಮ ಮನ ತಟ್ಟುತ್ತದೆ. ಆಡಳಿತ ಕಾಲಾವಧಿಯಲ್ಲಿ ಎದುರಾದ ದುರಂತಗಳಲ್ಲಿ ಮಡಿದವರ ಕುಟುಂಬಗಳ ಭೇಟಿಯನ್ನು ಎದುರಿಸುವಲ್ಲಿ ಅವರು ಮಾನವೀಯತೆ ಮೆರೆಯುತ್ತಾರೆ.

ಇವಿಷ್ಟೇ ಅಲ್ಲದೆ ತಮ್ಮ ಕೃತಿಯಲ್ಲಿ ವಿದೇಶಿಯಾತ್ರೆಯ ಸವಿವರ ,ಯುರೋಪಿಯನ್ ಪಾರ್ಲಿಮೆಂಟ್ ಉಲ್ಲೇಖಿಸಿ ಮಾಡಿದ ಭಾಷಣ ,ತಮ್ಮ ಆಡಳಿತದ ದಿನಗಳಲ್ಲಿ ಕೈಗೊಂಡ ವಿವದಾತ್ಮಕ ತೀರ್ಮಾನಗಳು ,ಪರಿಸರದ ಮೇಲಿನ ಪ್ರೀತಿ ಮುಂತಾದುಗಳ ಕುರಿತಾಗಿಯೂ ಉಲ್ಲೇಖಿಸಿದ್ದಾರೆ. ಭಾರತವನ್ನು 2020 ರ ಮಹಾನ್ ಶಕ್ತಿ ಯಾಗಿಸುವಲ್ಲಿ ಕೈಗೊಂಡಿರುವ ಯೋಜನೆಯ ಚಿತ್ರಣ ಕಲಾಂರಲ್ಲಿದ್ದ ದೂರದರ್ಶಿತ್ವವನ್ನು ಸಾರುತ್ತದೆ.

ಟರ್ನಿಂಗ್ ಪಾಯಿಂಟ್ ನಲ್ಲಿ ಕಲಾಂ ರ ಜೀವನಗಾಥೆಯಿದೆ ,ಅವರ ಜೀವನದ ಮಹತ್ವಪೂರ್ಣ ಚರ್ಚೆಗಳ ವಿವರಣೆಯಿದೆ , ವೃತ್ತಿ ಜೀವನ ಹಾಗೂ ರಾಷ್ಟ್ರಪತಿಯಾದ ನಂತರದ ಜೀವನದ ಚಿತ್ರಣವಿದೆ. ಪರಿಸರದ ಪ್ರೀತಿ,ದೇಶಪ್ರೇಮ ,ವೃತ್ತಿ ನಿಷ್ಟೆ ಯ ಮಾಹಿತಿ ಯಿದೆ. ಸಂಬಂಧ ಗಳ ಸೆಲೆಯಿದೆ,ದುಡಿಮೆಯ ಮೂಲಕ ,ಸತತ ಪ್ರಯತ್ನಗಳ ಮೂಲಕ ಆತ್ಮ ವಿಶ್ವಾಸದ ಮೂಲಕ ಅಪೂರ್ಣವಾದುದನ್ನು ಹೇಗೆ ಸಾಧಿಸಬಹುದೆನ್ನುವ ಮಾರ್ಗದರ್ಶನವಿದೆ.

#ಅಪೂರ್ವ ಚೇತನ್ ಪೆರಂದೋಡಿ

Advertisement
Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ವಾರಣಾಸಿ ಎಂಬ ದ್ವಂದ್ವಗಳ ನಗರ
May 16, 2025
1:02 PM
by: ರಮೇಶ್‌ ದೇಲಂಪಾಡಿ
ಮನ ಗೆಲ್ಲುವ ಕೈರುಚಿ, ಸುಲಭದಲ್ಲಿ ಕೈಸೆರೆಯಾಗದೇಕೆ..?
May 16, 2025
12:48 PM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ಸಂತೆಯಲ್ಲಿ ಸಾಗುತ್ತಿರುವ ನಾವು
May 16, 2025
10:21 AM
by: ಡಾ.ಚಂದ್ರಶೇಖರ ದಾಮ್ಲೆ
ಅಡಿಕೆ ಧಾರಣೆ ಏರುಪೇರು ಯಾಕಾಗಿ?
May 14, 2025
2:43 PM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group