ನೀವು ಶಂಕರ್ ನಾಗ್ ರವರ ನಿರ್ದೇಶನದ ಮಾಲ್ಗುಡಿ ಡೇಸ್ ದಾರವಾಹಿ ಯನ್ನು ಟಿವಿಯಲ್ಲಿ ನೋಡಿರಬಹುದು. ಅದರಲ್ಲಿ ಮಿಠಾಯಿವಾಲ ಎಂಬ ಮಾಲಿಕೆ ಬರುತ್ತದೆ. ಅನಂತ್ ನಾಗ್ ಮತ್ತು ದಿವಂಗತ ಮನ್ ದೀಪ್ ರಾಯ್ ಮುಖ್ಯ ಭೂಮಿಕೆಯಲ್ಲಿರುವ ಆ ಮಾಲಿಕೆಯಲ್ಲಿ ಆ ಕಾಲದ (1940 – 1950 ರ ಕಾಲದ) ಮಿಠಾಯಿ ಅಂಗಡಿ ಯಾನೆ ಸ್ವೀಟ್ ಸ್ಟಾಲ್ ನ ದೃಶ್ಯ ಇದೆ. ಮೂವತ್ತೈದು ವರ್ಷಗಳ ಹಿಂದೆ ಆಗುಂಬೆಯಲ್ಲಿ ಆರ್ ಕೆ ನಾರಾಯಣ್ ಅವರ ಕಲ್ಪನೆಯ ಮಾಲ್ಗುಡಿ ಊರಿನ ಮಿಠಾಯಿ ಅಂಗಡಿಯನ್ನ ಅಧ್ಬುತವಾಗಿ ಮರು ಸೃಷ್ಟಿ ಮಾಡಿಸಿದವರು ನಿರ್ದೇಶಕ ಶಂಕರ್ ನಾಗ್ ರವರು. ಆ ಧಾರವಾಹಿ ಯಲ್ಲಿ ಆ ಮಿಠಾಯಿ ವಾಲ ಮಾಲಿಕೆಯನ್ನ ನೋಡಿದವರಿಗೆ ಅಂತಹದ್ದೇ ಒಂದು ನೂರು ವರ್ಷಗಳ ಹಿಂದಿನ ಕಾಲದ ಮಿಠಾಯಿ ಮನೆ ಜ್ಞಾಪಿಸುವ “ಉಡುಪಿ ಮಿಠಾಯಿ” ಎಂಬ ಹೆಸರಿನಲ್ಲಿ “ಸಮರ್ಪಣ” ಎಂಬ ಉಪ ನಾಮ ದೊಂದಿಗೆ ಚಿತ್ರ ಕಲಾವಿದರಾದ ಪುರುಷೋತ್ತಮ ಅಡ್ವೆಯವರು ಉಡುಪಿ ಅದಮಾರು ಶ್ರೀ ಈಶ ಪ್ರಿಯ ಶ್ರೀ ಗಳ ಆಶಿರ್ವಾದದಲ್ಲಿ ಸ್ಥಾಪಿಸಿದ್ದಾರೆ.
ಈ ವಿಶೇಷ ಅಂಗಡಿ ಉಡುಪಿ ಯ ಶ್ರೀ ಅದಮಾರು ಮಠದ ಗೆಸ್ಟ್ ಹೌಸ್ ಎದುರಿದೆ. ಈ ಅಂಗಡಿಯ ಫಲಕ , ಅಂಗಡಿಯ ಪ್ರಾಂಗಣ , ಅಂಗಡಿಯ ಒಳಾಂಗಣ ವಿನ್ಯಾಸ ,ಅಂಗಡಿಯಲ್ಲಿ ವಸ್ತುಗಳನ್ನು ಸಂಗ್ರಹಿಸಿ ಇಟ್ಟಿರುವ ಪಾತ್ರೆ ಪಡಗಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲಾ ಬಗೆಯ ದೇಸಿ ವಸ್ತುಗಳು ಮತ್ತು ಕೈ ತಯಾರಿಕೆಯ ಸಿಹಿ ಉತ್ಪನ್ನ ಗಳು ಗ್ರಾಹಕ ಅತ್ಯಾಕರ್ಷಿಸುತ್ತದೆ.
ಪುರುಷೋತ್ತಮ ಅಡ್ವೆ ಯವರು ಈ ಉಡುಪಿ ಮಿಠಾಯಿ ಮನೆಯ ಸಂಯೋಜಕರು.
” ಉಡುಪಿ ಮಿಠಾಯಿ ” ಯಾನೆ “ಸಮರ್ಪಣ ” ದ ಅತ್ಯಂತ ದೊಡ್ಡ ‘ಅತಿ ರಸ ” ಸಿಹಿಯ ವಿಚಾರವೇನೆಂದರೆ ಚಿಕ್ಕ ಚಿಕ್ಕ ಆಹಾರೋತ್ಪನ್ನ ತಯಾರಕರ ಕೈಯಲ್ಲಿ “ಗ್ರಾಹಕರ ” ಆಶಯಕ್ಕೆ ಅನುಗುಣವಾಗಿ , ಅತ್ಯಂತ ಮುಚ್ಚಟೆಯಲ್ಲಿ , ಶುದ್ಧವಾಗಿ ಮನೆಯಲ್ಲಿ ಯಾವುದೇ ರಾಸಾಯನಿಕ ಚೋದಕ ಬಳಕೆಯಿಲ್ಲದೇ, ಕಲಬೆರಕೆಯಿಲ್ಲದೇ ತಯಾರಿಸಲಾದ ಆಹಾರೋತ್ಪನ್ನವನ್ನ ತಯಾರಿಕರಿಂದ ಗೌರವಯುತವಾಗಿ ಖರೀದಿಸಿ “ಅವರಿಗೊಂದು” ಮಾರಾಟದ ವೇದಿಕೆ ಮಾಡುತ್ತಿರುವುದು. ಇದೊಂಥರ ಜೇನು ಮಕರಂದ ಸಂಗ್ರಹಿಸಿ ಜೇನು ತುಪ್ಪವನ್ನು ತಯಾರಿಸಿ ಸಮಾಜಕ್ಕೆ ನೀಡಿದಂತೆ…ಒಂಥರ ಇದು ಮಧುಕರ ವೃತ್ತಿ …
ಈ ಆಹಾರೋತ್ಪನ್ನ ದ ಜೊತೆಯಲ್ಲಿ ಸಾವಯವ ಅಕ್ಕಿ ಬೇಳೆ ಸಿರಿ ಧಾನ್ಯ ಗಳು , ದೇಸಿ ತಳಿ ಹಸುಗಳ ತುಪ್ಪ, ಇತರ ಉತ್ಪನ್ನ ಗಳು ಮತ್ತು ಕೈ ತಯಾರಿಕೆಯ ಮಗ್ಗದ ವಸ್ತ್ರ ಉತ್ಪನ್ನ ಗಳು , ಸಾಂಪ್ರದಾಯಿಕ ಮನೆ ಬಳಕೆಯ ಉತ್ಪನ್ನ ಗಳು ಇನ್ನೂ ಅನೇಕ ವಸ್ತುಗಳು ” “ಉಡುಪಿ ಮಿಠಾಯಿ” ಮನೆಯಲ್ಲಿ ” ಲಭ್ಯ…
ಉಡುಪಿ ಕೃಷ್ಣ ಮಠ ಕ್ಕೆ ಹೋದವರು ಶ್ರೀ ಕೃಷ್ಣ ಪರಮಾತ್ಮನ ದರ್ಶಿಸಿ ನಂತರ ಅದಮಾರು ಮತ್ತು ಪೇಜಾವರ ಮಠದ ನಡುವಿನ ಓಣಿಯಲ್ಲಿ ಸ್ವಲ್ಪ ಮೇಲೆ ಹೋದರೆ ಅದಮಾರು ಮಠದ ಗೆಸ್ಟ್ ಹೌಸ್ ಸಿಗುತ್ತದೆ. ಈ ಗೆಸ್ಟ್ ಹೌಸ್ ಎದುರಿಗೆ ಈ ” ಉಡುಪಿ ಮಿಠಾಯಿ ” ಮನೆ ” ಇದೆ. ಉಡುಪಿ ಬಸ್ ನಿಲ್ದಾಣದಿಂದ ಬರುವವರು ವುಡ್ ಲ್ಯಾಂಡ್ಸ್ ಹೋಟೆಲ್ ಕೆಳ ಭಾಗಕ್ಕೆ ಬಂದರೆ ” ಉಡುಪಿ ಮಿಠಾಯಿ ” ಮನೆ ಸಿಗುತ್ತದೆ. ಪುರುಷೋತ್ತಮ ಅಡ್ವೆಯವರ ಪರಿಕಲ್ಪನೆ ಸಂಯೋಜನೆಯ ಈ ವಿಶೇಷ ಅಂಗಡಿಗೆ ಒಮ್ಮೆ ಬೇಟಿ ಕೊಡಿ… ಖಂಡಿತವಾಗಿಯೂ ನೀವು “ಉಡುಪಿ ಮಿಠಾಯಿ” ಮನೆಯಿಂದ ಏನನ್ನಾದರೂ ಖರೀದಿಸದೇ ಮರಳಲಾರರಿ…
” ಉಡುಪಿ ಮಿಠಾಯಿ’ ಮನೆ ಯಲ್ಲಿ ಖರೀದಿಸಿ ದೇಸಿ ಉದ್ಯಮ ಗಳನ್ನು ಪ್ರೋತ್ಸಾಹಿಸಿ..
ಮೂಲತಃ ಪುರುಷೋತ್ತಮ ಅಡ್ವೆಯವರು ಚಿತ್ರ ಕಲಾವಿದರು. ಅವರಲ್ಲಿರುವ ಕಲಾತ್ಮಕತೆ ಈ ವಿಭಿನ್ನ ಪರಿಕಲ್ಪನೆ ಗೆ ನಾಂದಿಯಾಗಿರಬಹುದು. ಈ ಉದ್ಯಮದ ಪರಿಕಲ್ಪನೆಯ ಸಾರ ಸಮಸ್ತ ರಿಂದ ಸಮಸ್ತರಿಗೆ ಸಮರ್ಪಣೆ ಎಂಬುದಾಗಿದೆ. ಬಂಧುಗಳೇ, ನೀವು ಉಡುಪಿ ಗೆ ಹೋದಾಗ ಪುರುಷೋತ್ತಮ ಅಡ್ವೆಯವರ ಸಮರ್ಪಣಾ ಭಾವದಿಂದ ಸ್ಥಾಪಿಸಿರುವ “ಉಡುಪಿ ಮಿಠಾಯಿ” ಮನೆಗೆ ಬೇಟಿ ಕೊಟ್ಟು ಒಮ್ಮೆ ಈ ವೈಶಿಷ್ಟ್ಯ ಪೂರ್ಣತೆಯ ಅನುಭವವನ್ನು ನೀವೂ ಹೊಂದಿ.
ಭಾರತದ ಮೇಲೆ ನೈಋತ್ಯ ಮಾನ್ಸೂನ್ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515649
ಭಾರತವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ, ಪ್ರತಿಕ್ರಿಯಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮುಂಗಾರು ಅವಧಿಗೂ ಮುನ್ನವೇ ಆರಂಭವಾಗುವ ವರದಿಗಳು ಬರುತ್ತಿವೆ. ಈಗಾಗಲೇ ಹಿಂದುಮಹಾಸಾಗರ ಭಾಗದಿಂದ ಅರಬ್ಬಿ…
ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490