ಯಾವಾಗಲೂ, ಹೆಚ್ಚಿನ ಸಂದರ್ಭದಲ್ಲಿ ವಿದ್ಯುತ್‌ಗೆ ರೈತ #Farmer ಹಾಗೂ ಗ್ರಾಮೀಣ #Rural ಭಾಗ ಕೊನೆಯ ಅವಕಾಶ. ಅದರಲ್ಲೂ ವಿದ್ಯುತ್ ಅಭಾವ ಆದಾಗ ಗ್ರಾಮೀಣ ಭಾಗಕ್ಕೆ ಪವರ್ ಕಟ್ ನಲ್ಲೂ ಮೊದಲ ಆದ್ಯತೆ. ರಾಜ್ಯದಲ್ಲಿ ವಿದ್ಯುತ್ ಅಭಾವ ತೀವ್ರಗೊಂಡಿದ್ದು, ಹೀಗಾಗಿ ಸದ್ದಿಲ್ಲದೇ ಅನಧಿಕೃತ ಲೋಡ್‌ಶೆಡ್ಡಿಂಗ್ ಜಾರಿ ಮಾಡಿದೆ. ವಿದ್ಯುತ್ ಅಭಾವದ ನಡುವೆಯೂ ಎಲ್ಲಾ ಎಸ್ಕಾಂಗಳು ಕೈಗಾರಿಕಾ ವಲಯಕ್ಕೆ ಆದ್ಯತೆ ನೀಡಿದ್ದು ಕೃಷಿಕರನ್ನು ಸಂಪೂರ್ಣ ಕಡೆಗಣಿಸಿದೆ. ಗ್ರಾಮೀಣ ಭಾಗ ಮಾತ್ರವಲ್ಲದೇ ನಗರ ಪ್ರದೇಶಗಳಲ್ಲಿಯೂ ಲೋಡ್‌ಶೆಡ್ಡಿಂಗ್ ಆರಂಭವಾಗಿದೆ.
ಲೋಡ್‌ಶೆಡ್ಡಿಂಗ್ ವಿರುದ್ಧ ರಾಜ್ಯದ ರೈತರು ಸಿಡಿಯುತ್ತಿದ್ದಾರೆ. ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಹಾಸನ, ಚಾಮರಾಜನಗರ, ಬೆಳಗಾವಿಯ ಚಿಕ್ಕೋಡಿ ಸೇರಿ ಹಲವೆಡೆ ರೈತರು ಬೀದಿಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ನಮಗೆ ಉಚಿತ ವಿದ್ಯುತ್ ಬೇಡ. ಬೆಳೆ ಉಳಿಸಿಕೊಳ್ಳಲು ವಿದ್ಯುತ್ ನೀಡಿ ಎಂದು ಆಗ್ರಹಿಸಿದ್ದಾರೆ. ಇದಕ್ಕೆ ವಿಪಕ್ಷ ಬಿಜೆಪಿಯೂ ಸಾಥ್ ನೀಡಿದೆ. ಚಿಕ್ಕಬಳ್ಳಾಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಬಿಜೆಪಿ ನಾಯಕರು ಎತ್ತಿನಗಾಡಿಯಲ್ಲಿ ಸಂಚರಿಸಿ ಸರ್ಕಾರದ ವಿರುದ್ಧ ಕಿಡಿಕಾರಿದರು. ತೀವ್ರ ವಿದ್ಯುತ್ ಸಮಸ್ಯೆ ಇರುವುದನ್ನು ಇಂಧನ ಇಲಾಖೆಒಪ್ಪಿಕೊಂಡಿದ್ದು, ವಿಪಕ್ಷಗಳ ಟೀಕೆ ಬೆನ್ನಲ್ಲೇ ಅಂಕಿ ಅಂಶ ಬಹಿರಂಗಮಾಡಿದೆ.
ಇಂಧನ ಇಲಾಖೆ ಹೇಳಿದ್ದೇನು?: ಮುಂಗಾರು ಕೊರತೆಯಿಂದ ತೀವ್ರ ವಿದ್ಯುತ್ ಸಮಸ್ಯೆಯಾಗಿದ್ದು ಪವನ ವಿದ್ಯುತ್, ಸೋಲಾರ್, ಜಲ ವಿದ್ಯುತ್, ಉಷ್ಣಸ್ಥಾವರಗಳಲ್ಲಿ ಉತ್ಪಾದನೆ ಕುಂಠಿತವಾಗಿದೆ. ಪ್ರಸ್ತುತ ನಿತ್ಯ 15 ಸಾವಿರ ಮೆಗಾವ್ಯಾಟ್ ವಿದ್ಯುತ್‌ಗೆ ಬೇಡಿಕೆ ಇದ್ದು ಕಳೆದ ವರ್ಷ ಇದೇ ಅವಧಿಯಲ್ಲಿ 9,032 ಮೆಗಾವ್ಯಾಟ್‌ಗೆ ಬೇಡಿಕೆ ಇತ್ತು. ರಾಜ್ಯದಲ್ಲಿ ನಿತ್ಯ 10 ಸಾವಿರ ಮೆಗಾವ್ಯಾಟ್ ಉತ್ಪಾದನೆಯಾಗುತ್ತಿದ್ದು ಕೇಂದ್ರ ಮತ್ತು ಹೊರ ರಾಜ್ಯಗಳಿಂದ 3 ಸಾವಿರ ಮೆಗಾವ್ಯಾಟ್ ಪೂರೈಕೆ ಆಗುತ್ತಿದೆ. ನಿತ್ಯ 2 ಸಾವಿರ ಮೆಗಾವ್ಯಾಟ್‌ನಷ್ಟು ವಿದ್ಯುತ್ ಕೊರತೆಯಿದೆ. ಅಲ್ಪಾವದಿಯ ಟೆಂಡರ್ ಮೂಲಕ ವಿದ್ಯುತ್ ಖರೀದಿಗೆ ಪ್ರಯತ್ನ ನಡೆಯುತ್ತಿದ್ದು, ಪ್ರತಿ ಜಿಲ್ಲೆಗೂ ನೋಡಲ್ ಅಧಿಕಾರಿ ಮೂಲಕ ವಿದ್ಯುತ್ ಹಂಚಿಕೆಗೆ ಚಿಂತನೆ ನಡೆದಿದೆ.
(ಅಂತರ್ಜಾಲ ಮಾಹಿತಿ)
ರೈತರು ಬೆಳೆ ವಿಮೆ ಮಾಡಿಸುವುದರಿಂದ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಇನ್ನೂ ಮುಂತಾದ ಪ್ರಕೃತಿ…
ಮಯೂರ.ಕೆ, 7ನೇ ತರಗತಿ, ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರ ಚೊಕ್ಕಾಡಿ | -…
ಜುಲೈ 9 ರಂದು ಭಾರತ್ ಬಂದ್‌ಗೆ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ದೇಶವ್ಯಾಪಿ…
ಮಗು ಗರ್ಭದಲ್ಲಿದ್ದಾಗಲೇ ಕೆಲವು ಘಟನೆಗಳಿಗೆ ಪ್ರತಿಕ್ರಿಯಿಸುವ ಬಗ್ಗೆ ಕೆಲವು ವೈಜ್ಞಾನಿಕ ಅಧ್ಯಯನಗಳು ಹೇಳಿವೆ.…
ಶಿಕ್ಷಣ ಸಂಸ್ಥೆಗಳಲ್ಲಿ ಹಾಸ್ಟೆಲ್ ವ್ಯವಸ್ಥೆ ಸರ್ವೇ ಸಾಮಾನ್ಯ. ಹೀಗೆ ಹಾಸ್ಟೆಲ್ ಇದೆ ಅಂದ…
ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ…