ಇಲ್ಲಿ ಸಾಮಾನ್ಯ ನಾಗರೀಕರ ಪ್ರಾಣ, ಬದುಕು ಮುಖ್ಯ ಅಲ್ಲ. ಕೇವಲ ಉಳ್ಳವರ, ದೊಡ್ಡವರ ಪ್ರತಿಷ್ಠೆ ಮಾತ್ರ ಲೆಕ್ಕಕ್ಕೆ ಬರುತ್ತದೆ. ದೇಶದ ನಾಗರೀಕರ ಜೀವನ ಮೂರಬಟ್ಟೆ ಆದರೂ ಯುದ್ಧ ಅನ್ನುವ ಅಮಲು ಈ ಪಾಪಿಗಳಿಗೆ ಇಳಿಯೋದೆ ಇಲ್ಲ. ಇಡೀ ವಿಶ್ವವೇ ಇಸ್ರೇಲ್- ಪ್ಯಾಲೆಸ್ತೀನ್ ಯುದ್ಧಕ್ಕೆ ದಂಗಾಗಿದೆ. ಹಮಾಸ್ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ (Israel) ನಡೆಸಿದ ವೈಮಾನಿಕ ದಾಳಿಯಿಂದ (Air Strike) ಕನಿಷ್ಠ 195 ಪ್ಯಾಲೆಸ್ತೀನ್‍ನ (Palestine) ನಾಗರೀಕರು ಸಾವನ್ನಪ್ಪಿದ್ದಾರೆ. ಇದರಲ್ಲಿ ಸುಮಾರು 770ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇದರ ನಡುವೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಇಸ್ರೇಲ್‍ಗೆ ಒಂದು ತಿಂಗಳಲ್ಲಿ ತಮ್ಮ ಎರಡನೇ ಭೇಟಿಗಾಗಿ ಇಂದು ತೆರಳಲಿದ್ದಾರೆ. ಅಲ್ಲಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು (Benjamin Netanyahu) ಸೇರಿದಂತೆ ಇಸ್ರೇಲಿ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಮಸ್ಲಿಂ ರಾಷ್ಟ್ರಗಳ ಪ್ರತಿನಿಧಿಗಳು ಭಾಗಿಯಾಗಿ ಶಾಂತಿ ಮಾತುಕತೆ ನಡೆಸುವ ಸಾಧ್ಯತೆ ಇದೆ.
At least 195 Palestinians have been killed in an Israeli airstrike on the Jabalia refugee camp during an operation against Hamas militants. It is reported that more than 770 people were injured. After the attack, 120 people were trapped under the rubble. Meanwhile, Hamas said an Israeli soldier was also killed. Israel claims two Hamas military leaders have been killed in strikes over the past two days. Also, the Israeli army claims that the operation against the Hamas militants who are still hiding is continuing.
- ಅಂತರ್ಜಾಲ ಮಾಹಿತಿ
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…