Advertisement
Opinion

ಬಿಜೆಪಿ-ಜೆಡಿಎಸ್‌ನಿಂದ ಇನ್ನು ನಿರ್ಧಾರವಾಗದ ಮಂಡ್ಯ ಅಭ್ಯರ್ಥಿ | ಭರವಸೆಗಳೊಂದಿಗೆ ದೆಹಲಿಯಿಂದ ಬಂದ ಸುಮಲತಾ ಅಂಬರೀಶ್ | ಯಾರಾಗ್ತಾರೆ ಮಂಡ್ಯ ಅಭ್ಯರ್ಥಿ

Share

ಲೋಕಸಭೆ ಚುನಾವಣೆ(Lokasabha Election) ಹಿನ್ನೆಲೆಯಲ್ಲಿ ಬಿಜೆಪಿ(BJP) ಹಾಗೂ ಜೆಡಿಎಸ್‌ (JDS)ಮೈತ್ರಿಯಿಂದ ಮಂಡ್ಯ ಕ್ಷೇತ್ರದಲ್ಲಿ(Mandya Constituency) ಅಭ್ಯರ್ಥಿ(Candidate) ಆಯ್ಕೆ ಬಹಳ ಕಗ್ಗಂಟಾಗಿದೆ. ಸ್ವಾಭಿಮಾನಿ ಮಹಿಳೆ ಹಾಗೂ ಅಂಬರೀಷ್‌ ಅವರ ಗೌರವ ಕಳೆದ ಭಾರಿ ಸಂಸದೆ ಸುಮಲತಾ ಅಂಬರೀಷ್‌(Sumalatha Ambareesh), ಅವರನ್ನು ಮಂಡ್ಯದಲ್ಲಿ ನಿರಾಸಾಯವಾಗಿ ಗೆಲ್ಲುವಂತೆ ಮಾಡಿತ್ತು. ಆದರೆ ಈ ಬಾರಿ ಅವರಿ ಬಿಜೆಪಿ ಪರ ಅಭ್ಯರ್ಥಿಯಾಗಿ ಸ್ಫರ್ಧಿಸುವುದಾಗಿ ನಿರ್ಧರಿಸಿರುವ ಸುಮಲತಾ ಅವರಿಗೆ ಟಿಕೆಟ್‌ ಸಿಗುವುದು ಅನುಮಾನವಾಗಿದೆ. ಮಂಡ್ಯ ಜೆಡಿಎಸ್‌ನ ಭದ್ರ ಕೋಟೆ. ಹಾಗಾಗಿ ಇಲ್ಲಿ ಜೆಡಿಎಸ್‌ ಅಭ್ಯರ್ಥಿ ಹಾಕಲು ಮುಂದಾಗಿದೆ. ಹಾಗಾಗಿ ಈ ಬಾರಿ ಮಂಡ್ಯ ಟಿಕೆಟ್‌ ಯಾರಿಗೆ ಅನ್ನುವ ಹಗ್ಗಜಗ್ಗಾಟ ನಡೆಯುತ್ತಿದೆ.

Advertisement
Advertisement

ದೆಹಲಿಯಿಂದ ಬೆಂಗಳೂರಿಗೆ (Bengaluru) ಹಿಂದಿರುಗಿದ ಸುಮಲತಾ ಅವರು, ಮಂಡ್ಯದ ವಿಚಾರವಾಗಿ ದೆಹಲಿಯಲ್ಲಿ ಚರ್ಚೆ ಮಾಡಿದ್ದೀನಿ. ಮಂಡ್ಯ ಕ್ಷೇತ್ರದ ಅಭ್ಯರ್ಥಿ (Mandya Candidate) ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದು ಸ್ಪೋಟಕ ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra), ಅವರು ಸಹ 22 ರ‌ವರೆಗೂ ಪೈನಲ್ ಆಗಲ್ಲ ಅಂದಿದ್ದಾರೆ. ಪ್ರಧಾನಿ ಹಾಗೂ ಗೃಹ ಸಚಿವರು ಕೂತು ಅಂತಿಮ ನಿರ್ಧಾರ ಮಾಡ್ತಾರೆ ಎಂದು ಹೇಳಿದರು.

Advertisement

ನಾನು ರಾಜಕೀಯ ಮಾಡಿದ್ರೆ ಮಂಡ್ಯದಿಂದಲೇ ಮಾಡ್ತೀನಿ ಅಂತ ಹೇಳಿದ್ದೆ ಈಗಲೂ ಅದನ್ನೇ ಹೇಳ್ತಿದ್ದೀನಿ. ಬೇರೆಯವರು ಚಿಕ್ಕಬಳ್ಳಾಪುರ ಬೆಂಗಳೂರು ಉತ್ತರ ಅಂತ ಹೇಳ್ತಿದ್ದಾರೆ. ಪ್ರಧಾನಿಯವರೇ ಕರೆಮಾಡಿ ನನನ್ನ ಕರೆಸಿ ಮಾತನಾಡಿ ಅಂತ ಹೇಳಿದ್ರು. ಹೀಗಾಗಿ ನನನ್ನ ಕರೆಸಿದ್ದಾಗಿ ನಡ್ಡಾ ಅವರು ಹೇಳಿದ್ದಾರೆ ಎಂದರು. ಪಕ್ಷದಲ್ಲಿ ನನ್ನ ಬಗ್ಗೆ ತುಂಬಾ ಗೌರವವಿದ್ದು, ಬಿಜೆಪಿಯಲ್ಲಿಯೇ ಇರಬೇಕು ಅಂತ ಹೇಳಿದ್ದಾರೆ. ಪಾಸಿಟಿವ್ ಆಗಿ ರಿಸಲ್ಟ್ ಬರುತ್ತೆ ಅನ್ನೂ ವಿಶ್ವಾಸವಿದೆ. ವರಿಷ್ಠರು ಯಾವ ತೀರ್ಮಾನ ಮಾಡ್ತಾರೆ ಕಾದು ನೋಡೋಣ ಎಂದರು.

ಜೆಡಿಎಸ್​ಗೆ ಮಂಡ್ಯ : ರಾಜ್ಯದಲ್ಲಿ ಜೆಡಿಎಸ್ ಜೊತೆ ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ಈ ಹಿನ್ನೆಲೆ ಮಂಡ್ಯ ಜೆಡಿಎಸ್​ ತೆಕ್ಕೆಗೆ ಎಂಬುವುದು ಬಹುತೇಕ ಫಿಕ್ಸ್ ಆಗಿದೆ. ಆದರೆ ಜೆಡಿಎಸ್​ನಿಂದ ಯಾರು ಕಣಕ್ಕಿಳಿಯುತ್ತಾರೆ ಎಂಬುದರ ಬಗ್ಗೆ ಅಂತಿಮವಾಗಿಲ್ಲ. ಹೆಚ್​ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಹೆಸರುಗಳು ಸಹ ಕೇಳಿ ಬಂದಿದೆ. ಬಿಜೆಪಿಯ ಆಂತರಿಕ ಸಮೀಕ್ಷೆಯ ಪ್ರಕಾರ ಹೆಚ್​ಡಿ ಕುಮಾರಸ್ವಾಮಿ ಪರವಾದ ವಾತಾವರಣ ಮಂಡ್ಯದಲ್ಲಿದೆಯಂತೆ. ಈ ಹಿನ್ನೆಲೆ ಕುಮಾರಸ್ವಾಮಿ ಅವರಿಗೆ ಸ್ಪರ್ಧೆ ಮಾಡುವಂತೆ ಬಿಜೆಪಿ ಸಲಹೆ ನೀಡಿದೆ ಎನ್ನಲಾಗಿದೆ.

Advertisement

ಮಾ.22ರಂದು ಬಿಜೆಪಿ ಟಿಕೆಟ್ ಘೋಷಣೆ : ಕರ್ನಾಟಕದಲ್ಲಿ ಇನ್ನು ಐದು ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್‌ ಹಂಚಿಕೆ ವಿಚಾರವಾಗಿ ದೆಹಲಿಯಲ್ಲಿ ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಅಮಿತ್‌ ಶಾ, ಜೆ.ಪಿ.ನಡ್ಡಾ ಜತೆ ಸುಧೀರ್ಘ ಚರ್ಚೆ ನಡೆಸಿದ್ದೇವೆ. ಪ್ರಧಾನಿ ಜತೆ ಚರ್ಚೆ ನಡೆಸಿ ಮಾ.22ರಂದು ಟಿಕೆಟ್ ಘೋಷಣೆ ಮಾಡಲಿದ್ದಾರೆ ಅಂತ ಹೇಳಿದ್ರು. ಇನ್ನು ಮೈತ್ರಿ ಬಿಕ್ಕಟ್ಟು ಬಗ್ಗೆ ಮಾತನಾಡಿದ ಬಿಎಸ್‌ವೈ ಅಮಿತ್‌ ಶಾ, ಪ್ರಧಾನಿ ಮೋದಿ ಜತೆ ದೇವೇಗೌಡರು ಸಂಪರ್ಕದಲ್ಲಿದ್ದಾರೆ ಅಂತ ಹೇಳಿದರು. ಲೋಕಸಭೆಯ ನಂತರ ವಿಜಯೇಂದ್ರ ರಾಜ್ಯಾದ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಬಿಎಸ್‌ವೈ ಪ್ರತಿಕ್ರಿಯೆ ನೀಡಿದ್ದು, ಈಶ್ವರಪ್ಪ ಅವರ ಬೇಜಾವಾಬ್ದಾರಿ ಹೇಳಿಕೆಗೆ ನಾವು ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.

ಸುಮಲತಾ ಸೈಲೆಂಟ್ ಆಗಿದ್ದೇಕೆ? : ಟಿಕೆಟ್ ಘೋಷಣೆಗೂ ಮುನ್ನ ಬಿಜೆಪಿ ಹೈಕಮಾಂಡ್ ಮೂರು ಆಂತರಿಕ ಸಮೀಕ್ಷೆ ನಡೆಸಿತ್ತು. ಈ ಮೂರು ಸಮೀಕ್ಷೆಯ ವರದಿಯಲ್ಲಿ ಹೆಚ್‌ಡಿ ಕುಮಾರಸ್ವಾಮಿ ಪರ ಸರ್ವೆ ವರದಿ ಬಂದಿದೆಯಂತೆ. ಆದ್ದರಿಂದ ಕುಮಾರಸ್ವಾಮಿ ಅವರಿಗೆ ಮಂಡ್ಯದಿಂದ ಸ್ಪರ್ಧೆ ಮಾಡಲು ಬಿಜೆಪಿ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಬಿಜೆಪಿ ವರಿಷ್ಠರು ಆಂತರಿಕ ವರದಿಯೊಂದನ್ನು ಸುಮಲತಾರಿಗೆ ತೋರಿಸಿದ್ದಾರಂತೆ. ಈ ವರದಿ ನೋಡುತ್ತಿದ್ದಂತೆ ಸುಮಲತಾ ಸೈಲೆಂಟ್ ಆಗಿದ್ದಾರೆ ಎಂದು ತಿಳಿದು ಬಂದಿದೆ.

Advertisement

– ಅಂತರ್ಜಾಲ ಮಾಹಿತಿ

Sumalatha, who returned from Delhi to Bengaluru, discussed the issue of Mandya in Delhi. Spotaka said that the final decision has not yet been taken regarding the Mandya candidate. BJP state president BY Vijayendra also said that he will not be penalized till 22nd. He said that the Prime Minister and the Home Minister will sit and take the final decision.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

Karnataka Weather |12-05-2024 | ಹಲವು ಕಡೆ ಮಳೆಯ ನಿರೀಕ್ಷೆ ಇದೆ |

ಮುಂದಿನ 10 ದಿನಗಳವರೆಗೂ ರಾಜ್ಯದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

3 hours ago

ಪುತ್ತೂರಿನಲ್ಲಿ ಹಲಸು ಹಣ್ಣು ಮೇಳದ ಏಳನೇ ಆವೃತ್ತಿ : ಸಮಗ್ರ ಕೃಷಿ ಉದ್ಯಮಶೀಲತೆಗೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡುವ ಉದ್ದೇಶ

ಹಲಸು(Jack Fruit) ಹಾಗು ಪ್ರದೇಶದ ಇತರ ಸಕಾಲಿಕ ಹಣ್ಣುಗಳ(Fruit) ಕೃಷಿಗೆ(Agriculture) ಮತ್ತು ಕೃಷಿಕರಿಗೆ,…

4 hours ago

ರಾಜ್ಯದ ಹಲವು ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆ : ರೈತರ ಮೊಗದಲ್ಲಿ ಸಂತಸ : ಕೆಲವೆಡೆ ಹಾನಿ

ರಾಜ್ಯಾದ್ಯಂತ ಬರಗಾಲದ(Drought) ಛಾಯೆ ಆವರಿಸಿತ್ತು. ಕುಡಿವ ನೀರಿಗಾಗಿ(Drinking water) ಜನ-ಜಾನುವಾರುಗಳು ಪರಿತಪಿಸುವಂತಾಗಿತ್ತು. ಬಿಸಿಲಿನ…

4 hours ago

ಇಂದು ದೇಶ್ಯಾದ್ಯಂತ ಕಾಮೆಡ್-ಕೆ ಪರೀಕ್ಷೆ : ವಿದ್ಯಾರ್ಥಿಗಳ ಭವಿಷ್ಯದ ಮೆಟ್ಟಿಲು

ವಿದ್ಯಾರ್ಥಿಗಳ(Students) ಭವಿಷ್ಯದ ಪ್ರಶ್ನೆ. ಇದು ಅವರ ಪ್ರಮುಖ ಘಟ್ಟ. ಪಿಯುಸಿ(PUC) ಮುಗಿದ ಕೂಡಲೇ…

4 hours ago

25 ವರ್ಷಗಳ ಹಿಂದೆ ಹೋದ ದೃಷ್ಟಿ ವಾಪಸು ಬಂತು

ಚಿಕ್ಕ ವಯಸ್ಸಿನ ಕುಕನೂರಿನ ಶಿವಾನಂದ ಕ್ರಿಕೆಟ್ ಫೀಲ್ಡಿಂಗ್ ಮಾಡುತ್ತಿದ್ದ. ಚಂಡು ಕಳ್ಳಿಯ ಪೊದೆಯಲ್ಲಿ…

22 hours ago