53 ವರ್ಷದ ಇಯಾನ್ ಲಾಕ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಸ್ನೇಹಿತರೊಬ್ಬರ ಮನೆಗೆ ಆಂಟೆನಾ ಅಳವಡಿಸುತ್ತಿದ್ದಾಗ ಮೇಲ್ಛಾವಣಿಯಿಂದ ಸುಮಾರು 30 ಅಡಿಯಷ್ಟು ಆಳಕ್ಕೆ ಬಿದ್ದು ದೇಹದ ಬಹುತೇಕ ಎಲ್ಲಾ ಮೂಳೆ ಮುರಿದುಕೊಂಡಿದ್ದ ಇವರು ಪವಾಡದ ರೀತಿಯಂತೆ ಬದುಕುಳಿದಿದ್ದಾರೆ.
ಲಾಕ್ ತನ್ನ ತೋಳಿನ ಎರಡು ಸ್ಥಳಗಳಲ್ಲಿ ಮುರಿದುಕೊಂಡಿತ್ತು. ಅವರ ಮೂಳೆ, ಮತ್ತು ಮಣಿಕಟ್ಟಿನ ಮುಖಾಂತರ ಚರ್ಮದ ಮೂಲಕ ಎಲುಬು ಹೊರಬಂದಿತ್ತು. ಆತನ ಕೈ ನಜ್ಜುಗುಜ್ಜಾಗಿದ್ದು, ನಾಲ್ಕು ಕಡೆ ಬೆನ್ನು ಮುರಿದಿತ್ತು. ಎಲ್ಲಾ ಪಕ್ಕೆಲುಬುಗಳು ಮುರಿದುಹೋಗಿದ್ದು, ಶ್ವಾಸಕೋಶವನ್ನು ಸಹ ಚುಚ್ಚಿಕೊಂಡಿತ್ತು. ಸೊಂಟವು 30 ವಿವಿಧ ಸ್ಥಳಗಳಲ್ಲಿ ಬಿರುಕಾಗಿತ್ತು. ಹೀಗಾಗಿ ಈಗ ಇವರು ಬದುಕುಳಿದಿರುವುದೇ ಆಶ್ಚರ್ಯದ ವಿಷಯವಾಗಿದೆ. ವೈದ್ಯಕೀಯ ಲೋಕಕ್ಕೆ ಸವಾಲಾಗಿದ್ದು, ವಿಲ್ ಪವರ್ ಇದ್ದರೆ ಏನೂ ಆಗದು ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.
ಮ್ಯಾಂಚೆಸ್ಟರ್ ರಾಯಲ್ ಆಸ್ಪತ್ರೆಯಲ್ಲಿದ್ದ ಸಮಯದಲ್ಲಿ ಇಯಾನ್ ಕೋವಿಡ್ ಪೀಡಿತರಾದ ಕಾರಣ ಟ್ರಾಫರ್ಡ್ ಜನರಲ್ ಆಸ್ಪತ್ರೆಗೆ ಅವರನ್ನು ವರ್ಗಾಯಿಸಲಾಯಿತು.ಕೋಮಾದಲ್ಲಿದ್ದ ಇಯಾಕ್ ಲಾಕ್ ಇದೀಗ ಮನೆಗೆ ಮರಳಲು ಉತ್ಸುಕರಾಗಿರುವರು.

ಮಿರರ್ ಡೆಸ್ಕ್ – ಮಿರರ್ ನ್ಯೂಸ್ ನೆಟ್ವರ್ಕ್
Be the first to comment on "ಮನುಷ್ಯನಿಗೆ ಬೇಕಾದ್ದು ವಿಲ್ ಪವರ್…….! | 30 ಅಡಿ ಆಳಕ್ಕೆ ಬಿದ್ದು ಬದುಕುಳಿದ ವ್ಯಕ್ತಿಯೇ ಇದಕ್ಕೆ ಸಾಕ್ಷಿ..! |"