ನಾಡಿನಲ್ಲೆಡೆ ನವರಾತ್ರಿ ಹಬ್ಬದ ಸಂಭ್ರಮ. ಹಬ್ಬದ ಪ್ರಯುಕ್ತ ನಾನಾ ಬಗೆಯ ಭಕ್ಷ್ಯಗಳ ಭೂರಿ ಭೋಜನ ಸವಿಯುವವರು ಒಂದೆಡೆಯಾದರೆ, ಕಟ್ಟುನಿಟ್ಟಿನ “ಉಪವಾಸ” ವ್ರತ ಕೈಗೊಳ್ಳುವವರೂ ಅನೇಕರು. ಅದರಲ್ಲೂ ನವರಾತ್ರಿ ಹಬ್ಬದ ಒಂಬತ್ತು ದಿನ ಉಪವಾಸ ಮಾಡುವುದರಿಂದ ದುರ್ಗಾ ಮಾತೆಯ ಅನುಗ್ರಹ ಲಭಿಸುವುದು ಎನ್ನುವ ನಂಬಿಕೆ ಇದೆ.
“ಉಪ” ಎಂದರೆ ಹತ್ತಿರ, “ವಾಸ” ಎಂದರೆ ವಾಸಿಸು. ಅರ್ಥಾಥ್ ದೇವರಿಗೆ ಸನಿಹವಾಗುವುದು. ಶುದ್ಧ ಮನಸ್ಸಿನಿಂದ ಉಪವಾಸ ವ್ರತ ಕೈಗೊಳ್ಳುವುದರಿಂದ ಮನಸ್ಸು, ದೇಹ, ಆತ್ಮ ಪರಿಶುದ್ಧವಾಗುತ್ತದೆ ಎನ್ನುವುದು ನಮ್ಮ ಪೂರ್ವಿಕರ ನಂಬಿಕೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಉಪವಾಸಕ್ಕೆ ಮಹತ್ತರವಾದ ಸ್ಥಾನಮಾನವಿದೆ.
ಇದು “ನವರಾತ್ರಿ”ಗೆ ಮಾತ್ರ ಸೀಮಿತವಾಗದೆ ಸುಬ್ರಹ್ಮಣ್ಯ ಷಷ್ಠಿ, ಕಿರುಷಷ್ಠಿ, ಏಕಾದಶಿ, ವಾರದ ಒಂದು ದಿನ ಹೀಗೆ ನಾನಾ ದಿನಗಳಂದು ವ್ರತ ಪಾಲಿಸುವುದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದು. ಭೂರಿ ಭೋಜನಗಳು ಕಣ್ಣ ಮುಂದೆ ಇದ್ದರೂ ತಿನ್ನದೆ ಇರುವುದರಿಂದ ವ್ಯಕ್ತಿ ತನ್ನ ಆಸೆಗಳ ಮೇಲೆ ಹಿಡಿತ ಸಾಧಿಸುವಲ್ಲಿ ಸಫಲನಾಗುತ್ತಾನೆ.
ವಿವಿಧ ಪ್ರಕಾರದ ಉಪವಾಸಗಳು:
* ವಾರದ ಒಂದು ದಿನ ತಮ್ಮತಮ್ಮ ಇಷ್ಟ ದೇವರಿಗಾಗಿ ಮಾಡುವ ಉಪವಾಸ. ಮಂಗಳವಾರ ಹನುಮಂತನಿಗಾಗಿ, ಶನಿವಾರ ಉಪವಾಸ ಮಾಡುವುದು ಶನಿ ದೇವರ ಅನುಗ್ರಹ ಪಡೆಯಲು ಎನ್ನುವ ನಂಬಿಕೆ ಇದೆ.
* ನವರಾತ್ರಿ, ಶಿವರಾತ್ರಿ, ಷಷ್ಠಿ, ಹಬ್ಬಹರಿದಿನಗಳಂತಹ ವಿಶೇಷ ದಿನಗಳಂದು ಮಾಡುವ ಉಪವಾಸ.
* ಧಾರ್ಮಿಕ ಹಾಗು ದೈಹಿಕ ದೃಷ್ಟಿಯಿಂದ ಮಾಡುವ ಉಪವಾಸ. ನಿಗದಿತ ದಿನದಂದು ಉಪ್ಪು, ಸಿಹಿ, ಖಾರ ಇಲ್ಲದ ಆಹಾರ ಸೇವನೆ ಮಾಡುವುದು. ಇದು ಬಿಪಿ ಹಾಗು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತದೆ.
* ಕೇವಲ ಫಲಾಹಾರಇಲ್ಲವೇ ದ್ರವಾಹಾರ ಸೇವನೆ ಮಾಡುವುದೂ ಕೂಡಾ ಉಪವಾಸದ ಒಂದು ವಿಧ.
ಪ್ರಯೋಜನಗಳು:
*ಉಪವಾಸ ಇರುವುದರಿಂದ ದೇಹದ ಪಚನಕಾರಿ ಅಂಗಗಳಿಗೆ ವಿಶ್ರಾಂತಿ ಸಿಗುತ್ತದೆ.
*ಮನಸ್ಸು ಹಾಗು ಹೃದಯವನ್ನು ಶುದ್ಧ ಮಾಡುತ್ತದೆ.
*ಉಪವಾಸವಿರುವುದರಿಂದ ದೇಹದಲ್ಲಿ ಸೇರಿಕೊಂಡಿರುವ ವಿಷಯುಕ್ತ ವಸ್ತುಗಳನ್ನು ನಾಶಮಾಡುತ್ತದೆ.
*ಮನಸ್ಸಿನ ಭಾವನೆಗಳನ್ನು ಹತೋಟಿಯಲ್ಲಿಡುತ್ತದೆ.
*ಮನುಷ್ಯನನ್ನು ಮಾನಸಿಕ ಹಾಗು ದೈಹಿಕವಾಗಿ ಬಲಿಷ್ಟಗೊಳಿಸುತ್ತದೆ.
ನೆಂಟರಿಷ್ಟರು, ಗೆಳೆಯರು, ನೆರೆಹೊರೆಯವರು ಉಪವಾಸ ವ್ರತ ಕೈಗೊಳ್ಳುತ್ತಾರೆಂದು ಯಾರೂ ಉಪವಾಸ ಮಾಡಬಾರದು. ಎಲ್ಲರೂ ಅವರವರ ದೇಹ ಸ್ಥಿತಿಗೆ ಅನುಗುಣವಾಗಿ ವ್ರತ ಪಾಲನೆ ಮಾಡಿದರೆ ಒಳ್ಳೆಯದು. 24ಗಂಟೆ ಉಪವಾಸ ಇರಲು ಸಾಧ್ಯವಿಲ್ಲದಿದ್ದರೆ 10ರಿಂದ 12 ಗಂಟೆಗಳ ಕಾಲವಿದ್ದು ನಂತರ ಮಿತವಾಗಿ ಹಣ್ಣು ಹಂಪಲು ಸೇವಿಸಬೇಕು. ಇದರಿಂದ ತಲೆಸುತ್ತುವಿಕೆ, ನಿಶ್ಯಕ್ತಿಯಂತಹ ಸಮಸ್ಯೆ ಬಾಧಿಸದು. ಜೊತೆಗೆ ಉಪವಾಸ ಬಿಡುವಾಗಲೂ ಅಷ್ಟೇ ಹಸಿವಾಗಿದೆ ಎಂದು ಅತಿಯಾಗಿ ತಿನ್ನದೇ ಮಿತ ಆಹಾರ ಸೇವಿಸಬೇಕು. ಇಲ್ಲದಿದ್ದರೆ ಅಜೀರ್ಣವಾಗುವ ಸಾಧ್ಯತೆ ಇದೆ.
-ವಂದನಾರವಿ ಕೆ.ವೈ.ವೇಣೂರು.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…