ಬಿಸಿ ಬಿಸಿ ಅನ್ನಕ್ಕೆ ಸರಳವಾದ ಆದರೆ ರುಚಿಕರವಾದ ಪದಾರ್ಥಗಳು ಬೇಕು. ಅಂತಹ ಸಾಂಪ್ರದಾಯಿಕ ಊಟಗಳಲ್ಲಿ ಒಂದೇ ಉಪ್ಪು ಸೊಳೆ ಬೋಳು ಬೆಂದಿ.
ಸ್ವಲ್ಪ ಹುಳಿ, ಸಿಹಿ ಹಾಗೂ ಖಾರದ ಮಿಶ್ರಣ ಹೊಂದಿರುವ ಈ ತಿನಿಸು ಗ್ರಾಮೀಣ ಅಡುಗೆ ಸಂಸ್ಕೃತಿಯ ರುಚಿಯನ್ನು ನೆನಪಿಸುತ್ತದೆ. ಬಿಸಿ ಅನ್ನಕ್ಕೆ ತುಪ್ಪ ಹಾಕಿ ಈ ಬೋಳು ಬೆಂದಿ ಜೊತೆ ತಿಂದರೆ ಅದರ ಸವಿಯೇ ವಿಭಿನ್ನ.
ಬೇಕಾಗುವ ಸಾಮಗ್ರಿಗಳು:
ಉಪ್ಪು ಸೊಳೆ – ½ ಕಪ್
ಬೆಲ್ಲ – ರುಚಿಗೆ ತಕ್ಕಷ್ಟು
ಮೆಣಸಿನ ಪುಡಿ – 1½ ಚಮಚ
ಹುಣಸೆ ರಸ – ¼ ಕಪ್
ಎಣ್ಣೆ – 2 ಚಮಚ
ಸಾಸಿವೆ – ½ ಚಮಚ
ಬೆಳ್ಳುಳ್ಳಿ – ಕೆಲವು ಕಾಳು
ಒಣ ಕೆಂಪು ಮೆಣಸು – 2
ಕರಿಬೇವಿನ ಎಲೆ – ಸ್ವಲ್ಪ
ನೀರು – ಅಗತ್ಯವಿದ್ದಷ್ಟು
ಮಾಡುವ ವಿಧಾನ : ಮೊದಲು ಉಪ್ಪು ಸೊಳೆಯನ್ನು ಸುಮಾರು ಒಂದು ಗಂಟೆ ಬಿಸಿ ನೀರಿನಲ್ಲಿ ನೆನೆಸಿಡಬೇಕು. ನಂತರ ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಚೆನ್ನಾಗಿ ಬೇಯಿಸಬೇಕು. ಬೇಯಿಸಿದ ಸೊಳೆಯನ್ನು ನಂತರ ತರಿ ತರಿಯಾಗಿ ರುಬ್ಬಿ.
ಇದಾದ ಬಳಿಕ ಬಾಣಲೆಗೆ ರುಬ್ಬಿದ ಮಿಶ್ರಣ ಹಾಕಿ ಅದಕ್ಕೆ ಸ್ವಲ್ಪ ನೀರು, ಬೆಲ್ಲ, ಮೆಣಸಿನ ಪುಡಿ ಹಾಗೂ ಹುಣಸೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕುದಿಸಬೇಕು. ಕುದಿದ ಬಳಿಕ ಸ್ಟವ್ ಆಫ್ ಮಾಡಬೇಕು.
ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಬೆಳ್ಳುಳ್ಳಿ, ಒಣ ಕೆಂಪು ಮೆಣಸು ಹಾಗೂ ಕರಿಬೇವಿನ ಎಲೆ ಹಾಕಿ ಒಗ್ಗರಣೆ ಮಾಡಬೇಕು. ಈ ಒಗ್ಗರಣೆಯನ್ನು ಬೋಳು ಬೆಂದಿಗೆ ಸೇರಿಸಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಗಮನಿಸಿ: ಉಪ್ಪು ಸೊಳೆಯಲ್ಲಿ ಈಗಾಗಲೇ ಉಪ್ಪು ಇರುವುದರಿಂದ ಹೆಚ್ಚುವರಿ ಉಪ್ಪು ಹಾಕುವ ಅಗತ್ಯವಿಲ್ಲ. ಬಿಸಿ ಬಿಸಿ ಅನ್ನಕ್ಕೆ ತುಪ್ಪ ಹಾಕಿ ಈ ಬೋಳು ಬೆಂದಿ ಜೊತೆ ತಿಂದರೆ ಊಟದ ಸವಿ ದ್ವಿಗುಣವಾಗುತ್ತದೆ.
ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯ ಚಟುವಟಿಕೆ ಮತ್ತೆ ಆರಂಭವಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ…
ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ ಮುಂದುವರಿಯಲಿದೆ, ಕರಾವಳಿ ಮತ್ತು ಮಲೆನಾಡಿನಲ್ಲಿ ಏಪ್ರಿಲ್ 4ರವರೆಗೆ…
ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗಿದೆ. ಈ ಹಿನ್ನೆಲೆ ಪ್ರತಿಯೊಂದು ತಾಲೂಕಿನಲ್ಲಿ…
ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು ಮಾಡಲು ಪೊಲೀಸ್…
ಮಾರ್ಚ್ 28ರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಮತ್ತು…
ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮ ಅಗತ್ಯವಾಗಿದೆ. ನೀರು ಹೆಚ್ಚು…