Advertisement
ಸುದ್ದಿಗಳು

ಉಪ್ಪುಕಳ ಸೇತುವೆ | ಗ್ರಾಮೀಣ ಭಾಗಗಳ ಕಡೆಗೆ ಯಾಕಿಷ್ಟು ನಿರ್ಲಕ್ಷ್ಯ..? | ನೆರವಿಗೆ ಬಂದ ಶೌರ್ಯ ವಿಪತ್ತುನಿರ್ವಹಣೆ ಘಟಕ | ಸರ್ಕಾರದ ನೆರವು ಯಾವಾಗ.. ? |

Share

ಗ್ರಾಮೀಣ ಭಾಗಗಳನ್ನು ಯಾಕೆ ಇಷ್ಟು ನಿರ್ಲಕ್ಷ್ಯ ಮಾಡುತ್ತಾರೆ ? ಈ ಪ್ರಶ್ನೆ ಇದೀಗ ಸುಳ್ಯದಲ್ಲಿ ಕೇಳಲೇಬೇಕು. ಏಕೆಂದರೆ ಬಾಳುಗೋಡು ಗ್ರಾಮದ ಉಪ್ಪುಕಳ ನಿವಾಸಿಗಳನ್ನು ಕಂಡರೆ, ಅವರೊಡನೆ ಮಾತನಾಡಿದರೆ ಈ ಮಾತುಗಳನ್ನು ಯಾರಾದರೂ ಕೇಳುತ್ತಾರೆ. ಭಾರೀ ಮಳೆಯಿಂದಾಗಿ ಬಾಳುಗೋಡು ಗ್ರಾಮದ ಉಪ್ಪುಕಳ ನಿವಾಸಿಗಳ ಸಂಪರ್ಕ ಕೊಂಡಿಯಾಗಿದ್ದ ಮಾನವ ನಿರ್ಮಿತ  ಕಾಲು ಸಂಕ ಮಳೆ ಹಾಗೂ ಪ್ರವಾಹಕ್ಕೆ ಕೊಚ್ಚಿ ಹೋಗಿ ದ್ವೀಪದಂತಾಗಿತ್ತು.ಇದೀಗ ತಾತ್ಕಾಲಿಕವಾಗಿ ಶೌರ್ಯ ವಿಪತ್ತುನಿರ್ವಹಣೆ ಘಟಕದ ಸದಸ್ಯರು ನೆರವಿಗೆ ಬಂದಿದ್ದಾರೆ. ತಾತ್ಕಾಲಿಕ ಮರದ ಕಾಲು ಸಂಕ ಮತ್ತೆ ನಿರ್ಮಾಣವಾಗಿದೆ.

Advertisement
Advertisement

Advertisement

ದ.ಕ ಜಿಲ್ಲೆಯ ‌ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಸುಮಾರು 11 ಕುಟುಂಬಗಳು ವಾಸಿಸುತ್ತಿದ್ದು, ಈ ಪರಿಸರವನ್ನು ಸಂಪರ್ಕಿಸಲು ಮರದ ಪಾಲವೇ ಇದುವರೆಗೂ ಗತಿಯಾಗಿತ್ತು. 49 ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದು ಒಬ್ಬ ಅಂಗವಿಕಲರೂ ಇದ್ದಾರೆ. ಈ ಗ್ರಾಮವನ್ನು ಸಂಪರ್ಕಿಸುವ ಹೊಳೆ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದು, ಗ್ರಾಮಸ್ಥರೇ ಮರದ ಪಾಲ ನಿರ್ಮಿಸಿಕೊಂಡು ಹೊಳೆ ದಾಟುತ್ತಾರೆ. ಸ್ವಾತಂತ್ರ್ಯ ನಂತರ ಇದುವರೆಗೂ ಇದೇ ಮಾದರಿಯಲ್ಲಿ ಇವರು ಸಂಚರಿಸುತ್ತಾರೆ. ಈಗ ಅಮೃತಮಹೋತ್ಸವ ಸಂದರ್ಭ ಹೊರಜಗತ್ತಿಗೆ ತಿಳಿದಿದೆ.

Advertisement

ಪ್ರತಿ ವರ್ಷ ಮಳೆಗೆ ಮೊದಲು ಈ ಭಾಗದ ನಿವಾಸಿಗಳೇ ಸೇರಿ ಸ್ಥಳೀಯವಾಗಿ ಸಿಗುವ ಮರ,ಬಿದಿರು, ಬಳ್ಳಿಗಳನ್ನು ಬಳಸಿ ಕಾಲು ಸೇತುವೆ ದುರಸ್ತಿ ಪಡಿಸಿ ಜೀವಮಾನ ಕಳೆಯುತ್ತಿದ್ದಾರೆ. ಈ ಭಾರಿ ಸುರಿದ ವಿಪರೀತ ಮಳೆಗೆ ಹೆಚ್ಚಿನ ಪ್ರವಾಹ ಬಂದು ಕಾಲು ಸೇತುವೆ ನೀರಿನಲ್ಲಿ ಭಾಗಶಃ ಕೊಚ್ಚಿ ಹೋಗಿದೆ. ಇಲ್ಲಿ ನೆಲೆಸಿರುವ 11 ಮನೆಗಳಿಗೆ ಈ ದಾರಿಯಿಲ್ಲದಾಗಿತ್ತು. ಹೊರಜಗತ್ತಿಗೆ ಈ ಸಮಸ್ಯೆ ಗೋಚರಿಸಿದ ಬಳಿಕ  ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Advertisement

ಈ ನಡುವೆ  ಶೌರ್ಯ ವಿಪತ್ತು ನಿರ್ವಹಣೆ ಘಟಕದ ಸದಸ್ಯರು ತಾತ್ಕಾಲಿಕ ಮರದ ಕಾಲು ಸಂಕ ಮತ್ತೆ ನಿರ್ಮಾಣ ಮಾಡಿದ್ದಾರೆ ಹೀಗಾಗಿ ಸದ್ಯ ಈಲ್ಲಿನ ಜನರಿಗೆ ಓಡಾಟಕ್ಕೆ ಅನುಕೂಲವಾಗಿದೆ. ಆದರೆ ಗ್ರಾಮೀಣ ಭಾಗದ ಈ ಜನರ ಬೇಡಿಕೆಗೆ ಸರ್ಕಾರ ಸ್ಪಂದಿಸುವುದೇ ? ಮುಂದಿನ ಚುನಾವಣೆ ವೇಳೆಗೆ ಈ ಭರವಸೆ ಈಡೇರಬಹುದೇ ? ಎನ್ನುವುದು  ಪ್ರಶ್ನೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

20 ಕೃಷಿ ಉತ್ಪನ್ನಗಳ ರಫ್ತುಗಳಿಗೆ ಉತ್ತೇಜನ ನೀಡುವ ಯೋಜನೆ |

ಬಾಳೆಹಣ್ಣು, ಮಾವು, ಆಲೂಗಡ್ಡೆ ಮತ್ತು ಬೇಬಿ ಕಾರ್ನ್ ಸೇರಿದಂತೆ 20 ಕೃಷಿ ಉತ್ಪನ್ನಗಳ …

1 hour ago

Karnataka Weather | 27-04-2024 | ಮೋಡ- ಬಿಸಿಗಾಳಿ | ಮಳೆ ಸಾಧ್ಯತೆ ಕಡಿಮೆ |

ಈಗಿನಂತೆ ಎಪ್ರಿಲ್ 29 ಹಾಗೂ 30ರಂದು ಉತ್ತರ ಒಳನಾಡು, ದಕ್ಷಿಣ ಕರಾವಳಿ ಹಾಗೂ…

7 hours ago

ಕೋವಿ ಠೇವಣಾತಿ ಪ್ರಕರಣ | ಬೆಳ್ಳಾರೆ ಜಯಪ್ರಸಾದ್ ಜೋಶಿ ಹಾಗೂ ಇತರ 4 ರಿಟ್ ಅರ್ಜಿದಾರರ ಪರ ಹೈಕೋರ್ಟ್ ಆದೇಶ‌ |

ಚುನಾವಣಾ ಸಮಯದಲ್ಲಿ ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು…

8 hours ago

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ | ಯಾಕೆ ಗೊತ್ತಾ…?

ದೇಸೀ ಗೋವು ಅದರಲ್ಲೂ ಮಲೆನಾಡು ಗಿಡ್ಡ ತಳಿಯ ಹಸು ಉಳಿಯಬೇಕು, ಅದರ ಉಳಿವು…

2 days ago

ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!

ದಿನದಿಂದ ದಿನಕ್ಕೆ ತಾಪಮಾನ(Temperature) ಏರುತ್ತಿದೆ. ಬಿಸಿ ಗಾಳಿ(Heat wave) ಬೀಸುತ್ತಿದೆ. ನೀರಿಗೆ ಅಭಾವ(Water…

2 days ago

ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ

ವಿಶ್ವ ವಿದ್ಯಾಲಯ ಕಾಲೇಜು, ನೆಲ್ಯಾಡಿಯ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ…

2 days ago