ಕೃಷಿಗೆ ಕಂಟಕವಾಗುತ್ತಿರುವ ಹವಾಮಾನ ಬದಲಾವಣೆ | ಅಡಿಕೆಯೂ ಸೇರಿದಂತೆ ಹಲವು ಬೆಳೆಗಳಿಗೆ ಈ ಬಾರಿ ಸಮಸ್ಯೆ|

August 24, 2024
12:16 PM
ಹವಾಮಾನ ಬದಲಾವಣೆಯು ದೇಶದ ವಿವಿಧ ಕೃಷಿಯ ಮೇಲೆ, ಕೃಷಿ ಕ್ಷೇತ್ರ ಮೇಲೆ ಪರಿಣಾಮ ಬೀರುವ ಬಗ್ಗೆ ಒಂದು ವಾಕ್ಯದಲ್ಲಿ ಕ್ಯಾಂಪ್ಕೊ ತನ್ನ ಮಹಾಸಭೆಯ ವರದಿಯಲ್ಲಿ ಉಲ್ಲೇಖಿಸಿದೆ.

ಹವಾಮಾನ ಬದಲಾವಣೆ ಬಗ್ಗೆ ಈಚೆಗೆ ಚರ್ಚೆ ಆರಂಭವಾಗುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಇಂದು ಹವಾಮಾನ ಬದಲಾವಣೆಯ ಕಾರಣದಿಂದ ಕೃಷಿಯ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಬಹಳ ಗಂಭೀರವಾಗಿ ಅಧ್ಯಯನ ಹಾಗೂ ಪರಿಹಾರಗಳ ಬಗ್ಗೆ ತುರ್ತು ಚಿಂತನೆ ನಡೆಯುತ್ತಿದೆ. ದೇಶದಲ್ಲೂ ಈ ಬಗ್ಗೆ ಅಲ್ಲಲ್ಲಿ ಚರ್ಚೆ ಶುರುವಾಗಿದೆ. ಈ ಬಾರಿ ಅಡಿಕೆ ಬೆಳೆಗಾರರ ಸಂಸ್ಥೆ ಕ್ಯಾಂಪ್ಕೊ ಕೂಡಾ ಈ ಬಾರಿಯ ಮಹಾಸಭೆಯ ವರದಿಯಲ್ಲಿ Climate Change ಬಗ್ಗೆ ಉಲ್ಲೇಖಿಸಿದೆ. ಇದು ಅತ್ಯಂತ ಸಕಾಲಿಕವಾದ ಉಲ್ಲೇಖ. ಈ ಬಾರಿ ಅಡಿಕೆ ಸೇರಿದಂತೆ ಬಹುತೇಕ ಎಲ್ಲಾ ಕೃಷಿಯ ಮೇಲೆ ಹವಾಮಾನ ಬದಲಾವಣೆ, ಹವಾಮಾನ ವೈಪರೀತ್ಯದಿಂದ ಸಮಸ್ಯೆಯಾಗಿದೆ.

Advertisement

ಹವಾಮಾನ ಬದಲಾವಣೆಯು ದೇಶದ ವಿವಿಧ ಕೃಷಿಯ ಮೇಲೆ, ಕೃಷಿ ಕ್ಷೇತ್ರ ಮೇಲೆ ಪರಿಣಾಮ ಬೀರುವ ಬಗ್ಗೆ ಒಂದು ವಾಕ್ಯದಲ್ಲಿ ಕ್ಯಾಂಪ್ಕೊ ತನ್ನ ಮಹಾಸಭೆಯ ವರದಿಯಲ್ಲಿ ಉಲ್ಲೇಖಿಸಿದೆ.ಕೃಷಿಕರು ಏನು ಮಾಡಬಹುದು ಎನ್ನುವುದರ ಬಗ್ಗೆ ಕೃಷಿಕರಿಂದಲೇ ಚಿಂತನೆ ಆರಂಭವಾಗಬೇಕಿದೆ.

ಇಂದು ಹವಾಮಾನ ವೈಪರೀತ್ಯ ಅತ್ಯಂತ ಮಹತ್ವ ಹಾಗೂ ಗಂಭೀರವಾದ ವಿಷಯವೂ ಹೌದು. ಹವಾಮಾನ ಬದಲಾವಣೆ ಕೃಷಿಯ ಮೇಲೆ ಅದರಲ್ಲೂ ಅಡಿಕೆ ಬೆಳೆಯ ಮೇಲೆ ಕಳೆದ ಎರಡು ವರ್ಷಗಳಿಂದ ಹೆಚ್ಚಾಗಿ ಪರಿಣಾಮ ಬೀರುತ್ತಿದೆ. ಅಡಿಕೆಯು 36-37 ಡಿಗ್ರಿ ತಾಪಮಾನದ ನಂತರ ಅಸ್ಥಿರವಾಗುತ್ತದೆ, ಎಳೆ ಅಡಿಕೆ ತಾಪಮಾನ ಸಹಿಸಲಾಗದೆ ಬೀಳುತ್ತದೆ ಎನ್ನುವುದು ಒಂದು ವರದಿ. ಈ ಬಾರಿ ಬೇಸಗೆಯಲ್ಲಿ ತಾಪಮಾನ 40 ಡಿಗ್ರಿ ದಾಟಿತ್ತು. ಇದರ ಪರಿಣಾಮವಾಗಿ ಜೂನ್‌ ಅಂತ್ಯದವರೆಗೂ ಎಳೆ ಅಡಿಕೆ ಬೀಳುತ್ತಿರುವ ಬಗ್ಗೆ ಕೃಷಿಕರು ಹೇಳಿದ್ದಾರೆ. ಇದರ ನಿಯಂತ್ರಣಕ್ಕಾಗಿ ಇನ್ನಿಲ್ಲದ ಔಷಧಿ ಸಿಂಪಡಣೆ ಮಾಡಿದ ಅನೇಕ ಕೃಷಿಕರು ಇದ್ದಾರೆ.

ಜೂನ್‌ ನಂತರ ಸುರಿದ ಭಾರೀ ಮಳೆಯ ಕಾರಣದಿಂದ ಔಷಧಿ ಸಿಂಪಡಣೆ ಸಾಧ್ಯವಾಗದೆ ಕೊಳೆರೋಗ ಬಾಧಿಸಿ ಕೊಳೆರೋಗದಿಂದಲೂ ಹಲವು ಕಡೆ ಅಡಿಕೆ ಬಿದ್ದಿದೆ. ಹೀಗಾಗಿ ಈ ಬಾರಿ ಹವಾಮಾನದ ಕಾರಣದಿಂದಲೇ ಅಡಿಕೆ ಫಸಲು ಕಡಿಮೆಯಾಗಿದೆ. ಅಷ್ಟೇ ಅಲ್ಲ, ಮುಂದಿನ ಬಾರಿಗೆ ಅಡಿಕೆಯ ಇಳುವರಿಯಲ್ಲೂ ಕೊರತೆ ಕಾಡಲಿದೆ.

ರಬ್ಬರ್‌ ಕೃಷಿಯ ಮೇಲೂ ಹವಾಮಾನ ವೈಪರೀತ್ಯ ಸಮಸ್ಯೆಯಾಗಿದೆ. ಬೇಸಗೆಯಲ್ಲಿ ರಬ್ಬರ್‌ ಹಾಲಿನ ಇಳುವರಿಯಲ್ಲಿ ಕೊರತೆ, ಮಳೆಗಾಲದಲ್ಲಿ ಎರಡು ತಿಂಗಳು ಭಾರೀ ಮಳೆಯ ಕಾರಣದಿಂದ ಟ್ಯಾಪಿಂಗ್‌ ಇಲ್ಲದೆ ಸಮಸ್ಯೆಯಾಗಿದೆ. ಆಗಸ್ಟ್‌ ತಿಂಗಳ ನಂತರವೇ ರಬ್ಬರ್‌ ಟ್ಯಾಪಿಂಗ್‌ ಎಲ್ಲೆಡೆ ಆರಂಭವಾಗಿದೆ. ಈ ಬಗ್ಗೆ ರಬ್ಬರ್‌ ಬೋರ್ಡ್‌ ಹಾಗೂ ರಬ್ಬರ್‌ ಬೆಳೆಗಾರರ ಸಂಘವೂ ಉಲ್ಲೇಖಿಸಿತ್ತು. ರಬ್ಬರ್‌ ಬೇಡಿಕೆ ಹಾಗೂ ಪೂರೈಕೆಯಲ್ಲೂ ವ್ಯತ್ಯಾಸ ಕಂಡುಬಂದಿತ್ತು. ಈ ವ್ಯತ್ಯಾಸ ಕಳೆದ ಎರಡು ವರ್ಷಗಳಿಂದ ಕಾಣುತ್ತಿದೆ.

ಇನ್ನು ಕೊಕೋ ಗಿಡಕ್ಕೆ,‌ಕಾಯಿಗೆ ಮಳೆಗೆ ಕೊಳೆರೋಗ ಬಾಧಿಸಿದೆ, ಕಾಳುಮೆಣಸು ಈ ಬಾರಿ ಎಲ್ಲೂ ಇಳುವರಿ ಹೆಚ್ಚಾದಂತೆ ಕಾಣುತ್ತಿಲ್ಲ. ಬೇಸಗೆಯಲ್ಲಿ ವಿಪರೀತ ಬಿಸಿಲು, ಮಳೆಗಾಲದ ಆರಂಭದಲ್ಲಿ ಭಾರೀ ಮಳೆ ಸಂಕಷ್ಟವಾಗಿದೆ, ಹೀಗಾಗಿ ಇಳುವರಿ ಕೊರತೆ ಇರಬಹುದು ಎನ್ನುವುದು ನಿರೀಕ್ಷೆ. ಹೀಗೇ ಎಲ್ಲಾ ಕೃಷಿಯ ಮೇಲೂ ಹವಾಮಾನ ವೈಪರೀತ್ಯ, ಹವಾಮಾನ ಬದಲಾವಣೆ ಪರಿಣಾಮ ಬೀರಿದೆ, ಬೀರುತ್ತಿದೆ.

ಹವಾಮಾನ ಬದಲಾವಣೆಯು ಆಹಾರ ಉತ್ಪಾದನೆಯ ಮೇಲೂ ಪರಿಣಾಮ ಬೀರಿದೆ.  ಸಾಮಾನ್ಯವಾಗಿ ಉತ್ಪಾದನೆ ಮತ್ತು ಬಳಕೆಯ ಬೇಡಿಕೆಯ ಪರಸ್ಪರ ಹೊಂದಾಣಿಕೆ ಇದ್ದಾಗ ಬೆಲೆಯೂ ಸಾಮಾನ್ಯ ರೀತಿಯಲ್ಲಿರುತ್ತದೆ. ಆದರೆ ಹವಾಮಾನ ಬದಲಾವಣೆಯು ಬೆಳೆಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹೀಗಾಗಿ ಪೂರೈಕೆ ಸಹಜವಾಗಿಯೇ ಕೊರತೆಯಾಗಿ ಎಲ್ಲವೂ ಏರಿಳಿತವಾಗುತ್ತದೆ. ಈ ಬಾರಿ ದೇಶದಲ್ಲಿ ಹಲವು ತರಕಾರಿ ಬೆಳೆ ಸೇರಿದಂತೆ ವಿವಿಧ ಉತ್ಪನ್ನಗಳೂ ಧಾರಣೆ ಏರಿಳಿತಕ್ಕೆ ಒಳಗಾಗಿದೆ. ಟೊಮೊಟೋ, ಕೊಕೋ, ಆಲೂಗಡ್ಡೆ , ಈರುಳ್ಳಿ ಸೇರಿದಂತೆ ಹಲವು ಕೃಷಿಗಳು ಏರಿಳಿತ ಕಂಡಿದೆ.

ಹವಾಮಾನ ಬದಲಾವಣೆಯ ವೇಗ ಹೆಚ್ಚಾಗುತ್ತಿದೆ, ಈ ಕಾರಣದಿಂದಲೇ  2023 ಬರಗಾಲಕ್ಕೆ ಹಲವು ಕಡೆ ಬರಗಾಲದ ಸಮಸ್ಯೆ ಕಾಡಿದೆ.  ರಾಷ್ಟ್ರೀಯ ಸಾಗರ ಮತ್ತು ವಾತಾವರಣದ ಆಡಳಿತದ ಪ್ರಕಾರ (NOAA) 2023 ರ ಹವಾಮಾನವು ಜಾಗತಿಕ ಭೂಪ್ರದೇಶದ ಸುಮಾರು 8 ಶೇಕಡಾ ತೀವ್ರ ಬರಗಾಲದ ಮೂಲಕ ಹೊಸ ದಾಖಲೆಯನ್ನು ಸ್ಥಾಪಿಸಿದೆ. ಇದು ಜುಲೈ 2022 ರಲ್ಲಿ ಅಂದರೆ  ಒಂದು ವರ್ಷದ ಹಿಂದೆ ಹೊಂದಿಸಲಾದ 6.2 ಶೇಕಡಾ ಇತ್ತು.  ದೆಹಲಿಯಲ್ಲಿ ದಾಖಲೆಯ ಉಷ್ಣತೆ ದಾಖಲಾಗಿತ್ತು, ಇದು ದೇಶವ್ಯಾಪಿಯಾಗಿಯೂ ಈ ದಾಖಲೆ ಕಂಡಿತ್ತು.

ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ…


Discussions on climate change are set to begin soon. At the international level, there is a significant focus on studying the impacts of climate change on agriculture and brainstorming urgent solutions. This topic has also been discussed within the country. The Arecanut Growers Organization CAMPCO addressed the issue of climate change in their General Meeting Report.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಮಣಿಪುರದಲ್ಲಿ 68 ಟನ್ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆ ವಶ
April 13, 2025
7:42 AM
by: The Rural Mirror ಸುದ್ದಿಜಾಲ
2025ರಲ್ಲಿ ಶನಿ ತಮ್ಮ ನಕ್ಷತ್ರ ಅಥವಾ ರಾಶಿಯಲ್ಲಿ ಅಧೋಗತಿಯ ಚಲನೆ
April 13, 2025
6:38 AM
by: ದ ರೂರಲ್ ಮಿರರ್.ಕಾಂ
ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |
April 12, 2025
9:16 PM
by: The Rural Mirror ಸುದ್ದಿಜಾಲ
ತೊಗರಿ ಉತ್ಪನ್ನ ಖರೀದಿ ಅವಧಿ ಎ.25 ರವರೆಗೆ ವಿಸ್ತರಣೆ
April 12, 2025
8:44 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group