ಕೃಷಿಯಲ್ಲಿ ಈಗ ಶ್ರಮ ಉಳಿತಾಯವಾಗಬೇಕು, ಈ ಮೂಲಕ ಕೃಷಿ ಆದಾಯವೂ ಉಳಿತಾಯವಾಗಬೇಕು, ಪ್ರಧಾನಿಗಳು ಹೇಳಿದ ಕೃಷಿ ಆದಾಯದ ದ್ವಿಗುಣದ ದಾರಿಯೂ ಸುಲಭ ಆಗಬೇಕು. ಕೃಷಿಯಲ್ಲಿನ ಹಲವು ಸಮಸ್ಯೆಗಳ ನಿವಾರಣೆಗೆ ತಾಂತ್ರಿಕ ವಿಧಾನಗಳ ಬಳಕೆಯೂ ಇಂದು ಅಗತ್ಯವಾಗಿದೆ. ಇದಕ್ಕೆ ಯುವಕರ ವಿನೂತನ ಟೆಕ್ನಿಕಲ್ ಐಡಿಯಾಗಳೂ ಕಾರಣವಾಗುತ್ತದೆ.ಇಂತಹದ್ದೊಂದು ಐಡಿಯಾವನ್ನು ಯುವಕ ಉಣ್ಣಿಕೃಷ್ಣನ್ ಮಾಡಿದ್ದಾರೆ. ಹಲವು ಕೃಷಿಕರಿಗೆ ಈ ಐಡಿಯಾ ಮೆಚ್ಚುಗೆಯೂ ಆಗಿದೆ.
ಸರಕಾರ ಕೃಷಿ ಉಳಿಸಲು ಇನ್ನಿಲ್ಲದ ಸರಕಾರ ನೀಡುತ್ತಿದೆ. ಬಡ್ಡಿ ರಹಿತ ಸಾಲದಿಂದ ತೊಡಗಿ ಕೃಷಿ ಬೆಳವಣಿಗೆಗೆ ಏನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಮಾಡುತ್ತಿದೆ. ಹಾಗಿದ್ದರೂ ದೇಶದಲ್ಲಿ ಕೃಷಿಯಲ್ಲಿ ಭಾರೀ ಪ್ರಗತಿ ಕಾಣುತ್ತಿಲ್ಲ. ಇದಕ್ಕೆ ಹಲವು ಕಾರಣಗಳು ಇದ್ದರೂ, ತಾಂತ್ರಿಕ ಐಡಿಯಾ ಹೊಂದಿದ ಹಾಗೂ ಉತ್ಸಾಹದ ಯುವ ಕೃಷಿಕರು ಮಣ್ಣಿನ ಆರಾಧನೆಗೆ ಇಳಿಯದೇ ಇರುವುದೂ ಒಂದು ಕಾರಣ. ಹಾಗಿದ್ದರೂ ಈಗಾಗಲೇ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಕೆಲವು ಯುವ ಕೃಷಿಕರು ಉನ್ನತ ವ್ಯಾಸಾಂಗ ಮಾಡಿ ಹೊಸ ಹೊಸ ವಿಧಾನದ ಮೂಲಕ ಕೃಷಿ ಮಾಡುತ್ತಿದ್ದಾರೆ. ಈ ಮೂಲಕ ಕೃಷಿ ಬೆಳವಣಿಗೆಗೂ ಕಾರಣವಾಗುತ್ತಿದ್ದಾರೆ.
ಇದೀಗ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಉಣ್ಣಿಕೃಷ್ಣನ್ ಎಂಬ ಯುವಕ ಅವರ ಕೃಷಿ ಭೂಮಿಯಲ್ಲಿ ವಿವಿಧ ರೀತಿಯಲ್ಲಿ ತಾಂತ್ರಿಕ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಅಡಿಕೆ ಹಾಗೂ ರಬ್ಬರ್ ಬೆಳೆಯುವ ಇವರು ರಬ್ಬರ್ ಕೃಷಿಯಲ್ಲೂ ತಾಂತ್ರಿಕ ವಿಧಾನ ಬಳಕೆ ಮಾಡಿದರೆ, ಅಡಿಕೆ ಕೃಷಿಯಲ್ಲೂ ತಾಂತ್ರಿಕವಾಗಿಯೇ ಕೆಲಸ ಮಾಡುತ್ತಿದ್ದಾರೆ. ಈಗ ಬ್ರೆಶ್ ಕಟ್ಟರ್ ಮೂಲಕ ಕೆರೆಯಿಂದ ನೀರೆಳೆಯುವ ಪ್ರಯತ್ನ ಮಾಡಿದ್ದಾರೆ. ಒಂದೇ ಯಂತ್ರದ ಮೂಲಕ ವಿವಿಧ ಕೆಲಸಗಳು ಆಗಬೇಕು ಎನ್ನುವ ಯೋಚನೆಯಿಂದ ಪ್ರಯತ್ನ ಮಾಡುತ್ತಿರುವ ಉಣ್ಣಿಕೃಷ್ಣನ್, ಅಡಿಕೆ ತೋಟಕ್ಕೆ ಬೋರ್ಡೋ ಸಿಂಪಡಣೆಯ ಸಂದರ್ಭ ನೀರು ಅಗತ್ಯವಾಗಿದೆ, ಇದಕ್ಕೆ ಆನ್ ಲೈನ್ ಮೂಲಕ ಯಂತ್ರವನ್ನು ಹುಡುಕಿ ಅದನ್ನು ತರಿಸಿ ಬ್ರೆಶ್ ಕಟ್ಟರ್ ಗೆ ಅಳವಡಿಕೆ ಮಾಡಿದ್ದಾರೆ. ಈ ಮೂಲಕ ಹೊಸದೊಂದು ಪ್ರಯೋಗ ಮಾಡಿ ಯಶಸ್ಸು ಕಂಡಿದ್ದಾರೆ. ಎರಡು ನಿಮಿಷದ ಒಳಗೆ 200 ಲೀಟರ್ ನೀರನ್ನು ತುಂಬಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಉಣ್ಣಿಕೃಷ್ಣನ್. ಯುವಕರ ಇಂತಹ ವಿನೂತನ ಯೋಚನೆಗಳು ಕೃಷಿಕರಿಂದಲೂ ಬೆಂಬಲ ದೊರೆಯುತ್ತಿರುವುದು ಆಶಾದಾಯಕ ಬೆಳವಣಿಗೆ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…