Advertisement
ಸುದ್ದಿಗಳು

ಕೆಮಿಕಲ್ ಹೇರ್ ಡೈಗೆ ಹೇಳಿ ಟಾಟಾ: ಬಳಸಿ ನೈಸರ್ಗಿಕ ನೀಲಿ ಸೊಪ್ಪು

Share

ನೀಲಿ ಸೊಪ್ಪು (ಇಂಡಿಗೋ)
ನಮ್ಮ ವಾಡಿಕೆಯಲ್ಲಿ ನೀಲಿ ಸೊಪ್ಪು ಎನ್ನುವುದಕ್ಕಿಂತ ಇಂಡಿಗೋ ಎಂದರೆ ಜನರಿಗೆ ಬೇಗನೆ ಅರ್ಥವಾಗುತ್ತದೆ.
ಇದನ್ನು ಸಾಧಾರಣವಾಗಿ ಕೂದಲಿನ ಬಣ್ಣ ಬರಿಸಲು ಹಿಂದೆ ಶಾಯಿ ಎಂದರೆ ಇಂಕ್ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಈಗ ಇವೆರಡಕ್ಕೂ ಕೆಮಿಕಲ್ ಪ್ರವೇಶ ಆಗಿದೆ.
ಈಗಲೂ ನಾವು ಮನಸ್ಸು ಮಾಡಿದರೆ ಕೆಮಿಕಲ್ ಮುಕ್ತವಾಗಿ ಕೂದಲನ್ನು ಕಪ್ಪಾಗಿಸಬಹುದು.
ಇದಕ್ಕೆ ಪ್ರಮುಖ ಪಾತ್ರ ನೀಲಿ ಸೊಪ್ಪು ವಹಿಸುತ್ತದೆ ಬಣ್ಣ ಹಸಿರಾಗಿದ್ದರು ಸೊಪ್ಪನ್ನು ರುಬ್ಬಿದಾಗ ನೀಲಿ ಬಣ್ಣಕ್ಕೆ ತಿರುಗುತ್ತದೆ. ಹೂ ಗಾಢವಾದ ಗುಲಾಬಿ ಬಣ್ಣವನ್ನು ಹೋಲುತ್ತದೆ.
ನೋಡುವುದಕ್ಕೆ ಇದೇ ರೀತಿಯ ಗಿಡಗಳು ಇದೇ ಪ್ರಭೇದಕ್ಕೆ ಸೇರಿದ್ದು ಇರುತ್ತದೆ ಹಾಗಾಗಿ ಸರಿಯಾಗಿ ಮಾಹಿತಿಯನ್ನು ತಿಳಿದು ಇದನ್ನು ಉಪಯೋಗಿಸುವುದು ಒಳ್ಳೆಯದು.
ಹೊರಗಡೆ ಹಚ್ಚುವಾಗ ಸ್ವಲ್ಪ ಹೆಚ್ಚು ಕಡಿಮೆ ಆದರೂ ಪರವಾಗಿಲ್ಲ ಹೊಟ್ಟೆಗೆ ತೆಗೆದುಕೊಳ್ಳುವಾಗ ಮಾತ್ರ ಮಾಹಿತಿ ಇದ್ದವರಲ್ಲಿ ಸಂಗ್ರಹಿಸಿ ತೆಗೆದುಕೊಳ್ಳಿ.
ಇದರ ಸೊಪ್ಪು ಬೇರು ಎಲೆ ಹೂವು ಕಾಂಡ ಎಲ್ಲವೂ ಉಪಯೋಗಕ್ಕೆ ಬರುತ್ತದೆ.
1) ಇದರ ಸೊಪ್ಪನ್ನು ಅರೆದು ಮೂಲವ್ಯಾಧಿ ಮೊಳಕೆಗೆ ಹಚ್ಚುವುದರಿಂದ ಗುಣವಾಗುತ್ತದೆ.
2) ನಾಭಿಯ ಕೆಳಗೆ ಸೊಪ್ಪಿನ ಪೇಸ್ಟನ್ನು ಹಚ್ಚುವುದರಿಂದ ಮೂತ್ರ ಕಟ್ಟು ಸಲ್ಲಿಸಾಗಿ ಹೊರ ಹೋಗುತ್ತದೆ.
3) ನೀಲಿಯ ಹಸಿಯಾದ ಸೊಪ್ಪನ್ನು ಅರೆದು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ಹೊಟ್ಟು ನಿವಾರಣೆ ಆಗುತ್ತದೆ ಮತ್ತು ಬಣ್ಣ ಬರುತ್ತದೆ.
4) ಪ್ರಮುಖವಾಗಿ ನೀಲಿ ಸೊಪ್ಪನ್ನು ಉಪಯೋಗಿಸಿ ಅಳಲೆ ಕಾಯಿ, ತಾರೆ ಕಾಯಿ, ನೆಲ್ಲಿಕಾಯಿ,ವಾಯುವಿಳಂಗ, ಒಂದೆಲಗ, ನೀಲಿ ಸೊಪ್ಪುಮದರಂಗಿ,ಹೊನಗನ್ನೆ, ಭೃಂಗರಾಜ ಸೊಪ್ಪು ಇಲಿ ಕಿವಿ ಸೊಪ್ಪು ವಿಳ್ಯದೆಲೆ ಕೆಂಪು ದಾಸವಾಳ ಹೂವು ಗರಗ ಸೊಪ್ಪು ನಾಮಧಾರಿ ಸೊಪ್ಪು, ಗಾಂಧಾರಿ ಸೊಪ್ಪು, ಕರಿಬೇವಿನ ಸೊಪ್ಪು, ಆಲದ ಮರದ ಬಿಳಲು, ಅಂತರ ಗಂಗೆ, ದಡಸಲು ಸೊಪ್ಪು,ಮಲ್ಲಿಗೆ ಹೂ, ಜಟಮಾಸಿ ಇವುಗಳನ್ನು ಕುಟ್ಟಿ ಪುಡಿಪುಡಿ ಮಾಡಿ ಬಾಳೆಯ ದಿಂಡಿನ ಸರದಲ್ಲಿ ಪೇಸ್ಟ್ ಮಾಡಿ ಒಣಗಿಸಿ ಸೋಪು ಮತ್ತು ಎಣ್ಣೆಗೆ ಉಪಯೋಗಿಸುತ್ತೇನೆ.
ಅಗತ್ಯ ಇದ್ದವರು ಉಪಯೋಗ ಪಡೆಯಬಹುದು
5) ಸುಮಾರು ಎರಡು ಚಮಚದಷ್ಟು ರಸವನ್ನು ಅಷ್ಟೇ ಹಾಲಿನೊಂದಿಗೆ ಸೇರಿಸಿ ಹೊಟ್ಟೆಗೆ ತೆಗೆದುಕೊಳ್ಳುವುದರಿಂದ ಹುಚ್ಚುನಾಯಿ ಕಡಿತದ ವಿಷ ಗುಣವಾಗುತ್ತದೆ ಮತ್ತು ಕಚ್ಚಿದ ಜಾಗಕ್ಕೆ ಇದರ ಪೇಸ್ಟನ್ನು ಹಚ್ಚಬೇಕು ಕೆಲವರಿಗೆ ತಲೆನೋವು ಬರಬಹುದು ಭಯಪಡುವ ಅಗತ್ಯ ಇಲ್ಲ.
6) ಬೇರಿನ ನಯವಾದ ಪುಡಿಯನ್ನು ಹಲ್ಲಿನ ಒಳಗಡೆಗೆ ತುಂಬುವುದರಿಂದ ಹಲ್ಲು ನೋವು ನಿವಾರಣೆ ಆಗುತ್ತದೆ.
7) ನೀಲಿ ಸೊಪ್ಪಿನ ಪೇಸ್ಟನ್ನು ಹಚ್ಚುವುದರಿಂದ ಸರ್ಪ ಸುತ್ತು ಗುಣವಾಗುತ್ತದೆ.
8) ತಲೆಯಲ್ಲಿ ಆಗುವ ಜಿರಳೆ ಹುಣ್ಣಿಗೆ ಇದರ ಪೇಸ್ಟ್ ಒಳ್ಳೆಯ ಔಷಧಿ.
9) ಸೊಪ್ಪಿನ ಪೇಸ್ಟನ್ನು ಕೆಚ್ಚಲಿಗೆ ಹಚ್ಚುವುದರಿಂದ ಕೆಚ್ಚಲ ಬಾವು ನಿವಾರಣೆ ಯಾಗುತ್ತದೆ. ಇದು ತಲೆಮಾರಿನಿಂದ ಕೆಚ್ಚಲು ಬಾವಿಗೆ ಉಪಯೋಗಿಸಿಕೊಂಡು ಬಂದ ಔಷಧಿ.
10) ನೀಲಿ ಬೀಜವನ್ನು ಚೆನ್ನಾಗಿ ಅರೆದು ವಸ್ತ್ರಗಾಳಿದ ಚೂರ್ಣ ಮಾಡಿ ಕಣ್ಣಿಗೆ ಅಂಜನ ಇಡುವುದರಿಂದ ಕಣ್ಣಿನ ಪೊರೆ ನಿವಾರಣೆಯಾಗುತ್ತದೆ.
11) ಆಕಸ್ಮಿಕವಾಗಿ ಯಾವುದೇ ಕಬ್ಬಿಣ ಅಥವಾ ಇನ್ನಿತರೆ ಧಾತುಗಳು ದೇಹದಲ್ಲಿ ಸೇರಿಕೊಂಡಾಗ ಇದರ ಕಷಾಯವನ್ನು ಕುಡಿಯುತ್ತಾ ಬಂದರೆ ಅದು ನಿವಾರಣೆಯಾಗುತ್ತದೆ.
12) ಇದರ ಕಷಾಯ ಕುಡಿಯುತ್ತಾ ಬಂದರೆ ಚರ್ಮರೋಗ ನಿವಾರಣೆ ಆಗುತ್ತದೆ.
*ವಿಶೇಷ ಸೂಚನೆ*
13) ಹೊಟ್ಟೆಗೆ ತೆಗೆದುಕೊಳ್ಳುವಾಗ ಭೇದಿ ಆಗುವ ಸಾಧ್ಯತೆ ಹೆಚ್ಚು.

Advertisement
Advertisement
Advertisement
Advertisement

🥢 ಸುಮನಾ ಮಳಲಗದ್ದೆ 9980182883.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

11 hours ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

2 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

3 days ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

3 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

4 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

4 days ago