Advertisement
ಸುದ್ದಿಗಳು

ಎ.9 : ವಳಲಂಬೆಯಲ್ಲಿ ಯಕ್ಷಗಾನ ಬಯಲಾಟ | ಕಲಾವಿದ ರೆಂಜಾಳ ರಾಮಕೃಷ್ಣ ರಾವ್ ಅವರಿಗೆ ಗೌರವಾರ್ಪಣೆ |

Share

ಯಕ್ಷಗಾನ ಕಲಾಭಿಮಾನಿ ಮಿತ್ರರ ವತಿಯಿಂದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಎ.9 ರಂದು  ಭಾನುವಾರ ಪಾವಂಜೆ ಮೇಳದಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಈ ಸಂದರ್ಭ ಹಿರಿಯ ಕಲಾವಿದ ರೆಂಜಾಳ ರಾಮಕೃಷ್ಣ ರಾವ್ ಇವರಿಗೆ ಗೌರವಾರ್ಪಣೆ ನಡೆಯಲಿದೆ.

Advertisement
Advertisement

ಕಳೆದ ಎರಡು ವರ್ಷಗಳಿಂದ ಯಕ್ಷಗಾನ ಕಲಾಭಿಮಾನಿ ಮಿತ್ರರ ವತಿಯಿಂದ ಯಕ್ಷಗಾನ ಬಯಲಾಟ ನಡೆಸಲಾಗುತ್ತಿದೆ. ಕಲಾಸೇವೆ ಹಾಗೂ ಕಲಾವಿದರಿಗೆ ಪ್ರೋತ್ಸಾಹದ ಉದ್ದೇಶದಿಂದ ನಡೆಸಲಾಗುತ್ತಿರುವ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ  ಈ ಬಾರಿ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಪಾವಂಜೆ ಮೇಳದ ವತಿಯಿಂದ ಶ್ರೀ ದೇವಿ ಲಲಿತೋಪಾಖ್ಯಾನ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಇದೇ ಸಂದರ್ಭ ಕಲಾವಿದರಿಗೆ ಗೌರವಾರ್ಪಣೆ ಕೂಡಾ ನಡೆಯಲಿದೆ. ಈ ಬಾರಿ ಹಿರಿಯ ಕಲಾವಿದ ರೆಂಜಾಳ ರಾಮಕೃಷ್ಣ ರಾವ್ ಇವರಿಗೆ ಗೌರವಾರ್ಪಣೆ ನಡೆಯಲಿದೆ.  ಪಾವಂಜೆ ಮೇಳದ ಸಂಚಾಲಕ, ಪ್ರಸಿದ್ಧ ಭಾಗವತ ಯಕ್ಷಧ್ರುವ ಸತೀಶ್‌ ಶೆಟ್ಟಿ ಪಟ್ಲ ಅವರು ಯಕ್ಷಗಾನ ಕಲಾಭಿಮಾನಿ ಮಿತ್ರರ ಪರವಾಗಿ ಗೌರವಾರ್ಪಣೆ ನಡೆಸಲಿದ್ದಾರೆ.

Advertisement

ರಾಮಕೃಷ್ಣ ರಾವ್ ಇವರು ಸುಳ್ಯ ತಾಲೂಕು ಮರ್ಕಂಜ ಗ್ರಾಮದ ರೆಂಜಾಳ ಎಂಬಲ್ಲಿ ದಿ.ವೆಂಕಟರಮಣಯ್ಯ ಹಾಗೂ ಯಮುನಮ್ಮ ದಂಪತಿ ಪ್ರಥಮ ಪುತ್ರರಾಗಿ  ಜನಿಸಿದರು. ಪ್ರೌಢಶಾಲಾ ಶಿಕ್ಷಣದ ಬಳಿಕ ಹೆಸರಾಂತ ಕಲಾವಿದರಾದ ಕುದ್ಕಾಡಿ ವಿಶ್ವನಾಥ ರೈ ಗಳಲ್ಲಿ ಭರತನಾಟ್ಯದ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಯಕ್ಷಗಾನ ಆಟ-ಕೂಟಗಳ ವಾತಾವರಣದಿಂದ ಪ್ರಭಾವಿತರಾಗಿ ಯಕ್ಷಗಾನ ಕಲೆಯ ಸೆಳೆತಕ್ಕೆ ಒಳಗಾದರು. ಅಗರಿ ಶ್ರೀನಿವಾಸ ಭಾಗವತರ ಆಶೀರ್ವಾದದೊಂದಿಗೆ ಪ್ರಪ್ರಥಮವಾಗಿ ಕೂಡ್ಲು ಮೇಳದಲ್ಲಿ ಗೆಜ್ಜೆ ಕಟ್ಟಿ ವೃತ್ತಿ ರಂಗಕ್ಕೆ ಪಾದಾರ್ಪಣೆ ಮಾಡಿ ಬಳಿಕ ಹಂತ ಹಂತವಾಗಿ ಯಕ್ಷಗಾನ ನಾಟ್ಯ ಕಲೆಯಲ್ಲಿ ಪ್ರಭುತ್ವ ಸಾಧಿಸಿದರು.

Advertisement
ಕೂಡ್ಲು, ಮಡಿಕೇರಿ ಮೇಳಗಲ್ಲಿ 5 ವರ್ಷ, ಹವ್ಯಾಸಿಯಾಗಿ 3 ವರ್ಷ ಅನುಭವ ಗಳಿಸಿದ ಇವರು ಸುಮಾರು 40 ವರ್ಷಗಳ ಕಾಲ ಶ್ರೀ ಕಟೀಲು ಮೇಳದ ಪ್ರಧಾನ ಕಲಾವಿದರಲ್ಲಿ ಒಬ್ಬರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು. ಶ್ರೀ ದೇವಿ, ಸುಭದ್ರೆ, ದಮಯಂತಿ, ಯಶೋಧೆ, ಹಿರಣ್ಯಾಕ್ಷ, ಇಂದ್ರಜಿತು, ದೇವೇಂದ್ರ, ಪಂಡಿತ, ವಿಜಯ, ಮಕರಂದ, ದಕ್ಷ, ಕೊರವಂಜಿ ಹೀಗೆ, ವೈವಿಧ್ಯಮಯ ಪಾತ್ರಗಳಲ್ಲಿ ಪ್ರೇಕ್ಷಕರ ಮನಸೂರೆಗೊಂಡವರು.
ಪರಂಪರಾಗತ ಶೈಲಿಯ ಬಣ್ಣಗಾರಿಕೆ ಹಾಗೂ ನಾಟ್ಯ ವಿಧಾನದ ಸಂಪನ್ಮೂಲವಾಗಿ ಗುರುತಿಸಲ್ಪಟ್ಟಿರುವುದು ಇವರ ಕಲಾ ನೈಪುಣ್ಯತೆಗೆ ಸಾಕ್ಷಿ. ಶ್ರೀ ಕಟೀಲು ಅಸ್ರಣ್ಣ ಪ್ರಶಸ್ತಿ, ಮುಂಚೂರು ನಾರಾಯಣ ಭಟ್ ಪ್ರಶಸ್ತಿ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಸಿರಿ ಪ್ರಶಸ್ತಿಗಳೇ ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳಲ್ಲದೆ ನೂರಕ್ಕೂ ಹೆಚ್ಚಿನ ಸನ್ಮಾನಗಳಿಗೆ ಭಾಜನರಾಗಿರುವುದು ಇವರ ಶ್ರೇಷ್ಠತೆಯ ದ್ಯೋತಕವಾಗಿದೆ.
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೋವಿ ಠೇವಣಾತಿ ಪ್ರಕರಣ | ಬೆಳ್ಳಾರೆ ಜಯಪ್ರಸಾದ್ ಜೋಶಿ ಹಾಗೂ ಇತರ 4 ರಿಟ್ ಅರ್ಜಿದಾರರ ಪರ ಹೈಕೋರ್ಟ್ ಆದೇಶ‌ |

ಚುನಾವಣಾ ಸಮಯದಲ್ಲಿ ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು…

43 mins ago

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ | ಯಾಕೆ ಗೊತ್ತಾ…?

ದೇಸೀ ಗೋವು ಅದರಲ್ಲೂ ಮಲೆನಾಡು ಗಿಡ್ಡ ತಳಿಯ ಹಸು ಉಳಿಯಬೇಕು, ಅದರ ಉಳಿವು…

2 days ago

ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!

ದಿನದಿಂದ ದಿನಕ್ಕೆ ತಾಪಮಾನ(Temperature) ಏರುತ್ತಿದೆ. ಬಿಸಿ ಗಾಳಿ(Heat wave) ಬೀಸುತ್ತಿದೆ. ನೀರಿಗೆ ಅಭಾವ(Water…

2 days ago

ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ

ವಿಶ್ವ ವಿದ್ಯಾಲಯ ಕಾಲೇಜು, ನೆಲ್ಯಾಡಿಯ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ…

2 days ago

ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |

ಹೆಚ್ಚಿನ ಪಾಲಕರು(Parents) ಮಕ್ಕಳನ್ನು(Children) ಹೆತ್ತ ನಂತರ ಅವರನ್ನು ಶಿಕ್ಷಣದ ವ್ಯವಸ್ಥೆ(Education system) ಮಾಡುವುದು…

2 days ago

ಕೊನೆಗೂ ಗಾಂಧಿ ಕುಡಿಗಳ ಕ್ಷೇತ್ರ ಫಿಕ್ಸ್‌ | ರಾಯ್ ಬರೇಲಿಯಿಂದ ಪ್ರಿಯಾಂಕಾ, ಅಮೇಥಿಯಿಂದ ರಾಹುಲ್ ಸ್ಪರ್ಧೆ ಬಹುತೇಕ ಖಚಿತ |

ಅಮೇಥಿ(Amethi) ಮತ್ತು ರಾಯ್ ಬರೇಲಿ(Raebareli)  ಉತ್ತರ ಪ್ರದೇಶದ(Uttar Pradesh) ಈ ಎರಡು ಕ್ಷೇತ್ರಗಳು…

2 days ago