ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳು ಮಾರುಕಟ್ಟೆಯಲ್ಲಿ ನಾನಾ ರೀತಿಯಲ್ಲಿ ದೊರಕುತ್ತದೆ.ಇಲ್ಲಿ ವಿವಿಧ ಹೆಸರಿನ ಪಾನ್ ಮಸಾಲ, ಗುಟ್ಕಾ,ಸಿಹಿ ಸುಪಾರಿ ಇತ್ಯಾದಿಗಳು ಲಭ್ಯವಿದೆ.
ಪಾನ್ ಮಸಾಲ ಮತ್ತು ಗುಟ್ಕಾ : ಇದನ್ನು ಹೆಚ್ಚಾಗಿ ಕೆಂಪು ಅಡಿಕೆಯಿಂದ ತಯಾರಿಸಲಾಗುತ್ತದೆ.ಇದರೊಂದಿಗೆ ಚಾಲಿ ಅಡಿಕೆಯ ಬಳಕೆ ಇದ್ದರೂ ಅದು ಅಲ್ಪ ಪ್ರಮಾಣದಲ್ಲಿ ಮಾತ್ರ. ಚಾಲಿಯಲ್ಲಿ ದೊರಕುವ ಕೆಳ ದರ್ಜೆಯ ಅಡಿಕೆ ಇಲ್ಲಿ ಉಪಯೋಗಿಸುವುದೂ ಇದೆ. ಪಾನ್ ಮಸಾಲ ತಯಾರಿಸಲು ಕತ್ತ,ಸುಣ್ಣ,ಕೇಸರಿ,ಸುಗಂಧ ದ್ರವ್ಯಗಳು ಇತ್ಯಾದಿ ಬಳಸಿ ಉತ್ಪಾದಿಸಲಾಗುತ್ತದೆ.
ಮೇಲೆ ತಿಳಿಸಿದ ಎಲ್ಲಾ ವಸ್ತುಗಳೊಂದಿಗೆ ತಂಬಾಕು ಮತ್ತು ಕೆಲವು ರಾಸಾಯನಿಕಗಳು ಸೇರಿದ ಉತ್ಪನ್ನವೇ ಗುಟ್ಕಾ ಆಗಿದೆ.ಈ ರೀತಿಯ ಪಾನ್ ಮಸಾಲ ಮತ್ತು ಗುಟ್ಕಾಗಳನ್ನು ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ವರ್ಗದ ಜನರೂ ಬಳಸುತ್ತಾರೆ. ಇಂತಹ ಉತ್ಪನ್ನಗಳಿಗೆ ಗುಜರಾತ್,ಮಹಾರಾಷ್ಟ್ರ,ಬಿಹಾರ,ಒಡಿಶಾ,ಮದ್ಯ ಪ್ರದೇಶ, ಉತ್ತರ ಪ್ರದೇಶ, ಈಶಾನ್ಯ ಭಾರತದ ರಾಜ್ಯಗಳು ಇಲ್ಲೆಲ್ಲಾ ಅಧಿಕ ಬೇಡಿಕೆ ಇದ್ದರೆ ಅಲ್ಲಿಗೆ ಹೋಲಿಸಿದಾಗ ದಕ್ಷಿಣ ಭಾರತದಲ್ಲಿ ಇವಕ್ಕೆ ಬೇಡಿಕೆ ಕಡಿಮೆ.
ಬೀಡಾದ ಸೇವನೆಯಿಂದ ಹಲ್ಲು ಕೆಂಪು ಆಗುವುದರಿಂದ ಗ್ರಾಹಕರು ಗುಟ್ಕಾ, ಪಾನ್ ಮಸಾಲಗಳಿಗೆ ಶರಣಾಗುತ್ತಿದ್ದು ಇವುಗಳ ಸೇವನೆಯಿಂದ ಕೆಲಸದ ಒತ್ತಡ ನಿವಾರಣೆ, ಏಕಾಂತದಿಂದ ದೂರವಿರಲು ಸಹಕಾರಿ ಆಗುತ್ತದೆ ಎಂಬ ನಂಬಿಕೆ ಇದರ ಗ್ರಾಹಕರದ್ದಾಗಿದೆ.
ಪಾನ್ ಮಸಾಲ ಮತ್ತು ಗುಟ್ಕಾಗಳಲ್ಲಿ ವಿವಿಧ ವರ್ಗ ಮತ್ತು ನಮೂನೆಗಳು ಇವೆ.ಉದಾಹರಣೆಗೆ ರಜನಿ ಗಂದ,ವಿಮಲ್,ಖಾಲೇಜ,ರೆಬೆಲ್,ಮಾಣಿಕ್ ಚಂದ್, ಪಾನ್ ಪರಾಗ್, ಮಾರುತಿ ಇತ್ಯಾದಿ. ಇವುಗಳಲ್ಲಿ ಪ್ರೀಮಿಯಂ, ಸಿಲ್ವರ್ ಕೌಟೆಡ್,ಇತ್ಯಾದಿ ವರ್ಗಗಳಿವೆ.ಗ್ರಾಹಕರ ರುಚಿಗೆ ಅನುಗುಣವಾಗಿ ಇವು ಮಾರಾಟ ಆಗುತ್ತದೆ. ದೇಶದಾದ್ಯಂತ ಇವುಗಳಿಗೆ ಹಳ್ಳಿ, ಪಟ್ಟಣ ಎಂಬ ವ್ಯತ್ಯಾಸ ಇಲ್ಲದೆ ಇವು ಮಾರಾಟ ಆಗುತ್ತಿದೆ.
ಒಂದು ಮಾರುಕಟ್ಟೆ ಸಮೀಕ್ಷಾ ವರದಿ ಪ್ರಕಾರ ಭಾರತದಲ್ಲಿ ಸುಮಾರು 45 ಸಾವಿರ ಕೋಟಿ ರೂಪಾಯಿಗಳಷ್ಟು ವಾರ್ಷಿಕ ವ್ಯವಹಾರ ಈ ಉತ್ಪನ್ನಗಳಿಂದ ಆಗುತ್ತಿದೆ. ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 12.1 ರಷ್ಟು ಜನ ಇದರ ಸೇವನೆ ಮಾಡುತ್ತಿದ್ದಾರೆ ಎನ್ನುತ್ತಿದೆ ಈ ವರದಿ.ಇದರ ಪ್ರಕಾರ ಗುಜರಾತಿನ ಶೇಕಡಾ 69.16 ಇವುಗಳನ್ನು ಬಳಸಿದರೆ ಅತೀ ಕಡಿಮೆ ಅಂದರೆ ಉತ್ತರ ಪ್ರದೇಶದಲ್ಲಿ ಈ ಪ್ರಮಾಣ ಶೇಕಡಾ 24.25 ಆಗಿದೆ. ಈ ಎಲ್ಲಾ ಉತ್ಪನ್ನಗಳನ್ನು ಬೇರೆ ಬೇರೆ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಗುಟ್ಕಾ ಮತ್ತು ಪಾನ್ ಮಸಾಲ ಉತ್ಪನ್ನಗಳೂ ಪಾಕಿಸ್ತಾನ,ಬಾಂಗ್ಲಾ ದೇಶ,ಶ್ರೀಲಂಕಾ,ಇಂಗ್ಲೆಂಡ್,ಅಮೆರಿಕ ಮುಂತಾದ ರಾಷ್ಟ್ರಗಳಿಗೆ ಭಾರತದಿಂದ ರಫ್ತು ಆಗುತ್ತದೆ.
ಸಿಹಿ ಸುಪಾರಿ : ದೇಶದ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಸಿಹಿ ಸುಪಾರಿಗಳು ಲಭ್ಯವಿದ್ದು ಅವುಗಳಿಗೆ ಹೆಚ್ಚಿನ ಬೇಡಿಕೆ ಇದೆ.ಇವು ಪ್ಯಾಕೆಟ್ ಮತ್ತು ಡಬ್ಬಗಳಲ್ಲಿ ಗ್ರಾಹಕರಿಗೆ ಪೂರೈಸಲಾಗುತ್ತದೆ.ಇವುಗಳಲ್ಲಿ ಫ್ಲೇವರ್ಡ್, ಸೆನ್ಟೆಡ್, ಸಿಲ್ವರ್ ಕೋಟಡ್,ಕೇಸರ್,ಮಿಲ್ಕ್ ಕೋಟೆಡ್, ಏಲಕ್ಕಿ, ಗುಲಾಬಿ ಪೈನಾಪಲ್, ಸನ್ನಿ ರಾಯಲ್ ಮುಂತಾದವುಗಳ ಪರಿಮಲಗಳಲ್ಲಿವೆ.
ಮಾರುಕಟ್ಟೆಯಲ್ಲಿ ಲಭ್ಯ ಇರುವ ಬ್ರಾಂಡಗಳಲ್ಲಿ ಮುಖ್ಯ ಆದವುಗಳೆಂದರೆ ಕ್ಯಾಂಪ್ಕೊ ಕಾಜು ಸುಪಾರಿ, ಶಿರಸಿಯ ತೋಟಗಾರ್ಸ್ ಸಹಕಾರಿಯ ಟಿ ಎಸ್ ಎಸ್ ಟೈಗಾರ್, ಅರ್ಜುನ್,ಗೋಲ್ಡ್, ಟ್ರೈನ್,ಸ್ಪೂರ್ತಿ.ಇನ್ನು ರಾಷ್ಟ ಮಟ್ಟದ ರಾಜಾಜಿ ಆನ್ಲೈನ್,ಮಿಲನ್, ನೇಚರಲ್ಸ್ ಬೈಟ್, ದೆಲೈಟ್, ಚಾರ್ಮಿನ್, ಭಾವೆ ಬುಲಿಯನ್ ಇತ್ಯಾದಿಗಳು. ಈ ಎಲ್ಲಾ ಉತ್ಪನ್ನಗಳಿಗೆ ವಿದೇಶದಲ್ಲೂ ಬೇಡಿಕೆ ಇದ್ದು,ಇವನ್ನು ಹೆಚ್ಚಿನ ಪ್ರಮಾಣದಲ್ಲಿ ನಮ್ಮಲ್ಲಿಂದ ರಫ್ತು ಮಾಡಲಾಗುತ್ತಿದೆ.
ಗಮನಿಸಬೇಕಾದ ಅಂಶಗಳು..
ಮೇಲಿನ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಯಿಂದಾಗಿ ನಾನಾ ರೀತಿಯ ಉಪ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿ ಅವುಗಳ ಮಾರುಕಟ್ಟೆಯೂ ವಿಸ್ತರಿಸುತ್ತಿದೆ. ಇದರೊಂದಿಗೆ ಉದ್ಯೋಗ ಅವಕಾಶ,ಆದಾಯ ಇವೆಲ್ಲಾ ಹೆಚ್ಚು ಆಗಲು ಅವಕಾಶ ಆಗಿದೆ.
ಮೈಸೂರಿನಲ್ಲಿ ಕಾರ್ಯಾಚರಿಸುತ್ತಿರುವ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕಾ ಕಂಪನಿ "ಬ್ರಿವೆರಾ"ದಲ್ಲಿ ಉದ್ಯೋಗಾವಕಾಶಗಳು ಇವೆ. ಐಟಿಐ,…
ಕೊಂಕಣ, ಗೋವಾ, ಮಹಾರಾಷ್ಟ್ರ, ಕೇರಳ, ಕರ್ನಾಟಕ, ಚಂಡೀಗಢ, ಬಿಹಾರ ಸೇರಿದಂತೆ ಹಲವು ರಾಜ್ಯಗಳ…
ರಾತ್ರಿ ಊಟ ಮಾಡಿ ಮಲಗಿದ್ದ ಒಂದೇ ಕುಟುಂಬದ ಮೂವರು ಹೊಟ್ಟೆ ನೋವಿನಿಂದ ಸಾವನಪ್ಪಿದ …
ಇಂದು ವಿಶ್ವ ಮಾವು ದಿನಾಚರಣೆ. ಪ್ರತೀ ವರ್ಷ ಜುಲೈ 22 ರಂದು ಮಾವಿನಹಣ್ಣಿನ…
ಪ್ರತಿಯೊಂದು ಜನನ ಮರಣದ ನೋಂದಣಿ ಕಡ್ಡಾಯವಾಗಿದ್ದು, ಘಟನೆ ಸಂಭವಿಸಿದ 21 ದಿನಗಳೊಳಗೆ ನಗರ/…
ಈ ಗಿಡದ ಸಸ್ಯ ಶಾಸ್ತ್ರೀಯ ಹೆಸರು Andrographis Paniculata. ಕಿರಾತಕಡ್ಡಿಗೆ ನೆಲಬೇವು ಎಂಬ…