ದೇಶದ ಪ್ರಮುಖ ಆಹಾರ ಬೆಳೆಯಾದ ಭತ್ತದ 11290 ವೈವಿಧ್ಯಮಯ ತಳಿಗಳನ್ನು ಒಂದೇ ಜಾಗದಲ್ಲಿ ಬಿತ್ತನೆ ಮಾಡಿ, ಏಕಕಾಲದಲ್ಲಿ ಬೆಳೆಸುವ ಮೂಲಕ ಮಹತ್ವದ ಸಂಶೋಧನೆಗೆ ಮಂಡ್ಯ ತಾಲ್ಲೂಕಿನ ವಿ.ಸಿ.ಫಾರಂನಲ್ಲಿರುವ ಬೆಂಗಳೂರು ಕೃಷಿ ವಿವಿಯ ವಲಯ ಕೃಷಿ ಸಂಶೋಧನಾ ಕೇಂದ್ರ ಮುಂದಾಗಿದೆ.
ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ವಿಭಾಗದ ನಿರ್ದೇಶನದ ಮೇರೆಗೆ ನಡೆಯುತ್ತಿರುವ ಈ ಸಂಶೋಧನಾ ಕಾರ್ಯಕ್ಕೆ ವಿ.ಸಿ.ಫಾರಂ ಸೇರಿದಂತೆ ರಾಜ್ಯಮಟ್ಟದ 14 ಕೃಷಿ ಸಂಶೋಧನಾ ಸಂಸ್ಥೆಗಳು ಮತ್ತು ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳು ಕೈಜೋಡಿಸಿದ್ದು, ಐದು ವರ್ಷಗಳ ಸಂಶೋಧನೆಗೆ ಒಟ್ಟು 50 ಕೋಟಿ ಮೀಸಲಿಡಲಾಗಿದೆ. ಅಧಿಕ ಇಳುವರಿ ಮತ್ತು ರೋಗ ಇರೋಧಕ ಗುಣಗಳಿರುವ ಸುಧಾರಿತ ತಳಿಗಳನ್ನು ಅಭಿವೃದ್ಧಿ ಪಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸದ್ಯ ವಿ.ಸಿ.ಫಾರಂನಲ್ಲಿ ವೈವಿಧ್ಯಮಯ ತಳಿಗಳನ್ನು ಕಾಣಬಹುದಾಗಿದೆ.
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಗುಣಮಟ್ಟದ ಹತ್ತಿ ಉತ್ಪನ್ನ ಖರೀದಿಸಲು ಯಾದಗಿರಿ…
ಮಂಡ್ಯ ಜಿಲ್ಲೆಯಲ್ಲಿ ಭತ್ತ, ರಾಗಿ ಖರೀದಿಗೆ ರೈತರ ನೋಂದಣಿ ಕೇಂದ್ರಗಳನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು…
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಒದಗಿಸಲು ಗ್ರಾಮಸ್ಥರ…
ಭಾರತೀಯ ದೂರಸಂಪರ್ಕ ಇಲಾಖೆ (BSNL) ಭಾರತದ ಮೊದಲ ಉಪಗ್ರಹದಿಂದ ಸಂಪರ್ಕ ಸಾಧನದ ಸೇವೆಯನ್ನು…
ಉತ್ತಮ ಪೋಷಕಾಂಶ ಹೊಂದಿರುವ ಸಿರಿಧಾನ್ಯ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ಚಿತ್ರದುರ್ಗ…
ಇಡೀ ಸಮುದಾಯ ಮತ್ತು ದೇಶದ ದೃಷ್ಠಿಯಿಂದ ನೋಡಿದರೆ ಅಕ್ಕಿಯನ್ನು ಬೆಳೆಸುವ ಕೃಷಿಕರನ್ನು ಪ್ರೋತ್ಸಾಹಿಸುವ…