#Drougt | ಕಾವೇರಿ ಮೇಲೆ ಕೃಪೆ ತೋರದ ವರುಣನ | ಬೇಗ ಮಳೆ ಬಾರದಿದ್ದರೆ ಅನ್ನದಾತರ ಪರಿಸ್ಥಿತಿ ಸಂಕಷ್ಟ |

June 29, 2023
7:47 PM

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮುಂಗಾರು ತಕ್ಕ ಮಟ್ಟಿಗೆ ಕೃಪೆ ತೋರಿದ್ದರು, ಕಾವೇರಿ #Couvery ಜಲಾನಯನ ಪ್ರದೇಶದಲ್ಲಿ ಇನ್ನು ಮಳೆರಾಯ ಮುನಿಸಿಕೊಂಡಿದ್ದಾನೆ. ಎಂದಿನಂತೆ ಮುಂಗಾರು ಮಳೆ ಸುರಿಯುತ್ತಿದ್ದರೆ, ಮೈಸೂರು ಕೆಆರ್ ಎಸ್ ಡ್ಯಾಂ #KRSDam ತುಂಬಬೇಕಿತ್ತು. ಆದರೆ ಈಗ ನೀರು ಖಾಲಿಯಾಗಿ ಕಾವೇರಿ ಮಾತೆ ಒಣಗಿ ಹೋಗಿದ್ದಾಳೆ.ರೈತರು ಸಂಕಷ್ಟದಲ್ಲಿದ್ದಾರೆ.

ಕಾವೇರಿ ಜಲಾಯನ ಪ್ರದೇಶದಲ್ಲಿ ಮಳೆಗಾಗಿ ಅನ್ನದಾತರು ಕಾದು ಕುಳಿತಿದ್ದಾರೆ. ಬೆಳೆದ ಬೆಳೆಗೆ ನೀರು ಹರಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಜಲ ಕ್ಷಾಮದಿಂದ ಮುಂಬರುವ ದಿನಗಳಲ್ಲಿ ಕುಡಿಯುವ ಹನಿ ನೀರಿಗೂ ಜನ ಪರಿತಪಿಸುವಂತಹ ಪರಿಸ್ಥಿತಿ ಎದುರಾಗುವ ಲಕ್ಷಣಗಳಿವೆ.

ಕಾವೇರಿ ಜಲಾಯನ ಪ್ರದೇಶದ  ಮೇಲೆ ವರುಣ ಮುನಿಸಿಕೊಂಡಂತಿದೆ. ಮುಂಗಾರು ಮಳೆ ಕೈ ಕೊಟ್ಟಿದ್ದು ಕನ್ನಂಬಾಡಿ ಕಟ್ಟೆಯ ಒಡಲು ಬರಿದಾಗುತ್ತಿದ್ರೆ ಇತ್ತ ನಾಲೆಗಳಲ್ಲಿ ನೀರಿಲ್ಲದೆ ರೈತರು ಬೆಳೆದ ಬೆಳೆಗೆ ನೀರು ಹರಿಸಲಾಗದೆ ಕಂಗಾಲಾಗಿದ್ದಾರೆ. ಸಕ್ಕರೆ ನಗರಿ ರೈತರ ಬವಣೆ ಯಾವ ರೀತಿಯಾಗಿದೆ ಅನ್ನುವುದರ ಒಂದು ರಿಪೋರ್ಟ್ ನಿಮ್ಮ ಮುಂದೆ. …. ಕಣ್ಣಾಡಿಸಿದ ಕಡೆಯಲ್ಲ ಬೆಳೆದು ನಿಂತ ಕಬ್ಬು.. ಮತ್ತೊಂದೆಡೆ ನೀರಿಲ್ಲದ ಬತ್ತಿರುವ ನಾಲೆಗಳು.. ಇತ್ತ ನೀರಿಲ್ಲದೆ ಒಣಗುತ್ತಿರುವ ಬೆಳೆದು ನಿಂತ ಕಬ್ಬಿನ ಬೆಳೆ.. ಏನು ಮಾಡಬೇಕೆಂದು ಕಂಗೆಟ್ಟಿರುವ ರೈತ. ಈ ಎಲ್ಲಾ ದೃಶ್ಯ ಕಣ್ಣಿಗೆ ರಾಚಿದ್ದು ಮಂಡ್ಯ ಜಿಲ್ಲೆ ಮಂಡ್ಯ ತಾಲೂಕಿನ ಕಿರುಗಾವಲಿನಲ್ಲಿ. ಹೌದು ಮುಂಗಾರು ಮಳೆ ಕೈ ಕೊಟ್ಟ ಬೆನ್ನಲ್ಲೆ ಸಕ್ಕರೆ ನಗರಿ ಮಂಡ್ಯದಲ್ಲಿ ಬರದ ಛಾಯೆ ಮೂಡಿದೆ. ಇತ್ತ ಬಿತ್ತಲು ಆಗದೆ ಅತ್ತ ಬೆಳೆದು ನಿಂತ ಬೆಳೆಗಳಿಗು ನೀರು ಹರಿಸಲಾಗದೆ ಅನ್ನದಾತ ಪರದಾಡುತ್ತಿದ್ದಾನೆ. ಜುಲೈ 5 ರೊಳಗೆ ಮಳೆ ಬಾರದೆ ಹೋದರೆ ಅನ್ನದಾತ ಶೋಚನೀಯ ಪರಿಸ್ಥಿತಿಗೆ ಬಂದು ತಲುಪಲಿದ್ದಾನೆ.

ಕಾವೇರಿ ಜಲಾಯನ ಪ್ರದೇಶದಲ್ಲಿ ಮಳೆ ಆಗ್ತಾಯಿಲ್ಲ ಕನ್ನಂಬಾಡಿ ಕಟ್ಟೆಯ ಒಡಲು ಬರಿದಾಗುತ್ತಿದೆ. 124 80 ಅಡಿ ಸಾಮಾರ್ಥ್ಯವುಳ್ಳ ಕೃಷ್ಣರಾಜಸಾಗರದ ಇಂದಿನ ನೀರಿನ ಮಟ್ಟ ಕೇವಲ 77 ಅಡಿಗೆ ಕುಸಿದಿದೆ. ಇನ್ನು 7 ಅಡಿ ನೀರು ತಗ್ಗಿದರೆ ಉಳಿದ 70 ಅಡಿ ನೀರನ್ನ ಡೆಡ್ ಸ್ಟೋರೆಜ್ ಎಂದು ಘೋಷಿಸಲಾಗುತ್ತೆ. ರಾಜಧಾನಿ ಬೆಂಗಳೂರು, ಮಂಡ್ಯ ಹಾಗೂ ಮೈಸೂರು ಜನರಿಗೆ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಠಿಯಾಗಲಿದೆ. ಜುಲೈ 5 ರ ಒಳಗೆ ನಿಗದಿತ ಪ್ರಮಾಣದ ಮಳೆ ಆಗದೆ ಹೋದರೆ ಕುಡಿಯುವ ನೀರಿಗು ಸಮಸ್ಯೆ ಎದುರಾಗಲಿದೆ.

ಮಳೆಗಾಗಿ ಅನ್ನದಾತರು ಕಾದು ಕುಳಿತಿದ್ದಾರೆ. ಇತ್ತ ಬೆಳೆದ ಬೆಳೆಗೆ ನೀರು ಹರಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಜಲ ಕ್ಷಾಮದಿಂದ ಮುಂಬರುವ ದಿನಗಳಲ್ಲಿ ಕುಡಿಯುವ ಹನಿ ನೀರಿಗೂ ಜನ ಪರಿತಪಿಸುವಂತಹ ಪರಿಸ್ಥಿತಿ ಎದುರಾಗುವ ಲಕ್ಷಣಗಳಿವೆ. ಮಳೆಗಾಗಿ ರೈತರು ದೇವರ ಮೊರೆ ಹೋಗುವಂತಾಗಿದೆ.

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಧಾರಣೆ ಏರಿಕೆ | ಒಮ್ಮೆಲೇ ಬೇಡಿಕೆ ಹೆಚ್ಚಳದಿಂದ ಮಾರುಕಟ್ಟೆಯಲ್ಲಿ ಅಸ್ಥಿರತೆ – ಭವಿಷ್ಯದಲ್ಲಿ ಗುಣಮಟ್ಟದ ಅಡಿಕೆಗೆ ಬೇಡಿಕೆ ನಿರೀಕ್ಷೆ
January 8, 2026
7:16 AM
by: ದ ರೂರಲ್ ಮಿರರ್.ಕಾಂ
ಚಿಕಿತ್ಸೆ ಮುಗಿದರೂ ಕ್ಯಾನ್ಸರ್ ಅಪಾಯ ಏಕೆ ಮುಗಿಯುವುದಿಲ್ಲ?
January 7, 2026
11:10 PM
by: ದ ರೂರಲ್ ಮಿರರ್.ಕಾಂ
‌ ಭೂಮಿಗೆ ಬಿದ್ದ ಪ್ಲಾಸ್ಟಿಕ್ ಕರಗುವಂತೆ ಮಾಡಬಹುದು…!, ಇದು ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರವೇ?
January 7, 2026
10:43 PM
by: ದ ರೂರಲ್ ಮಿರರ್.ಕಾಂ
2026 ರಲ್ಲಿ ಕೃಷಿ ಕ್ಷೇತ್ರ ಸ್ಥಿರತೆ , ಆದರೆ ಅಸಮಾನತೆ ಮುಂದುವರಿಕೆ
January 7, 2026
10:14 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror