ಕೇರಳಕ್ಕೆ ಮುಂಗಾರು ಪ್ರವೇಶಿಸಿ 4-5 ದಿನ ಕಳೆದರು ಇನ್ನೂ ನಿರೀಕ್ಷಿತ ಮಟ್ಟದಲ್ಲಿ ರಾಜ್ಯದಲ್ಲಿ ಮುಂಗಾರು ಮಾರುತ ಪ್ರಬಾವ ಬೀರಿಲ್ಲ. ಕಾವೇರಿ ಜಲಾನಯನ ಪ್ರದೇಶದಲ್ಲಿ ಇನ್ನೂ ಮುಂಗಾರು ಮಳೆಯ ಸೂಚನೆಯೇ ಇಲ್ಲ. ರೈತರೆಲ್ಲಾ ಕಂಗಾಲಾಗಿ ಕುಳಿತಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ (ಜೂನ್ 13) ಕೆಆರ್‌ಎಸ್ ಜಲಾಶಯ ಬಳಿಯ ಕಾವೇರಿ ಮಾತೆಯ ಪ್ರತಿಮೆ ಮುಂದೆ ವರುಣನಿಗಾಗಿ ಹೋಮ ಹಾಗೂ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.
ಕಾವೇರಿ ಒಡಲು ಭರ್ತಿಗಾಗಿ ಕಾವೇರಿ ನೀರಾವರಿ ನಿಗಮ ವಿಶೇಷ ಪೂಜೆಯ ಮೊರೆ ಹೋಗಿದೆ. ಮಂಗಳವಾರ ಬೆಳಗ್ಗೆ ಪ್ರಸಿದ್ಧ ವೈದಿಕ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಜಲಾಶಯ ಭರ್ತಿಗೆ 12 ಮಂದಿ ವೈದಿಕ ತಂಡದಿಂದ ವಿಶೇಷ ಪೂಜೆ ನಡೆಯಲಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel