ಬೆಳ್ಳಾರೆಯಲ್ಲಿ “ವೇದಾಮೃತ ಆಯುರ್ವೇದ ಚಿಕಿತ್ಸಾಲಯ ” ಆರಂಭ |

Advertisement
Advertisement

ಸುಳ್ಯ ತಾಲೂಕಿನ ಬೆಳ್ಳಾರೆಯ ಕೆಳಗಿನ ಪೇಟೆ ಸಿ.ಎ.ಬ್ಯಾಂಕಿನ ಹತ್ತಿರ ಹರ್ಷ ಕಾಂಪ್ಲೆಕ್ಸ್ ನಲ್ಲಿ ಡಾ| ಕಾವ್ಯಾ ಜೆ.ಎಚ್ ಅವರ ವೇದಾಮೃತ ಆಯುರ್ವೇದ ಚಿಕಿತ್ಸಾಲಯವು ಶುಭಾರಂಭಗೊಂಡಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ನ. ಸೀತಾರಾಮ ಸೇರಿದಂತೆ ಹಲವು ಮಂದಿ ಪ್ರಮುಖರು ಭಾಗವಹಿಸಿದರು.

Advertisement

ಈ ಚಿಕಿತ್ಸಾಲಯದಲ್ಲಿ ಪ್ರಮುಖವಾಗಿ ಸೋರಿಯಾಸಿಸ್, ಏಕ್ಸಿಮಾ, ಮೊಡವೆ ಮುಂತಾದ ಚರ್ಮರೋಗಗಳು, ರುಮಾಟೈಡ್ ಆರ್ಥ್ರೈಟಿಸ್, ಆಸ್ಟಿಯೋ ಆರ್ಥ್ರೈಟಿಸ್, ಕತ್ತುನೋವು, ಸೊಂಟನೋವು, ಮಂಡಿನೋವು, ಪಾರ್ಶ್ವವಾಯು, ಬೆಲ್ಸ್ ಪಾಲ್ಸಿ, ಮಸ್ಕ್ಯುಲರ್ ದಿಸ್ಟ್ರೋಫಿ, ಸಾಯಾಟಿಕ, ಗುಲಿಯನ್ ಬರ್ರಿ ಸಿಂಡ್ರೋಮ್, ಸೆರೆಬ್ರಲ್ ಪಾಲ್ಸಿ, ಮೈಗ್ರೈನ್, ಸೈನಸೈಟಿಸ್, ಕೂದಲ ಉದುರುವಿಕೆ, ಬೊಕ್ಕತಲೆ, ಬಾಲನೆರೆ, ಅನೀಮಿಯಾ, ಪೈಲ್ಸ್, ಫಿಸ್ಟುಲಾ, ಪಿತ್ತಕೋಶದ ಕಲ್ಲು, ಮೂತ್ರಪಿಂಡದಲ್ಲಿನ ಕಲ್ಲು, ಲಿವರ್, ಕಿಡ್ನಿ, ಹಾರ್ಟ್, ಶ್ವಾಸಕೋಶ ಸಂಬಂಧಿ ಖಾಯಿಲೆಗಳು, ಐ ಬಿ ಎಸ್ (ಗ್ರಹಣಿ ರೋಗ), ಥೈರಾಯ್ಡ್, ಮಧುಮೇಹ, ರಕ್ತದೊತ್ತಡ, ಬೊಜ್ಜು, ಬಿಳಿಸೆರಗು, ಪಿ ಸಿ ಒ ಡಿ, ಬಂಜೆತನ, ತಪ್ಪಾದ ಜೀವನ ಶೈಲಿಯಿಂದ ಉಂಟಾಗುವ ಖಾಯಿಲೆಗಳು, ವೃದ್ಧಾಪ್ಯ ಸಂಬಂಧಿ ಖಾಯಿಲೆಗಳು ಮುಂತಾದ ದೀರ್ಘಕಾಲೀನ ವ್ಯಾಧಿಗಳಿಗೆ ಅತ್ಯುತ್ಕೃಷ್ಟ ಪುರಾತನ ಆಯುರ್ವೇದ ಔಷಧಿ ಹಾಗೂ ಚಿಕಿತ್ಸೆಗಳನ್ನು ನೀಡಲಾಗುವುದು. ಅಲ್ಲದೆ ಕಾಲೋಚಿತ ಖಾಯಿಲೆಗಳನ್ನು ತಡೆಗಟ್ಟಲು ಮತ್ತು ಆರೋಗ್ಯದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸೂಕ್ತ ಪಂಚಕರ್ಮ ಚಿಕಿತ್ಸೆಗಳು, ಗರ್ಭಿಣಿಯರಿಗೆ, ಮಕ್ಕಳಿಗೆ ಮತ್ತು ಬಾಣಂತಿಯರಿಗೆ ಸೂಕ್ತ ಚಿಕಿತ್ಸೆ ಹಾಗೂ ಸಲಹೆಗಳು, ರೋಗೋಚಿತ ಪಥ್ಯಪಾಲನೆ (ಡಯೆಟ್) ಸಲಹೆಗಳನ್ನು ನೀಡಲಾಗುವುದು.

Advertisement
Advertisement

ಅಲ್ಲದೆ ಪ್ರತಿ ತಿಂಗಳ ಪುಷ್ಯ ನಕ್ಷತ್ರದಂದು 16 ವರ್ಷದೊಳಗಿನ ಮಕ್ಕಳಿಗೆ ಸ್ವರ್ಣ ಪ್ರಾಶಾನ ನೀಡಲಾಗುವುದು.ಮಾರ್ಗಶಿರ ಪೌರ್ಣಮಿಯಂದು ಕೆಮ್ಮು, ಅಲರ್ಜಿ, ದಮ್ಮು, ಅಸ್ತಮಾ ಖಾಯಿಲೆಗಳಿಗೆ ಪಾರಂಪರಿಕ ಆಯುರ್ವೇದ ಔಷಧಿ ನೀಡಲಾಗುವುದು ಎಂದು ಡಾ.ಕಾವ್ಯಾ ಜೆ.ಎಚ್‌. ತಿಳಿಸಿದ್ದಾರೆ.( ವೈದ್ಯರ ಸಂಪರ್ಕ -9741439354)

Advertisement
Advertisement

 

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಬೆಳ್ಳಾರೆಯಲ್ಲಿ “ವೇದಾಮೃತ ಆಯುರ್ವೇದ ಚಿಕಿತ್ಸಾಲಯ ” ಆರಂಭ |"

Leave a comment

Your email address will not be published.


*