Advertisement
MIRROR FOCUS

ಸದ್ಯ ಶಿರಾಡಿ ಘಾಟಿಯಲ್ಲಿ ವಾಹನ ಓಡಾಟ |

Share

ಹಾಸನ ಜಿಲ್ಲಾಡಳಿತವು ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟಿಯ ಮೂಲಕ ಸಂಚಾರವನ್ನು ಗುರುವಾರ ರಾತ್ರಿಯಿಂದಲೇ ನಿಷೇಧಿಸಿತ್ತು. ಹಾಸನದಿಂದ ಮಾರನಹಳ್ಳಿ ವರೆಗಿನ ಸಂಚಾರ ಸ್ಥಗಿತಗೊಳಿಸುವಂತೆ ಆದೇಶಿಸಿತ್ತು. ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪದ ದೊಡ್ಡ ತಪ್ಪಲು ಪ್ರದೇಶದಲ್ಲಿ ಗುಡ್ಡ ಕುಸಿಯುತ್ತಿರುವುದರಿಂದ ಸಂಭಾವ್ಯ ಅಪಾಯವನ್ನು ತಪ್ಪಿಸಲು ಈ ಕ್ರಮ ಕೈಗೊಂಡಿದೆ. ಶುಕ್ರವಾರ ಬೆಳಗ್ಗೆ 10:30 ರಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

Advertisement
Advertisement

ಗುರುವಾರ ರಾತ್ರಿಯಿಂದಲೇ ಗುಂಡ್ಯ ಹಾಗೂ ಅಡ್ಡ ಹೊಳೆ ಪರಿಸರದಲ್ಲಿ 2 ಸಾಲಿನಲ್ಲಿ ಟ್ಯಾಂಕರ್, ಟ್ರೈಲರ್ ಸಹಿತ ಘನವಾಹನಗಳು ರಸ್ತೆಯ ಮಧ್ಯದಲ್ಲಿಯೇ ನಿಂತು ಸ್ಥಳೀಯರಿಗೂ, ಸಂಚರಿಸಲು ಅಸಾಧ್ಯವಾಗಿತ್ತು. ಶಿರಾಡಿ ಗಡಿಯ ಚೌಡೇಶ್ವರಿ ದೇವಸ್ಥಾನದ ಮೇಲಿನ ಭಾಗದಲ್ಲಿ ಬೃಹತ್ ಮರವೊಂದು ರಸ್ತೆಗೆ ಬಿದ್ದಿದ ಪರಿಣಾಮ ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಅರಣ್ಯ ಇಲಾಖೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮರತೆರವುಗೊಳಿಸಿ ಸಂಚಾರ ಮುಕ್ತಗೊಳಿಸಿದರು. ಗುರುವಾರ ರಾತ್ರಿಯಿಂದಲೂ ಶಿರಾಡಿ ಹಾಗೂ ಮಾರನಹಳ್ಳಿ ಭಾಗದಲ್ಲಿ ಭಾರಿ ಮಳೆ ಆಗುತ್ತಿದ್ದು ಶುಕ್ರವಾರವೂ ಮಳೆಯ ಪ್ರಮಾಣ ಹೆಚ್ಚಾಗಿದೆ. ಮಾರನ ಹಳ್ಳಿಯ ದೊಡ್ಡ ತಪ್ಪಲ್ಲಲ್ಲಿ ಗುಡ್ಡ ಕುಸಿತ ಸಣ್ಣ ಪ್ರಮಾಣದಲ್ಲಿ ಮುಂದುವರೆದಿದೆ.  ಇಂದು ಸಂಜೆ 6 ರಿಂದ ಬೆಳಗ್ಗೆ 6ರ ವರೆಗೆ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.

Advertisement

Vehicular traffic has been permitted at Shiradi Ghati starting at 10:30 am on Friday. However, there have been reports of collapses in the Ghati region. As a result, there is a possibility that traffic may be halted at night for safety reasons.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸೌರಶಕ್ತಿಯ ಬಳಕೆ ಅನಿವಾರ್ಯ ಏಕೆ..? | ರೈತರಿಗೆ ಮಾಹಿತಿ ಕಾರ್ಯಕ್ರಮ |

ಮುಂಬರುವ ದಿನಗಳಲ್ಲಿ ಪಳಯುಳಿಕೆ ಇಂಧನ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವುದು ಅಗತ್ಯವಾಗಿದೆ. ಜಾಗತಿಕ ತಾಪಮಾನವನ್ನು…

46 mins ago

ರೈತರ ಆದಾಯ ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು 7 ಯೋಜನೆಗಳಿಗೆ 13,966 ಕೋಟಿ ರೂಪಾಯಿ | ಕೇಂದ್ರ ಸಚಿವ ಸಂಪುಟ ಅನುಮೋದನೆ

ಕೇಂದ್ರ ಸಂಪುಟ ಏಳು ಪ್ರಮುಖ ಕೃಷಿ ಯೋಜನೆಗಳಿಗೆ ಅನುಮೋದನೆ ನೀಡಿದೆ. ಕೃಷಿ ಸಂಶೋಧನೆ,…

1 hour ago

ಎತ್ತಿನಹೊಳೆ ಯೋಜನೆ ಕಾಮಗಾರಿ 2027 ಕ್ಕೆ ಪೂರ್ಣ | ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಎತ್ತಿನಹೊಳೆ ಯೋಜನೆ 2027 ಕ್ಕೆ ಪೂರ್ಣಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್…

2 hours ago

ಹವಾಮಾನ ವರದಿ | 02-09-2024 | ಕರಾವಳಿ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ |

ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ತೆಲಂಗಾಣದಿಂದ ಮುಂದುವರಿಯುತ್ತಿದ್ದು ಮಹಾರಾಷ್ಟ್ರ ಕಡೆಗೆ ಚಲಿಸುತ್ತಿದೆ. ಇದರ ಪರಿಣಾಮದಿಂದ…

11 hours ago

ಅಸ್ನಾ ಚಂಡಮಾರುತದ ಆತಂಕದ ದೂರ | ಮುಂದಿನ ಐದು ದಿನಗಳಲ್ಲಿ ಭಾರೀ ಮಳೆ ಇಲ್ಲ |

ಈಶಾನ್ಯ ಅರಬ್ಬಿ ಸಮುದ್ರದ ಮೇಲೆ ಅಪ್ಪಳಿಸುತ್ತಿದ್ದ 'ಅಸ್ನಾ' ಚಂಡಮಾರುತವು ಪಶ್ಚಿಮಾಭಿಮುಖವಾಗಿ ಚಲಿಸಿದೆ ಮತ್ತು…

1 day ago