ನಮ್ಮ ಗೋಸಂವರ್ಧನ ಕೇಂದ್ರದ ಗೋವು ಮಲೆನಾಡು ಗಿಡ್ಡ ತಳಿಯ ಏಳು ವರ್ಷ ವಯಸ್ಸಿನ ದನ “ನಿಕ್ಷೇಪ” ಹುಲ್ಲು ತಿನ್ನಲಿಲ್ಲ…!! ನನಗೆ ತಕ್ಷಣ ಏನೋ ವ್ಯತ್ಯಾಸ ಆಗಿದೆ ಅನಿಸಿತು. ಗೋವಿನ ಜೊತೆಯಲ್ಲೇ ದಿನದ ಹೆಚ್ಚು ಹೊತ್ತು ಇರುವವರಿಗೆ ಅವುಗಳ ಸೂಕ್ಷ್ಮ ಸಂವೇದನೆ ಕೂಡಲೇ ಅರಿವಿಗೆ ಬರುತ್ತದೆ. ಗೋವು, ನಾಯಿ, ಬೆಕ್ಕುಗಳು)ಮೂಕ ಪ್ರಾಣಿಗಳಾದರೂ ಅವುಗಳ ಆಹಾರ ವಿಹಾರ ವರ್ತನೆಗಳಲ್ಲಿ ಸಾಕಾಣಿಕೆದಾರರಿಗೆ ಏನೋ ವ್ಯತ್ಯಾಸ ಆಗಿದೆಯೆಂದು ಸುಲಭವಾಗಿ ಅರಿವಾಗುತ್ತದೆ. ಆದರೆ ಅವುಗಳಿಗೆ ಏನಾಗಿದೆ ಸ್ಪಷ್ಟವಾಗಿ ಎಂದು ಗೊತ್ತಾಗೋಲ್ಲ ಎಂಬುದು ದೊಡ್ಡ ವಿಪರ್ಯಾಸ…!!
ನಿರೀಕ್ಷಾ ರಾತ್ರಿಯಾಗುತ್ತಿದ್ದಂತೆ ಉಬ್ಬಸ ಬಿಟ್ಟಂತೆ ಏದುಸಿರು ಬಿಡಲು ಶುರುವಾಯಿತು. ನಾವು ಎಂದಿನಂತೆ ಖಾರ ಕೊಟ್ಟವೆ. ಡೋಲೋ 650 ಮಾತ್ರೆ, ಮತ್ತು ಪ್ರಾಕ್ಸಿವೇಟ್ ಮಾತ್ರೆ ಕೊಟ್ಟೆವು. ಇದೇ ಸಮಯದಲ್ಲಿ ನಮ್ಮ ಪಶುವೈದ್ಯ ಮಿತ್ರರಾದ ಡಾ ಯುವರಾಜ ಹೆಗ್ಡೆಯವರ ಆರೋಗ್ಯ ಸರಿ ಇಲ್ಲದ ಕಾರಣ ಅವರು ನಮ್ಮ ಹಸುವಿನ ಚಿಕಿತ್ಸೆಗೆ ಅಲಭ್ಯರಾದರು. ನನ್ನ ಪರಿಚಿತ ಅನೇಕ ಪಶು ವೈದ್ಯರನೇಕರಿಗೆ ನಮ್ಮ ಹಸುವಿನ ಅನಾರೋಗ್ಯದ ಬಗ್ಗೆ ಹೇಳಿ ಪರಿಹಾರ ಕೇಳಿದೆ. ಆದರೆ ಆನ್ ಲೈನ್ ನಲ್ಲಿ ಪಶುಗಳಿಗೇನಾಗಿದೆಯೆಂದು “ಕರಾರುವಾಕ್ಕಾಗಿ” ವಿಶ್ಲೇಷಣೆ ಮಾಡಿ ಯಾವ ಔಷಧ ನೀಡಲು ಸಾದ್ಯವಿಲ್ಲ. ನಮಗೆ ಹಸುವಿನ ಆರೋಗ್ಯದ ಬಗ್ಗೆ ಕ್ಷಣಕ್ಷಣಕ್ಕೂ ಆತಂಕ ಹೆಚ್ಚಾಯಿತು.
ಕಡೆಗೆ ಬೆಳಿಗ್ಗೆ ಸ್ನೇಹಿತರ ಮೂಲಕ ಕೋಣಂದೂರಿನ ಖ್ಯಾತ ಶಸ್ತ್ರಚಿಕಿತ್ಸಕ ಪಶು ವೈದ್ಯರಾದ ಡಾ ಆನಂದರವರನ್ನ ಸಂಪರ್ಕ ಮಾಡಿದೆ. ಅವರು ಬಹಳ ಬ್ಯಿಸಿ ವೈದ್ಯರು. ಆದರೆ ನನ್ನ ಒತ್ತಾಯಕ್ಕೆ ಮಣಿದು ನಮ್ಮ ಹಸುವಿಗೆ ಚಿಕಿತ್ಸೆ ನೀಡಲು ನಮ್ಮ ಮನೆಗೆ ಬರಲೊಪ್ಪಿದರು. ಪಾಪ ಡಾ ಆನಂದ್ ರವರು ಮೊನ್ನೆ ರಾತ್ರಿ ಯಾವುದೋ ಪಶುಪಾಲಕರ ಗಬ್ಬದ ದನದ ಸೀಝೆರಿಯನ್ ಹೆರಿಗೆ ಮಾಡಿಸಿ ಬರಲು ಹೋದವರು ಮರಳಿ ಬರುವಾಗ ದಾರಿಯಲ್ಲಿ ಮರ ಬಿದ್ದು, ಮರ ತೆರುವಾಗಿ ಮನೆಗೆ ಬರುವಾಗ ರಾತ್ರಿ ಎರಡು ಗಂಟೆಯಾಗಿತ್ತಂತೆ…!!. ಹೀಗೆ ಹಗಲು ರಾತ್ರಿಯೆನ್ನದೇ ಸೇವೆ ನೀಡುವ ನುರಿತ ಆನಂದ ಡಾಕ್ಟರು ಇರುವುದರಿಂದ ನಮ್ಮಂಥರು ಗೋಪಾಲನೆ ಮಾಡಲು ಆಗುತ್ತಿರುವುದು….
ಡಾಕ್ಟ್ರು ಬೆಳಿಗ್ಗೆ ಮತ್ತೆ ಯಾವುದೋ ಒಂದಷ್ಟು ತುರ್ತು ಚಿಕಿತ್ಸೆ ಮಾಡಿ ನಮ್ಮ ಮನೆಗೆ ಒಂದೂವರೆ ಮಧ್ಯಾಹ್ನ ಬಂದರು. ಅಷ್ಟರಲ್ಲಿ ನಮ್ಮ ನಿರೀಕ್ಷಾ ನಾವು ಹಾಕಿದ ಖಾರ ಮತ್ತು ಪ್ರಾಕ್ಸಿವೇಟ್ ಮಾತ್ರೆಯಿಂದ ಬಹಳಷ್ಟು ಸುಧಾರಣೆಯಾಗಿದ್ದಳು. ಡಾಕ್ಟರು ಟೆಂಪರೇಚರ್ ಟೆಸ್ಟ್ ಮಾಡಿದಾಗ ನೂರಾಮೂರು ಡಿಗ್ರಿ ಜ್ವರ ಇತ್ತು. ನಂತರ ಜ್ವರ ಕಡಿಮೆ ಯಾಗಲು ಆಂಟಿ ಬಾಯಾಟಿಕ್ ಇಂಜಕ್ಷನ್ ಮಾಡಿ ಮುಗಿಸಿ ನಮ್ಮ ಸಂವರ್ಧನ ಕೇಂದ್ರದ ಎಲ್ಲಾ ಹಸು ಕರು ಹೋರಿಗಳಿಗೂ ವ್ಯಾಕ್ಸಿನ್ ಮಾಡಿದರು. ಕೊನೆಯಲ್ಲಿ ನಮ್ಮ ಮನೆಯ ಬೆಕ್ಕು “ಬೀಚಾ ಗಾಂಧಿ” ಯ ಗಲ್ಲದಲ್ಲಿ ಎರಡು ವರ್ಷಗಳಿಂದ ಸಿಕ್ಕಿ ಹಾಕಿಕೊಂಡಿದ್ದ ಮೀನಿನಗಾಣದ ದಾರವನ್ನು ಡಾಕ್ಟರ್ ಆನಂದರವರು ಬೆಕ್ಕಿಗೆ ಸಿಂಪಲ್ ಅನಸ್ತೇಷಿಯ ಕೊಟ್ಟು ಪ್ರಜ್ಞೆ ತಪ್ಪಿಸಿ ಆ ದಾರವನ್ನು ತೆಗೆದು ಬೆಕ್ಕಿಗೆ ಬಹುಕಾಲದ ಯಾತನೆಯಿಂದ ಮುಕ್ತಿ ಕೊಡಿಸಿದರು. ಈ ಎರಡು ವರ್ಷಗಳಿಂದ ಬಹಳಷ್ಟು ಬಾರಿ ಬೆಕ್ಕಿನ ಈ ದಾರ ತೆಗೆಸಲು ಪ್ರಯತ್ನ ಮಾಡಿಯೂ ವಿಫಲರಾಗಿದ್ದೆವು. ಈ ಮದ್ಯೆ ನಮ್ಮ ಮನೆಗೆ ಯುವರಾಜ ಡಾಕ್ಟರು ಬಂದಾಗ ಸಂತ್ರಸ್ತೆ ಬೀಚಾಗಾಂಧಿ ಮನೆಯಲ್ಲಿ ಇರದೇ ಶಸ್ತ್ರ ಚಿಕಿತ್ಸೆ ಸಾದ್ಯವಾಗಿರಲಿಲ್ಲ.
ಪಶು ವೈದ್ಯಕೀಯ ಸಚಿವಾಲಯ ಮಲೆನಾಡಿನ ಕಡೆಯಲ್ಲಿ ಆನಂದ್ ರಂತಹ ವೈದ್ಯರ ಸಂಖ್ಯೆ ಹೆಚ್ಚಿಸಬೇಕು. ನಮ್ಮ ತೀರ್ಥಹಳ್ಳಿಯಲ್ಲಿ ಶಸ್ತ್ರ ಚಿಕಿತ್ಸ ಪಶು ವೈದ್ಯರಾದ ಡಾಕ್ಟರ್ ಯುವರಾಜ್ ಹೆಗ್ಡೆಯವರು ಮತ್ತು ಡಾಕ್ಟರ್ ಆನಂದ್ ರವರು ಇರುವುದು ನಮ್ಮಂಥ ಗೋಪಾಲಕರ ಪುಣ್ಯ.ಗೋಪಾಲಕರು ಶಸ್ತ್ರಚಿಕಿತ್ಸೆ ವಿಚಾರದಲ್ಲಿ ಈ ಇಬ್ಬರು ನುರಿತ ವೈದ್ಯರ ಸೇವೆಯನ್ನು ಪಶುಪಾಲಕರು ಬಳಸಿಕೊಳ್ಳಬೇಕು. ಮೊನ್ನೆ ನಮ್ಮ ಒಂದೂವರೆ ವರ್ಷದ ಹೋರಿ ಕರುವಿನ ಬುಜದ ಸಮೀಪದಲ್ಲಿ ಊದಿ ಬಾಕು ಬಂದಾಗ ಪಶು ಸಹಾಯಕ ರು ಇದು “ಮೂಳೆ ಜಾರಿದ್ದು ” ಕೂಡಲೇ ಇದಕ್ಕೆ ನಾಟಿ ವೈದ್ಯರ ಬಳಿ ಪಟ್ಟು ಹಾಕಿಸಿ ಚಿಕಿತ್ಸೆ ಕೊಡಿಸಿ ಎಂದು ಸಲಹೆ ಕೊಟ್ಟಿದ್ದರು.
ಆದರೆ ನಾನು ಕರುವಿನ ವೀಡಿಯೋವನ್ನು ಡಾಕ್ಟರ್ ಯುವರಾಜ ಹೆಗ್ಡೆಯವರಿಗೆ ಕಳಿಸಿದಾಗ ಅವರು ತಕ್ಷಣ ಇದು “ಚರ್ಮ ಗಂಟು ರೋಗ ” ಇದಕ್ಕೆ ಇಂತಹ ಮಾತ್ರೆ ಹಾಕಿ ಎಂದು ಸಲಹೆ ನೀಡಿದ್ದರು. ನಾವು ವೈದ್ಯರ ಸಲಹೆಯ ಮೇರೆಗೆ ಮಾತ್ರೆ ಹಾಕಿದಾಗ ಕರುವಿನ ಬುಜದಲ್ಲಿ ಆದ ಬಾವು ನಿಧಾನವಾಗಿ ಇಳಿಯತೊಡಗಿತು. ಜೊತೆಯಲ್ಲಿ ಆ ನಂತರದಲ್ಲಿ ಕರುವಿನ ಮೈ ತುಂಬಾ ಚಿಕ್ಕ ಚಿಕ್ಕ ಗಂಟುಗಳು ಕಾಣಿಸತೊಡಗಿ ಡಾಕ್ಟರ್ ಯುವರಾಜರ ಊಹೆ ಸರಿಯಾಗಿತ್ತು . ನಂತರ ಮಾತ್ರೆ ಮುಂದುವರಿಸಿದಾಗ ಕರುವಿನ ಚರ್ಮ ಗಂಟು ರೋಗ ವಾಸಿಯಾಗತೊಡಗಿತು . ಗೋಪಾಲಕರು ಕೆಲವು ಅನುಮಾನಗಳಿಗೆ ಇಂತಹ ನುರಿತ ಅನುಭವಿಗಳ ಸಲಹೆ ಪಡೆದು ಚಿಕಿತ್ಸೆ ಮಾಡುವುದು ಉತ್ತಮ.
The provision of adequate veterinary care in rural regions is a critical issue that warrants the attention of policymakers. Despite the severe shortages, there are dedicated medical professionals who selflessly provide healthcare services for cattle and other domestic animals in these underserved areas.
The government must recognize the importance of this matter and take proactive steps to address the lack of suitable doctors for animal treatment in rural communities. Appointing qualified veterinary professionals to these regions would significantly improve the well-being of livestock and ensure that farmers and animal owners have access to the necessary medical care.
By prioritizing this issue, the government can demonstrate its commitment to supporting the livelihoods and welfare of rural populations, who rely heavily on their livestock for sustenance and income. Investing in rural veterinary services is not only a matter of animal health but also a crucial component of community development and economic stability.