Opinion

ಪಶುಗಳ ಪಾಲಿನ “ಆನಂದ” ಡಾಕ್ಟರ್ ಆನಂದ್ | ಪಶು ವೈದ್ಯಕೀಯ ಸಚಿವಾಲಯ ಮಲೆನಾಡಿನ ಕಡೆಯಲ್ಲಿ ವೈದ್ಯರ ಸಂಖ್ಯೆ ಹೆಚ್ಚಿಸಬೇಕು |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನಮ್ಮ ಗೋಸಂವರ್ಧನ ಕೇಂದ್ರದ ಗೋವು ಮಲೆನಾಡು ಗಿಡ್ಡ ತಳಿಯ ಏಳು ವರ್ಷ ವಯಸ್ಸಿನ ದನ “ನಿಕ್ಷೇಪ” ಹುಲ್ಲು ತಿನ್ನಲಿಲ್ಲ…!! ನನಗೆ ತಕ್ಷಣ ಏನೋ ವ್ಯತ್ಯಾಸ ಆಗಿದೆ ಅನಿಸಿತು.‌ ಗೋವಿನ ಜೊತೆಯಲ್ಲೇ ದಿನದ ಹೆಚ್ಚು ಹೊತ್ತು ಇರುವವರಿಗೆ ಅವುಗಳ ಸೂಕ್ಷ್ಮ ಸಂವೇದನೆ ಕೂಡಲೇ ಅರಿವಿಗೆ ಬರುತ್ತದೆ. ಗೋವು, ನಾಯಿ, ಬೆಕ್ಕುಗಳು)ಮೂಕ ಪ್ರಾಣಿಗಳಾದರೂ ಅವುಗಳ ಆಹಾರ ವಿಹಾರ ವರ್ತನೆಗಳಲ್ಲಿ ಸಾಕಾಣಿಕೆದಾರರಿಗೆ ಏನೋ ವ್ಯತ್ಯಾಸ ಆಗಿದೆಯೆಂದು ಸುಲಭವಾಗಿ ಅರಿವಾಗುತ್ತದೆ. ಆದರೆ ಅವುಗಳಿಗೆ ಏನಾಗಿದೆ ಸ್ಪಷ್ಟವಾಗಿ ಎಂದು ಗೊತ್ತಾಗೋಲ್ಲ ಎಂಬುದು ದೊಡ್ಡ ವಿಪರ್ಯಾಸ…!!

Advertisement

ನಿರೀಕ್ಷಾ ರಾತ್ರಿಯಾಗುತ್ತಿದ್ದಂತೆ ಉಬ್ಬಸ ಬಿಟ್ಟಂತೆ ಏದುಸಿರು ಬಿಡಲು ಶುರುವಾಯಿತು. ನಾವು ಎಂದಿನಂತೆ ಖಾರ ಕೊಟ್ಟವೆ. ಡೋಲೋ 650 ಮಾತ್ರೆ, ಮತ್ತು ಪ್ರಾಕ್ಸಿವೇಟ್ ಮಾತ್ರೆ ಕೊಟ್ಟೆವು. ಇದೇ ಸಮಯದಲ್ಲಿ ನಮ್ಮ ಪಶುವೈದ್ಯ ಮಿತ್ರರಾದ ಡಾ ಯುವರಾಜ ಹೆಗ್ಡೆಯವರ ಆರೋಗ್ಯ ಸರಿ ಇಲ್ಲದ ಕಾರಣ ಅವರು ನಮ್ಮ ಹಸುವಿನ ಚಿಕಿತ್ಸೆಗೆ ಅಲಭ್ಯರಾದರು. ನನ್ನ ಪರಿಚಿತ ಅನೇಕ ಪಶು ವೈದ್ಯರನೇಕರಿಗೆ ನಮ್ಮ ಹಸುವಿನ ಅನಾರೋಗ್ಯದ ಬಗ್ಗೆ ಹೇಳಿ ಪರಿಹಾರ ಕೇಳಿದೆ. ಆದರೆ ಆನ್ ಲೈನ್ ನಲ್ಲಿ ಪಶುಗಳಿಗೇನಾಗಿದೆಯೆಂದು “ಕರಾರುವಾಕ್ಕಾಗಿ” ವಿಶ್ಲೇಷಣೆ ಮಾಡಿ ಯಾವ ಔಷಧ ‌ನೀಡಲು ಸಾದ್ಯವಿಲ್ಲ‌. ನಮಗೆ ಹಸುವಿನ ಆರೋಗ್ಯದ ಬಗ್ಗೆ ಕ್ಷಣಕ್ಷಣಕ್ಕೂ ಆತಂಕ ಹೆಚ್ಚಾಯಿತು.

ಕಡೆಗೆ ಬೆಳಿಗ್ಗೆ ಸ್ನೇಹಿತರ ಮೂಲಕ ಕೋಣಂದೂರಿನ ಖ್ಯಾತ ಶಸ್ತ್ರಚಿಕಿತ್ಸಕ ಪಶು ವೈದ್ಯರಾದ ಡಾ ಆನಂದರವರನ್ನ ಸಂಪರ್ಕ ಮಾಡಿದೆ. ಅವರು ಬಹಳ ಬ್ಯಿಸಿ ವೈದ್ಯರು. ಆದರೆ ನನ್ನ ಒತ್ತಾಯಕ್ಕೆ ಮಣಿದು ನಮ್ಮ ಹಸುವಿಗೆ ಚಿಕಿತ್ಸೆ ನೀಡಲು ನಮ್ಮ ಮನೆಗೆ ಬರಲೊಪ್ಪಿದರು. ಪಾಪ ಡಾ ಆನಂದ್ ರವರು ಮೊನ್ನೆ ರಾತ್ರಿ ಯಾವುದೋ ಪಶುಪಾಲಕರ ಗಬ್ಬದ ದನದ ಸೀಝೆರಿಯನ್ ಹೆರಿಗೆ ಮಾಡಿಸಿ ಬರಲು ಹೋದವರು ಮರಳಿ ಬರುವಾಗ ದಾರಿಯಲ್ಲಿ ಮರ ಬಿದ್ದು, ಮರ ತೆರುವಾಗಿ ಮನೆಗೆ ಬರುವಾಗ ರಾತ್ರಿ ಎರಡು ಗಂಟೆಯಾಗಿತ್ತಂತೆ…!!. ಹೀಗೆ ಹಗಲು ರಾತ್ರಿಯೆನ್ನದೇ ಸೇವೆ ನೀಡುವ ನುರಿತ ಆನಂದ ಡಾಕ್ಟರು ಇರುವುದರಿಂದ ನಮ್ಮಂಥರು ಗೋಪಾಲನೆ ಮಾಡಲು ಆಗುತ್ತಿರುವುದು….

ಡಾಕ್ಟ್ರು ಬೆಳಿಗ್ಗೆ ಮತ್ತೆ ಯಾವುದೋ ಒಂದಷ್ಟು ತುರ್ತು ಚಿಕಿತ್ಸೆ ಮಾಡಿ ನಮ್ಮ ಮನೆಗೆ ಒಂದೂವರೆ ಮಧ್ಯಾಹ್ನ ಬಂದರು. ಅಷ್ಟರಲ್ಲಿ ನಮ್ಮ ನಿರೀಕ್ಷಾ ನಾವು ಹಾಕಿದ ಖಾರ ಮತ್ತು ಪ್ರಾಕ್ಸಿವೇಟ್ ಮಾತ್ರೆಯಿಂದ ಬಹಳಷ್ಟು ಸುಧಾರಣೆಯಾಗಿದ್ದಳು. ಡಾಕ್ಟರು ಟೆಂಪರೇಚರ್ ಟೆಸ್ಟ್ ಮಾಡಿದಾಗ ನೂರಾಮೂರು ಡಿಗ್ರಿ ಜ್ವರ ಇತ್ತು. ನಂತರ ಜ್ವರ ಕಡಿಮೆ ಯಾಗಲು ಆಂಟಿ ಬಾಯಾಟಿಕ್ ಇಂಜಕ್ಷನ್ ಮಾಡಿ ಮುಗಿಸಿ ನಮ್ಮ ಸಂವರ್ಧನ ಕೇಂದ್ರದ ಎಲ್ಲಾ ಹಸು ಕರು ಹೋರಿಗಳಿಗೂ ವ್ಯಾಕ್ಸಿನ್ ಮಾಡಿದರು. ಕೊನೆಯಲ್ಲಿ ನಮ್ಮ ಮನೆಯ ಬೆಕ್ಕು “ಬೀಚಾ ಗಾಂಧಿ” ಯ ಗಲ್ಲದಲ್ಲಿ ಎರಡು ವರ್ಷಗಳಿಂದ ಸಿಕ್ಕಿ ಹಾಕಿಕೊಂಡಿದ್ದ ಮೀನಿನಗಾಣದ ದಾರವನ್ನು ಡಾಕ್ಟರ್ ಆನಂದರವರು ಬೆಕ್ಕಿಗೆ ಸಿಂಪಲ್ ಅನಸ್ತೇಷಿಯ ಕೊಟ್ಟು ಪ್ರಜ್ಞೆ ತಪ್ಪಿಸಿ ಆ ದಾರವನ್ನು ತೆಗೆದು ಬೆಕ್ಕಿಗೆ ಬಹುಕಾಲದ ಯಾತನೆಯಿಂದ ಮುಕ್ತಿ ಕೊಡಿಸಿದರು. ಈ ಎರಡು ವರ್ಷಗಳಿಂದ ಬಹಳಷ್ಟು ಬಾರಿ ಬೆಕ್ಕಿನ ಈ ದಾರ ತೆಗೆಸಲು ಪ್ರಯತ್ನ ಮಾಡಿಯೂ ವಿಫಲರಾಗಿದ್ದೆವು. ಈ ಮದ್ಯೆ ನಮ್ಮ ಮನೆಗೆ ಯುವರಾಜ ಡಾಕ್ಟರು ಬಂದಾಗ ಸಂತ್ರಸ್ತೆ ಬೀಚಾಗಾಂಧಿ ಮನೆಯಲ್ಲಿ ಇರದೇ ಶಸ್ತ್ರ ಚಿಕಿತ್ಸೆ ಸಾದ್ಯವಾಗಿರಲಿಲ್ಲ.

ಪಶು ವೈದ್ಯಕೀಯ ಸಚಿವಾಲಯ ಮಲೆನಾಡಿನ ಕಡೆಯಲ್ಲಿ  ಆನಂದ್ ರಂತಹ ವೈದ್ಯರ ಸಂಖ್ಯೆ ಹೆಚ್ಚಿಸಬೇಕು. ನಮ್ಮ ತೀರ್ಥಹಳ್ಳಿಯಲ್ಲಿ ಶಸ್ತ್ರ ಚಿಕಿತ್ಸ ಪಶು ವೈದ್ಯರಾದ ಡಾಕ್ಟರ್ ಯುವರಾಜ್ ಹೆಗ್ಡೆಯವರು ಮತ್ತು ಡಾಕ್ಟರ್ ಆನಂದ್ ರವರು ಇರುವುದು ನಮ್ಮಂಥ ಗೋಪಾಲಕರ ಪುಣ್ಯ.ಗೋಪಾಲಕರು ಶಸ್ತ್ರಚಿಕಿತ್ಸೆ ವಿಚಾರದಲ್ಲಿ ಈ ಇಬ್ಬರು ನುರಿತ ವೈದ್ಯರ ಸೇವೆಯನ್ನು ಪಶುಪಾಲಕರು ಬಳಸಿಕೊಳ್ಳಬೇಕು. ಮೊನ್ನೆ ನಮ್ಮ ಒಂದೂವರೆ ವರ್ಷದ ಹೋರಿ ಕರುವಿನ ಬುಜದ ಸಮೀಪದಲ್ಲಿ ಊದಿ ಬಾಕು ಬಂದಾಗ ಪಶು ಸಹಾಯಕ ರು ಇದು “ಮೂಳೆ ಜಾರಿದ್ದು ” ಕೂಡಲೇ ಇದಕ್ಕೆ ನಾಟಿ ವೈದ್ಯರ ಬಳಿ ಪಟ್ಟು ಹಾಕಿಸಿ ಚಿಕಿತ್ಸೆ ಕೊಡಿಸಿ ಎಂದು ಸಲಹೆ ಕೊಟ್ಟಿದ್ದರು.

ಆದರೆ ನಾನು ಕರುವಿನ ವೀಡಿಯೋವನ್ನು ಡಾಕ್ಟರ್ ಯುವರಾಜ ಹೆಗ್ಡೆಯವರಿಗೆ ಕಳಿಸಿದಾಗ ಅವರು ತಕ್ಷಣ ಇದು “ಚರ್ಮ ಗಂಟು ರೋಗ ” ಇದಕ್ಕೆ ಇಂತಹ ಮಾತ್ರೆ ಹಾಕಿ ಎಂದು ಸಲಹೆ ನೀಡಿದ್ದರು. ನಾವು ವೈದ್ಯರ ಸಲಹೆಯ ಮೇರೆಗೆ ಮಾತ್ರೆ ಹಾಕಿದಾಗ ಕರುವಿನ ಬುಜದಲ್ಲಿ ಆದ ಬಾವು ನಿಧಾನವಾಗಿ ಇಳಿಯತೊಡಗಿತು. ಜೊತೆಯಲ್ಲಿ ಆ ನಂತರದಲ್ಲಿ ಕರುವಿನ ಮೈ ತುಂಬಾ ಚಿಕ್ಕ ಚಿಕ್ಕ ಗಂಟುಗಳು ಕಾಣಿಸತೊಡಗಿ ಡಾಕ್ಟರ್ ಯುವರಾಜರ ಊಹೆ ಸರಿಯಾಗಿತ್ತು‌ . ನಂತರ ಮಾತ್ರೆ ಮುಂದುವರಿಸಿದಾಗ ಕರುವಿನ ಚರ್ಮ ಗಂಟು ರೋಗ ವಾಸಿಯಾಗತೊಡಗಿತು‌ . ಗೋಪಾಲಕರು ಕೆಲವು ಅನುಮಾನಗಳಿಗೆ ಇಂತಹ ನುರಿತ ಅನುಭವಿಗಳ ಸಲಹೆ ಪಡೆದು ಚಿಕಿತ್ಸೆ ಮಾಡುವುದು ಉತ್ತಮ.

ಬರಹ :
ಪ್ರಬಂಧ ಅಂಬುತೀರ್ಥ

The provision of adequate veterinary care in rural regions is a critical issue that warrants the attention of policymakers. Despite the severe shortages, there are dedicated medical professionals who selflessly provide healthcare services for cattle and other domestic animals in these underserved areas.

The government must recognize the importance of this matter and take proactive steps to address the lack of suitable doctors for animal treatment in rural communities. Appointing qualified veterinary professionals to these regions would significantly improve the well-being of livestock and ensure that farmers and animal owners have access to the necessary medical care.

By prioritizing this issue, the government can demonstrate its commitment to supporting the livelihoods and welfare of rural populations, who rely heavily on their livestock for sustenance and income. Investing in rural veterinary services is not only a matter of animal health but also a crucial component of community development and economic stability.

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ರಸ್ತೆ ಸರಕು ಸಾಗಾಣೆಯಲ್ಲೂ ತೀವ್ರ ಏರಿಕೆ  |  ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ

ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ದೇಶಾದ್ಯಂತ 1 ಸಾವಿರದ 600 ಚಾಲಕ ತರಬೇತಿ ಕೇಂದ್ರಗಳನ್ನು…

52 minutes ago

ಹವಾಮಾನ ವರದಿ | 04-04-2025 | ಇಂದು ಕೆಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ | ಎ.7 ರಿಂದ ಮಳೆ ಕಡಿಮೆಯಾಗುವ ಲಕ್ಷಣ |

ಇಂದು ಕೆಲವು ಕಡೆ ಗುಡುಗು ಸಹಿತ ಮಳೆಯ ಲಕ್ಷಣವಿದೆ. ರಾಜ್ಯದಲ್ಲಿ ಮಳೆಯ ಪ್ರಮಾಣ…

2 hours ago

ಅಡಿಕೆಯ ನಾಡಿನಲ್ಲಿ ಉಪಬೆಳೆಯಾಗಿ ತರಕಾರಿ ಕೃಷಿ ಮಾಡಿದ ಯುವಕ

ಕೃಷಿಕ ಯಶಸ್ವಿಯಾಗಬೇಕಾದರೆ , ಕೃಷಿ ಬೆಳೆಯಬೇಕಾದರೆ,ಉಳಿಯಬೇಕಾದರೆ ತಿಂಗಳಿಗೆ ಒಂದಷ್ಟು ಆದಾಯ ಸಿಗಲೇಬೇಕು. ಮುಖ್ಯ…

7 hours ago

ಅಭಯಾರಣ್ಯದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ನಿಷೇಧಕ್ಕೆ ಮನವಿ

ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿವೇಳೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಾರದೆಂದು ಸಂಸತ್ ಸದಸ್ಯ ತೇಜಸ್ವಿ…

8 hours ago

ಪಂಚಗ್ರಹಿ ಯೋಗ ಎಂದರೇನು..? | ಈ ಯೋಗವು ಮಹತ್ವದ್ದಾಗಿದೆ ಏಕೆ.. ?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

8 hours ago

ಕೃಷಿ ಸಖಿಯರ ಪ್ರಥಮ ಪ್ರಗತಿ ಪರಿಶೀಲನಾ ಸಭೆ | ವಿವಿಧ ತರಕಾರಿ ಬೀಜಗಳ ವಿತರಣೆ | ತರಕಾರಿ ಬೆಳೆಸುವ ವಿಧಾನಗಳ ಬಗ್ಗೆ ಮಾಹಿತಿ |

ಸುಳ್ಯ ತಾಲೂಕು ಪಂಚಾಯತ್ ಮಿನಿ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ…

15 hours ago