ರಾಜ್ಯದ ಮತದಾರರು ರಾಜಕೀಯ ಪಕ್ಷಗಳ ಭವಿಷ್ಯ ಬರೆದಾಗಿದೆ. ಕದನ ಕಲಿಗಳ ಹಣೆ ಬರಹ ಮತಯಂತ್ರದಲ್ಲಿ ಸುಭದ್ರವಾಗಿದೆ. ಈ ನಡುವೆ ಚುನಾವಣೋತ್ತರ ಸಮೀಕ್ಷೆಗಳು ತೀವ್ರ ಕುತೂಹಲ ಕೆರಳಿಸಿವೆ. ಮತದಾನ ಮುಗೀತಿದ್ದಂತೆ ರಾಜ್ಯದಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿದೆ. ಬೆಟ್ಟಿಂಗ್ ಬಜಾರ್ನಲ್ಲಿ ಬಾಜಿ ಆಟ ಜೋರಾಗೇ ನಡೆಯುತ್ತಿದ್ದು, ಕಾರ್ಯಕರ್ತರು ಕೈಯಲ್ಲಿ ಕಂತೆ ಕಂತೆ ಹಣ ಹಿಡಿದು ಎದುರಾಳಿಗಳಿಗೆ ಸವಾಲು ಹಾಕುತ್ತಿದ್ದಾರೆ.
ಅದರಲ್ಲೂ ಮುಖ್ಯವಾಗಿ ಈ ಬಾರಿ ಸದ್ದು ಮಾಡಿರುವ ವರುಣಾ ಕ್ಷೇತ್ರದ ಫಲಿತಾಂಶ ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ ಅವರು ಗೆದ್ದೇ ಗೆಲ್ಲುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದರೆ, ಇತ್ತ ಸೋಮಣ್ಣ ಗೆಲ್ಲಲಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ. ಅಲ್ಲದೇ ಸೋಮಣ್ಣ ಪರ ಬೆಟ್ಟಿಂಗ್ ಸಹ ಜೋರಾಗಿದೆ. ಸಿದ್ದರಾಮಯ್ಯ ವಿರುದ್ದ ಸೋಮಣ್ಣ 25 ಸಾವಿರ ಮತಗಳಿಂದ ಗೆಲುವು ಸಾಧಿಸುತ್ತಾರೆ ಎಂದು ಬೆಟ್ಟಿಂಗ್ ಆಹ್ವಾನ ನೀಡಿದ್ದಾರೆ. 3,300 ಚದರಡಿ ನಿವೇಶನ ಅಗ್ರಿಮೆಂಟ್ ಮಾಡಿಕೊಡುತ್ತೇನೆ ಎಂದು ಬಹಿರಂಗ ಸವಾಲು ಹಾಕಿರುವ ವಿಡಿಯೋ ವೈರಲ್ ಆಗಿದೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆಯಿಂದ ಬೆಳಗಾವಿಯ ಹೋಮ್ ಪಾರ್ಕ್ ನಲ್ಲಿ…
ದೇಶಾದ್ಯಂತ ಒಂದೇ ದಿನ 47 ಸ್ಥಳಗಳಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು ಬೆಂಗಳೂರಿನ ಎನ್‌ಎಸಿಐಎ…
ಅಲ್ಲಲ್ಲಿ ಸಂಜೆಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ೨…