ಸ್ಫರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ಸಮಯಗಳಿಂದ ಸದ್ದು ಮಾಡಿತ್ತಿರುವ ವಿದ್ಯಾಮಾತಾ ಅಕಾಡೆಮಿಯ ಶಾಖೆ ಈಗ ಸುಳ್ಯದಲ್ಲಿ ಉದ್ಘಾಟನೆಗೊಂಡಿದೆ. ಕಳೆದ 5 ವರ್ಷಗಳಲ್ಲಿ 4000 ಕ್ಕೂ ಅಧಿಕ ಮಂದಿಗೆ ಉದ್ಯೋಗ ಸಿಗುವ ಅವಕಾಶವನ್ನು ಮಾಡಿಕೊಟ್ಟಿದೆ.ಪುತ್ತೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಸ್ಥೆ ಇದೀಗ ಸುಳ್ಯದಲ್ಲಿ ಶಾಖೆಯನ್ನು ತೆರೆದಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳ ವೃತ್ತಿಪರ ಕೌಶಲ್ಯ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆ ಸುಳ್ಯ ರಥಬೀದಿಯ ಟಿಎಪಿಸಿಎಂಎಸ್ ಕಟ್ಟಡದಲ್ಲಿ ಗುರುವಾರ ಉದ್ಘಾಟನೆಗೊಂಡಿತು.ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಟಿಎಪಿಸಿಎಂಎಸ್ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಸುಳ್ಯದ ವೆಂಕಟ್ರಮಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಸಿ.ಜಯರಾಮ, ಸಿಎ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಕೆ.ಎಂ.ಎಫ್ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಪಿ.ಎಸ್.ಗಂಗಾಧರ, ಕಾರ್ಯನಿರ್ವಹಣಾಧಿಕಾರಿ ಜಯರಾಮ ದೇರಪ್ಪಜ್ಜನಮನೆ, ಪ್ರೊ.ಎಂ.ಬಾಲಚಂದ್ರ ಗೌಡ, ಪೂವಪ್ಪ ಕಣಿಯೂರು, ಎ.ಕೆ.ಜಯರಾಮ ರೈ, ಶಿಕ್ಷಕ ಅರವಿಂದ ಚೊಕ್ಕಾಡಿ, ಪೂವಪ್ಪ ಕಣಿಯೂರು ಮೊದಲಾದವರು ಭಾಗವಹಿಸಿದರು.
ಇದೇ ಸಂದರ್ಭ ಅಗ್ನಿವೀರ್ ಆಗಿ ಆಯ್ಕೆಯಾದ ಅಕಾಡೆಮಿಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಇದೇ ವೇಳೆ ನಿತ್ಯಾನಂದ ಮುಂಡೋಡಿ, ಜಯರಾಮ ದೇರಪ್ಪಜ್ಜನಮನೆ, ಪೂವಪ್ಪ ಕಣಿಯೂರು, ಸಾವಿತ್ರಿ ಕಣೆಮರಡ್ಕ, ಅರವಿಂದ ಚೊಕ್ಕಾಡಿ, ನಂದರಾಜ ಸಂಕೇಶ, ನಯನಾ ವಿ ರೈ ಅವರನ್ನು ಗೌರವಿಸಲಾಯಿತು.
ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಸ್ವಾಗತಿಸಿದರು. ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಮಾತಾ ಅಕಾಡೆಮಿಯ ನಿರ್ದೇಶಕಿ ರಮ್ಯಾ ಭಾಗ್ಯೇಶ ರೈ ವಂದಿಸಿದರು.
ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಅವರು 2017 ರಲ್ಲಿ ಪುತ್ತೂರಿನಲ್ಲಿ ವಿದ್ಯಾಮಾತಾ ಫೌಂಡೇಶನ್ 2017 ನ್ನು ಹುಟ್ಟು ಹಾಕಿದರು .2020 ರಲ್ಲಿ ವಿದ್ಯಾಮಾತಾ ಅಕಾಡಮಿ ಸ್ಥಾಪಿಸಿ ಸರ್ಕಾರದ ಮಾನ್ಯತೆ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಮತ್ತು ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳ ವೃತ್ತಿಪರ ಕೌಶಲ್ಯ ತರಬೇತಿ ಆರಂಭಿಸಿದರು.ಕಳೆದ ಎರಡು ವರ್ಷಗಳಲ್ಲಿ 90 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸರ್ಕಾರಿ ಸೇವೆಗೆ ಸೇರುವಂತೆ ತರಬೇತು ಮಾಡಿದ್ದಾರೆ. ಸುಮಾರು 4000 ಕ್ಕೂ ಅಧಿಕ ಮಂದಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಲಭ್ಯವಾಗುವಂತೆ ಅವಕಾಶ ಕಲ್ಪಿಸಿದ್ದಾರೆ. ಸುಳ್ಯ ತಾಲೂಕಿನಲ್ಲಿ ಇದೀಗ ಶಾಖೆ ಆರಂಭಿಸಿದ್ದಾರೆ. ಎಲ್ಲಾ ವೃತ್ತಿಪರ ಕೋರ್ಸ್ ಗಳ ಅರ್ಜಿ,ಉದ್ಯೋಗ ಮಾಹಿತಿ,ತರಬೇತಿ, ಎಲ್ಲಾ ಶ್ರೇಣಿಯ ಉದ್ಯೋಗಗಳಿಗೆ ತರಬೇತಿ ಈ ಸಂಸ್ಥೆಯಲ್ಲಿ ಸಿಗುತ್ತದೆ.
ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
2025-26 ನೇ ಸಾಲಿನ ಅಗ್ನಿವೀರರ ನೇಮಕಾತಿಗಾಗಿ ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗುವುದು…
ಎ.12 ರಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊಸ ರೈಲು ಸಂಚರಿಸಲಿದೆ. ಮಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ…
2025ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಸುಳ್ಯ ತಾಲೂಕಿನ ಬಾಳಿಲದ ಶ್ರೇಯನ್…
ಬಾಟಲ್ಗಳ ಮೂಲಕ ಪೂರೈಕೆಯಾಗುವ ಕುಡಿಯುವ ನೀರು ಕಳಪೆ ಎಂದು ಆಹಾರ ಇಲಾಖೆ ವರದಿ…
ಸಂಜೆ ಅಲ್ಲಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ ಇದೆ.ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಆಂದ್ರಾ…