ದ ಕ ಜಿಲ್ಲೆಯ ಪ್ರಮುಖ ಉದ್ಯಮಿ ವಿಜಯನಾಥ ವಿಠಲ್ ಶೆಟ್ಟಿ ಆಮ್‌ ಆದ್ಮಿ ಪಕ್ಷ ಸೇರ್ಪಡೆ ?

May 22, 2022
11:42 AM
News Summary
| ಉದ್ಯಮಿ ವಿಜಯನಾಥ ವಿಠಲ ಶೆಟ್ಟಿ ಅವರು ಎಎಪಿ ಸೇರ್ಪಡೆ ? |  ದ ಕ ಜಿಲ್ಲೆಯ ಹಲವು ಮಂದಿ ಎಎಪಿಯತ್ತ ಏಕೆ ಮನಸ್ಸು ಮಾಡಿದ್ದಾರೆ ? | ಅಭಿವೃದ್ಧಿ ಪರವಾದ ನಿಲುವನ್ನು ದಕ ಜಿಲ್ಲೆಯ ಜನ ತಳೆಯುತ್ತಿದ್ದಾರೆಯೇ ?|

ದ ಕ ಜಿಲ್ಲೆಯ ಪ್ರಮುಖ ಉದ್ಯಮಿ, ತುಳುನಾಡಿನ ಕಾರಣಿಕ ಕ್ಷೇತ್ರ ಎಡಪದವು ಶಾಸ್ತಾರ ಭೂತನಾಥೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರಾಗಿರುವ ಕೇಸರಿ ವಸ್ತ್ರದೊಂದಿಗೆ ಗುರುತಿಸಿಕೊಂಡಿರುವ ಮಂಗಳೂರಿನ ವಿಜಯನಾಥ ವಿಠಲ್ ಶೆಟ್ಟಿ ಅವರು ಶೀಘ್ರದಲ್ಲಿಯೇ ಆಮ್‌ ಆದ್ಮಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

Advertisement
Advertisement
Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್ ನ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಮಂಗಳೂರಿನಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮ ವಿರಾಟ್ ಹಿಂದೂ ಸಂಗಮ ಕಾರ್ಯಕ್ರಮದ ಯಶಸ್ವಿನ ರೂವಾರಿಯಾಗಿದ್ದ ವಿಜಯನಾಥ ವಿಠಲ್ ಶೆಟ್ಟಿಯವರು  ಉದ್ಯಮ ಕ್ಷೇತ್ರದಲ್ಲಿಯೂ , ಸಾಮಾಜಿಕ ಕ್ಷೇತ್ರದಲ್ಲೂ ಹೆಸರುವಾಸಿಯಾಗಿದ್ದಾರೆ. ರಾಜಕೀಯವಾಗಿಯೂ ತೊಡಗಿಸಿಕೊಂಡಿದ್ದ ವಿಜಯನಾಥ ವಿಠಲ್ ಶೆಟ್ಟಿ ಅವರು ಕಳೆದ ಕೆಲವು ಸಮಯಗಳಿಂದ ತಟಸ್ಥರಾಗಿದ್ದರು. ಇದೀಗ ಶೀಘ್ರವೇ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಹಾಗೂ ಬೆಳವಣಿಗೆಯ ಗುರಿ ಇರಿಸಿಕೊಂಡು ಆಮ್ ಆದ್ಮಿ ಪಕ್ಷಕ್ಕೆ ಸೇರುತ್ತಾರೆ ಎನ್ನಲಾಗಿದೆ.  ಈ ಬಗ್ಗೆ ಈಗಾಗಲೇ  ದೆಹಲಿ ಹಾಗೂ ರಾಜ್ಯದಲ್ಲೂ  ಮಾತುಕತೆ ನಡೆದಿತ್ತು, ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ ಎನ್ನುವುದು  ರಾಜಕೀಯ ವಲಯದ ಚರ್ಚೆ.

Advertisement

ಈ ನಡುವೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲೂ ಪ್ರಮುಖ ನಾಯಕರೊಬ್ಬರು, ಉದ್ಯಮಿ ಹಾಗೂ ಉನ್ನತ ವ್ಯಾಸಾಂಗ ಮಾಡಿರುವ ಯುವ ನಾಯಕರೊಬ್ಬರ ಜೊತೆಯೂ ಮಾತುಕತೆ ನಡೆದಿದೆ ಎಂಬುದು ರಾಜಕೀಯ ಪಡಸಾಲೆಯಲ್ಲಿ  ಚರ್ಚೆಯಾಗುತ್ತಿದೆ.

ಈ ಬಗ್ಗೆ ಆಮ್‌ ಆದ್ಮಿ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾದ್ಯಕ್ಷ ಸಂತೋಷ್‌ ಕಾಮತ್‌ ಪ್ರತಿಕ್ರಿಯೆ ನೀಡಿ, ಈ ಸುದ್ದಿಗಳ ಬಗ್ಗೆ ಸದ್ಯ ಯಾವುದೇ ಪ್ರತಿಕ್ರಿಯೆ ಇಲ್ಲ.ವಿಜಯನಾಥ ವಿಠಲ್ ಶೆಟ್ಟಿ ಅವರೂ ಎಎಪಿ ಸೇರ್ಪಡೆ ಆಗಲಿದ್ದಾರೆ ಎನ್ನುವ ವಿಶ್ವಾಸ ಇದೆ. ಹಲವು ಮಂದಿ ನಾಯಕರ ಜೊತೆ ಈಗಾಗಲೇ ಮಾತುಕತೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಹಾಗೂ ದ್ವೇಷ ರಹಿತ ರಾಜಕಾರಣದಲ್ಲಿ, ಭ್ರಷ್ಟಾಚಾರ ರಹಿತ ಆಡಳಿತದಲ್ಲಿ ಆಸಕ್ತಿ ಇರುವ ಹಲವಾರು ಮಂದಿ ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಬೇಸತ್ತು ಎಎಪಿ ಸಂಪರ್ಕ ಮಾಡಿದ್ದಾರೆ, ಪಕ್ಷವೂ ಈ ನೆಲೆಯಲ್ಲಿಯೇ ಮಾತುಕತೆ ನಡೆಸುತ್ತಿದೆ ಎಂದಷ್ಟೇ ಹೇಳಿದ್ದಾರೆ.
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಮಳೆ
April 18, 2024
10:09 PM
by: ದ ರೂರಲ್ ಮಿರರ್.ಕಾಂ
ಆದರ್ಶ ಜೀವನ ಮತ್ತು ಪರಿಸರ ಸ್ನೇಹಿ ನೀತಿ ತಿಳಿಸುವ ಮಂಗಟ್ಟೆ ಹಕ್ಕಿಗಳು…
April 18, 2024
4:46 PM
by: The Rural Mirror ಸುದ್ದಿಜಾಲ
ಮರುಭೂಮಿ ನಾಡು ದುಬೈನಲ್ಲಿ 75 ವರ್ಷಗಳಲ್ಲೇ ದಾಖಲೆ ಮಳೆ…! | ಪ್ರವಾಹಕ್ಕೆ UAE ತತ್ತರ |
April 18, 2024
3:49 PM
by: The Rural Mirror ಸುದ್ದಿಜಾಲ
ಎಚ್ಚರ….. ತಾಯಂದಿರೇ ನಿಮ್ಮ ಮಕ್ಕಳಿಗೆ ಸೆರೆಲಾಕ್ ತಿನ್ನಿಸುತ್ತೀರಾ..? | ಬಯಲಾಯ್ತು ಶಾಕಿಂಗ್ ನ್ಯೂಸ್…! | ವರದಿ ಬಹಿರಂಗದ ಬಳಿಕ ನೆಸ್ಲೆ ಪ್ರತಿಕ್ರಿಯೆ ಏನು..?
April 18, 2024
3:21 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror