ನಮ್ಮ ದೇಶದಲ್ಲಿ ಶ್ರೀಮಂತರಿಗೆ ಒಂದು ನ್ಯಾಯ. ಬಡವರಿಗೊಂದು ನ್ಯಾಯ. ಇದು ಅನೇಕ ಸಂದರ್ಭಗಳಲ್ಲಿ ನಮ್ಮ ಕಣ್ಣ ಮುಂದೆಯೇ ಸಾಬೀತಾಗಿದೆ ಕೂಡ. ಅದರಲ್ಲೂ ಪರಿಸರ ವಿಚಾರಕ್ಕೆ ಬಂದರೆ ಬಡವ ತನ್ನ ಮನೆ, ಅಥವಾ ಕಟ್ಟಿಗಾಗಿ ಒಂದು ಮರ ಕಡಿದರೆ ಕೇಸ್ ಬಿದ್ದಾಯ್ತು. ಅದೇ ಶ್ರೀ ಮಂತರು ಇಡೀ ಅರಣ್ಯವನ್ನೇ ನುಂಗಿ ನೀರು ಕುಡಿದರು ಅವರ ಮೇಲೆ ಯಾವ ಕೇಸ್ ಇಲ್ಲಾ, ಕಾನೂನು ಇಲ್ಲ…!. ಆದರೆ ಇಲ್ಲಿ ಹಾಗಲ್ಲ ಬರೋಬ್ಬರಿ ದಂಡ ವಿಧಿಸಿ ಸುದ್ದಿಯಾಗಿದೆ ಈ ದೇಶ.
ಉದ್ಯಮ ವಿಸ್ತರಣೆ, ರಸ್ತೆ ಅಗಲೀಕರಣ, ಅನಧಿಕೃತ ಕಟ್ಟಡಗಳು, ಹೋಮ್ ಸ್ಟೇಗಳು ಹೀಗೆ ನಮ್ಮ ಪರಿಸರ ನಾಶಕ್ಕೆ ಕಾರಣವಾಗುತ್ತಿರುವ ಕಾರಣಗಳು ಸಾವಿರಾರು. ಆದರೆ ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧ ಇರೋದಿಲ್ಲ. ಅಷ್ಟೆ ಯಾಕೆ ಮುಂದಿನ ಪೀಳಿಗೆ ಉಳಿಯಬೇಕಂದ್ರೆ ನಮ್ಮ ಪಶ್ಚಿಮ ಘಟ್ಟ ಅತ್ಯಗತ್ಯ. ಅಂತ ಪಶ್ಚಿಮ ಘಟ್ಟವನ್ನೇ ನಾಶ ಮಾಡಿ ತಮ್ಮ ಸ್ವಇಚ್ಛೆ ಮೆರೆಯುತ್ತಿದ್ದಾರೆ. ಆದರೆ ಇದಕ್ಕೆ ಹೊಣೆ ಯಾರು ಇಲ್ಲ.
ಆದರೆ ವಿದೇಶಗಳ ಕಾನೂನು ಹಾಗಿಲ್ಲ. ಅವನು ಯಾರೇ ಆಗಿರಲಿ ಪರಿಸರ ನಾಶಕ್ಕೆ ತಕ್ಕ ಶಾಸ್ತಿ ಅನುಭವಿಸಲೇ ಬೇಕು. ಇಲ್ನೋಡಿ ಮನೆ ನಿರ್ಮಿಸುವಾಗ ಪರಿಸರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಫುಟ್‌ಬಾಲ್ ತಾರೆ #Brazilian football star ನೇಮರ್‌ಗೆ #Neymar ಗೆ ಬರೋಬ್ಬರಿ 27 ಕೋಟಿ ರೂ. (3.3 ಮಿಲಿಯನ್ ಅಮೆರಿಕನ್ ಡಾಲರ್) ದಂಡ ವಿಧಿಸಲಾಗಿದೆ.
ಅವರ ನಿವಾಸದಲ್ಲಿ ಕೃತಕ ಕೊಳ ನಿರ್ಮಾಣದ ವೇಳೆ ಪರಿಸರಕ್ಕೆ ಹಾನಿ ಮಾಡಲಾಗಿದೆ ಎಂದು ಮಂಗರಟಿಬ ಸಿಟಿ ಕೌನ್ಸಿಲ್ ದೂರಿನಲ್ಲಿ ತಿಳಿಸಿದೆ. ಅನುಮತಿಯಿಲ್ಲದೆ ಪರಿಸರಕ್ಕೆ ಧಕ್ಕೆಯಾಗುವಂತಹ ಕೆಲಸ ಮಾಡಿರುವುದು, ನದಿ ನೀರನ್ನು ಬಳಸಿರುವುದು, ಸಸ್ಯವರ್ಗದ ಬೆಳವಣಿಗೆಗೆ ಅಡ್ಡಿಪಡಿಸಿರುವುದು ಸೇರಿದಂತೆ ಹಲವು ಅಪರಾಧಗಳನ್ನು ನೇಮರ್ ಮೇಲೆ ಹೊರಿಸಲಾಗಿದೆ. ಬ್ರೆಜಿಲ್ ಫುಟ್‌ಬಾಲ್ ತಾರೆ ತಮ್ಮ ಬಲ ಪಾದದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಫೆಬ್ರವರಿಯಿಂದ ಅವರು ಫುಟ್ಬಾಲ್ ಪಂದ್ಯಗಳಲ್ಲಿ ಆಡಿಲ್ಲ.
ನಮ್ಮ ದೇಶದಲ್ಲಿ ಇಂಥ ಕೇಸ್ ಹಾಕಿ ಎಲ್ಲಿಯಾದರೂ ಯಾರನ್ನಾದರೂ ದಂಡಿಸಿದ್ದು ಕೇಳಿದ್ದು ಇದೆಯಾ..? ನಮ್ಮ ದೇಶದಲ್ಲೂ ಇಂತಹ ಕಾನೂನು ಬಂದರೆ ಮಾತ್ರ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಲು ಸಾಧ್ಯ.
ಕೃಷಿ ಸೇರಿದಂತೆ ಕುಟುಂಬದ ಬದುಕಿನಲ್ಲಿ ಕಾಣದ ಶ್ರಮವನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವುದು ಸಂಬಂಧಗಳನ್ನು…
ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ರಾಜ್ಯ…
ಗುಜರಾತ್‌ನ ನೀರಿನ ಆಡಳಿತದ ಅನುಭವಗಳನ್ನು ಆಧರಿಸಿದ ‘ಗುಜರಾತ್‌ನಿಂದ ಭಾರತಕ್ಕೆ ಜಗತ್ತಿಗೆ ನೀರಿನ ಪಾಠಗಳು’…
ಅಡಿಕೆ ಮತ್ತು ತೆಂಗಿನ ತೋಟಗಳಲ್ಲಿ ಉಪಬೆಳೆಯಾಗಿ ಕೋಕೋಗೆ ಉತ್ತಮ ಅವಕಾಶಗಳಿದ್ದರೂ ಬೆಲೆ ಏರಿಳಿತ,…
ಅಡಿಕೆ ಕ್ಷೇತ್ರದಲ್ಲಿ ಉತ್ಪಾದನೆ, ದಾಸ್ತಾನು, ಬೇಡಿಕೆ, ಆಮದು, ಮಾರುಕಟ್ಟೆ ಮತ್ತು ಉತ್ಪಾದನಾ ವೆಚ್ಚದ…
ಕರ್ನಾಟಕದಿಂದ ನೈಋತ್ಯ ಮುಂಗಾರು ಸಂಪೂರ್ಣ ಹಿಂದೆ ಸರಿದಿದ್ದು, ಅ.11ರ ಸುಮಾರಿಗೆ ಹಿಂಗಾರು ಆರಂಭಕ್ಕೆ…