Advertisement
ವೈರಲ್ ಸುದ್ದಿ

#ViralNews | ನಿರುದ್ಯೋಗಿಯನ್ನಾಗಿ ಮಾಡಿದ ಹಚ್ಚೆಯ ಹುಚ್ಚು | ಶೌಚಾಲಯ ತೊಳೆಯೋ ಕೆಲಸವೂ ಸಿಗುತ್ತಿಲ್ಲವಂತೆ…! |

Share

ಮನುಷ್ಯನಿಗೆ ಅದೇನೇನೋ ಹುಚ್ಚುತನಗಳು ಇರುತ್ತವೆ. ಕೆಲವೊಮ್ಮೆ ಈ ಹುಚ್ಚುತನಗಳು ಹವ್ಯಾಸವಾಗಿ ಬೆಳೆದರೆ, ಇನ್ನು ಕೆಲವು ಅವರ ಜೀವನಕ್ಕೇ ಕುತ್ತು ತರುತ್ತವೆ. ಅಂಥವರ ಸಾಲಿಗೆ ಸೇರಿದ್ದಾಳೆ ಇಲ್ಲೊಬ್ಬ ಮಹಿಳೆ. ಈಕೆ ಮಹಾನ್ ಟ್ಯಾಟೋ ಲವರ್ #TattooLover. ತನ್ನ ಮೈಮೇಲೆ ಈಗಾಗಲೇ 800 ಹಚ್ಚೆ ಹಾಕಿಸಿಕೊಂಡಿದ್ದಾಳೆ.  ಈಕೆಗೆ ಹಚ್ಚೆ ಹಾಕಿಸಿಕೊಳ್ಳುವುದು ಒಂದು ವ್ಯಸನ. ಕೆಲಸವನ್ನು ಹುಡುಕುತ್ತಲೇ ವಾರಕ್ಕೆ ಮೂರು ಹೊಸ ಹಚ್ಚೆಗಳನ್ನು ಹಾಕಿಸಿಕೊಳ್ಳುತ್ತಳೆ ಇರುತ್ತಾಳೆ.

ಮನುಷ್ಯನಿಗೆ ಹುಚ್ಚು ಇರಬೇಕು, ಆದರೆ ಬದುಕನ್ನೇ ತೊಡಕು ಮಾಡಿಕೊಳ್ಳುವಷ್ಟು ಅಲ್ಲ. ಇದೀಗ ವೈರಲ್ ಆಗುತ್ತಿರುವ ಈ ಪೋಸ್ಟ್​ನಲ್ಲಿರುವ ಮಹಿಳೆಯನ್ನು ಗಮನಿಸಿ. ಹಚ್ಚೆಪ್ರಿಯಳಾದ ಈಕೆ ಈ ತನಕ ಒಂದಲ್ಲ ಹತ್ತಲ್ಲ ಬರೋಬ್ಬರಿ 800 ಹಚ್ಚೆಗಳನ್ನು ತನ್ನ ಮೈಮುಖದ ಮೇಲೆ ಹಾಕಿಸಿಕೊಂಡಿದ್ದಾಳೆ. ಆದರೆ ಈ ‘ಹಚ್ಚೆಯ ಚಟ’ ದಿಂದಾಗಿಯೇ ಆಕೆ ನಿರುದ್ಯೋಗವನ್ನು  ಅನುಭವಿಸುವಂತಾಗಿದೆ. ಕೆಲಸ ಕೇಳಿಕೊಂಡು ಹೋದಲ್ಲೆಲ್ಲ ಆಕೆಯ ಹಚ್ಚೆಗಳ ಬಗ್ಗೆಯೇ ಟೀಕಿಸುತ್ತಾರೆ ವಿನಾ ಯಾರೊಬ್ಬರೂ ಈಕೆಗೆ ಕೆಲಸ ಕೊಡುತ್ತಿಲ್ಲ. ಹೀಗಾಗಿ ಮಾಡಿದ್ದುಣ್ಣೋ ಮಾರಾಯಾ ಎಂಬಂತಾಗಿದೆ ಈಕೆಯ ಪರಿಸ್ಥಿತಿ.
ನ್ಯೂಯಾರ್ಕ್​ ಪೋಸ್ಟ್​ನ ವರದಿಯಂತೆ, ಲಂಡನ್​ನ ವೇಲ್ಸ್​ನಲ್ಲಿ 46 ವರ್ಷದ ಈ ಮೆಲಿಸ್ಸಾ ಸ್ಲೋನ್​ ನೆಲೆಸಿದ್ದಾಳೆ. ಈಕೆಗೆ ಎರಡು  ಹೆಣ್ಣುಮಕ್ಕಳೂ ಇವೆ. ಆದರೆ ಕೆಲಸವಿಲ್ಲದೆ ಇದೀಗ ಒದ್ಧಾಡುತ್ತಿದ್ದಾಳೆ. “ಶೌಚಾಲಯ ಸ್ವಚ್ಛಗೊಳಿಸುವ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ರು, ಹಚ್ಚೆಗಳನ್ನು ನೋಡಿಯೇ ಈಕೆಗೆ ಕೆಲಸ ಕೊಡಲಿಲ್ಲ” ಎನ್ನುವುದು ಈಕೆಯ ಅಳಲು.
( ಕೃಪೆ : ಅಂತರ್ಜಾಲ )
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 11-01-2026| ಇಂದು ಕೆಲವೆಡೆ ಮಳೆ ನಿರೀಕ್ಷೆ | ಎಲ್ಲೆಲ್ಲಿ ಮಳೆ ಇರಬಹುದು..?

12.01.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…

7 hours ago

ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ

ಬರ ಪ್ರದೇಶ ಕೃಷಿಗೆ ಹೊಸ ದಾರಿ ತೆರೆದಿರುವ ICAR–ಒಂಟೆ ಸಂಶೋಧನಾ ಕೇಂದ್ರದ ಅಧ್ಯಯನವು,…

11 hours ago

ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ

ರಾಜಸ್ಥಾನದ ಹನುಮಂಗಢ ಜಿಲ್ಲೆಯಲ್ಲಿ ಇಬ್ಬರು ಗ್ರಾಮೀಣ ಉದ್ಯಮಿಗಳು ಆರಂಭಿಸಿದ ಗ್ರೀನ್ ವಿಷನ್ ವರ್ಮಿಕಾಂಪೋಸ್ಟ್…

12 hours ago

ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತನೆ : ಸಚಿವ ಕೃಷ್ಣ ಬೈರೇಗೌಡ

ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…

22 hours ago

ದೇಹವು ಆರೋಗ್ಯವಾಗಿದೆ ಎನ್ನಲು ಈ ಸಂಕೇತವೇ ಸಾಕು..

ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…

22 hours ago