ಮರದಿಂದ ನೀರು ಚಿಮ್ಮುತ್ತಿದೆ. ಪ್ರಕೃತಿಯ ಈ ಅಚ್ಚರಿ ಅಲ್ಲಿ ಚರ್ಚೆಗೆ ಕಾರಣವಾಗಿತ್ತು. ಆದರೆ ವಿಜ್ಞಾನದ ಮೂಲಕ ಈ ಅಚ್ಚರಿಗೆ ಉತ್ತರವೂ ಸಿಕ್ಕಿದೆ. ಈ ಘಟನೆ ನಡೆದದ್ದು ಯುರೋಪಿನ ಮಾಂಟೆನೆಗ್ರೊದಲ್ಲಿ. ಹಿಪ್ಪುನೇರಳೆ ಮರದಲ್ಲಿ ಈ ಕೌತುಕ ಕಂಡಿತ್ತು.
ಆಗ್ನೇಯ ಯುರೋಪಿನ ಮಾಂಟೆನೆಗ್ರೊದಲ್ಲಿರುವ ಹಿಪ್ಪುನೇರಳೆ ಮರವು ಅದರ ಕಾಂಡದೊಳಗೆ ಧಾರಾಕಾರವಾಗಿ ನೀರನ್ನು ಹೊರಹಾಕುವುದನ್ನು ಕಾಣುತ್ತಿದೆ. ಈ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಯಿತು. ಮರದಿಂದ ಈ ರೀತಿ ನೀರು ಚಿಮ್ಮಲು ಸಾಧ್ಯವೇ ಎಂದು ಚರ್ಚೆಯಾಗಿತ್ತು. ಅದರಲ್ಲಿ ಏನೋ ಕೌತುಕವಿದೆ ಎಂದೂ ಚರ್ಚೆಯಾಯಿತು. ಆದರೆ ಪ್ರಪಂಚದಾದ್ಯಂತ ಇದೇ ಮಾದರಿಯಲ್ಲಿ ವಿವಿಧ ಮರಗಳಲ್ಲಿ ನೀರು ಹೊರಬರುತ್ತದೆ, ಕೆಲವು ಮರಗಳಲ್ಲಿ ನೀರು ಚಿಮ್ಮುತ್ತದೆ ಕೂಡಾ. ಕೆಲವು ಮರಗಳಲ್ಲಿ ಗೆಲ್ಲು, ಟೊಂಗೆ ಕಡಿದಾಗ ನೀರು ಹರಿದರೆ ಇನ್ನೂ ಕೆಲವು ಮರಗಳಲ್ಲಿ ಪ್ರಕೃತಿ ಸಹಜವಾಗಿಯೇ ವರ್ಷಕ್ಕೊಮ್ಮೆ ನೀರು ಹರಿಯುತ್ತದೆ. ಕೆಲವು ಮರಗಳು ಪ್ರತಿ ವರ್ಷ, ಒಂದು ಅಥವಾ ಎರಡು ದಿನಗಳವರೆಗೆ, ಮರಗಳ ತೊಗಟೆಗಳು ಅವುಗಳ ಮೂಲಕ ನೀರನ್ನು ಹರಿಯುವಂತೆ ಮಾಡುತ್ತವೆ.
ಮಾಂಟೆನೆಗ್ರೊದ ರಾಜಧಾನಿಯಾದ ಪೊಡ್ಗೊರಿಕಾದಲ್ಲಿರುವ ಡೈನೋಸಾ ಎಂಬ ಹಳ್ಳಿಯಲ್ಲೂ ಅದೇ ಮಾದರಿಯಲ್ಲಿ ಮರದಿಂದ ನೀರು ಹರಿದಿದೆ. ಮರದ ಟೊಳ್ಳುಗಳು ಉಕ್ಕಿ ಹರಿಯುವಿಕೆಯನ್ನು ಸಮತೋಲನಗೊಳಿಸಲು ಮತ್ತು ಒತ್ತಡವನ್ನು ನಿವಾರಿಸಲು ಮರಗಳು ಈ ರೀತಿಯಲ್ಲಿ ನೀರನ್ನು ಹೊರಹಾಕುತ್ತವೆ. ಮಳೆ ಕಳೆದು ಬೇಸಗೆಯ ಸಮಯದಲ್ಲಿ ಮರಗಳು ಸಮತೋಲನ ಕಾಣಲು ಈ ರೀತಿ ಮಾಡುತ್ತವೆ ಎಂದು ವೈಜ್ಞಾನಿಕ ಕಾರಣವನ್ನು ಕೊಡಲಾಗಿದೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.