MIRROR FOCUS

ಕನ್ನಡ ಶಾಲೆಯ ಒಂದು ಸಾರ್ಥಕ ಕೆಲಸ | ಹಳ್ಳಿಯ ಶಾಲೆಗೆ ಸ್ಮಾರ್ಟ್‌ ಕ್ಲಾಸ್‌ | ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಿಂದ ಮಾದರಿ ಕಾರ್ಯ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕನ್ನಡ ಉಳಿಸೋಣ.. ಅಂದರೆ ಕನ್ನಡ ಶಾಲೆಗಳನ್ನೂ ಉಳಿಸುವುದರ ಜೊತೆಗೆ ಮಕ್ಕಳಿಗೆ ಸರಿಯಾದ ಶಿಕ್ಷಣದ ವ್ಯವಸ್ಥೆಯೂ ಆಗಬೇಕು. ಅಂತಹದ್ದೊಂದು ಮಾದರಿ ಕಾರ್ಯ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಮಾಡಿದೆ. ಅದೂ ಕನ್ನಡ ರಾಜ್ಯೋತ್ಸವದಂದು ಚಾಲನೆಯಾಗಿದೆ. ಗ್ರಾಮೀಣ ಭಾಗದ ಅಭಿವೃದ್ದಿಯ ಹೆಜ್ಜೆ, ಕನ್ನಡ ಉಳಿಸುವ ಕಾರ್ಯ, ಸರ್ಕಾರಿ ಶಾಲೆಯನ್ನು ಬೆಳೆಸುವ ಮನಸ್ಸು.. ಇದೆಲ್ಲಾ ಇಲ್ಲಿ ಆಗಿದೆ…

Advertisement

ಮಡಿಕೇರಿ ತಾಲೂಕಿನ ಕರಿಕೆಯ ಸರ್ಕಾರಿ ಪ್ರೌಢಶಾಲೆಯಲ್ಲಿದ್ದ ವಿಜ್ಞಾನ ಶಿಕ್ಷಕಿಯ ವರ್ಗಾವಣೆ ಆಗಿತ್ತು. ಆ ಸ್ಥಾನಕ್ಕೆ  ಬೇರೆ ಶಿಕ್ಷಕರು ಬಾರದೇ ಇದ್ದಾಗ ವಿಜ್ಞಾನ ಶಿಕ್ಷಕರ ಹುದ್ದೆ ಖಾಲಿ ಉಳಿಯಿತು. ಮಕ್ಕಳಿಗೆ ಪಾಠದ ಕೊರತೆ ಉಂಟಾಯಿತು. ಇಲಾಖೆಗಳೂ ಬೇರೆ ಶಿಕ್ಷಕರು ಬಾರದೇ ಇದ್ದ ಶಿಕ್ಷಕರನ್ನೂ ವರ್ಗಾವಣೆ ಮಾಡಿ ಆಗಿತ್ತು. ಕರಿಕೆಯಂತಹ, ಗ್ರಾಮೀಣ ಭಾಗದ ಶಾಲೆಗಳಿಗೆ ಶಿಕ್ಷಕರು ಬರುವುದು  ದೂರ ಮಾತೇ ಆಗಿದೆ. ಅದೂ ವಿಜ್ಞಾನ ಶಿಕ್ಷಕರು ಬರುವುದು ತೀರಾ ಕಷ್ಟ. ಹೀಗಾಗಿ ಮಡಿಕೇರಿಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿವಿಧ ಪ್ರಯತ್ನ ಮಾಡಿದ್ದರು. ಒಂದು ವಾರ ವಿವೇಕಾನಂದ ಯುವ ಕೇಂದ್ರದವರು ತರಗತಿಗಳನ್ನು ನಡೆಸಿದರು. ಅದಾದ ನಂತರ ಮುಂದೇನು? ಮಕ್ಕಳಿಗೆ ವಿಜ್ಞಾನ ಪಾಠದ ಅಗತ್ಯವೂ ಇತ್ತು.

ಈ ಸಂದರ್ಭದಲ್ಲಿ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಚಂದ್ರಶೇಖರ ದಾಮ್ಲೆ ಅವರನ್ನು ಇಲಾಖೆಯು ಸಂಪರ್ಕ ಮಾಡಿತು. ಕರಿಕೆ ಶಾಲೆಯ ಮುಖ್ಯಸ್ಥರು, ಸ್ಥಳೀಯರೂ ಮಾತುಕತೆ ನಡೆಸಿದರು. ಕರಿಕೆಗೆ ಹೋಗಿ ಪಾಠ ಮಾಡುವ ಅವಕಾಶ ಇಂದಿನ ಸಂದರ್ಭ ತೀರಾ ಕಷ್ಟ ಎಂಬ ಹಿನ್ನೆಲೆಯಲ್ಲಿ  ಸ್ನೇಹ ಶಾಲೆಯ ಮುಖ್ಯಸ್ಥರಾದ ಡಾ.ಚಂದ್ರಶೇಖರ ದಾಮ್ಲೆ ಅವರು ಪರ್ಯಾಯ ಮಾರ್ಗವನ್ನು ಹುಡುಕಿದರು.ಆಗ ಹೊಳೆದ ಪರ್ಯಾಯ ವ್ಯವಸ್ಥೆಯೇ  virtual class.

ಸ್ನೇಹ ಶಾಲೆಯಲ್ಲಿ ಕಲಿಸುವ  ಶಿಕ್ಷಕಿಯರು ಕನ್ನಡ ಮಾಧ್ಯಮದಲ್ಲಿ ಕರಿಕೆಯ ಮಕ್ಕಳಿಗೆ ಡಿಜಿಟಲ್‌ ಬೋರ್ಡ್‌ ಮೂಲಕ virtual class ನಲ್ಲಿ ಪಾಠ ಮಾಡಲು ಸಜ್ಜಾದರು. ವ್ಯವಸ್ಥೆ ಸಿದ್ಧಗೊಂಡಿತು. ಇದಕ್ಕಾಗಿ ತಾಂತ್ರಿಕ ವ್ಯವಸ್ಥೆ ಸಿದ್ಧವಾಯಿತು.

Advertisement

ಈಗ ಸ್ನೇಹ ಶಾಲೆಯಲ್ಲಿ ಇರುವ ಡಿಜಿಟಲ್ ಬೋರ್ಡ್ ನ್ನು ಬಳಸಿಕೊಂಡು ವಿಜ್ಞಾನ ಶಿಕ್ಷಕಿಯರು ಪಾಠ ಮಾಡುತ್ತಾರೆ. ಕರಿಕೆಯ ಶಾಲೆಯ ತರಗತಿಯಲ್ಲಿ ಕುಳಿತ ವಿದ್ಯಾರ್ಥಿಗಳಿಗೆ ಪಾಠ ಕಾಣುತ್ತದೆ ಮತ್ತು ಕೇಳಿಸುತ್ತದೆ. ಆ ವಿದ್ಯಾರ್ಥಿಗಳು  ಶಿಕ್ಷಕಿಗೆ ಕಾಣುತ್ತಾರೆ. ಅವರು ಪ್ರಶ್ನೆಗಳಿದ್ದರೆ ಅಲ್ಲಿಂದಲೇ ಕೇಳಬಹುದು. ಇವರು ಉತ್ತರಿಸಿ ಸಂಶಯ ನಿವಾರಣೆ ಮಾಡಲು ಸುಲಭ ಸಾಧ್ಯವಾಗಿದೆ. ಕಳೆದ ವಾರವಿಡೀ ತಾಂತ್ರಿಕ ಸೌಲಭ್ಯಗಳ ಅಳವಡಿಕೆಯ ಪ್ರಯತ್ನ ನಡೆಯಿತು.ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲು ಬೆಂಗಳೂರಿನ Right to Live NGO ದವರು ಮುಂದೆ ಬಂದಿದ್ದಾರೆ. ಈ ಸಂಸ್ಥೆ ಕೂಡಾ ಗ್ರಾಮೀಣ ಭಾಗದ ಶಿಕ್ಷಣ ವ್ಯವಸ್ಥೆ ಹಾಗೂ ಮೂಲಭೂತ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದೆ. ಕರಿಕೆಯ ಪದವಿಧರ ಯುವಕ ಹರೀಶ್  ಎಂಬವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಕಂಪ್ಯೂಟರ್ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ. ಹೀಗೇ ಎಲ್ಲರೂ ಜೊತೆಯಾಗಿ ಒಂದು ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಒಂದು ಹೆಜ್ಜೆ ಇರಿಸಿದ್ದಾರೆ.

ಶಿಕ್ಷಕರಿಲ್ಲದಿದ್ದಲ್ಲಿ ವಿದ್ಯಾರ್ಥಿಗಳಿಗೆ ಪಾಠ ನಷ್ಟವಾಗದಂತೆ ಮಾಡಲು ಸಾಧ್ಯ ಎಂಬ ಪರಿಹಾರದ ಬೆಳಕನ್ನು ಈ ಪ್ರಯೋಗ ತೋರಿಸಿದೆ. ಸರ್ಕಾರ ಇಂತಹ ವ್ಯವಸ್ಥೆಯ ಕಡೆಗೆ ಗಮನಹರಿಸಬಹುದು. ಸುಳ್ಯದಂತಹ ಪ್ರದೇಶದಲ್ಲಿ ಕನ್ನಡ ಮಾಧ್ಯಮ , ಸರ್ಕಾರಿ ಶಾಲೆಯ ಉಳಿಸುವ ಬಗ್ಗೆ ಹೆಜ್ಜೆ ಇರಿಸಿರುವ ಸ್ನೇಹದಂತಹ ಶಿಕ್ಷಣ ಸಂಸ್ಥೆಯ ಹೆಜ್ಜೆಯೂ ಗಮನಾರ್ಹವಾಗಿದೆ.

ಕರಿಕೆ ಸರಕಾರಿ ಶಾಲೆಯು ಕನ್ನಡ ಮಾಧ್ಯಮದ್ದಾದ ಕಾರಣ ಈ ಸಹಯೋಗದ ಮೂಲಕ ಕನ್ನಡದ ಸೇವೆ ಮಾಡಿದ ಸಾರ್ಥಕತೆ ನಮಗೆ ಉಂಟಾಗಿದೆ. ನಾವಿನ್ನು ಯಾವುದೇ ಶಾಲೆಗೆ ಯಾವುದೇ ವಿಷಯಲ್ಲಿ vitual class  ಅಗತ್ಯವಿದ್ದಲ್ಲಿ ಸಹಕರಿಸುವ ಸಾಮರ್ಥ್ಯ ಹೊಂದಿದ್ದೇವೆ. ಪಾಠ ಮಾಡಲು ಶಿಕ್ಷಕರಿಲ್ಲದ್ದರಿಂದ ಎಸ್. ಎಸ್. ಎಲ್. ಸಿ. ಯಲ್ಲಿ ಫೇಲ್ ಆದೆನೆಂದು ವಿದ್ಯಾರ್ಥಿಗಳು ಹೇಳದಂತೆ ಮಾಡಬಹುದು.ಶಿಕ್ಷಣ ಇಲಾಖೆ ಬಯಸಿದರೆ ನೆರವು ನೀಡಲು ನಾವು ಸಿದ್ಧ ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಚಂದ್ರಶೇಖರ ದಾಮ್ಲೆ ಹೇಳುತ್ತಾರೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಮನೆಗೆ ಇಡುವ ಹೆಸರನ್ನು ಯಾವ ಅಕ್ಷರದಿಂದ ಆರಂಭಿಸಿದರೆ ಉತ್ತಮ..?

ಜ್ಯೋತಿಷ್ಯಶಾಸ್ತ್ರ ಮತ್ತು ವಾಸ್ತು ಶಾಸ್ತ್ರದಲ್ಲಿ, ಮನೆಯ ಹೆಸರು ಕೇವಲ ಒಂದು ಗುರುತಿನ ಚಿಹ್ನೆಯಷ್ಟೇ…

29 minutes ago

ನಕಲಿ, ಕಳಪೆ ಗುಣಮಟ್ಟದ ರಸಗೊಬ್ಬರ ಪೂರೈಕೆ | ಕಠಿಣ ಕ್ರಮಕ್ಕೆ  ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ನಿರ್ದೇಶನ

ನಕಲಿ ಮತ್ತು ಕಳಪೆ ಗುಣಮಟ್ಟದ ರಸಗೊಬ್ಬರಗಳ ಪೂರೈಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ…

9 hours ago

ಮಂಡ್ಯದಲ್ಲಿ  ಸ್ವಸಹಾಯ ಸಂಘದ ಮಹಿಳೆಯರಿಗೆ ಮೇಕೆ, ಕುರಿ, ಕೋಳಿ ಸಾಕಾಣಿಕೆ ಅವಕಾಶ

ಸಹಾಯ ಸಂಘದ ಮಹಿಳೆಯರಿಗೆ ಮೇಕೆ, ಕುರಿ, ಕೋಳಿ ಸಾಕಾಣಿಕೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ…

9 hours ago

ಇಂಧನ ಆಮದು ದೇಶಗಳ ಗುಂಪು ವಿಸ್ತರಿಸಿದ ಭಾರತ – 2 ಲಕ್ಷ ಚ.ಕಿ.ಮೀ. ಪ್ರದೇಶದಲ್ಲಿ ಹೈಡ್ರೋಕಾರ್ಬನ್ ಪರಿಶೋಧನೆ

ವಿಶ್ವದ ಹಲವು ಭಾಗಗಳಲ್ಲಿನ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳ ಹೊರತಾಗಿಯೂ ಭಾರತವು ಇಂಧನ ಲಭ್ಯತೆ,…

9 hours ago

ಮುಳ್ಳಯ್ಯನಗಿರಿಗೆ 600 ವಾಹನಗಳಿಗೆ ಪ್ರವೇಶ | ವಾಹನಗಳ ದಟ್ಟಣೆ ನಿಯಂತ್ರಿಸಲು ಕ್ರಮ

ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಭಾಗದಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸಲು ಜಿಲ್ಲಾಡಳಿತ ವಾಹನಗಳಿಗೆ ಎರಡು…

9 hours ago

ಯಾದಗಿರಿಯಲ್ಲಿ ಹೆಸರು ಬೆಳೆಗೆ ಹಳದಿ ನಂಜಾಣು ರೋಗ ಬಾಧೆ

ಯಾದಗಿರಿಯಲ್ಲಿ ಹೆಸರು ಬೆಳೆಗೆ ಹಳದಿ ನಂಜಾಣು ರೋಗದ ಭಾದೆ ಕಾಣಿಸಿಕೊಂಡಿದ್ದು, ಇದರ ತಡೆಗೆ…

10 hours ago