ಪುಟ್ಟ ತಂಗಿಯನ್ನು ಮಡಿಲಿನಲ್ಲಿ ಇರಿಸಿಕೊಂಡು ಪಾಠ ಕೇಳುವ 10 ವರ್ಷದ ಬಾಲಕಿ…! |

April 6, 2022
11:00 AM

ಮಣಿಪುರಿ 10 ವರ್ಷದ ಬಾಲಕಿ ತನ್ನ ತಂಗಿಯನ್ನು ತನ್ನ ಮಡಿಲಲ್ಲಿಟ್ಟುಕೊಂಡು ಶಾಲೆಗೆ ಹೋಗುತ್ತಿರುವ ಫೋಟೋ ಗಮನ ಸೆಳೆದಿದೆ. ತಂಗಿಯನ್ನು ಮಡಿಲಿನಲ್ಲಿಯೇ ಇಟ್ಟುಕೊಂಡು ಪಾಠ ಸಹ ಕೇಳಿದ್ದಾಳೆ. ಈ ಫೋಟೋವನ್ನು ಮಣಿಪುರದ ವಿದ್ಯುತ್, ಅರಣ್ಯ ಮತ್ತು ಪರಿಸರ ಸಚಿವ ಟಿ. ಬಿಸ್ವಜಿತ್ ಸಿಂಗ್ ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Advertisement
Advertisement

Advertisement

ಈ ವಿದ್ಯಾರ್ಥಿನಿ 4 ನೇ ತರಗತಿಯಲ್ಲಿ ಓದುತ್ತಿದ್ದು, ಹೆಸರು ಮೈನಿಂಗ್‌ ಸಿನ್ಲಿಯು ಪಮೇಯ್. ಈಕೆಯ ಪೋಷಕರ ಕೃಷಿ ಕಾರ್ಮಿಕರಾಗಿದ್ದು, ದಿನ ನಿತ್ಯ ಕೆಲಸಕ್ಕೆ ಹೋಗಲೇಬೇಕು. ಆದ್ದರಿಂದ ಮೈನಿಂಗ್‌ ಸಿನ್ಲಿಯು ಪಮೇಯ್ ತನ್ನ ಪುಟ್ಟ ತಂಗಿಯನ್ನು ಕಂಕುಳಲ್ಲಿ ಕಟ್ಟಿಕೊಂಡು ಶಾಲೆಗೆ ಹೋಗಿದ್ದಾಳೆ. ಈ ಫೋಟೋ ನೋಡಿದ  ಟಿ. ಬಿಸ್ವಜಿತ್ ಸಿಂಗ್ ಅವರು ಬಾಲಕಿ ಹಾಗೂ ಆಕೆಯ ಪೋಷಕರನ್ನು ಸಂಪರ್ಕಿಸಿ ರಾಜಧಾನಿ ಇಂಫಾಲ್ ಗೆ ಕರೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೈನಿಂಗ್‌ ಸಿನ್ಲಿಯ ಪದವಿವರೆಗಿನ ಶಿಕ್ಷಣದ ಜವಾಬ್ದಾರಿಯನ್ನು ತೆಗೆದುಕೊಳ್ಳುವದಾಗಿ ಸಚಿವರು ಹೇಳಿದ್ದಾರೆ.

ಈ ಹೃದಯ ಸ್ಪರ್ಶಿ ಫೋಟೋ ನೆಟ್ಟಿಗರನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ. ಅಷ್ಟು ಚಿಕ್ಕ ಬಾಲಕಿಯ ತನ್ನ ಜವಾಬ್ದಾರಿಯಿಂದ ನುಣಚಿಕೊಳ್ಳದೇ ಶಿಕ್ಷಣ ಪಡೆಯುವ ಆಕೆಯ ಹಂಬಲವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

Advertisement

 

 

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ರಾಜ್ಯದ ಹಲವೆಡೆ ಮಳೆ | ತಂಪಾದ ಬರದ ನೆಲ | ಸಿಡಿಲು ಬಡಿದು ಬಾಲಕಿ ಸಾವು
May 18, 2024
12:45 PM
by: The Rural Mirror ಸುದ್ದಿಜಾಲ
ಕೃಷಿಯಲ್ಲಿ ಯುವ ರೈತನ ಸಾಧನೆ | 200 ರೂ. ಗೆ 1 ಕೆ.ಜಿ ಬೀನ್ಸ್ ಮಾರಾಟ ಮಾಡಿ 20 ಲಕ್ಷ ಬಂಪರ್‌ ಲಾಭ |
May 18, 2024
12:18 PM
by: The Rural Mirror ಸುದ್ದಿಜಾಲ
ಗದಗ ಜಿಮ್ಸ್ ಆಸ್ಪತ್ರೆಗೆ ತಟ್ಟಿದ ಬರದ ಬಿಸಿ | ನೀರಿಲ್ಲದೆ ರೋಗಿಗಳ ಪರದಾಟ | ದಾರಿಕಾಣದಾದ ಸಿಬ್ಬಂದಿಗಳು
May 17, 2024
2:55 PM
by: The Rural Mirror ಸುದ್ದಿಜಾಲ
ಮುಂದಿನ 10 ದಿನಗಳ ಹವಾಮಾನ ಪರಿಸ್ಥಿತಿ ಹೇಗಾಗುತ್ತದೆ…? | ದಕ್ಷಿಣ ಭಾರತದಲ್ಲಿ ಭಾರೀ ಮಳೆಯ ಎಚ್ಚರಿಕೆ | ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು…?
May 17, 2024
11:32 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror