ಭಾರತೀಯ ಭವ್ಯ ಪರಂಪರೆಯನ್ನು ಭಾವಿ ಪೀಳಿಗೆಯಲ್ಲಿ ಉಳಿಸಿ ಬೆಳೆಸುವ ಮಹತ್ಸಂಕಲ್ಪದೊಂದಿಗೆ ಶ್ರೀರಾಮಚಂದ್ರಾಪುರಮಠ ಆರಂಭಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾರ್ವಭೌಮ ಗುರುಕುಲಕ್ಕೆ 2023-24ನೇ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಗುರುಕುಲದಲ್ಲಿ ನಾಲ್ಕರಿಂದ ಹನ್ನೆರಡನೇ ತರಗತಿವರೆಗೆ ವಸತಿಯುತ ಶಿಕ್ಷಣ ಸೌಲಭ್ಯವಿದ್ದು, ಜಾತಿ ಮತಗಳ ಬೇಧವಿಲ್ಲದೇ ಎಲ್ಲರೂ ಅರ್ಜಿ ಸಲ್ಲಿಸಬಹುದಾಗಿದೆ. ಋಷಿಯುಗ ಮತ್ತು ನವಯುಗ ಶಿಕ್ಷಣಗಳ ಸಮ್ಮಿಲನವಿರುವ ದೇಶದ ಏಕೈಕ ಗುರುಕುಲ ಇದಾಗಿದ್ದು, ಪಠ್ಯದ ಜತೆಗೆ ಜೀವನ ಮೌಲ್ಯಗಳಿಗೂ ಒತ್ತು ನೀಡಿ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಇಲ್ಲಿನ ಶಿಕ್ಷಣ ನೆರವಾಗಲಿದೆ. ನಿಗದಿತ ಪಠ್ಯದ ಜತೆಗೆ ಯೋಗ, ಜ್ಯೋತಿಷ್ಯ, ವಾಸ್ತು, ಆಯುರ್ವೇದ, ಸಂಗೀತ, ವಾದ್ಯ, ನೃತ್ಯ, ಚಿತ್ರ, ಯಕ್ಷಗಾನ, ಕುದುರೆ ಸವಾರಿ ಕಳರಿಪಯಟ್, ಕರಕುಶಲಕಲೆ, ರಂಗೋಲಿ ಕಸೂತಿ, ಪಾರಂಪರಿಕ ಪಾಕಶಾಸ್ತ್ರ, ಗೃಹನಿರ್ವಾಹ ಹೀಗೆ ರೆಲ್ಲೂ ದೊರೆಯದ ಪ್ರಾಚೀನ ಭಾರತದ ಅಪೂರ್ವ ಕಲೆಗಳನ್ನು ಒಂದೇ ಸೂರಿನಡಿ ಮಕ್ಕಳಿಗೆ ಬೋಧಿಸಲಾಗುತ್ತದೆ. ಸಿಇಟಿ/ಜೆಇಇ/ನೀಟ್/ಸಿಎ/ಸಿಎಸ್ ಪರೀಕ್ಷೆಗಳಿಗೂ ತರಬೇತಿ ವ್ಯವಸ್ಥೆ ಇದೆ. ಭಾರತೀಯ ಹಬ್ಬ- ಹರಿದಿನಗಳ ಆಚರಣೆಯ ಜತೆಗೆ ಸೂಕ್ತ ವಸತಿಯ ಜತೆಗೆ ಉತ್ತಮ ಸಾತ್ವಿಕ ಆಹಾರ ನೀಡಲಾಗುತ್ತದೆ.ವಿವರಗಳಿಗೆ ದೂರವಾಣಿ: 9449495247, 9449595248 ಸಂಪರ್ಕಿಸಬಹುದು. ಇ-ಮೇಲ್: office@vishnuguptavvv.‘ಅನ್ನಂ ಬ್ರಹ್ಮ’ ಚಾತುರ್ಮಾಸ್ಯದ ಉದ್ದೇಶ ಖ್ಯಾತಿ ಅಥವಾ ಪ್ರಚಾರವಲ್ಲ, ಸಮಾಜ ಪರಿವರ್ತನೆ ಎಂದು…
ಮೇಘಾಲಯ ಅಡಿಕೆಗೆ ಜಿಐ ಟ್ಯಾಗ್ ಪಡೆಯಲು ಅರ್ಜಿ ಸಲ್ಲಿಸಿರುವ ಬೆಳವಣಿಗೆ ಅಡಿಕೆಯ ಭೌಗೋಳಿಕ…
ಕರ್ನಾಟಕದಾದ್ಯಂತ ಸೆ.28ರಂದು ಒಣಹವೆ ಆವರಿಸುವ ಸಾಧ್ಯತೆ ಇದ್ದರೂ ಕೊಡಗು ಹಾಗೂ ಚಿಕ್ಕಮಗಳೂರಿನ ಕೆಲವು…
ಬಯಲುಸೀಮೆಯಲ್ಲಿ ಅಡಿಕೆ ಬೆಳೆ ವಿಸ್ತರಣೆಗೆ ನೀರಾವರಿ, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಉತ್ತಮ…
ಹಾಲಿನ ದರವನ್ನು ₹12 ಹೆಚ್ಚಿಸುವಂತೆ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮನವಿ ಮಾಡಿದ್ದಾರೆ.…
ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯದ ಸಮಾರೋಪದಲ್ಲಿ ದೇಶಿ ಗೋವಿನ ಹಾಲು, ತುಪ್ಪ ಹಾಗೂ…