ವಿಶ್ವ ಕವಿತಾ ದಿನದ ಶುಭಾಶಯಗಳು…
ಕವಿತೆ ಹುಟ್ಟುವುದು ಮನಸಿನಿಂದ. ಅಲ್ಲಿನ ಭಾವನೆಗಳು ಕವಿತೆಯಾಗಿ ರೂಪು ತಳೆಯುತ್ತವೆ. ಕವಿ ಹೃದಯಕ್ಕೆ ಎಲ್ಲವೂ ವಿಷಯವೇ….
ಓಡುವ ಮೋಡ, ಸುರಿಯುವ ಮಳೆ, ಮೂಡುವ ಸೂರ್ಯ , ಬಾನಂಚಿನಲ್ಲಿ ಮರೆಯಾಗುವ ಭಾಸ್ಕರ. ಅರಳು ನೈದಿಲೆ, ಮುಸುಕಿದ ಮಂಜು , ಕೊನೆ ಮೊದಲಿಲ್ಲದ ಆಗಸ. ಹೀಗೆ ಕವಿಗೆ .ಬರೆಯುವ ಮನಸಿದ್ದಾಗ ಎಲ್ಲವೂ ವಸ್ತುಗಳೇ.
ಕವಿತೆ ಬರೆಯುವುದು ಗದ್ಯ ಬರೆದಂತಲ್ಲ. ಹಾಡಲು ಅನುಕೂಲವಾಗುವಂತೆ ಬರೆದಾಗ ಅದಕ್ಕೊಂದು ವಿಶೇಷ ಆಕರ್ಷಣೆ. ಛಂದೋಬದ್ಧವಾಗಿ ಬರೆದಾಗ ಒಂದು ತೂಕ ಜಾಸ್ತಿಯೇ. ಕೆಲವೊಮ್ಮೆ ನಾಲ್ಕು ಗೆರೆ ಪ್ರಾಸಬದ್ಧವಾಗಿ ಬರೆದರೂ ಪದ್ಯವಾಗಿ ಬಿಡುತ್ತದೆ.. ಭಾವನೆಗಳ ಅಭಿವ್ಯಕ್ತಿಯೇ ಮುಖ್ಯ.
ಸಣ್ಣ ದೊಡ್ಡ ಕವಿಗಳನ್ನು ಪ್ರೋತ್ಸಾಹಿಸುವ ಮಹತ್ತರವಾದ ಉದ್ದೇಶದೊಂದಿಗೆ 1999 ರಲ್ಲಿ ಯುನೆಸ್ಕೊ ವಿಶ್ವ ಕವಿತಾ ದಿನವೆಂದು ಮಾರ್ಚ್ 21 ರಂದು ಆರಂಭಿಸಿತು. ಈ ಹಿನ್ನೆಲೆಯಲ್ಲಿ ವಿಶ್ವ ದೆಲ್ಲೆಡೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ತೆಗೆದು ಕೊಳ್ಳಿ ಪೆನ್ನು , ಪೇಪರ್. ಬರೆದುಬಿಡಿ ಒಂದು ಕವಿತೆ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?