ಇಂದು ವಿಶ್ವ ಕವಿತಾ ದಿನ | ಕವಿತೆ ಎನ್ನುವ ಭಾವನೆಗಳ ಗೊಂಚಲು

March 21, 2021
10:17 AM

ವಿಶ್ವ ಕವಿತಾ ದಿನದ ಶುಭಾಶಯಗಳು…

ಕವಿತೆ ಹುಟ್ಟುವುದು ಮನಸಿನಿಂದ. ಅಲ್ಲಿನ  ಭಾವನೆಗಳು ಕವಿತೆಯಾಗಿ  ರೂಪು ತಳೆಯುತ್ತವೆ. ಕವಿ ಹೃದಯಕ್ಕೆ ಎಲ್ಲವೂ ವಿಷಯವೇ….
ಓಡುವ ಮೋಡ, ಸುರಿಯುವ ಮಳೆ, ಮೂಡುವ ಸೂರ್ಯ , ಬಾನಂಚಿನಲ್ಲಿ ಮರೆಯಾಗುವ ಭಾಸ್ಕರ. ಅರಳು ನೈದಿಲೆ, ಮುಸುಕಿದ ಮಂಜು , ಕೊನೆ ಮೊದಲಿಲ್ಲದ ಆಗಸ.  ಹೀಗೆ  ಕವಿಗೆ  .ಬರೆಯುವ ಮನಸಿದ್ದಾಗ ಎಲ್ಲವೂ ವಸ್ತುಗಳೇ.

ಕವಿತೆ ಬರೆಯುವುದು ಗದ್ಯ ಬರೆದಂತಲ್ಲ.  ಹಾಡಲು ಅನುಕೂಲವಾಗುವಂತೆ ಬರೆದಾಗ ಅದಕ್ಕೊಂದು ವಿಶೇಷ ಆಕರ್ಷಣೆ. ಛಂದೋಬದ್ಧವಾಗಿ ಬರೆದಾಗ ಒಂದು ತೂಕ ಜಾಸ್ತಿಯೇ. ಕೆಲವೊಮ್ಮೆ ನಾಲ್ಕು ಗೆರೆ ಪ್ರಾಸಬದ್ಧವಾಗಿ ಬರೆದರೂ ಪದ್ಯವಾಗಿ ಬಿಡುತ್ತದೆ..   ಭಾವನೆಗಳ ಅಭಿವ್ಯಕ್ತಿಯೇ ಮುಖ್ಯ.

ಸಣ್ಣ ದೊಡ್ಡ ಕವಿಗಳನ್ನು ಪ್ರೋತ್ಸಾಹಿಸುವ ಮಹತ್ತರವಾದ  ಉದ್ದೇಶದೊಂದಿಗೆ 1999 ರಲ್ಲಿ ಯುನೆಸ್ಕೊ  ವಿಶ್ವ ಕವಿತಾ ದಿನವೆಂದು ಮಾರ್ಚ್ 21 ರಂದು ಆರಂಭಿಸಿತು.  ಈ ಹಿನ್ನೆಲೆಯಲ್ಲಿ ವಿಶ್ವ ದೆಲ್ಲೆಡೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ತೆಗೆದು ಕೊಳ್ಳಿ ಪೆನ್ನು , ಪೇಪರ್. ಬರೆದುಬಿಡಿ ಒಂದು ಕವಿತೆ.

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಬೇವು ಲೇಪಿತ ಯೂರಿಯಾ ಬಳಕೆಯಿಂದ ಕೃಷಿ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ
October 9, 2026
7:27 AM
by: ದ ರೂರಲ್ ಮಿರರ್.ಕಾಂ
ಮನೆ ಎಂದರೆ ಗೋಡೆಗಳಲ್ಲ , ನೆಮ್ಮದಿಯನ್ನು ಕಟ್ಟುವ ಜೀವನಕಲೆ
October 9, 2026
7:14 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಮಿಜೋರಾಂ ಮೂಲಕ 3,103 ಮೆಟ್ರಿಕ್ ಟನ್ ಅಡಿಕೆ ಕಳ್ಳಸಾಗಣೆ ಆರೋಪ – ಮ್ಯಾನ್ಮಾರ್‌ ಜಾಲ ಪತ್ತೆ
October 8, 2026
9:27 PM
by: ದ ರೂರಲ್ ಮಿರರ್.ಕಾಂ
ಮನಸ್ಸಿನಲ್ಲಿರುವ ಮಾತು ಹೇಳಿಬಿಡಿ… ಬದುಕಿಗೊಂದು ತಿರುವು ಸಿಗಬಹುದು..!
October 8, 2026
1:15 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror