ಗಿಡಿಗಳಿಗೆ ನೀರುಣಿಸಲು ಬತ್ತಿಯ ಮಾದರಿಯ ತಂತ್ರಜ್ಞಾನವನ್ನು ಪರಿಚಯ ಮಾಡಿರುವ ಬಾಲಕ ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾರ್ಥಿ ವಿಸ್ಮಯ ದೇವಸ್ಯ. ಅದು 2014 ರಲ್ಲಿ. ಈ ಪ್ರಾಜೆಕ್ಟ್ ಗೆ ಅಂದು ಚಿನ್ನದ ಪದಕವೂ ಲಭ್ಯವಾಗಿತ್ತು. ಇದೀಗ ಅದೇ ಮಾದರಿಯ ನೀರುಣಿಸುವ ತಂತ್ರಜ್ಞಾನವನ್ನು ಪರಿಚಯ ಮಾಡಿದ್ದಾರೆ ಐ ಐ ಎಚ್ ಆರ್ ನ ವಿಜ್ಞಾನಿ. ..!
ಲೋಮನಾಳ ಹೀರಿಕೆ ಅಥವಾ ಬತ್ತಿ ಎಣ್ಣೆ ಬೆಳಗಿದಂತೆ ಗಿಡಗಳು ನೀರನ್ನು ಹೀರುವ ಮಾದರಿಯನ್ನು ವಿಸ್ಮಯ ದೇವಸ್ಯ ಮಾಡಿದ್ದರು. ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ 2013-14 ವಿದ್ಯಾರ್ಥಿಯಾಗಿದ್ದ ಈ ಬಾಲಕ ಮಾಡಿರುವ ಈ ಮಾದರಿಗೆ ಅಂದು ಚಿನ್ನದ ಪದಕ ಲಭ್ಯವಾಗಿತ್ತು. ಸೈನ್ಸ್ ಸೊಸೈಟಿ ಆಫ್ ಇಂಡಿಯಾ ಆಯೋಜಿಸಿದ ಈ ಮೇಳದಲ್ಲಿ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಲಕ್ಷ್ಮಣ ದೇವಸ್ಯ ಅವರ ಪುತ್ರ ಬಾಲಕ ವಿಸ್ಮಯ ದೇವಸ್ಯ ಮಾಡಿರುವ ಈ ಪ್ರಾಜೆಕ್ಟ್ ಅಂದು ಗಮನ ಸೆಳೆದಿತ್ತು.
ಇದೀಗ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಇದೇ ಮಾದರಿಯನ್ನು ಅಭಿವೃದ್ಧಿಪಡಿಸಿರುವ ಬಗ್ಗೆ ಮಾಹಿತಿ ನೀಡಿದೆ. ತಕ್ಷಣವೇ ಈ ಬಗ್ಗೆ ಗಮನ ಸೆಳೆದ ಬಾಲಕ ವಿಸ್ಮಯ ದೇವಸ್ಯ ಅವರ ಹೆತ್ತವರು ” ಈ ಮಾದರಿಯನ್ನು ವಿಸ್ಮಯ ದೇವಸ್ಯ ಈ ಹಿಂದೆಯೇ ಮಾಡಿದ್ದಾನೆ” ಎಂದು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳು ಮಾಡುವ ಬಹುತೇಕ ಪ್ರಾಜೆಕ್ಟ್ ಗಳು ಕೃಷಿಕರಿಗೆ ಅನುಕೂಲವಾಗುವಂತೆ ಇರುತ್ತದೆ. ಆದರೆ ಅದನ್ನು ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ಅಥವಾ ಹಾಗೆಯೇ ಅನುಷ್ಟಾನ ಮಾಡುವ ವೇಳೆ ವಿದ್ಯಾರ್ಥಿಗಳ ಕಾರ್ಯವನ್ನೂ, ಕೆಲಸವನ್ನೂ ಉಲ್ಲೇಖ ಮಾಡದೆಯೇ ಅನ್ಯಾಯ ಮಾಡಬಾರದು. ವಿದ್ಯಾರ್ಥಿಗಳ ಸಾಧನೆ ಅಪಾರ ಇರುತ್ತದೆ. ಅದರ ಹಿಂದೆ ಅಪಾರ ಶ್ರಮ ಇರುತ್ತದೆ. ವಿಜ್ಞಾನಿಗಳು ಯಾವುದೇ ಸಂಶೋಧನೆ ಮಾಡುವ ಮುನ್ನ ವಿವಿದೆಡೆ ಇಂತಹ ಪ್ರಾಜೆಕ್ಟ್ ಅಥವಾ ಮಾದರಿ ಇದೆಯೇ ಎಂಬುದನ್ನು ಪರಿಶೀಲನೆ ಮಾಡಬೇಕಾದ್ದು ಮೂಲಭೂತವಾದ ವಿಷಯವಾಗಿದೆ. ಈ ಪ್ರಾಜೆಕ್ಟ್ ಗೂಗಲ್ ಮೂಲಕ ಲಭ್ಯವಾಗುವ ಕಾರಣದಿಂದ ವಿದ್ಯಾರ್ಥಿಯ ಹೆಸರನ್ನು ಉಲ್ಲೇಖ ಮಾಡಬೇಕಿತ್ತು ಮಾತ್ರವಲ್ಲ ವಿಜ್ಞಾನಿಗಳು ಈ ಮಾದರಿಯ ಕೆಲಸ ಮಾಡಬಾರದು ಎಂದು ಬಾಲಕ ವಿಸ್ಮಯನ ಪೋಷಕರು ಹೇಳುತ್ತಾರೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಒಂದೆರಡು ಕಡೆ ಹಾಗೂ…
ಉದ್ಯೋಗದ ಪರೀಕ್ಷೆಗಳಿಗೂ ಧಾರ್ಮಿಕ ಸಂಕೇತಗಳಿಗೂ ಯಾಕೆ ಹೊಂದಿ ಬರುವುದಿಲ್ಲ? ಇದೊಂದು ಮಿಲಿಯನ್ ಡಾಲರ್…
ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾವಳಿ ಮೇ ತಿಂಗಳ 2 ರಿಂದ…
ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿವಿಧ…
ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…
ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…