ಮಾನವ ಕುತೂಹಲ ಜೀವಿ. ಹುಟ್ಟುತ್ತಲೇ ಸಂಶೋಧಕರಾಗುತ್ತಾರೆ. ಸಣ್ಣ ಸಣ್ಣ ವಿಷಯಗಳನ್ನು ಹಾಗೆ ಸುಮ್ಮನೆ ಬಿಡದೆ ಅದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ.ನಮ್ಮ ಹಿರಿಯರಲ್ಲಿ ವೈಜ್ಞಾನಿಕ ಮನೋಭಾವ ಆಗಲೇ ಇತ್ತು.ಅದು ಇಂದು ಸಂಶೋಧನಾ ರೂಪದಲ್ಲಿ ಜಗತ್ತಿನ ವೈಜ್ಞಾನಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತಿದೆ.ಭಾರತೀಯ ವಿಜ್ಞಾನಿಗಳ ವೈಜ್ಞಾನಿಕ ಸಂಶೋಧನೆ ಅದು ಜಗತ್ತಿನ ಹಿತಕ್ಕಾಗಿ ಆಗಿರುತ್ತದೆ.ಅದರಿಂದ ವಿಜ್ಞಾನಿಗಳ ಮನಸ್ಸಿಗೆ ಸಂತೃಪ್ತತೆ ಸಿಗುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ಪ್ಲಾಸ್ಮಾ ಸಂಶೋಧನಾಕೇಂದ್ರ, ಅಹಮದಾಬಾದ್ ಮತ್ತು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ( ಸ್ವಾಯತ್ತ) ಪುತ್ತೂರು, ಐಕ್ಯುಎಸಿ ಮತ್ತು ವಿಜ್ಞಾನ ಸಂಘದ ಸಹಯೋಗದಲ್ಲಿ ನಡೆದ ಪ್ಲಾಸ್ಮಾ ತಂತ್ರಜ್ಞಾನದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿ.ಎಮ್.ಆರ್. ಟಿ ವೀಕ್ಷಣಾಲಯ, ಟಾಟಾ ಮೂಲಭೂತ ಸಂಶೋಧನಾ ಕೇಂದ್ರ ಪೂನಾ ಇದರ ಡೀನ್ ಪ್ರೊ.ಈಶ್ವರಚಂದ್ರ ಸಿ.ಎಚ್ ಪ್ಲಾಸ್ಮಾ ತಂತ್ರಜ್ಞಾನದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನ ಬೆಳವಣಿಗೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ ನಮಗೆ ಸಂಶೋಧನೆ ನಡೆಸಲು ಹಲವಾರು ಅವಕಾಶಗಳಿವೆ. ನಾವು ಯಾವುದೇ ಸಂಶೋಧನೆಯನ್ನು ಪ್ರಾರಂಭಿಸಬೇಕಾದರೆ ಮೊದಲು ಅದರ ಮೂಲದಿಂದ ಆರಂಭಿಸಬೇಕು ಎಂದರು.
ಸಮುದಾಯ ಸಂಪರ್ಕ ವಿಭಾಗ, ಐ.ಪಿ.ಆರ್ ಅಹಮದಾಬಾದ್ ಇದರ ಮುಖ್ಯಸ್ಥ ಡಾ.ಎ.ವಿ. ರವಿಕುಮಾರ್ ದಿಕ್ಸೂಚಿ ಭಾಷಣ ಮಾಡಿದರು.
ಕುಮಾರಸ್ವಾಮಿ ಪದವಿಪೂರ್ವಕಾಲೇಜು ಸುಬ್ರಹ್ಮಣ್ಯಇದರ ಪ್ರಾಂಶುಪಾಲ ಮತ್ತುಐ.ಐ.ಎಸ್.ಸಿ ನ ಹಿರಿಯ ವಿದ್ಯಾರ್ಥಿ ಮತ್ತು ಬ್ರಿಟನ್ ನಾಟಿಂಗ್ ಹ್ಯಾಮ್ ವಿಶ್ವವಿದ್ಯಾನಿಲಯದ ಸಂಶೋಧಕ ಡಾ.ಸಂಕೀರ್ತನ್ ಹೆಬ್ಬಾರ್ ಪ್ಲಾಸ್ಮಾ ವಸ್ತುಪ್ರದರ್ಶನವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಮುದಾಯ ಸಂಪರ್ಕ ವಿಭಾಗ, ಐ.ಪಿ.ಆರ್‍ಅಹಮದಾಬಾದ್‍ಇದರ ಮುಖ್ಯಸ್ಥಡಾ. ಎ.ವಿರವಿಕುಮಾರ್ ಇವರನ್ನು ಸನ್ಮಾನಿಸಲಾಯಿತು. ಉದ್ಘಾಟನಾಕಾರ್ಯಕ್ರಮದ ನಂತರ ವಿಚಾರ ಸಂಕಿರಣ ನಡೆಯಿತು. ಮೂರು ದಿನ ನಡೆಯಲಿರುವ ಪ್ಲಾಸ್ಮಾ ಪ್ರದರ್ಶನಕ್ಕೆ 2000 ಹೆಚ್ಚು ವಿದ್ಯಾರ್ಥಿಗಳು ಆಗಮಿಸಲಿದ್ದಾರೆ.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಮತ್ತು ಹಿರಿಯ ವಿಜ್ಞಾನಿ ಶಂಕರ ಜೋಯಿಸ, ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀನಿವಾಸ ಸಾಮಂತ, ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ ಎಚ್.ಜಿ, ಕಾಲೇಜಿನ ವಿಶೇಷಅಧಿಕಾರಿ ಮತ್ತು ಪ್ರಭಾರ ಪ್ರಾಂಶುಪಾಲ ಡಾ.ಶ್ರೀಧರ್ ನ್ಯಾಕ್ ಬಿ, ಐಕ್ಯುಎಸಿ ಘಟಕದ ಸಂಯೋಜಕ ಮತ್ತು ಭೌತಶಾಸ್ತ್ರ ವಿಭಾಗದಉಪನ್ಯಾಸಕ ಶಿವಪ್ರಸಾದ್ ಕೆ.ಎಸ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಸ್ವಾಗತಿಸಿ, ಕಲಾ ವಿಭಾಗದ ಡೀನ್ ಮತ್ತು ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದುರ್ಗಾರತ್ನ.ಸಿ ವಂದಿಸಿ, ಸ್ನಾತಕೋತ್ತರ ವಿಭಾಗದ ಗಣಿತಶಾಸ್ತ್ರ ಉಪನ್ಯಾಸಕಿ ನಮೃತಾ ಕೆ.ಎನ್ ನಿರ್ವಹಿಸಿದರು.
ಅಡಿಕೆ ಬೆಳೆ ರಾಜ್ಯದಲ್ಲಿ ಮಾತ್ರವಲ್ಲ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಸ್ತರಣೆ…
ಶುದ್ಧತೆಯ ವಿಚಾರ ಬಂದಾಗ ನಂಬಿಕೆಯೂ ಮುಖ್ಯ. ಅದಕ್ಕಾಗಿ, 8 ದಶಕಗಳಿಂದ ನಿಮ್ಮ ಎದುರಿನಲ್ಲಿ…
ಹವಾಮಾನ ಬದಲಾವಣೆ ಪ್ರಪಂಚದ ಎಲ್ಲೆಡೆಯೂ ಸವಾಲಾಗುತ್ತಿದೆ.ತಾಪಮಾನ ಏರಿಕೆಯ ಕಾರಣದಿಂದ ಚಂಡಮಾರುತಗಳ ಸಂಖ್ಯೆ ಹೆಚ್ಚಾಗುವ…
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಸಂಜೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಹರಿಯಾಣ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಯಮುನಾ ನಗರದಲ್ಲಿ ಇಂದು ಧೀನಬಂಧು ಚೋಟು…