ಬಲಪಂಥ – ಎಡಪಂಥ – ಮಧ್ಯ ಪಂಥ – ಮಾನವೀಯ ಪಂಥ……….
ಹೌದು, ನಾನು ಬಲಪಂಥೀಯ,
ಈ ದೇಶದ ಸಂಸ್ಕೃತಿ – ಮೌಲ್ಯಗಳನ್ನು, ಇಲ್ಲಿನ ಜನರ ಮುಗ್ಧತೆ – ಮಾನವೀಯ ಗುಣಗಳನ್ನು ಬಹುವಾಗಿ ಇಷ್ಟಪಡುತ್ತೇನೆ. ಈ ನೆಲದ ಮಣ್ಣಿನ ಶ್ರೇಷ್ಠತೆಯನ್ನು ಪಾರಂಪರಿಕ ಕೌಟುಂಬಿಕ ಜೀವನ ಶೈಲಿಯನ್ನು ಮೆಚ್ಚುತ್ತೇನೆ. ಅದಕ್ಕಾಗಿ ಹೆಮ್ಮೆ ಇದೆ.
ಹೌದು, ನಾನು ಎಡಪಂಥೀಯ,
ಇಲ್ಲಿನ ಅಮಾನವೀಯ ರಾಕ್ಷಸ ಸ್ವರೂಪದ ಶೋಷಣೆಯ ಮೂಲವಾದ ಸಾಮಾಜಿಕ ಅಸಮಾನತೆಯನ್ನು ದ್ವೇಷಿಸುತ್ತೇನೆ. ಕಪಟ ಆಧ್ಯಾತ್ಮ, ಕಠೋರ ಸಂಪ್ರದಾಯಗಳು, ವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿಯಂತ್ರಣವನ್ನು ಖಂಡಿಸುತ್ತೇನೆ. ಅದಕ್ಕೆ ನನಗೆ ಇಲ್ಲಿನ ವ್ಯವಸ್ಥೆಯ ಬಗೆಗೆ ಕೋಪವಿದೆ.
ಹೌದು, ನಾನು ಮಧ್ಯ ( ನಡು ) ಪಂಥೀಯ,
ಬಲ ಮತ್ತು ಎಡಗಳ ದಾಸನಾಗದೆ ತಮ್ಮದೇ ಶ್ರೇಷ್ಠ ಎಂದು ಮೂಡನಾಗದೆ ಎರಡೂ ಪಂಥಗಳ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಂಡು ಅನುಭವ ಮತ್ತು ಆಧುನಿಕತೆಯ ನೆರಳಲ್ಲಿ ಹೊಸದೊಂದು ಜೀವನ ಶೈಲಿ ರೂಪಿಸಿಕೊಳ್ಳುವ ಪ್ರಯತ್ನದಲ್ಲಿರುವವನು.
ಇಲ್ಲ, ನಾನು ಇದಾವುದೂ ಅಲ್ಲ, ಮಾನವೀಯ ಮೌಲ್ಯಗಳ ಹುಡುಕಾಟಗಾರ……..
ಸೃಷ್ಟಿಯ ಒಂದು ಸಹಜ ಸ್ವಾಭಾವಿಕ ಸರಳ ಜೀವಿ. ನನ್ನ ಮೆದುಳಿನ ಗ್ರಹಿಕೆಯಿಂದ ಉಂಟಾದ ತರಂಗಗಳು ಮನಸ್ಸಿಗೆ ರವಾನಿಸುವ ಸಂದೇಶಗಳಿಗೆ ಅನುಗುಣವಾಗಿ ದೇಹದ ಅಂಗಾಗಗಳ ಮುಖಾಂತರ ಕಾರ್ಯ ನಿರ್ವಹಿಸುತ್ತಿರುವ ಜೀವಕೋಶಗಳ ರಾಶಿ ನಾನು.
ಅದಷ್ಟೇ ಸತ್ಯ. ಉಳಿದದ್ದು ಎಂದಿನಂತೆ ನಿಮ್ಮ ಮೆದುಳು ಗ್ರಹಿಸಿ ಮನಸ್ಸಿಗೆ ಕಳಿಸುವ ತರಂಗಗಳ ಆಧಾರಲ್ಲಿ ನಿಮ್ಮ ಪ್ರತಿಕ್ರಿಯೆ…..
ಇದುವೇ ಜೀವಿ – ಜೀವನ – ಸಮಾಜ
ಈ ದೇಶ – ಭಾಷೆ – ಧರ್ಮ – ಜಾತಿ – ಪಂಥ ಎಲ್ಲವೂ ಕಲ್ಪನೆ.
ಸಾವು ಮಾತ್ರ ಖಚಿತ. ನೀವು ಯಾರೇ ಆಗಿದ್ದರೂ….
ಏಕೆಂದರೆ ಒಮ್ಮೆ ಆಳವಾಗಿ – ಮುಕ್ತವಾಗಿ – ವಿಶಾಲವಾಗಿ – ಶುದ್ದವಾಗಿ ಯೋಚಿಸಿ ನೋಡಿ……….
ಒಂದು ವೇಳೆ………,
ಇದರ ಅರ್ಥ ನಾವು ಸದಾ ಜಾಗೃತವಾಗಿರಾಗಿರಬೇಕಿರುವುದು ಮತ್ತು ಹೋರಾಟ ಮಾಡಬೇಕಿರುವುದು ಶೋಷಿತರ ಪರವಾಗಿಯೇ ಹೊರತು ಯಾವುದೇ ಸಿದ್ದಾಂತ, ಧರ್ಮ, ಜಾತಿ, ಭಾಷೆ, ಲಿಂಗದ ಪರವಾಗಿಯಲ್ಲ.
ಭಾರತ ಒಂದು ಸಂಕೀರ್ಣ ಸಮಾಜವನ್ನು ಹೊಂದಿದೆ. ಇಲ್ಲಿ ಶೋಷಣೆ ಎಂಬುದು ಮುಖ್ಯವಾಗಬೇಕೆ ಹೊರತು ವೈಯಕ್ತಿಕ ನಂಬಿಕೆ ಅಥವಾ ಸೈದ್ದಾಂತಿಕ ನಿಲುವುಗಳಲ್ಲ. ಸೈದ್ಧಾಂತಿಕತೆ ಎಂಬುದೇ ಶೋಷಿತರ ಪರವಾದ ನಿಲುವುಗಳು ಎಂದು ಭಾವಿಸಬಹುದು. ಏಕೆಂದರೆ ಬಲಿಷ್ಠರಿಗೆ ಯಾವುದೇ ಹೆಚ್ಚಿನ ಸಹಾಯ ಬೇಕಾಗಿರುವುದಿಲ್ಲ. ದುರ್ಬಲರು ಯಾವಾಗಲೂ ಸಹಾಯದ ನಿರೀಕ್ಷೆಯಲ್ಲಿರುತ್ತಾರೆ ಮತ್ತು ವ್ಯವಸ್ಥೆ ಸಹ ಅವರನ್ನು ಸುಲಭವಾಗಿ ದುರುಪಯೋಗ ಪಡಿಸಿಕೊಳ್ಳುತ್ತದೆ.
ಬೇಕಾದರೆ ಗಮನಿಸಿ ನೋಡಿ, ಒಂದು ಧರ್ಮದ ಅಥವಾ ಪಕ್ಷದ ಜನರು ತಮ್ಮ ಪಕ್ಷದ ಅಥವಾ ಧರ್ಮದ ನೇರ ತಪ್ಪುಗಳನ್ನು ಸಹ ಗುರುತಿಸಲಾರದಷ್ಟು ಮೂರ್ಖರಾಗಿರುತ್ತಾರೆ ಮತ್ತು ಅದನ್ನು ಅಸಹ್ಯವಾಗಿ ಸಮರ್ಥಿಸುತ್ತಾರೆ.
ತೀವ್ರ ಬಲಪಂಥ ಮತ್ತು ಎಡಪಂಥ ಜನರಲ್ಲಿ ಇದನ್ನು ಗುರುತಿಸಬಹುದು. ಆದ್ದರಿಂದಲೇ ನಮ್ಮ ಸೈದ್ದಾಂತಿಕ ನಿಲುವುಗಳು ನ್ಯಾಯದ ಪರ, ಸತ್ಯದ ಪರ, ಜನರ ಪರ, ದೇಶದ ಪರ ಇರಬೇಕು. ಇಲ್ಲದಿದ್ದರೆ ಸೈದ್ದಾಂತಿಕತೆ ನಮ್ಮನ್ನೇ ಆಪೋಷಣೆ ತೆಗೆದುಕೊಳ್ಳುತ್ತದೆ.
ಮಹಿಳಾ ಪರ ನಿಲುವುಗಳನ್ನು ತೆಗೆದುಕೊಳ್ಳವಾಗ ಅವರು ಪರಿಸ್ಥಿತಿಯ ದುರುಪಯೋಗ ಪಡಿಸಿಕೊಳ್ಳುವ ಬಗ್ಗೆಯೂ ಮಾತನಾಡಬೇಕು, ಧರ್ಮದ ಪರ ಮಾತನಾಡುವಾಗ ಅದರಿಂದಾಗುವ ಅನಾಹುತಗಳ ಬಗ್ಗೆಯೂ ಜಾಗೃತೆ ವಹಿಸಬೇಕು.
ನಮ್ಮ ಧ್ವನಿ ಸಿದ್ದಾಂತಗಳ ಆಚೆ ಶೋಷಿತರ ಪರವಾಗಿರಲಿ, ನೋಂದವರ ಪರವಾಗಿರಲಿ, ಅವರು ಯಾವುದೇ ಜಾತಿ ಧರ್ಮ ಪಕ್ಷಗಳವರಾಗಿರಲಿ ಎಂದು ಆಶಿಸುತ್ತಾ,
ಜೊತೆಗೆ ಇದೇ ನಿಲುವುಗಳು ಅವಕಾಶವಾದಿತನವಾಗಿ ರೂಪಾಂತರವಾಗದಂತೆ ಎಚ್ಚರಿಕೆಯೂ ಇರಲಿ, ನಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ತಿರುಗಿಸಿಕೊಳ್ಳುವ ಡೋಂಗಿ ಸೈದ್ಧಾಂತಿಕವಾದಿಯೂ ಆಗದಿರಲಿ ಎಂದು ನೆನಪಿಸುತ್ತಾ…….
# ವಿವೇಕಾನಂದ ಎಚ್ ಕೆ
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…