ಯಾವುದನ್ನೂ ಪ್ರಶ್ನೆ ಮಾಡಲೇ ಬಾರದು……..! , ತಾಳ್ಮೆಯಿಂದ ಯೋಚಿಸಿ ಎಂದು ಮನಸ್ಸಿನ ಕನ್ನಡಿಯಲ್ಲಿ ಹೇಳುತ್ತಾರೆ ವಿವೇಕಾನಂದ ಎಚ್‌ ಕೆ |

November 14, 2021
11:20 AM

ಯಾವುದನ್ನೂ ಪ್ರಶ್ನೆ ಮಾಡಲೇ ಬಾರದು……..!!

Advertisement
Advertisement
Advertisement
Advertisement

ನೀನು ಹಿಂದು ಹೀಗೆಯೇ ಇರಬೇಕು…. , ನೀನು ಮುಸ್ಲಿಂ ಹೀಗೆಯೇ ಇರಬೇಕು…., ನೀನು ಕ್ರಿಶ್ಚಿಯನ್ ಹೀಗೆಯೇ ಇರಬೇಕು……

Advertisement

ನಮ್ಮ ವೇದಗಳು, ಖುರಾನ್, ಬೈಬಲ್ ಹೀಗೆಯೇ ಹೇಳಿದೆ….., ಅದಕ್ಕೆ ಅಪಚಾರ ಮಾಡಿದರೆ ನೀನು ಧರ್ಮ ವಿರೋಧಿ….

ಎಂತೆಂತ ಮಹಾಮಹಿಮರು ಎಷ್ಟೆಷ್ಟು ಅನುಭವದಲ್ಲಿ ಏನೇನು ಹೇಳಿರುವರೋ ಅದೇ ಸತ್ಯ…… , ನೀನು ಪ್ರಶ್ನಿಸಲು ಯೋಚಿಸಲು ಏನೂ ಉಳಿದಿಲ್ಲ……

Advertisement

ಮೊಹರಮ್ ಹಿಂದಿನ ಕಥೆ ಗೊತ್ತೆ……, ಕ್ರಿಸ್ಮಸ್ ಹಿಂದಿನ ಸತ್ಯ ಗೊತ್ತೆ…….., ಗಣೇಶನ ಸೃಷ್ಟಿಯ ಸಾಂಕೇತಿಕತೆ ಗೊತ್ತೆ…..

ನೀನು ಗಂಡು….., ನೀನು ಹೆಣ್ಣು……, ನೀನು ಮಗ…., ನೀನು ಸೊಸೆ….., ನೀನು ಅಳಿಯ…., ನೀನು ಗುಜರಾತಿ…, ನೀನು ತಮಿಳಿಗ…, ನೀನು ಆಫ್ರಿಕಾದವ.., ನೀನು ದಲಿತ….., ನೀನು ಬ್ರಾಹ್ಮಣ…

Advertisement

ನೀನು ಜೀಸಸ್ ಗಿಂತ ದೊಡ್ಡವನೇ……., ನೀನು ಪೈಗಂಬರ್ ಗಿಂತ ತಿಳಿದವನೇ….., ನೀನು ಕೃಷ್ಣನಿಗಿಂತ ಬುದ್ದಿವಂತನೇ……., ನಿನ್ನದು ಏನೂ ಇಲ್ಲ. ಎಲ್ಲವೂ ಪೂರ್ವ ನಿರ್ಧಾರಿತ.

ಕುಂಕುಮದ ಮಹತ್ವ ಗೊತ್ತೆ……, ಟೋಪಿಯ ಪ್ರಾಮುಖ್ಯತೆ ಗೊತ್ತೆ….., ಮೇಣದ ಬತ್ತಿಯ ಪಾವಿತ್ರ್ಯತೆ ಗೊತ್ತೆ……, ಗೊತ್ತಿಲ್ಲದಿದ್ದರೆ ತಿಳಿದಿಕೋ….., ಓದು ಓದು ಓದು ಗ್ರಂಥಗಳನ್ನು…., ಕೇಳು ಕೇಳು ಕೇಳು ಪ್ರವಚನಗಳನ್ನು….., ಮಾಡು ಮಾಡು ಮಾಡು ಆಚರಣೆಗಳನ್ನು……, ನಿನಗೆ ಮೋಕ್ಷ ಸದ್ಗತಿ ಸ್ವರ್ಗ ಎಲ್ಲವೂ ಸಿಗುತ್ತದೆ…….., ಇಲ್ಲದಿದ್ದರೆ ನಿನಗೆ ಅತ್ಯಂತ ಕ್ರೂರ ಶಿಕ್ಷೆಯ ನರಕವೇ ಗತಿ……….

Advertisement

ಇದು ನಿಜವೇ ??????

ಹಾಗಾದರೆ ಈಗ ಒಂದು ಜೀವಿಯಾಗಿ ಮೆದುಳಿನ ಸಮೇತ ಹುಟ್ಟಿರುವ ನಾವು ಈ ಜೀವನದಲ್ಲಿ ಕೇವಲ ಹಿಂದಿನ ನಿಯಮಗಳ ಪ್ರಕಾರ ಬದುಕುವುದಷ್ಟೇ ನಮ್ಮ ಕೆಲಸವೇ ??????

Advertisement

ನಮಗೆ ಸರಿ ಎನ್ನಿಸದ, ನಮಗೆ ಅನಾನುಕೂಲವಾಗುವ, ನಮ್ಮ ಮನಸ್ಸಿಗೆ ಹೊಳೆಯುವ, ವಿಚಾರಗಳನ್ನು ಕಾನೂನಿನ ವ್ಯಾಪ್ತಿ ಮೀರದಂತೆ ಹೇಳಬಾರದೆ ???????

ಸಮಾಜ ಬೆಳೆದಿದೆ ನಿಜ, ಆದುನಿಕತೆ ಅಭಿವೃದ್ಧಿಯಾಗಿದೆ ನಿಜ, ಕಾನೂನು ಕಟ್ಟಲೆ ಇದೆ ನಿಜ, ನೈತಿಕತೆಯೂ ಅನುಭವದಿಂದ ಬೆಳೆದು ಬಂದಿದೆ ನಿಜ……… ಇದಕ್ಕೆ ಧಕ್ಕೆಯಾಗದೆ, ನಮ್ಮ ಗ್ರಹಿಕೆಯ ಮುಖಾಂತರ ಇನ್ನೊಂದಿಷ್ಟು ಹೊಸ ವಿಚಾರಗಳನ್ನು ಹಂಚಿಕೊಂಡರೆ ತಪ್ಪೇನು ????? ಅಲೋಚನಾ ಶಕ್ತಿಯನ್ನು ಇನ್ನೊಬ್ಬರಿಗೆ ಅಡವಿಡಲು ಒತ್ತಾಯಿಸುವುದೇಕೆ ?????

Advertisement

ಹಾಗೆಂದು ಹಳೆಯದು ಕೆಟ್ಟದ್ದು ಹೊಸದು ಒಳ್ಳೆಯದು ಎಂದಲ್ಲ, ಅಥವಾ ಹೊಸದು ಕೆಟ್ಟದ್ದು ಹಳೆಯದು ಒಳ್ಳೆಯದು ಎಂಬುದೂ ಅಲ್ಲ….., ಇನ್ನೂ ಇನ್ನೂ ಹೊಸ ಹೊಸ ಆಲೋಚನೆಗಳಿಗೆ ನಮ್ಮನ್ನು ತೆರೆದುಕೊಳ್ಳೋಣ…., ತಂತ್ರಜ್ಞಾನ ವಿಷಯದಲ್ಲಿ ಹೊಸ ಆವಿಷ್ಕಾರಗಳನ್ನು ಸ್ವಾಗತಿಸಿ ಬಹುಬೇಗ ಸ್ವೀಕರಿಸುವ ನಾವು, ಮಾನವೀಯ ಮೌಲ್ಯಗಳ,
ವಿಚಾರ ತತ್ವ ಸಿದ್ದಾಂತಗಳ, ಹಳೆಯ ಮರಕ್ಕೇ ಇನ್ನೂ ನೇತಾಡುತ್ತಿರುವುದು ಏಕೆ ?????

ಇನ್ನೊಬ್ಬ ಆಧುನಿಕ ಕೃಷ್ಣನೋ ಜೀಸಸ್ಸೋ ಪೈಗಂಬರೋ ಸೃಷ್ಟಿಯಾಗಲೇ ಇಲ್ಲ……

Advertisement

ನಾಗರಿಕ ಸಮಾಜದ ವೇಗಕ್ಕೆ, ಭಾರತದ ಬುದ್ದ ಮಹಾವೀರ ಶಂಕರ ಬಸವ ವಿವೇಕಾನಂದ. ಗಾಂಧಿ ಅಂಬೇಡ್ಕರ್ ಮುಂತಾದವರುಗಳು ದೇವರುಗಳಾಗಿ, ಮೂರ್ತಿಗಳಾಗಿ, ಸಂಕೇತಗಳಾಗಿ, ಧರ್ಮಗಳಾಗಿ, ಸಂಘಟನೆಗಳಾಗಿ, ಚಳವಳಿಗಳಾಗಿ,
ರಾಜಕಾರಣಿಗಳಾಗಿ, ಮತಗಳಾಗಿ, ಕಲಹಗಳಾಗಿ, ಬದುಕಿನ ಸಾಧನವಾಗಿ,  ಹೊಟ್ಟೆ ಪಾಡಾಗಿ, ರೂಪಾಂತರ ಹೊಂದಿದ್ದಾರೆ.

ಭಾರತದ ಮಟ್ಟಿಗೆ ಈಗ ಹೊಸ ಆವಿಷ್ಕಾರದ ಸಮಯ…. ಹೊಸದೆಂದರೆ ಎಲ್ಲವೂ ಹೊಸದಾದ ಪುನರ್ ಸೃಷ್ಟಿಯಲ್ಲ……

Advertisement

ಜನರ ಜೀವನಮಟ್ಟ ಸುಧಾರಣೆಯ ಮೂಲ ಆಶಯದೊಂದಿಗೆ…..

ಒಂದಷ್ಟು ಸಭ್ಯತೆ, ಒಂದಷ್ಟು ಪ್ರೀತಿ, ಒಂದಷ್ಟು ಸ್ನೇಹ, ಒಂದಷ್ಟು ಕರುಣೆ,  ಒಂದಷ್ಟು ಸಮಾನತೆ,  ಒಂದಷ್ಟು ಮಾನವೀಯತೆ,
ಒಂದಷ್ಟು ನೆಮ್ಮದಿಗಾಗಿ…….

Advertisement

ಒಂದು ಅಭಿಪ್ರಾಯಕ್ಕೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದಾಗ ಅದಕ್ಕೆ ಧರ್ಮದ ಸ್ವಯಂ ವಕ್ತಾರರು ಎಷ್ಟು ಕೆಟ್ಟದ್ದಾಗಿ ಪ್ರತಿಕ್ರಿಯಿಸುವರು ಗೊತ್ತೆ.

ಇಲ್ಲದ ರಾಮ ಕೃಷ್ಣ ಅಲ್ಲಾ ಅವರಿಗೆ ಸತ್ಯ. ಅವರ ಜೀವಂತ ಜೊತೆಗಾರ ಮಿಥ್ಯ. ರಾಮನಿಗೆ ನೋವಾಗಬಾರದು. ಒಂದು ಗುಂಪಿನ ಅವರ ಗೆಳೆಯನನ್ನು ಬಾಯಿಗೆ ಬಂದಂತೆ ಬಯ್ಯಬಹುದು. ಇದು ಸರಿಯೇ ??????

Advertisement

ಹಾಲು ಕುಡಿಯದ ಹಾವಿನ ಹುತ್ತಕ್ಕೆ ಹಾಲು ಸುರಿಯುವರು,….. ಬಡ ಮಗುವಿನ ಹಸಿವಿಗೆ ನಿರ್ಲಕ್ಷ್ಯ ತೋರುವರು…. ಇದನ್ನು ಪ್ರಶ್ನಿಸಬಾರದೆ ??????

ಹಣದ ಆಮಿಷ ಒಡ್ಡಿ ಜನರನ್ನು ಮತಾಂತರ ಮಾಡುವರು….. ಇದನ್ನು ಕೇಳಬಾರದೆ ??????

Advertisement

ದೇಶಕ್ಕಿಂತ ಧರ್ಮವೇ ಮುಖ್ಯವೆನ್ನುವರು…….. ಇದನ್ನು ಖಂಡಿಸಬಾರದೆ ???????

ಗೆಳೆಯ/ ಗೆಳತಿಯರೇ,

Advertisement

ಇದನ್ನು ಸಹ ಒಪ್ಪುವ ತಿರಸ್ಕರಿಸುವ ನಿರ್ಲಕ್ಷಿಸುವ ಟೀಕಿಸುವ ಸ್ವಾತಂತ್ರ್ಯ ನಿಮಗಿದೆ. ಅದಕ್ಕೆ ಮುನ್ನ ಒಮ್ಮೆ ತಾಳ್ಮೆಯಿಂದ ಯೋಚಿಸಿ ಎಂಬುದಷ್ಟೇ ನನ್ನ ಮನವಿ………

# ವಿವೇಕಾನಂದ ಎಚ್‌ ಕೆ

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

ಇದನ್ನೂ ಓದಿ

ಅರಣ್ಯದಿಂದ ಕೂಡಿದ ಗ್ರಾಮೀಣ ಭಾಗಕ್ಕೂ ನೀರು…! | ಕರಾವಳಿ ಜಿಲ್ಲೆಯ ಈಗಿನ ದೊಡ್ಡ ಯೋಜನೆ ಇದು | ಯಾಕೆ ಎಲ್ಲರೂ ಮೌನವಾಗಿದ್ದಾರೆ..? | ಈ ಕೊಳವೆಯಲ್ಲಿ ಹರಿಯುವುದು ನೀರೋ.. ಹಣವೋ..?
February 1, 2025
8:07 AM
by: ಮಹೇಶ್ ಪುಚ್ಚಪ್ಪಾಡಿ
ಅಡಿಕೆ “ಹಳದಿ ಎಲೆರೋಗ”ದ ಬಣ್ಣಗಳು…!
January 31, 2025
7:30 AM
by: ರಮೇಶ್‌ ದೇಲಂಪಾಡಿ
ಕೃಷಿ ಪದವೀಧರ ಪಂಡಿತರಿಗೇಕೆ ಸಾಮಾನ್ಯ ರೈತರು ಮತ್ತು ಗೋ ಆಧಾರಿತ ಕೃಷಿಯ ಬಗ್ಗೆ ಅಸಡ್ಡೆ…?
January 30, 2025
10:04 PM
by: ಪ್ರಬಂಧ ಅಂಬುತೀರ್ಥ
ದೆಹಲಿಯಲ್ಲೊಂದು ಚುನಾವಣಾ ಗಲಾಟೆ
January 30, 2025
11:14 AM
by: ರಮೇಶ್‌ ದೇಲಂಪಾಡಿ

You cannot copy content of this page - Copyright -The Rural Mirror