Advertisement
ಅಂಕಣ

ವಿವೇಕಾನಂದ ಎಚ್‌ ಕೆ ಬರೆಯುತ್ತಾರೆ | ಭಾರತೀಯ ಸಮಾಜದಲ್ಲಿ ಕೆಲವು ಮೂಲಭೂತ ಪ್ರಜ್ಞೆಗಳು ಜಾಗೃತ ಮನಸ್ಥಿತಿಯವರನ್ನು ನಿಯಂತ್ರಿಸುತ್ತಿವೆ |

Share

ಭಾರತೀಯ ಸಮಾಜದಲ್ಲಿ ಕೆಲವು ಮೂಲಭೂತ ಪ್ರಜ್ಞೆಗಳು ಜಾಗೃತ ಮನಸ್ಥಿತಿಯವರನ್ನು ನಿಯಂತ್ರಿಸುತ್ತಿವೆ ಅಥವಾ ಪ್ರಚೋದಿಸುತ್ತಿವೆ ಅಥವಾ ಪ್ರಭಾವಿಸುತ್ತಿವೆ.

Advertisement
Advertisement

ಇವುಗಳನ್ನು ಮುಖ್ಯವಾಗಿ ಹೀಗೆ ವಿಂಗಡಿಸಬಹುದು:

Advertisement

1) ಮನುಸ್ಮೃತಿ ಆಧಾರಿತ ವೇದ ಉಪನಿಷತ್ತುಗಳು ಮತ್ತು ಭಗವದ್ಗೀತೆಯನ್ನು ಅವಲಂಬಿಸಿದ ಸನಾತನ ಧರ್ಮ ಪ್ರಜ್ಞೆ

2) ಗೌತಮ ಬುದ್ಧ ಮಹಾವೀರರ ಆಂತರಿಕ ಶುಧ್ಧತೆಯ ಸತ್ಯ ಮತ್ತು ಅಹಿಂಸೆಯ ಪ್ರಜ್ಞೆ

Advertisement

3) ಭಕ್ತಿ ಪಂಥದ ಶಂಕರ ರಾಮಾನುಜ ಮಧ್ವಾಚಾರ್ಯರ ದ್ವೈತ – ಅದ್ವೈತ – ವಿಶಿಷ್ಟಾದ್ವೈತದ ನಂಬಿಕೆಯ ಪ್ರಜ್ಞೆ

4) ಕನಕ – ಪುರಂದರರ – ರಾಮದಾಸ – ಕಭೀರ – ಮೀರಾಬಾಯಿ ಮುಂತಾದವರ ದಾಸ – ಭಜನಾ ಸಾಹಿತ್ಯದ ಬದುಕಿನ ಬಿಡುಗಡೆಯ ಪ್ರಜ್ಞೆ

Advertisement

5) ವಚನ ಚಳವಳಿಯ ಅಲ್ಲಮ ಬಸವ ಅಕ್ಕಮಹಾದೇವಿ ಮುಂತಾದವರ ಅನುಭವ ಮಂಟಪದ ವಿಚಾರಗಳನ್ನು ಅವಲಂಬಿಸಿದ ಸಮಾನತೆಯ ಶರಣ ಪ್ರಜ್ಞೆ.

6) ಪರಮಹಂಸ – ಅರವಿಂದೋ – ರಾಜಾರಾಂ ಮೋಹನ್ ರಾಯ್ – ದಯಾನಂದ ಸರಸ್ವತಿ ಮತ್ತು ಮುಖ್ಯವಾಗಿ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಆಧರಿಸಿದ ಆಧ್ಯಾತ್ಮಿಕ – ಸಾಂಸ್ಕೃತಿಕ ಪ್ರಜ್ಞೆ.

Advertisement

7) ಚಂದ್ರಶೇಖರ ಆಜಾದ್ ಭಗತ್ ಸಿಂಗ್ ಸುಭಾಷ್ ಚಂದ್ರ ಭೋಸ್ ಮುಂತಾದವರ ದೇಶಾಭಿಮಾನದ ಪ್ರಜ್ಞೆ.

8) ಮಹಾತ್ಮ ಗಾಂಧಿಯವರ ನಡವಳಿಕೆಗಳನ್ನು ಅನುಸರಿಸುವ ಸತ್ಯ ಪಾರದರ್ಶಕದ ಸರಳತೆಯ ನೈತಿಕ ಪ್ರಜ್ಞೆ.

Advertisement

9) ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಧ್ಯಯನ ಮತ್ತು ಚಿಂತನೆಗಳಿಂದ ಒಡಮೂಡಿದ ಮಾನವತೆ ಮತ್ತು ಸಮಾನತೆಯ ವಾಸ್ತವ ಪ್ರಜ್ಞೆ

10) ರಾಮಮನೋಹರ್ ಲೋಹಿಯಾ -. ನಾರಾಯಣ ಗುರು ಜಯಪ್ರಕಾಶ್ ನಾರಾಯಣ್ ಮುಂತಾದವರ ಸಮಾಜವಾದಿ ಪ್ರಜ್ಞೆ

Advertisement

11) ಬಡವರು ಕಾರ್ಮಿಕರು ಶೋಷಿತರ ಪರ ಸದಾ ಧ್ವನಿಯಾಗುವ ಕಮ್ಯುನಿಸಂ ತತ್ವಾಧಾರಿತ ಬಂಡಾಯದ – ಪ್ರತಿಭಟನೆಯ ಪ್ರಜ್ಞೆ.

12) ನೆಹರು – ಇಂದಿರಾ ಗಾಂಧಿ – ಶಾಸ್ತ್ರಿ – ವಿ ಪಿ ಸಿಂಗ್ – ನರಸಿಂಹರಾವ್ – ವಾಜಪೇಯಿ – ಮನಮೋಹನ್ ಸಿಂಗ್ ನರೇಂದ್ರ ಮೋದಿ ಮುಂತಾದವರ ರಾಜಕೀಯ ಪ್ರಜ್ಞೆ.

Advertisement

13) ದೇಶದ ಬೆನ್ನೆಲುಬು ಮತ್ತು ಅನ್ನದಾತ ಎಂದೇ ಪರಿಗಣಿಸಲಾದ ಸದಾ ಅದನ್ನೇ ಧ್ಯಾನಿಸುವ ರೈತ ಪ್ರಜ್ಞೆ.

14) ಈ ಎಲ್ಲಾ ಪ್ರಜ್ಞೆಗಳ ಅನುಯಾಯಿಗಳ ಹುಚ್ವಾಟಗಳಿಂದ ರೋಸಿ ಹೋದ ಮಾನವೀಯ ಮತ್ತು ಜೀವಪರ ಚಿಂತನೆಯ ಪ್ರಗತಿಪರರ ವಿಶಿಷ್ಟ ಪ್ರಜ್ಞೆ.

Advertisement

ಇದನ್ನು ಹೊರತುಪಡಿಸಿ ವೈಯಕ್ತಿಕವಾಗಿ ಇನ್ನೂ ಹಲವಾರು ಪ್ರಜ್ಞೆಗಳು ನಮ್ಮ ನಡುವೆ ಇದೆ. ನಾನು ಕೆಲವು ಮುಖ್ಯ ಮತ್ತು ಸಾಂಕೇತಿಕವಾದವುಗಳನ್ನು ಮಾತ್ರ ಉಲ್ಲೇಖಿಸಿದ್ದೇನೆ.

ಇಲ್ಲಿನ ಪ್ರಜ್ಞೆಗಳ ವಿಪರ್ಯಾಸವೆಂದರೆ ಇಡೀ ಜನಸಂಖ್ಯೆಯಲ್ಲಿ ಸುಮಾರು ಶೇಕಡ 20% ರಷ್ಟು ಜನ ಮಾತ್ರ ಜಾಗೃತಾವಸ್ಥೆಯ ಸ್ಥಿತಿಯಲ್ಲಿ ಈ ಪ್ರಜ್ಞೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ ಮತ್ತು ಈ ಕ್ಷಣದ ಎಲ್ಲಾ ಆತಂಕ ಅಸಹಿಷ್ಣುತೆ ಗಲಾಟೆ ಚಳವಳಿ ಬದಲಾವಣೆ ಎಲ್ಲವನ್ನೂ ಇವರೇ ನಿಯಂತ್ರಿಸುತ್ತಿರುತ್ತಾರೆ.ಆದರೆ ನಿಜವಾದ ಶೇಕಡ 80% ಉಳಿದ ಜನರೇ ಕೊನೆಯ.

Advertisement

15) ಸಾಮಾನ್ಯ ವ್ಯಕ್ತಿತ್ಬದ ಸಹಜ ಜೀವನ ಶೈಲಿಯ ಜನಸಾಮಾನ್ಯರು.

ಮೇಲಿನ ಯಾವ ಪ್ರಜ್ಞೆಯ ಬಗ್ಗೆಯೂ ಇವರು ಹೆಚ್ಚಿಗೆ ತಲೆ ಕೆಡಿಸಿಕೊಳ್ಳದೆ ಹುಟ್ಟಿನಿಂದ ಸಾವಿನವರೆಗೂ ಬದುಕನ್ನು ಎಳೆದುಕೊಂಡು ಹೋಗುವ ಜನರಿವರು.

Advertisement

ರೈತರು ಕಾರ್ಮಿಕರು ಮಹಿಳೆಯರು ವ್ಯಾಪಾರಿಗಳು ಉದ್ಯೋಗಿಗಳು ವಿದ್ಯಾರ್ಥಿಗಳು ಮುಂತಾದ ಎಲ್ಲಾ ಸ್ತರದ ಜನರೂ ಇಲ್ಲಿದ್ದಾರೆ. ಇವರನ್ನು ನಿಯಂತ್ರಿಸಲು ಮತ್ತು ಇವರ ವಿಶ್ವಾಸಗಳಿಸಲೇ ಬಹುತೇಕ ಎಲ್ಲಾ ಪ್ರಜ್ಞೆಗಳ ಜನ ಪ್ರಯತ್ನಿಸುತ್ತಿರುತ್ತಾರೆ. ಆದರೆ ಇಲ್ಲಿಯವರೆಗೆ ಎಲ್ಲರೂ ಹೆಚ್ಚು ಕಡಿಮೆ ಜನರ ಜೀವನಮಟ್ಟ ಸುಧಾರಿಸುವಲ್ಲಿ ವಿಫಲರಾಗಿದ್ದಾರೆ ಎಂದೇ ಹೇಳಬಹುದು.

ಆದ್ದರಿಂದ ಪ್ರಬುದ್ಧ ಮನಸ್ಥಿತಿಯ ನೈಜ ಕಾಳಜಿ ಕೆಲವರಾದರು ಈ ಶೇಕಡ 80% ಜನರ ಜೀವನಮಟ್ಟ ಸುಧಾರಿಸಲು ಅವರ ಮಾನಸಿಕ ವ್ಯಕ್ತಿತ್ವ ಮೇಲ್ದರ್ಜೆಗೆ ಏರಿಸಲು ಆ ಮುಖಾಂತರ ಅವರ ಬದುಕನ್ನು ಸಾಧ್ಯವಾದಷ್ಟು ನೆಮ್ಮದಿಯ ಕಡೆಗೆ ಒಯ್ಯಲು ಪ್ರಯತ್ನಿಸುವುದೇ ಆಗಿದೆ.

Advertisement

ಅದಕ್ಕಾಗಿ ಮುಂದಿನ ದಿನಗಳಲ್ಲಿ ಎಲ್ಲರೂ ನಾವಿರುವ ಜಾಗದಿಂದಲೇ ಕಾರ್ಯ ಯೋಜನೆ ರೂಪಿಸೋಣ.

ಇದೊಂದು ವಿಭಿನ್ನ – ವಿಶಿಷ್ಟ ಪ್ರಯೋಗವಾಗುತ್ತದೆ ಮತ್ತು ಕಟ್ಟಕಡೆಯ ವ್ಯಕ್ತಿಗೂ ಇದು ಸಂಪರ್ಕ ಸಾಧಿಸುತ್ತದೆ ಎಂಬ ಆಶಯದೊಂದಿಗೆ.

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

Published by
ವಿವೇಕಾನಂದ ಎಚ್‌ ಕೆ

Recent Posts

ನೀವು ನಿರಂತರವಾಗಿ ಹೆಡ್‌ಫೋನ್ ಬಳಸುತ್ತಿದ್ದರೆ ಜಾಗರೂಕರಾಗಿರಿ! ಕಿವಿಯ ಮೇಲೆ ಪರಿಣಾಮಗಳು…..

ಇತ್ತೀಚಿನ ದಿನಗಳಲ್ಲಿ, ಜನರು ಮೊಬೈಲ್ ಫೋನ್‌ಗಳನ್ನು(Mobile Phone) ಹಿಡಿದಿಟ್ಟುಕೊಳ್ಳುವ ಬದಲು ಇಯರ್‌ಫೋನ್(Ear Phone)…

3 hours ago

ಹಲಸು ಮೇಳದತ್ತೊಂದು ಪಯಣ ಮಾಡೋಣವೇ? : ಪುತ್ತೂರಿನಲ್ಲಿ ಹಲಸು ಮೇಳ

ಇದೋ, ಬಂದಿದೆ ನೋಡಿ 2024ರ ಹಲಸು ಮೇಳ(Jackfruit Mela) ಪುತ್ತೂರು(Puttur). ಪ್ರತಿ ವರ್ಷದಂತೆ…

4 hours ago

ಸಗಣಿಯಲ್ಲಡಗಿದೆ ಬೆಳೆಗೆ ಅವಶ್ಯಕ ಪೋಷಕಾಂಶಗಳು : ನೈಸರ್ಗಿಕ ಕೃಷಿಯಲ್ಲಿ ದೇಶಿ ಗೋವಿನ ಮಹತ್ವ ಬಹಳ ಮುಖ್ಯ

ಒಂದು ಸಸ್ಯ(Plant) ಪರಿಪೂರ್ಣವಾಗಿ ಮತ್ತು ಆರೋಗ್ಯವಾಗಿ(Healthy) ಬೆಳೆಯಬೇಕಾದರೆ ಸುಮಾರು 108 ಪೋಷಕಾಂಶಗಳ(Nutrition) ಅವಶ್ಯಕತೆ…

4 hours ago

ಗದಗ ಜಿಮ್ಸ್ ಆಸ್ಪತ್ರೆಗೆ ತಟ್ಟಿದ ಬರದ ಬಿಸಿ | ನೀರಿಲ್ಲದೆ ರೋಗಿಗಳ ಪರದಾಟ | ದಾರಿಕಾಣದಾದ ಸಿಬ್ಬಂದಿಗಳು

ರಾಜ್ಯದ ಕೆಲ ಭಾಗಗಳಲ್ಲಿ ಚೆನ್ನಾಗಿ ಮಳೆಯಾಗುತ್ತಿದೆ(Heavy Rain). ನೀರಿಲ್ಲದೆ ಬೇಸತ್ತಿದ್ದ ಜನ ಜಾನುವಾರುಗಳು…

5 hours ago

ಹವಾಮಾನ ಸಂಕಷ್ಟ | ಕಾದ ಭೂಮಿಗೆ ‘ರೆಡ್‌ ಅಲರ್ಟ್‌’ | ಜಗತ್ತಿನ ತಾಪಮಾನ 1.5 ಡಿಗ್ರಿ ಇಳಿಕೆ ಸಾಧ್ಯವಾಗುತ್ತಿಲ್ಲ…!

ಹವಾಮಾನ ವೈಪರೀತ್ಯ, ತಾಪಮಾನ ಏರಿಕೆ ಜಗತ್ತಿನಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ. ಆಹಾರ ಉತ್ಪಾದನೆ ಮೇಲೂ…

5 hours ago

Karnataka Weather | 17-05-2024 | ಹೆಚ್ಚಿನ ಕಡೆಗಳಲ್ಲಿ ಗುಡುಗು ಸಹಿತ ಮಳೆ | ಮೇ 22ರ ನಂತರ ವಾಯುಭಾರ ಕುಸಿತ ಸಾಧ್ಯತೆ |

ಮೇ 22ರ ನಂತರ ಪ್ರಭಲ ಮುಂಗಾರು ಮಾರುತಗಳು ಅಂಡಮಾನ್ ಕಡೆ ಚಲಿಸುವುದರಿಂದ ಬಂಗಾಳಕೊಲ್ಲಿಯಲ್ಲಿ…

7 hours ago