(ಸಾಂದರ್ಭಿಕ ಚಿತ್ರ)
ನನ್ನ ಬೆಂಬಲ ಇವರುಗಳಿಗಾಗಿ………ನೀವೂ ಸಹ ಒಮ್ಮೆ ಯೋಚಿಸಿ…..
ಬಂದ್ ಗಳಿಗಿಂತಲೂ ಜನ ಜಾಗೃತಿ ಇಂದಿನ ಅತ್ಯವಶ್ಯಕ ಅಗತ್ಯ………
ಭಾರತ್ ಬಂದ್ ಅನ್ನೂ ಬೆಂಬಲಿಸುವುದಿಲ್ಲ,
ನರೇಂದ್ರ ಮೋದಿಯನ್ನೂ ಬೆಂಬಲಿಸುವುದಿಲ್ಲ,
ಇವುಗಳನ್ನು ಬೆಂಬಲಿಸಲು ಕೋಟ್ಯಾನುಕೋಟಿ ಜನರಿದ್ದಾರೆ………
ಇವುಗಳನ್ನು ಉಳಿಸಲು ಕೋಟ್ಯಾನುಕೋಟಿ ಹೋರಾಟಗಾರರಿದ್ದಾರೆ…………
ಆದರೆ ನನ್ನ ಬೆಂಬಲ,…….
ಅಗೋ ಅಲ್ಲಿ ನೋಡಿ ನನ್ನ ಪುಟ್ಟ ಕಂದ ಸಮೋಸ ತಿನ್ನಲು ಕಾಸಿಲ್ಲದೆ ಬಾಯಲ್ಲಿ ಜೊಲ್ಲು ಸುರಿಸುತ್ತಾ ಆಸೆ ಕಣ್ಣುಗಳಿಂದ ನೋಡುತ್ತಾ ಬೇಕರಿಯ ಮುಂದೆ ನಿಂತಿದೆ. ಅದರ ಆಸೆ ಪೂರೈಸುವವರಿಗೆ ನನ್ನ ಬೆಂಬಲ……
ಚಳಿಗೆ ಮುದುಡಿ ಬೀದಿಯಲ್ಲಿ ಮಲಗಿದ ನನ್ನ ತಾತನಿಗೆ ಕಂಬಳಿ ಹೊದಿಸಿ ಬಿಸಿ ಕಾಫಿ ಕುಡಿಸುವವರಿಗೆ ನನ್ನ ಬೆಂಬಲ…….
ಹಳೆಯ ನೋಟಾದರೂ ಸಿಗಲಿ ಎಂದು ತನ್ನ ದೇಹ ಮಾರಿ ಕೆನ್ನೆ ಕಚ್ಚಿಸಿಕೊಂಡು ರಕ್ತ ಒರೆಸಿಕೊಳ್ಳುತ್ತಿರುವ ನನ್ನ ತಂಗಿಗೆ ಬಾಳು ಕೊಡುವವರಿಗೆ ನನ್ನ ಬೆಂಬಲ…….
ಹತ್ತು ವರ್ಷಗಳಿಂದಲೂ ಕೊನೆಗಾಲಕ್ಕೆ ಇರಲೆಂದು ಕೂಡಿಟ್ಟಿದ್ದ ನೂರರ 50 ನೋಟಿಡಿದು ಇನ್ನು ನನ್ನ ಅಂತ್ಯ ಸಮೀಪಿಸಿತು ಹಣವಿಲ್ಲದ ನಾನು ಹೆಣಕ್ಕೆ ಸಮಾನ ಎಂದು ಸಾವಿನ ನಿರೀಕ್ಷೆಯಲ್ಲಿ ಚಿಂತಾಕ್ರಾಂತಳಾದ ನನ್ನ ಅಜ್ಜಿಗೆ ಧೈರ್ಯ ಹೇಳಿ ನಾನಿದ್ದೇನೆಂದು ತಬ್ಬಿ ಸಮಾಧಾನ ಮಾಡುವವರಿಗೆ ನನ್ನ ಬೆಂಬಲ…..
ರೇಪ್ ಮಾಡಿದವನನ್ನು ಕತ್ತರಿಸುವವರಿಗಿಂತ ಅತ್ಯಾಚಾರಕ್ಕೆ ಒಳಗಾದ ನನ್ನ ಅಕ್ಕನ ನೋವಿಗೆ ಸ್ಪಂದಿಸಿ ಆಕೆಯ ಜೀವನಕ್ಕೆ ಆಧಾರವಾಗುವ ಮನಸುಗಳಿಗೆ ನನ್ನ ಬೆಂಬಲ……
ಅಕ್ಷರಗಳಲ್ಲಿ ಮಹಲುಗಳನ್ನು ಕಟ್ಟಿ, ಭಾವನೆಗಳಲ್ಲಿ ತೇಲಿ ಮೇರಾ ಭಾರತ್ ಮಹಾನ್ ಎನ್ನುವವರಿಗಿಂತ ತನ್ನ ಜೊತೆಗಾರರ ಸ್ನೇಹಿತರ ಕಷ್ಟಗಳಿಗೆ ಹೆಗಲಾಗುವ, ಅವರಿಗೆ ನಾವಿದ್ದೇವೆ ಎಂದು ಆತ್ಮವಿಶ್ವಾಸ ತುಂಬುವ ಮನುಜರಿಗೆ ನನ್ನ ಬೆಂಬಲ……
ಯಾವ ಕಾನೂನು ಬಂದರೂ ಅದರೊಳಗೆ ನುಸುಳಿ ತಮಗೆ ಅನುಕೂಲವಾಗುವಂತೆ ಅರ್ಥೈಸಿ ಈಗಾಗಲೇ ಇರುವ ಹಿಡಿತದಿಂದ ಅದರ ಮೇಲೆ ಸವಾರಿ ಮಾಡಿ ಬೇರೆ ರೀತಿ ಅದೇ ದಂಧೆಗೆ ಇಳಿಯುವವರಿಗಿಂತ,
ಆ ಕಾನೂನಿನಿಂದ ಬದುಕು ಕಳೆದುಕೊಳ್ಳುವವರಿಗೆ ಆಶ್ರಯವಾಗುವ ಆತ್ಮಗಳಿಗೆ ನನ್ನ ಬೆಂಬಲ…….
ಏಕೆಂದರೆ,
ಫಲಿತಾಂಶ ಮತ್ತು ಜನಪ್ರಿಯತೆಯ ಬಾಲದ ಹಿಂದೆ ಓಡಲು ನಾನು ಕುದುರೆ ವ್ಯಾಪಾರಿಯಲ್ಲ. ಬದುಕಿನ ಅರ್ಥ ಹುಡುಕ ಹೊರಟ ಜೀವಕೋಶಗಳ ರಾಶಿ…..
ಸಮಾಜದ ಕಟ್ಟಕಡೆಯ ವ್ಯಕ್ತಿಯ ಮುಖದಲ್ಲಿ ನಗು ನೋಡುವವರೆಗೂ ಪ್ರತಿ ಕ್ಷಣವೂ ಆಕ್ರೋಶದ ಕ್ಷಣವೇ……..
ರಾಜ್ಯದಲ್ಲಿದ್ದ 56 ಲಕ್ಷ ಕಟ್ಟಡ ಕಾರ್ಮಿಕರ ಕಾರ್ಡ್ಗಳನ್ನು ತಪಾಸಣೆ ನಡೆಸಿ 26 ಲಕ್ಷ…
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ,…
ಹಾಲಿನ ದರ ಹೆಚ್ಚಳ ಮಾಡುವಂತೆ ರೈತರಿಂದ ಬೇಡಿಕೆ ಹೆಚ್ಚಿದ್ದು, ಪ್ರತಿ ಲೀಟರ್ ಗೆ…
ಅಸ್ಸಾಂನ ಕ್ಯಾಚರ್ ಜಿಲ್ಲೆಯ ಲಖಿಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ವಶಪಡಿಸಿಕೊಂಡ ಸುಮಾರು…
ಗುಜ್ಜೆ ಕಟ್ಲೇಟ್ ಮಾಡುವ ವಿಧಾನದ ಬಗ್ಗೆ ಗೃಹಿಣಿ ದಿವ್ಯಮಹೇಶ್ ಅವರು ಇಲ್ಲಿ ವಿವರ…
ಪ್ರಯಾಗ್ ರಾಜ್ ತಲಪುವ ವೇಳೆ ಆಗುತ್ತಿರುವ ಸಂತಸದ ಬಗ್ಗೆ ಸುರೇಶ್ಚಂದ್ರ ಅವರು ಬರೆದಿದ್ದಾರೆ…