“ಎದ್ದು ನಿಲ್ಲಿ ! ಧೀರರಾಗಿ ! ಬಲಾಡ್ಯರಾಗಿ! ಜವಾಬ್ದಾರಿಗಳನ್ನು ನಿಭಾಯಿಸಲು ಸಮರ್ಥರಾಗಿ. ನಿಮಗೆ ಬೇಕಾದ ಶಕ್ತಿ, ಸಹಾಯವೆಲ್ಲಾ ನಿಮ್ಮಲ್ಲೇ ಇರುವುದರಿಂದ ನಿಮ್ಮ ಭವಿಷ್ಯವನ್ನು ನೀವೇ ನಿರ್ಮಿಸಿಕೊಳ್ಳಿ. ಹೀಗೆಂದು ಯುವ ಮನಸಿನ ಬಿಸಿರಕ್ತದ ಯುವ ಜನತೆಯಲ್ಲಿ ಉತ್ಸಾಹ ತುಂಬಿದವರು ಸ್ವಾಮಿ ವಿವೇಕಾನಂದರು.ಇವರು ಪ್ರಾತ: ಸ್ಮರಣೀಯರು.
ಬ್ರಿಟಿಷ್ ಸಾಮ್ರಾಜ್ಯದ ಕಪಿ ಮುಷ್ಟಿಯಲ್ಲಿ ನರಳುತ್ತಿದ್ದ ಭಾರತೀಯ ಸಮಾಜಕ್ಕೆ ಹೊಸ ಕಲ್ಪನೆಯನ್ನು ಸಾಕಾರ ಗೊಳಿಸಿದ ಧೀಮಂತ ವ್ಯಕ್ತಿತ್ವ ವಿವೇಕಾನಂದರದ್ದು. ಭಾರತ, ಹಿಂದೂಗಳು, ಹಿಂದೂ ಧರ್ಮವೆಂದರೆ ಕೇವಲವಾಗಿ ನೋಡುತ್ತಿದ್ದ ಕಾಲ. ಭಾರತವೆಂದರೆ ಹಾವಾಡಿಗರ ದೇಶವೆಂಬ ಭ್ರಮೆಯಲ್ಲಿದ್ದ ಪಾಶ್ಚಿಮಾತ್ಯರ ಕಣ್ತೆರಸಲು ವಿವೇಕಾನಂದರು ಹುಟ್ಟಿ ಬರಬೇಕಾಯಿತು. 1983 ರಲ್ಲಿ ಚಿಕಾಗೊದಲ್ಲಿ ಸರ್ವಧರ್ಮ ಸಮ್ಮೇಳನದಲ್ಲಿ ಅಮೆರಿಕಾದ ಸಹೋದರ ಸಹೋದರಿಯರೆ ಎಂದು ಆರಂಭಿಸಿದ ಭಾಷಣ ಪ್ರಪಂಚದ ಕಣ್ಣಿನಲ್ಲಿ ಭಾರತದ ಸ್ಥಾನವನ್ನು ಬದಲಾಯಿಸಿತು. ಇಲ್ಲಿನ ಶ್ರೀಮಂತ ಸಂಸ್ಕೃತಿಯ ಪರಿಚಯ ಜಗತ್ತಿಗಾಯಿತು.
ಧರ್ಮ ಮತ್ತು ಸರ್ಕಾರದ ನಡುವೆ ಕಟ್ಟು ನಿಟ್ಟಾದ ಅಂತರವಿರುವಂತೆ ಅವರು ಮನವಿ ಮಾಡಿಕೊಂಡಿದ್ದರು. ಸಾಮಾಜಿಕ ಕಟ್ಟಳೆಗಳು ಧರ್ಮದ ಮೂಲಕ ರೂಪುಗೊಂಡದ್ದಾದರೂ ಸರ್ಕಾರಿ ಕೆಲಸಗಳು ಯಾವುದೇ ಒಂದು ಧರ್ಮಕ್ಕೆ ಪ್ರಾಶಸ್ತ್ಯ ಕೊಡಬಾರದು ಎಂಬ ನಂಬಿಕೆಯಾಗಿತ್ತು ವಿವೇಕಾನಂದರದ್ದು.
“Every thing is easy , when you are busy, nothing is easy when you are lazy.” ಇದು ವಿವೇಕಾನಂದರು ಯಾವಾಗಲೂ ಕೊಡುತ್ತಿದ್ದ ಎಚ್ಚರಿಕೆಯಾಗಿತ್ತು. ನಮಗೆ ಮಾಡುವ , ಕಲಿಯುವ ಮನಸು ಉತ್ಸಾಹ ಎರಡೂ ಇದ್ದಾಗ ಸೋಮಾರಿತನಕ್ಕೆ ಜಾಗವಿಲ್ಲ. ಎಲ್ಲಾ ಕೆಲಸಗಳು ಸುಲಭವಾಗಿ ನಡೆದು ಬಿಡುತ್ತವೆ. ನಮ್ಮಲ್ಲಿರುವ ಅದಮ್ಯ ಚೇತನ, ಶಕ್ತಿಯನ್ನು ಪ್ರಕಟಗೊಳಿಸುವತ್ತ ಕಾರ್ಯೋನ್ಮುಕವಾಗಬೇಕು. ದೇಶದ ಅಭಿವೃದ್ಧಿಗೆ ಇಂದು ವೈಜ್ಞಾನಿಕ ಮನೋಭಾವುಳ್ಳ ಪ್ರತಿಭಾನ್ವಿತರ ಅಗತ್ಯವಿದೆ.
ವೇದಾಂತವು ಯಾವ ಪಾಪವನ್ನು ಒಪ್ಪಿಕೊಳ್ಳುವುದಿಲ್ಲ. ತಪ್ಪನ್ನು ಮಾತ್ರ ಒಪ್ಪಿಕೊಳ್ಳುವುದು. ನಮ್ಮನ್ನು ನಾವು ನಿರ್ಬಲರೆಂದು, ನಿಶ್ಯಕ್ತರೆಂದು ತಿಳಿಯುವುದು ಘೋರ ತಪ್ಪು ಎಂಬುದು ವೇದಾಂತದ ಸಾರವೆಂದು ವಿವೇಕಾನಂದರು ಸಾರಿ ಸಾರಿ ಹೇಳಿದ್ದಾರೆ.
ನೀನು ಸ್ವಾಮಿಯಂತೆ ಕೆಲಸ ಮಾಡು , ಗುಲಾಮನಂತೆ ಮಾಡಬೇಡ. ಯಾವಾಗಲೂ ಕಾರ್ಯ ಮಾಡು ಆದರೆ ಜೀತಗಾರನಂತೆ ದುಡಿಯಬೇಡ. ಭರತ ಖಂಡದಲ್ಲಿ ಇಂದು ಯಾವುದಾದರೂ ಮಹಾಪಾತಕವಿದೆಯೆಂರೆ ಅದೇ ಈ ಗುಲಾಮಗಿರಿ. ಪ್ರತಿಯೊಬ್ಬರೂ ಆಜ್ಞಾಧಾರಕರಾಗಲು ಯಾರೂ ಇಚ್ಚಿಸುವುದಿಲ್ಲ. ಹಿಂದಿನ ಕಾಲದ ಬ್ರಹ್ಮಚರ್ಯಾಶ್ರಮ ಈಗ ಇಲ್ಲದಿರುವುದೇ ಕಾರಣ. ಮೊದಲು ಅಪ್ಪಣೆ ಪಾಲಿಸುವುದನ್ನು ಕಲಿಯಿರಿ. ಆಜ್ಞೆ ಕೊಡುವುದು ಅನಂತರ ಬರುವುದು. ಮೊದಲು ಹೇಗೆ ಸೇವಕರಾಗ ಬೇಕೆಂಬುದನ್ನು ಕಲಿಯಿರಿ. ಅನಂತರ ಸ್ವಾಮಿಯಾಗಲು ಯೋಗ್ಯರಾಗುವಿರಿ. ಹೀಗೆ ಹಲವು ರೀತಿಯಲ್ಲಿ ಯುವಜನತೆಗೆ ಅಗತ್ಯವಾದ ಮಾರ್ಗದರ್ಶನ ಮಾಡಿದವರು ಸ್ವಾಮಿ ವಿವೇಕಾನಂದರು.
ಅವರ ಜನ್ಮದಿನ ಜನವರಿ 12ನ್ನು ದೇಶದಾದ್ಯಂತ ‘ಯುವದಿನ’ ಎಂದು ಆಚರಿಸಲಾಗುತ್ತದೆ. ಯುವಜನರಿಗೆ ಅಂದು ಇಂದು ಎಂದೂ ಆದರ್ಶ ವ್ಯಕ್ತಿ. ಅವರೇನು ಹೇಳಿದರೋ ಹಾಗೇ ಜೀವಿಸಿದರು. ಬದುಕಿದ್ದು ಕೆಲವೇ ವರುಷಗಳಾದರು ಭಾರತದ ಪ್ರಭೆಯಾಗಿ ಬಾಳಿದವರು.
ಯಾರನ್ನೂ ಯಾವುದನ್ನು ಸುಲಭವಾಗಿ ಸ್ವೀಕರಿಸದ ವಿವೇಕಾನಂದರು ರಾಮಕೃಷ್ಣ ಪರಮಹಂಸರನ್ನು ಗುರುವೆಂದು ಸುಲಭವಾಗಿ ಪರಿಗಣಿಸಲಿಲ್ಲ. ಎರಡು ,ಮೂರು ಭೇಟಿಯಲ್ಲಿ ರಾಮಕೃಷ್ಣರ ಮಗು ಮನಸಿಗೆ ವಿವೇಕಾನಂದರು ಮಾರು ಹೋದರು. ಅವರ ಬದುಕಿನ ಹಲವು ಅನಿರೀಕ್ಷಿತ ಘಟನೆಗಳು ರಾಮಕೃಷ್ಣರನ್ನು ಗುರುವಾಗಿ ಸ್ವೀಕರಿಸುವಂತೆ ಮಾಡಿತು.
ವಿಶ್ವನಾಥದತ್ತ ಹಾಗೂ ಭುವನೇಶ್ವರಿ ದೇವಿಯವರ ಮಗ ನರೇಂದ್ರ ಅವರ ಬಾಲ್ಯದ ಹೆಸರು. ಕಲ್ಕತ್ತಾದಲ್ಲಿ ಅವರ ಜನನವಾಯಿತು. ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ನರೇಂದ್ರರ ಹೆಸರು ‘ವಿವೇಕಾನಂದ’ ಎಂದಾಯಿತು. ಬದುಕು , ಸಮಾಜದ ಕುರಿತು ತಮ್ಮ ವಿಶಿಷ್ಟ ದೃಷ್ಟಿಕೋನಕ್ಕಾಗಿ ಯಾವತ್ತೂ ಗುರುತಿಸಿಕೊಳ್ಳುತ್ತಾರೆ.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…
ನಾಡಿನ ಸಮಸ್ತರಿಗೂ ಮಕರ ಸಂಕ್ರಾಂತಿ ಶುಭಾಶಯ. ರೈತರಿಗೂ ಇದು ಸುಗ್ಗಿಯ ಹಬ್ಬ. ಈ…