Opinion

ಬಾಳೆ ಕೊನೆ ದಿಂಡಿನ ಉಪ್ಪಿನಕಾಯಿ ಬೇಕಾ? | ಆರೋಗ್ಯ ದೃಷ್ಟಿಯಿಂದ ಇಂತಹ ಹೊಸ ರುಚಿ ಸಹವಾಸ ಬೇಡ |

Share

ನಿನ್ನೆಯಿಂದ ವಾಟ್ಸಾಪ್(Whats app) ಗುಂಪಿನಲ್ಲಿ ಉಡುಪಿಯಲ್ಲಿ(Udupi) ಬಾಳೆ ಕೊನೆ ದಿಂಡನ್ನ(Banana stem) ಹೆಚ್ಚಿ ಉಪ್ಪಿನಕಾಯಿ(Pickle) ಮಾಡುವ ಈ ವೀಡಿಯೋ ವೈರಲ್‌(Video Viral) ಆಗ್ತಿದೆ. ಏನೋ ಶಾಸ್ತ್ರಕ್ಕೆ ತಯಾರಿಸುತ್ತರಾದರೆ ಖಂಡಿತವಾಗಿಯೂ ತಯಾರಿಸಲಿ, ಪರವಾಗಿಲ್ಲ. ಅಲ್ಲಿ ಬಾಳೆಯ ಎಲ್ಲಾ ಭಾಗವನ್ನೂ ಬಳಸಿ ಖಾದ್ಯ(Food) ತಯಾರಿಸುವ ಶಾಸ್ತ್ರ ಸಂಪ್ರದಾಯ ಇರಬಹುದು. ಅವರು ಮಾಡಿಕೊಳ್ಳಲಿ ಬಿಡಿ.. ಬಂಧುಗಳೇ…
ದಯವಿಟ್ಟು ನೀವು ಪಟ್ಟಣದ(City) ಅಂಗಡಿಯಲ್ಲಿ ಹಣ್ಣಾದ ಬಾಳೆ ಕೊನೆ ತಂದು ಹಣ್ಣು ತೆಗದು ಬಾಳೆಗೊನೆ ದಿಂಡ್ ಹೆಚ್ಚಿ ಉಪ್ಪಿನಕಾಯಿ ಮಾಡೋ ಸಾಹಸ ಬೇಡ..

Advertisement

ನೀವು ಇತ್ತೀಚಿನ ವರ್ಷಗಳಲ್ಲಿ “ಅಂಗಡಿ ಬಾಳೆಗೊನೆಯ” ಬಾಳೆ ಹಣ್ಣಿ‌ನ ಸಿಹಿ‌ ರುಚಿ ಗಮನಿಸಿದ್ದೀರ…? ದೊಡ್ಡ ದೊಡ್ಡ ಪಚ್ಚ ಬಾಳೆ ಹಣ್ಣು ಚಪ್ಪೆ ಚಪ್ಪೆ.. ಪುಟ್ಟ ಬಾಳೆ ಕರಬಾಳೆ ಹಣ್ಣು ಕೂಡ ಎಷ್ಟೇ ಮಾಗಿದರೂ ಚಪ್ಪೆ…!! ಏಕೆ ಬಾಳೆ ಹಣ್ಣು ರುಚಿ ಪರಿಮಳ ಇರೋಲ್ಲ…? ನಮ್ಮ ಮನೆಯ ಹಿತ್ತಲಿನಲ್ಲಿ ಅಥವಾ ನಮ್ಮ ಸ್ವಂತ ತೋಟದಲ್ಲಿ “ಮಂಗನ ಕಾಟ ಪೂರ್ವ” (ಮಂ ಕಾ ಪೂ)ದಲ್ಲಿ ಸಾವಯವ ಮದ್ಯಮದಲ್ಲಿ ಬೆಳೆದು ಸ್ವಾಭಾವಿಕವಾಗಿ ಹಣ್ಣು ಮಾಡಿ ತಿಂದ ಬಾಳೆ ಹಣ್ಣಿನ‌ ಸ್ವಾದ ರುಚಿ ಪರಿಮಳ ಈ ಅಂಗಡಿಯಲ್ಲಿ ನೇತಾಕಿದ ಬಾಳೆ ಹಣ್ಣಿನಲ್ಲಿ ಇರೋಲ್ಲ…!! ನೀವು ಜ್ಞಾಪಿಸಿ ಹೋಲಿಸಿ ಕೊಂಡು ನೋಡಿ.. ಏಕೆಂದರೆ ಬಹುತೇಕ ಬಾಳೆ ಬೆಳೆ ಕೃಷಿಕರು ಬಾಳೆ ಬೆಳೆಯನ್ನು ಸಾವಯವ ಮಾದರಿಯಲ್ಲಿ ಬೆಳೆಯೋಲ್ಲ ಮತ್ತು ಬಾಳೆ ಗೊನೆ ಮಂಡಿಯವರು ಬಾಳೆ ಕೊನೆಯನ್ನ ರಾಸಾಯನಿಕ ಹಾಕಿ ಹಣ್ಣು ಮಾಡುತ್ತಾರೆ.. ಈಗ ಬಾಳೆ ಕೊನೆಯ ಬಾಳೆ ಹಣ್ಣಿನ ಸಿಪ್ಪೆ ಮತ್ತು ಬಾಳೆ ಕೊನೆಯ ದಿಂಡು ಎಲ್ಲವೂ ವಿಷ ಪೂರಿತ…!!

ಒಬ್ಬ ದೊಡ್ಡ ಜ್ಯೋತಿಷ್ಯರ ಕಾರ್ಖಾನೆಯಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕಾಗಿ‌‌ ಕಾಯಿ ಬಾಳೆಗೊನೆಯನ್ನ ತಂದು ಅದನ್ನು ಇನ್ನೂರು ಲೀಟರ್ ನೀರನ ಡ್ರಂನಲ್ಲಿ ಅತ್ಯಂತ ಅಪಾಯಕಾರಿ ಕಳೆ ನಾಶಕ ರೌಂಡ್‌ ಅಪ್ ವಿಷವನ್ನು ಅದಕ್ಕೆ ಹಾಕಿ ಕದಡಿ ಅದರಲ್ಲಿ ಕಾಯಿ ಬಾಳೆ ಗೊನೆಯನ್ನ ನೆನಸಿ ಆ ಮೂಲಕ ಬಾಳೆಗೊನೆ ಹಣ್ಣು ಮಾಡಿ‌ ಆ ಧಾರ್ಮಿಕ ಕಾರ್ಯಕ್ರಮದಲ್ಲಿ ಬಳಸಲಾ ಗಿತ್ತು. ಇದು ವಾಸ್ತವವಾಗಿ ನೆಡೆದ ಘಟನೆ. ಈ ವಿಚಾರ ತಿಳಿದ ನಂತರದಿಂದ ನಾನು ಸ್ವಾಭಾವಿಕವಾಗಿ ಬಾಳೆಗೊನೆ ಹಣ್ಣಾದು ಇದ್ದರೆ ಮಾತ್ರ ಹಣ್ಣು ತಿಂಥೇನೆ ಮತ್ತು ಸಿಪ್ಪೆ/ಹಣ್ಣನ್ನು ಜಾನುವಾರುಗಳಿಗೆ ಹಾಕುತ್ತೇವೆ.

ಬಂಧುಗಳೇ…,
ಬಾಳೆಗೊನೆ ಬೆಳೆಯಲಾಗದ ಆಸ್ತಿಕರು ಹಬ್ಬಕ್ಕಾಗಿ ಬಾಳೆ ಹಣ್ಣು ಬೇಕಂತಾದರೆ ನಿಮ್ಮ ನಂಬಿಕಸ್ಥ ಅಂಗಡಿಯಲ್ಲಿ ಬಾಳೆ ಹಣ್ಣು ತನ್ನಿ ಇಲ್ಲವಾದಲ್ಲಿ ಹಬ್ಬದ ಕೆಲವು ದಿನಗಳ ಮೊದಲು ಕಾಯಿ ಬಾಳೆಗೊನೆ ತಂದು ಮನೆಯಲ್ಲೇ ಸ್ವಾಭಾವಿಕವಾಗಿ ಬಾಳೆಗೊನೆ ಹಣ್ಣು ಮಾಡಿ ದೇವರಿಗೆ ಬಳಸಿ ನೀವೂ ತಿನ್ನಿ… ಹೀಗೆ ನಮಗೆ ಸಿಗುವ ಹಣ್ಣು ತರಕಾರಿಗಳ ಸಿಪ್ಪೆ ಯನ್ನು ಉಪ್ಪಿನಕಾಯಿ ಮಾಡುವುದೋ ಪಲ್ಯ ಮಾಡುವುದೋ ಮಾಡುವುದರ ಮೊದಲು ಈ ಕಲಿ‌ಯುಗ ಕಾಲದ ದುಷ್ ಪ್ರಯತ್ನಗಳಿರುತ್ತದೆ ಎಂಬುದನ್ನು ಜ್ಞಾಪಕ ದಲ್ಲಿಟ್ಟು ಕೊಳ್ಳಿ.. ಈ ವಿಷಮಯ ಜಗತ್ತಿನಲ್ಲಿ ಸಾವಯವ ಕೃಷಿಕರ ಕೃಷಿ ಉತ್ಪನ್ನ ಗಳನ್ನು ಬೆಲೆ ತುಸು ಹೆಚ್ಚಾದರೂ ಕೊಂಡು ಬಳಸಿ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಿ ಎಂದು ಕೋರುತ್ತಿದ್ದೇನೆ.

ಉಪ್ಪಿನಕಾಯಿ ಮಾಡಲು ಎಂದಿನ‌ ಮಾವಿನ ಕಾಯಿ, ಲಿಂಬೆಕಾಯಿ, ದುಡ್ಲೆ ಕಾಯಿ, ಕಂಚಿಕಾಯಿಯಂತಹ ಹುಳಿ ಕಾಯಿಗಳನ್ನ ಬಳಸಿ.. ಈ ಹಲಸಿನ ಹಣ್ಣು , ಕಿತ್ತಳೆ ಹಣ್ಣು , ಟೊಮ್ಯಾಟೊ, ಬೆಂಡೆ ಕಾಯಿ, ತೊಂಡೆ ಕಾಯಿಯಂತಹ ಹಣ್ಣು ತರಕಾರಿಯನ್ನ ಉಪ್ಪಿನಕಾಯಿ ತಯಾರಿಸಲು ಬಳಸ ಬೇಡಿ.. ಇಂತಹ ಒತ್ತಾಯದ ಪ್ರಯತ್ನಗಳನ್ನು ಇನ್ನಷ್ಟು ಕೃತಕ ರಾಸಾಯನಿಕ ಹಾಕಿಯೇ ಮಾಡಬೇಕಾಗುತ್ತದೆ.. ಇಂತಹ ಹೊಸ ರುಚಿ ಪ್ರಯತ್ನವನ್ನ ನಾವುಗಳು ದೂರದಿಂದ ನೋಡಿ ಸುಮ್ಮನಿರುವುದು ನಮ್ಮ ಆರೋಗ್ಯ ಮತ್ತು ಜಿಹ್ವೆಗೆ ಒಳ್ಳೆಯದು ಅಂತನ್ನಿಸುತ್ತದೆ. ಆರೋಗ್ಯ ದೃಷ್ಟಿಯಿಂದ ಇಂತಹ ಹೊಸ ರುಚಿ ಬೇಡ ಎಂದು ನನ್ನ ಸಲಹೆ.

ಬರಹ :
ಪ್ರಬಂಧ ಅಂಬುತೀರ್ಥ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಅಡುಗೆ ಗ್ಯಾಸ್ ಬೆಲೆ‌ ಸಿಲಿಂಡರ್‌ಗೆ 50 ರೂ. ಹೆಚ್ಚಳ

ಅಡುಗೆ ಅನಿಲ ಅಥವಾ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 50…

2 hours ago

ಹವಾಮಾನ ವರದಿ | 07-04-2025 | ಕೆಲವೆಡೆ ಇಂದೂ ಮಳೆ ನಿರೀಕ್ಷೆ | ಎ.9 ರಿಂದ ಅಲ್ಲಲ್ಲಿ ಸಾಧಾರಣ ಮಳೆಯ ಸಾಧ್ಯತೆ |

ಇಂದು ಕೆಲವು ಕಡೆ ಮಳೆ ನಿರೀಕ್ಷೆ ಇದೆ. ಈಗಿನಂತೆ ರಾಜ್ಯದ ಎಪ್ರಿಲ್ 9ರಿಂದ…

6 hours ago

ಜೇನು ಹುಳಗಳ ಸಂಖ್ಯೆ ಗಣನೀಯ ಇಳಿಕೆ | ಜೇನು ಕುಟುಂಬ ಉಳಿಸುವ ಅಭಿಯಾನ |

ವಿಶ್ವದ ಪ್ರಮುಖವಾದ 107 ಬೆಳೆಗಳಲ್ಲಿ ಸುಮಾರು 70% ಗೆ ಬೆಳೆಗಳು ಜೇನುನೊಣಗಳಂತಹ ಪರಿಸರ…

8 hours ago

ಹುಲಿಸಂರಕ್ಷಿತ ಪ್ರದೇಶಲ್ಲಿ ರಾತ್ರಿ ಸಂಚಾರ ನಿಷೇಧ | ನಿಷೇಧ ತೆರವುಗೊಳಿಸದಂತೆ ಒತ್ತಾಯಿಸಿ ಪ್ರತಿಭಟನೆ

ಬಂಡಿಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧ  ತೆರವುಗೊಳಿಸಬಾರದು ಎಂದು…

14 hours ago

ರಾಜ್ಯದಲ್ಲಿ 100 ಹೊಸ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲು ನಿರ್ಧಾರ | ಇಂಧನ ಸಚಿವ ಕೆ.ಜೆ.ಜಾರ್ಜ್

ರಾಜ್ಯದಲ್ಲಿ 100 ಹೊಸ ವಿದ್ಯುತ್ ಉಪ ಕೇಂದ್ರಗಳನ್ನು ಸ್ಪಾಪಿಸಲಾಗುವುದು ಎಂದು ಇಂಧನ ಸಚಿವ…

14 hours ago

ದೇಶದ ಜಿಡಿಪಿ 4.5ಲಕ್ಷ ಕೋಟಿ ರೂಪಾಯಿ ಏರಿಕೆ ಸಾಧ್ಯತೆ | ನಿರ್ಮಲಾ ಸೀತಾರಾಮನ್‌ ಅಭಿಪ್ರಾಯ

ಒಂದು ರಾಷ್ಟ್ರ, ಒಂದು ಚುನಾವಣೆ ವ್ಯವಸ್ಥೆ ಜಾರಿಗೆ ಬಂದರೆ ಭಾರತವು ಶೇಕಡ 1.5…

14 hours ago