ಯಾವುದೇ ಭೂಭಾಗಕ್ಕೆ ಅದರದ್ದೇ ಆದ ಅನುಕೂಲ ಹಾಗೂ ಅನಾನುಕೂಲಗಳು ಇರುತ್ತವೆ. ಅಲ್ಲಿಯ ನೈಸರ್ಗಿಕ ಸಂಪತ್ತಿನ ಒಡೆತನ ಮತ್ತು ಅದರ ಮೊದಲ ಬಳಕೆಯ ಹಕ್ಕು ಆಯಾ ಪ್ರದೇಶದ ಜನ ಸಮುದಾಯದ್ದಾಗಿರುತ್ತದೆ. ಭೂಮಿಯೊಳಗಿನ ಖನಿಜ ಸಂಪತ್ತು, ಭೂಮಿಯ ಮೇಲಿನ ಅರಣ್ಯ ಉತ್ಪನ್ನಗಳು ಹೇಗೆ ಆಯಾ ಸರ್ಕಾರದ ಆಸ್ತಿಯೋ ಹಾಗೆಯೇ ಆ ಪ್ರದೇಶದಲ್ಲಿ ಸುರಿಯುವ ಮಳೆ ಹಾಗೂ ಹರಿಯುವ ನೀರಿಗೂ ಆ ಪ್ರದೇಶದ ಜೀವ ವೈವಿಧ್ಯವೇ ಪ್ರಥಮ ಹಕ್ಕುದಾರ ಆಗಿರುತ್ತಾನೆ. ಹಾಗಾಗಿ ಕಾವೇರಿ ನೀರಿನ ಮೊದಲ ಹಕ್ಕು ನಿರ್ವಿವಾದವಾಗಿ ಕರ್ನಾಟಕದ್ದೇ ಆಗಿರುತ್ತದೆ. ನಮ್ಮ ಅಗತ್ಯತೆಯನ್ನು ಪೂರೈಸಿದೆ ನಂತರವಷ್ಟೇ ಇತರರಿಗೆ ನೆರವಾಗುವ ಪ್ರಶ್ನೆ ಉದ್ಭವಿಸುತ್ತದೆ. -ಕೆ.ಪಿ ಪೂರ್ಣಚಂದ್ರ ತೇಜಸ್ವಿ
ಈ ಮಾತು ಕರ್ನಾಟಕ ರಾಜ್ಯಕ್ಕೆ ಅನ್ವಯಿಸುದಿಲ್ಲವೇನೋ ಅನ್ನಿಸುತ್ತದೆ. ಅತ್ತ ಕಾವೇರಿ, ಇತ್ತ ತುಂಗಾಭದ್ರ, ಇನ್ನೊಂದೆಡೆ ಮಹದಾಯಿ ಹೀಗೆ ಕರ್ನಾಟಕ ರಾಜ್ಯದ ನೈಸರ್ಗಿಕ ಸಂಪತ್ತು ರಾಜ್ಯದ ಜನತೆಯ ಪಾಲಿಗೆ ದೊರಕದೇ ಇತರ ರಾಜ್ಯದ ಜನತೆಗೆ ಸಿಗುವುದೇ ಹೆಚ್ಚು. ಇದಕ್ಕೆ ಕಾರಣ ಏನು ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವೆ.
ರಾಜ್ಯದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಿಂದ (TB Dam) ಈಗ ಆಂಧ್ರ ಪ್ರದೇಶಕ್ಕೆ ನದಿ ಮೂಲಕ ನೀರು ಬಿಡಲಾಗುತ್ತಿದೆ. ಇದರಿಂದಾಗಿ ಕರ್ನಾಟಕದ ರೈತರಿಗೆ (Karnataka Farmers) ನೀರಿನ ಕೊರತೆ ಉಂಟಾಗಿದೆ. ಇದೇ ಮೊದಲು ಬಾರಿ ಮುಂಗಾರು ಹಂಗಾಮಿನಲ್ಲಿ (Monsoon 2024) ನೀರಿನ ಕೊರತೆ ಉಂಟಾಗಲಿದೆ.
ತುಂಗಭದ್ರಾ ಜಲಾಶಯದಿಂದ ನದಿಗೆ ಈಗ ನಿತ್ಯ 2012 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಇದರಿಂದಾಗಿ ಜಲಾಶಯದಿಂದ ಆಂಧ್ರ ಹಾಗು ತೆಲಂಗಾಣಕ್ಕೆ 4.92 ಟಿಎಂಸಿ ನೀರು ಬಿಡಲಾಗುತ್ತಿದೆ. ಜಲಾಶಯದಲ್ಲಿ ಈಗ ಅತ್ಯಂತ ಕಡಿಮೆ ನೀರು ಇದೆ. ಜಲಾಶಯದ ಒಟ್ಟು ನೀರಿನ ಮಟ್ಟ 1633 ಅಡಿ ಇದ್ದು. ಈಗ ಜಲಾಶಯದಲ್ಲಿ 1595 ಅಡಿ ನೀರಿದೆ. ಜಲಾಶಯದಲ್ಲಿ ಒಟ್ಟು 100.788 ಟಿಎಂಸಿ ಸಾಮಾರ್ಥ್ಯ ಇದ್ದು ಈಗ ಕೇವಲ 16.063 ಟಿಎಂಸಿ ನೀರು ಇದೆ. ಕಳೆದ ವರ್ಷ ಈ ದಿನಕ್ಕೆ 94.324 ಟಿಎಂಸಿ ನೀರು ಇತ್ತು.
6 ಟಿಎಂಸಿ ನೀರು ಆಂಧ್ರಕ್ಕೆ : ಕರ್ನಾಟಕ. ಆಂಧ್ರ ಹಾಗು ತೆಲಂಗಾಣದ ರೈತರಿಗೆ ನೀರು ಹಂಚಿಕೆಯಾಗಲಿದ್ದು, ಈಗ ಆಂಧ್ರಕ್ಕೆ ಒಟ್ಟು 6 ಟಿಎಂಸಿ ನೀರು ನೀಡಬೇಕಾಗಿದೆ. ಈ ನೀರನ್ನು ಬಲದಂಡೆಯ ಮೇಲ್ಮಟ್ಟ ಕಾಲುವೆ ಮೂಲಕ ತೆಗೆದುಕೊಳ್ಳುವಂತೆ ಹಾಗೂ ಆಂಧ್ರ ಪ್ರದೇಶದ ತನ್ನ ಪಾಲಿನ ನೀರನ್ನು ಕರ್ನಾಟಕಕ್ಕೆ ಬಿಟ್ಟು ಕೊಡುವಂತೆ ಇತ್ತೀಚಿನ ಐಸಿಸಿ ಸಭೆಯಲ್ಲಿ ಚರ್ಚೆ ಮನವಿ ಮಾಡಿಕೊಳ್ಳಲು ತೀರ್ಮಾನಿಸಲಾಗಿತ್ತು. ರಾಜ್ಯ ಸರಕಾರದ ಈ ಮನವಿಗೆ ಆಂಧ್ರ ಹಾಗೂ ತೆಲಂಗಾಣ ಸರಕಾರಗಳು ಸ್ಪಂದಿಸಿಲ್ಲ. ಈ ಮಧ್ಯೆ ನದಿಯ ಮೂಲಕವೇ ನೀರು ಪಡೆಯಲು ಮುಂದಾಗಿದೆ.
ಬಳ್ಳಾರಿ-ವಿಜಯನಗರದ ರೈತರಿಗಿಲ್ಲ ನೀರು : ಆಂಧ್ರ ಸರಕಾರ ಬಲದಂಡೆ ಮೇಲ್ಮಟ್ಟ ಕಾಲುವೆ ಮೂಲಕ ನೀರು ತೆಗೆದುಕೊಂಡು ಹೋಗಿದ್ದರೆ ಕರ್ನಾಟಕದ ಬಳ್ಳಾರಿ ಹಾಗಗೂ ವಿಜಯನಗರ ಜಿಲ್ಲೆಯ ರೈತರಿಗೂ ಕಾಲುವೆ ಮೂಲಕ ನೀರು ಸಿಗುತ್ತಿತ್ತು. ಆದರೆ ಈಗ ನದಿಯ ಮೂಲಕ ನೀರು ತೆಗೆದುಕೊಳ್ಳುವದರಿಂದ ಕರ್ನಾಟಕದ ಸುಮಾರು 1.50 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆಯೂ ಹಾಳಾಗುತ್ತಿದೆ.
ಈಗಿರುವ 16 ಟಿಎಂಸಿ ನೀರಿನಲ್ಲಿ ಆಂಧ್ರ ಸರಕಾರ 5 ಟಿಎಂಸಿ, ಕರ್ನಾಟಕದ ಪಾಲಿನ ಕಾಲುವೆಗಳಿಗೆ ನವಂಬರ್ 30 ರವರೆಗೂ ನೀರು ಹರಿಸಬೇಕಾಗಿದೆ. ಇದಕ್ಕೆ 5 ಟಿಎಂಸಿ ನೀರು. ವಿಜಯ ನಗರ ಕಾಲುವೆಗಳಿಗೆ ಸುಮಾರು 3 ಟಿಎಂಸಿ ನೀರು ಮುಂಬರುವ ದಿನಗಳಲ್ಲಿ ಕುಡಿವ ನೀರು. ಡೆಡ್ ಸ್ಟೋರೇಜ್. ಜಲಾಶಯದ ನೀರು ಆವಿಯಾಗುವ ಹಿನ್ನೆಲೆಯಲ್ಲಿ ಜಲಾಶದಯಲ್ಲಿ ಈಗಿರುವ ನೀರಿನಲ್ಲಿ ಕೊರತೆಯಾಗಲಿದೆ. ವಿಜಯನಗರ ಕಾಲುವೆಗಳಿಗೆ 11 ತಿಂಗಳು ನೀರು ನೀಡಬೇಕಾಗಿದ್ದು ಈ ನೀರು ಸಹ ಕೊರತೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಕರ್ನಾಟಕದ ಪಾಲಿನಲ್ಲಿ ಈಗ ಕೇವಲ 1.5 ಟಿಎಂಸಿ ನೀರು ಮಾತ್ರ ಉಳಿಯುತ್ತಿದೆ. ತುಂಗಭದ್ರಾ ಎಡದಂಡೆ ನಾಲೆಯ ಕೊನೆಯ ಭಾಗಕ್ಕೆ ನೀರು ಸಮರ್ಪಕವಾಗಿ ತಲುಪಿಲ್ಲ. ಈ ಮಧ್ಯೆ ಈಗಿರುವ ಬೆಳೆಗೆ ಡಿಸೆಂಬರ್ 2 ನೆಯ ವಾರದವರೆಗೂ ನೀರು ಅವಶ್ಯವಿದೆ.
– ಅಂತರ್ಜಾಲ ಮಾಹಿತಿ
Water is now being released to Andhra Pradesh through the river from the Tungabhadra Reservoir, which is the lifeline of the farmers of the state. Due to this, the farmers of Karnataka are facing shortage of water. This is the first time that there will be shortage of water in the monsoon season.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…