ನಮಗೆ ಅತೀ ಅವಶ್ಯವಿರುವ ಪಂಚಭೂತಗಳಲ್ಲಿ ಜೀವಜಲ(Water) ಎನಿಸಿಕೊಂಡಿರುವ ನೀರೂ ಒಂದು. ಜಗತ್ತು ಇಂದು ನೀರಿನ ಕೊರತೆಯ(Water Scarcity) ಕಾರಣದಿಂದ ಅಶಾಂತಿ, ಅಪಾಯದ ಭೀತಿಯನ್ನು ಎದುರಿಸುವಂತಾಗಿದೆ. ಭೂಮಿಯ(Earth) ಮೇಲ್ಫದರವು ಶೇ. 71ರಷ್ಟು ಭಾಗ ನೀರಿನಿಂದಲೇ ಆವೃತವಾಗಿ, ನಿರಂತರ ಚಾಲನಾ ಸ್ಥಿತಿಯಲ್ಲಿದ್ದರೂ ಬಳಕೆಗೆ ಸಿಗುವ ನೀರಿನ ಪ್ರಮಾಣ ಶೇ.! ಕ್ಕಿಂತಲೂ ಕಡಿಮೆ. ಏಕೆಂದರೆ, ಶೇ. 96.63 ಭಾಗ ಸಮುದ್ರದ ಉಪ್ಪು ನೀರು(Sea salt water). ಇನ್ನುಳಿದ ಶೇ.2.37ನೀರು ಧ್ರುವ ಪ್ರದೇಶ ಹಾಗೂ ಶಿಲಾಸ್ತರಗಳ ಆಳದಲ್ಲಿದೆ. ಇದಕ್ಕಾಗಿ ಜಗತ್ತಿನಾದ್ಯಂತ ಅನೇಕ ಕಡೆ ನದಿ(River), ಸರೋವರಗಳ(Lake) ನೀರನ್ನು ಕಾಪಾಡುವ ಪ್ರಯತ್ನ ನಡೆಯುತ್ತಲಿದೆ.
ನೀರಿನ ರಕ್ಷಣೆಯ ಕೆಲ ಅಂಶಗಳು:
ಸಮುದ್ರಗಳಿಗೆ ಹೋಲಿಸಿದರೆ, ನದಿ, ಸರೋವರ ಹಾಗೂ ಇತರೆ ನೀರಿನ ಆಕರಗಳ ಪ್ರಮಾಣ ಕಡಿಮೆ. ಸಮುದ್ರಗಳು ಭೂಮಿಯ 36,10,00,000 5.6. , 12,000 ಘನ ಕಿ.ಮೀ ಹಾಗೂ ಸರೋವರಗಳು 2,30,000 ಘನ ಕಿ.ಮೀ! ಅಂದರೆ ಒಂದು ಟ್ಯಾಂಕರನ್ನು ತೆಗೆದುಕೊಂಡರೆ ಅದರಲ್ಲಿರುವ ಒಂದು ಹನಿ ನೀರು ಮಾತ್ರ ನಮಗೆ ಬಳಸಲು ಯೋಗ್ಯವಾಗಿದೆ ಎಂದರ್ಥ! 7,500 ಕಿ.ಮೀ ಉದ್ದದ ಕಡಲು ಭೂಮಿಯನ್ನು ಹೊಂದಿರುವ ನಮ್ಮ ದೇಶ, ಕೆರೆ, ಕುಂಟೆ, ಸರೋವರ, ನದಿ ಸೇರಿ 4.5 ಮಿಲಿಯನ್ ಹೆಕ್ಟೇರ್‌ಗಳಷ್ಟು ಪ್ರದೇಶ ಹೊಂದಿದೆ.
2001ರಲ್ಲಿ ಪ್ರತಿ ವ್ಯಕ್ತಿಗೆ 1,832 ಘನ ಮೀಟರಿನಷ್ಟು ನೀರು ದೊರೆಯುತ್ತಿತ್ತು; ಅದು ಇಂದು 1,454 ಘ.ಮೀಗೆ ಇಳಿದಿದೆ. ಇದನ್ನು ಲೀಟರಿನಲ್ಲಿ ಅಂದಾಜಿಸಿದರೆ, ಪ್ರತಿ ದಿನಕ್ಕೆ 130 ಲೀಟರಿಗೆ ಕೇವಲ 65 ಲೀಟರ್ ಪಡೆದುಕೊಳ್ಳುತ್ತಿದ್ದೇವೆ ಎಂದರ್ಥ! ಈ ಲೆಕ್ಕಾಚಾರದಲ್ಲಿಯೇ ಗೊತ್ತಾಗಿಬಿಡುತ್ತದೆ. ನಾವು ಹೇಗೆ ನೀರನ್ನು ಉಳಿಸಿ, ಬಳಸಬೇಕೆಂದು! ಅದಕ್ಕಾಗಿ ಬರಿ ನೀರನ್ನು ಬಳಸುವುದಷ್ಟೇ ಅಲ್ಲದೇ ವಿವೇಚನೆಯಿಂದ ಸುಸ್ಥಿರ ಭವಿಷ್ಯತ್ತಿನ ಮೇಲೆ ಗಮನ ಕೇಂದ್ರಿಕರಿಸಿಕೊಂಡು ಹೆಜ್ಜೆಯನ್ನಿಡಬೇಕು, ಈ ರೀತಿಯಾಗಿ ಅತ್ಯಮೂಲ್ಯ ಸಂಪನ್ಮೂಲವಾಗಿರುವ ನೀರನ್ನು ಸಂರಕ್ಷಿಸುವ ನಿರ್ವಹಿಸುವ ಬಹು ಆವಶ್ಯಕ ಜವಾಬ್ದಾರಿ ನಮ್ಮ ಎಲ್ಲರ ಮೇಲಿದೆ. ಇದೇ ನಮ್ಮೆಲ್ಲರ ಮುಖ್ಯ ಕರ್ತವ್ಯವಾಗಬೇಕು. ಜಲ ಸಂರಕ್ಷಣೆ ಮತ್ತು ನಿರ್ವಹಣೆ ನಮ್ಮೆಲ್ಲರ ಬಹುಮುಖ್ಯ ಆದ್ಯತೆಯಾಗಲೇಬೇಕು.
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…
ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…